ರಾಜ್ಯದ ಜನರ ಚಿತ್ತ ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್‌ನತ್ತ ನೆಟ್ಟಿದೆ. ಇಂದು ಬೆಳಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರು 2026-27ರ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಅವರ 17ನೇ ಐತಿಹಾಸಿಕ ಬಜೆಟ್ ಆಗಿದ್ದು, ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಈ ಬಜೆಟ್‌ನಲ್ಲಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳ ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.

ಬಜೆಟ್ ಗಾತ್ರ:
ಇನ್ನು ಕಳೆದ ವರ್ಷದಂತೆಯೇ ಈ ವರ್ಷದ ಬಜೆಟ್ ಕೂಡ ಆದಾಯ ಕೊರತೆಯನ್ನು ಎದುರಿಸಲಿದೆ ಎನ್ನಲಾಗ್ತಿದೆ. ಹಲವು ಅಂಶಗಳಿಂದಾಗಿ 2025-26ಕ್ಕೆ ನಿರ್ಧರಿಸಿದ್ದ ಆದಾಯ ಗುರಿಗಳನ್ನು ರಾಜ್ಯ ಸಾಧಿಸಲು ಸಾಧ್ಯವಾಗಿಲ್ಲ. ಬಜೆಟ್‌ನ ಗಾತ್ರ ಸುಮಾರು ₹4.20 ಲಕ್ಷ ಕೋಟಿ ದಾಟಲಿದೆ ಎಂದು ನಿರೀಕ್ಷೆ ಇದೆ.
ಇನ್ನು ಬಜೆಟ್ ಮಂಡನೆಯ ನಂತರ 14 ದಿನಗಳ ವಿಧಾನಸಭೆ ಅಧಿವೇಶನ ಮುಕ್ತಾಯಗೊಳ್ಳಲಿದೆ. ಆಗಲೇ ಹೇಳಿದಂತೆ ಇದು ಸಿದ್ದರಾಮಯ್ಯ ಅವರ 17ನೇ ಬಜೆಟ್ ಆಗಿದ್ದು, ರಾಜ್ಯದ ಭೌಗೋಳಿಕ-ರಾಜಕೀಯ ಪರಿಸ್ಥಿತಿಯನ್ನು ಹೀಗೇ ಪ್ರತಿಬಿಂಬಿಸುವ ನಿರೀಕ್ಷೆ ಇದೆ. ವಿಶೇಷವಾಗಿ ಕೇಂದ್ರ ಸರ್ಕಾರದ ನೀತಿಗಳು, ನಿಧಿಗಳ ವಿಕೇಂದ್ರೀಕರಣದ ಅಸಮತೋಲನ, ಜಿಎಸ್‌ಟಿ ತರ್ಕಗಳು ರಾಜ್ಯದ ಆದಾಯಕ್ಕೆ ಹಾನಿ ತಂದಿರುವ ವಿಷಯವನ್ನು ಬಜೆಟ್ ಉಲ್ಲೇಖಿಸಲಿದೆ.
ಎಂ. ಗೋವಿಂದ್ ರಾವ್ ಸಮಿತಿ ವರದಿ ಉಲ್ಲೇಖ:
ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮತ್ತು ಸಮತೋಲನದ ಮೇಲೆ ವಿಶೇಷ ಗಮನ ನೀಡಲು ಎಂ. ಗೋವಿಂದ್ ರಾವ್ ಸಮಿತಿ ವರದಿಯನ್ನು ಬಜೆಟ್ ಉಲ್ಲೇಖಿಸಲಿದೆ. ವರದಿಯಲ್ಲಿ 172 ತಾಲ್ಲೂಕುಗಳನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿದೆ. ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ಹಿಂದುಳಿದ ಪ್ರದೇಶಗಳಷ್ಟು (42%), ನಂತರ ಬೆಳಗಾವಿ ವಿಭಾಗ (34%) ಇದೆ.
ಸರ್ಕಾರಿ ವಿಭಾಗದಲ್ಲಿ ನೇಮಕಾತಿ:
ಧಾರವಾಡದಲ್ಲಿ ನಿರುದ್ಯೋಗಿ ಯುವಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸರ್ಕಾರಿ ವಿಭಾಗಗಳಲ್ಲಿ ನೇಮಕಾತಿ ನೀತಿ ಕುರಿತು ಮುಖ್ಯಮಂತ್ರಿ ಸೂಚನೆ ನೀಡಬಹುದೆಂದು ನಿರೀಕ್ಷೆ ಇದೆ. ರಾಜಕೀಯವಾಗಿ, ಬಜೆಟ್ ಅಧಿವೇಶನವು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರಿಗೂ ತಮ್ಮ ತಂತ್ರಗಳನ್ನು ರೂಪಿಸಲು ವೇದಿಕೆಯಾಗಲಿದೆ. ವಿರೋಧ ಪಕ್ಷವು ಸರಕಾರವನ್ನು ಪ್ರಶ್ನಿಸಲು ಈ ಅವಕಾಶವನ್ನು ಬಳಸುವ ಸಾಧ್ಯತೆ ಇದೆ.
ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ಸಾಧ್ಯತೆ:
ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಇಂಧನ, ಮದ್ಯದ ಮೇಲೆ ಹೊಸ ಅಥವಾ ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಸರ್ಕಾರ ಮತ್ತು ಪ್ರತಿಪಕ್ಷ ನಡುವೆ ಚರ್ಚೆಗಳು ಉತ್ಕಂಠಭರಿತವಾಗಬಹುದು. ಈ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಯೋಜನೆಗಳ ಹಣದ ವಿತರಣೆಗೆ ಸಂಬಂಧಿಸಿದ ಪ್ರಶ್ನೆಗಳು, ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳು ಮತ್ತು ಭ್ರಷ್ಟಾಚಾರ ವಿಚಾರಗಳು ಕೂಡ ಚರ್ಚೆಗೊಳ್ಳಬಹುದು.
ಇತ್ತೀಚಿನ ಮಸೂದೆಗಳಲ್ಲೊಂದು, 2020ರ ಕರ್ನಾಟಕ ವಧೆ ತಡೆ ಮತ್ತು ಗೋ ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಾಡುವುದು, ಅಕ್ರಮವಾಗಿ ಜಾನುವಾರು ಸಾಗಣೆಗೆ ಬಳಸುವ ವಾಹನಗಳನ್ನು ಪರಿಹಾರ ಬಾಂಡ್ ಮೂಲಕ ಬಿಡುಗಡೆ ಮಾಡಲು ಅವಕಾಶ ನೀಡುವುದು ಇತ್ಯಾದಿ ಬಜೆಟ್ ಅಧಿವೇಶನದಲ್ಲಿ ಮಂಡಿಸಬಹುದಾಗಿದೆ.
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications