ಬೆಂಗಳೂರು: ಕರ್ನಾಟಕ ರಾಜ್ಯದ ಬಹುನಿರೀಕ್ಷೆಯ 2026-27ನೇ ಸಾಲಿನ ರಾಜ್ಯ ಬಜೆಟ್ (Karnataka Budget 2026-27) ಮಂಡನೆಯನ್ನು ಇಂದು (ಮಾರ್ಚ್ 6, 2026) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾಡುತ್ತಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಒಂದು ಐತಿಹಾಸಿಕ ದಿನವಾಗಿ ದಾಖಲಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದಾರೆ.
ಇನ್ನು 2026-27ನೇ ಸಾಲಿನ ಬಜೆಟ್ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು, ರಾಜ್ಯದ ಆರ್ಥಿಕ ಆಯವ್ಯಯ, ತೆರಿಗೆ, ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಸಂಬಂಧಿಸಿ ಹೆಚ್ಚಿನ ಅನುದಾನ ಘೋಷಣೆಯಾಗುವ ಸಾಧ್ಯತೆ ಇದೆ. ಇದೀಗ ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
Mar 06, 2026, 3:44 pm IST
ಅನ್ನಭಾಗ್ಯ ಯೋನೆಯಡಿ ಹೆಚ್ಚುವರಿ ಅಕ್ಕಿ ಅಲ್ಲ, ಇಂದಿರಾ ಕಿಟ್ ಘೋಷಣೆ!
ಹೌದು, ಇದೀಗ 2026-27ನೇ ಆರ್ಥಿಕ ಬಜೆಟ್ ಮಂಡನೆ ವೇಳೆ, ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ, ಇಂದಿರಾ ಆಹಾರ ಕಿಟ್ ವಿತರಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
Mar 06, 2026, 3:20 pm IST
ವಾಣಿಜ್ಯ ತೆರಿಗೆ ಮತ್ತು ಜಿ.ಎಸ್.ಟಿ ಸಂಗ್ರಹ ವರದಿ
ಆರ್ಥಿಕ ವರ್ಷ 2025-26ರ ಫೆಬ್ರವರಿಯವರೆಗೆ ಜಿ.ಎಸ್.ಟಿ ತೆರಿಗೆ ಸಂಗ್ರಹ 74,160 ಕೋಟಿ ರೂ.ಗಳಾಗಿದ್ದು, ಇದು ಹಿಂದಿನ ವರ್ಷದ ದಾಖಲೆಯಲ್ಲಿನ ಸಂಗ್ರಹಕ್ಕಿಂತ ಶೇ.5.8ರಷ್ಟು ಹೆಚ್ಚಾಗಿದೆ. ಮಾರಾಟ ತೆರಿಗೆ ಮತ್ತು ವೃತ್ತಿ ತೆರಿಗೆ ಸೇರಿದಂತೆ, ಒಟ್ಟು ವಾಣಿಜ್ಯ ತೆರಿಗೆ ಗಳಿಕೆ ಫೆಬ್ರವರಿ 2026ರವರೆಗೆ 1,00,462 ಕೋಟಿ ರೂ.ಗಳನ್ನು ತಲುಪಿದ್ದು, ಇದು ಕಳೆದ ವರ್ಷದಿಗಿಂತ ಶೇ.8.1ರಷ್ಟು ಹೆಚ್ಚು ಎನ್ನಬಹುದು.
Mar 06, 2026, 3:04 pm IST
ಮಂಡನೆಯಾದ ಒಟ್ಟು ಬಜೆಟ್ ಗಾತ್ರ
ಇಂದು (ಮಾರ್ಚ್ 6) ಕರ್ನಾಟಕ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಆಯವ್ಯಯ ಮಂಡಿಸಿದ್ದು, ಇದು ಅವರ 17ನೇ ಐತಿಹಾಸಿಕ ಬಜೆಟ್ ಆಗಿದೆ. ಈ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಭಾರಿ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರು, ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಉಪಯೋಗವಾಗುವ ಹಲವು ಯೋಜನೆಗಳಿಗೆ ಒತ್ತು ನೀಡಲಾಗಿದೆ. ಈ ಬಜೆಟ್ನ ಒಟ್ಟು ಗಾತ್ರ 4.49 ಲಕ್ಷ ಕೋಟಿಯದ್ದಾಗಿದೆ.
Mar 06, 2026, 1:54 pm IST
ದಾಖಲೆ 17ನೇ ಕರ್ನಾಟಕ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ!
ಸುದೀರ್ಘ ಬಜೆಂಟ್ ಮಂಡಿಸುವ ಮೂಲಕ, 17ನೇ ಬಜೆಟ್ ಮಂಡನೆಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ನಿರಂತರ 3:30 ಗಂಟೆಗಳ ಕಾಲ, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದರು.
Mar 06, 2026, 1:24 pm IST
Karnataka Budget 2026: ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್!
ಸಿನಿಮಾಟೋಗ್ರಫಿ ಕೋರ್ಸ್ಗಳಿಗೆ ಆಧುನಿಕ ಉಪಕರಣ. ಸಿನಿಮಾ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಸಂಬಂಧಿಸಿ ಹೆಸರಘಟ್ಟದಲ್ಲಿರುವ ಸಿನಿಮಾ ತರಬೇತಿ ಸಂಸ್ಥೆ ಆರಂಭಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.
Mar 06, 2026, 1:07 pm IST
Karnataka Budget 2026: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಅಭಿವೃದ್ಧಿಗೆ ಒತ್ತು
ಕರಾವಳಿಯಲ್ಲಿ ಅತೀ ಹೆಚ್ಚು ಆದಾಯ ನೀಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಅಭಿವೃದ್ಧಿಗಾಗಿ ವಿಶೇಷ ಪ್ರಾಧಿಕಾರ ಘೋಷಣೆ ಮಾಡಲಾಗಿದೆ. ಈ ಮೂಲಕ ದೇವಾಲಯಗಳ ಸುತ್ತಮುತ್ತಲಿನ ರಸ್ತೆಗಳು, ಸಂಪೂರ್ಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
Mar 06, 2026, 12:55 pm IST
ಬೆಂಗಳೂರು ಪ್ರವಾಹ ಸಮಸ್ಯೆಗೆ 5,000 ಕೋಟಿ ರೂ. ಯೋಜನೆ
ಬೆಂಗಳೂರು ನಗರದಲ್ಲಿ ಪ್ರವಾಹ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ 5,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿಪತ್ತು ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳಲಿದೆ. ಈ ಕಾರ್ಯವನ್ನು ವಿಶ್ವ ಬ್ಯಾಂಕ್ ಸಹಾಯದಿಂದ ಜಾರಿಗೆ ತರಲಾಗುತ್ತಿರುವ ಕರ್ನಾಟಕ ವಾಟರ್ ಸೆಕ್ಯುರಿಟಿ ಅಂಡ್ ರೆಸಿಲಿಯನ್ಸ್ ಪ್ರೋಗ್ರಾಂ (KWSRP) ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
Mar 06, 2026, 12:55 pm IST
ಬೆಂಗಳೂರುದಲ್ಲಿ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ
ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಅತ್ಯಾಧುನಿಕ ಎಐ (ಕೃತಕ ಬುದ್ಧಿಮತ್ತೆ) ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಯೋಜನೆ ರೂಪಿಸಿದೆ. ಈ ಯೋಜನೆಯಡಿ ಇನ್ಸ್ಟಿಟ್ಯೂಟ್ ಆಫ್ ಬಯೋಇನ್ಫಾರ್ಮಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ, ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮೊಲೆಕ್ಯುಲರ್ ಪ್ಲಾಟ್ಫಾರ್ಮ್ಸ್ ಹಾಗೂ ನಾಸ್ಕಾಂ ಸಂಸ್ಥೆಗಳ ಸಹಯೋಗದಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಒಟ್ಟು 16 ಕೋಟಿ ರೂಪಾಯಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ.
Mar 06, 2026, 12:50 pm IST
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
ನಮ್ಮ ಮೆಟ್ರೋ ದೇಶದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಮಾರ್ಗವಾಗಿ ಗುರುತಿಸಿಕೊಂಡಿದೆ. ಪ್ರಸ್ತುತ 96 ಕಿ.ಮೀ ಕಾರ್ಯಚರಣೆ ನಡೆಸುತ್ತಿದ್ದು, ಪ್ರತಿದಿನ 10 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಿದೆ. 2026-27ನೇ ಆರ್ಥಿಕ ವರ್ಷದಲ್ಲಿ ಒಟ್ಟು 41 ಕಿ.ಮೀ ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಸುಮಾರು 15 ಲಕ್ಷ ಪ್ರಯಾನಿಕರಿಗೆ ಪ್ರಯೋಜನವಾಗಲಿದೆ.
Mar 06, 2026, 12:49 pm IST
ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ
ಮೈಸೂರಿನಲ್ಲಿ ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ಪಾರ್ಕ್ ಅನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವತಿಯಿಂದ ನಿರ್ಮಿಸಲಾಗುತ್ತದೆ.
Mar 06, 2026, 12:40 pm IST
ಔಟರ್ ರಿಂಗ್ ರೋಡ್ನಲ್ಲಿ ಪಾದಚಾರಿಗಳ ದಾರಿ ನಿರ್ಮಾಣ
ಬೆಂಗಳೂರು ನಗರದ ಔಟರ್ ರಿಂಗ್ ರೋಡ್ನಲ್ಲಿ ಮೆಟ್ರೋ ವ್ಯಾಡಕ್ಟ್ನ ಕೆಳಭಾಗದಲ್ಲಿ ಸುಮಾರು 9 ಕಿಲೋಮೀಟರ್ ಉದ್ದದ ಪಾದಚಾರಿಗಳ ನಡೆಪಥವನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಗೆ ಅಂದಾಜು 160 ಕೋಟಿ ರೂಪಾಯಿ ವೆಚ್ಚವಾಗಲಿದೆ. ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್ (ORRCA) ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಪಾದಚಾರಿಗಳಿಗೆ ಸುರಕ್ಷಿತ ಮತ್ತು ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.
Mar 06, 2026, 12:37 pm IST
ವಿದ್ಯಾರ್ಥಿಗಳಿಗಾಗಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ
ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ನಗರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಸರ್ಕಾರ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳನ್ನು ಆರಂಭಿಸಲು ಯೋಜಿಸಿದೆ. ಈ ಯೋಜನೆಯಡಿ ಧಾರವಾಡದಲ್ಲಿ ನಾಲ್ಕು ಹಾಗೂ ಬೆಂಗಳೂರಿನಲ್ಲಿ ಎರಡು ಕ್ಯಾಂಟೀನ್ಗಳನ್ನು ಆರಂಭಿಸಲಾಗುತ್ತದೆ. ಕಡಿಮೆ ದರದಲ್ಲಿ ಆಹಾರವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಖರ್ಚು ಕಡಿಮೆ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ.
Mar 06, 2026, 12:32 pm IST
ಸೇತುವೆಗಳ ನಿರ್ಮಾಣ ಮತ್ತು ದುರಸ್ತಿಗೆ ಅನುದಾನ
ರಾಜ್ಯದಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಸ್ತುತ ಸಾಲಿನಲ್ಲಿ 216 ಹೊಸ ಸೇತುವೆಗಳ ನಿರ್ಮಾಣ ಮತ್ತು 288 ಸೇತುವೆಗಳ ದುರಸ್ತಿಗಾಗಿ ಒಟ್ಟು 2,000 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಮೂಲಕ ಸಂಚಾರ ಸೌಲಭ್ಯವನ್ನು ಹೆಚ್ಚಿಸುವುದರ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
Mar 06, 2026, 12:29 pm IST
ಬೆಂಗಳೂರು ಟ್ರಾಫಿಕ್ ನಿಯಂತ್ರಣ ಯೋಜನೆ
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ಮಾರ್ಗ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೆ.ಆರ್.ಪುರಂನಿಂದ ಮೈಸೂರು ರಸ್ತೆಯವರೆಗೆ ಸುಮಾರು 40 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ಸುಮಾರು 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 17 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗಾಗಿ 17,780 ಕೋಟಿ ರೂಪಾಯಿ ಮೊತ್ತಕ್ಕೆ ಟೆಂಡರ್ ಕರೆಯಲಾಗುತ್ತದೆ. ಜೊತೆಗೆ ಹೆಬ್ಬಾಳದಿಂದ ಮೇಕ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಸುರಂಗ ಮಾರ್ಗ ಹಾಗೂ ಮೇಲ್ಸೇತುವೆ ರಸ್ತೆ ಅಭಿವೃದ್ಧಿಗೆ 2,250 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ.
Mar 06, 2026, 12:18 pm IST
ಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ
ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಯೋಜನೆಯಡಿ ವಾಯುಯಾನ ಹಾಗೂ ಜಲಸಾಹಸ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಸೀ ಪ್ಲೇನ್, ಹೆಲಿಟ್ಯಾಕ್ಸಿ, ಜಾಯ್ ರೈಡ್ ಮತ್ತು ರಿವರ್ ಕ್ರೂಸ್ಗಳಿಗೆ ಉತ್ತೇಜನ ನೀಡಲಾಗುತ್ತದೆ. ಜೊತೆಗೆ ಟ್ಯಾಕ್ಸಿ ಹಾಗೂ ಆಟೋ ಚಾಲಕರು ಮತ್ತು ಪೊಲೀಸರಿಗೆ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಗದಗ–ಕಪ್ಪತ್ತಗುಂಡ–ಲಕ್ಕುಂಡಿ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಮುಳ್ಳಯ್ಯನಗಿರಿ–ಸೀತಾಳಯ್ಯನಗಿರಿ ಕೈಮರದವರೆಗೆ ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನೂ ಸರ್ಕಾರ ಘೋಷಿಸಿದೆ.
Mar 06, 2026, 12:16 pm IST
ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್
ಬಜೆಟ್ನಲ್ಲಿ ಬೆಳಗಾವಿ ಜಿಲ್ಲೆಗೆ ಬಂಪರ್ ಯೋಜನೆ ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
Mar 06, 2026, 12:14 pm IST
ಮಂಡ್ಯದಲ್ಲಿ ಆಟೋಮೇಟೆಡ್ ರಿಸರ್ಚ್ ಅಸೋಸಿಯೇಷನ್
ಮಂಡ್ಯ ಜಿಲ್ಲೆಯಲ್ಲಿ ಆಟೋಮೇಟೆಡ್ ರಿಸರ್ಚ್ ಅಸೋಸಿಯೇಷನ್ ನಿರ್ಮಾಣ ಯೋಜನೆಯನ್ನು ಘೋಷಿಸಲಾಗಿದೆ. ಅದಕ್ಕಾಗಿ 100 ಎಕರೆ ಭೂಮಿ ಮಂಜೂರು ಮಾಡಲಾಗಿದೆ.
Mar 06, 2026, 12:13 pm IST
ಬೆಂಗಳೂರು ಸುರಂಗ ಮಾರ್ಗ ಯೋಜನೆ
ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಕಡಿಮೆ ಮಾಡಲು ಸುರಂಗ ಮಾರ್ಗ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೆ.ಆರ್.ಪುರಂನಿಂದ ಮೈಸೂರು ರಸ್ತೆಯವರೆಗೆ ಸುಮಾರು 40 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 17 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ಅನ್ನು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ನಿರ್ಮಿಸಲಾಗುತ್ತದೆ. ಈ ಯೋಜನೆಗಾಗಿ 17,780 ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯಲಾಗುತ್ತಿದ್ದು, ಹೆಬ್ಬಾಳದಿಂದ ಮೇಕ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಜೊತೆಗೆ ಸುರಂಗ ಮಾರ್ಗ ಹಾಗೂ ಮೇಲ್ಸೇತುವೆ ರಸ್ತೆಗಳ ಅಭಿವೃದ್ಧಿಗೆ 2,250 ಕೋಟಿ ರೂ. ಮೀಸಲಿಡಲಾಗುತ್ತದೆ.
Mar 06, 2026, 12:12 pm IST
ಬೆಂಗಳೂರು 2ನೇ ಏರ್ಪೋರ್ಟ್
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದಿಂದ ಅಭಿಪ್ರಾಯ ಪಡೆದು ಕಾರ್ಯಸಾಧ್ಯತಾ ವರದಿ ಸಲ್ಲಿಸಲಾಗುತ್ತದೆ. ಜೊತೆಗೆ ರಾಜ್ಯದ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 1,593 ಕೋಟಿ ರೂ. ಮೀಸಲಿಡಲಾಗಿದ್ದು, ಈ ವರ್ಷ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಅಲ್ಲದೆ ವಿಜಯಪುರ ಮತ್ತು ಶಿವಮೊಗ್ಗದಲ್ಲಿ ಫ್ಲೈಟ್ ತರಬೇತಿ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
Mar 06, 2026, 12:09 pm IST
NCC ಕೆಡೆಟ್ಗಳ ಸಂಖ್ಯೆ ಹೆಚ್ಚಳಕ್ಕೆ ಯೋಜನೆ
ಕರ್ನಾಟಕದಲ್ಲಿ ಎನ್ಸಿಸಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿ ಈಗಿರುವ ಸುಮಾರು 96,000 ಎನ್ಸಿಸಿ ಕೆಡೆಟ್ಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 10,000 ಕೆಡೆಟ್ಗಳನ್ನು ಸೇರಿಸುವ ಯೋಜನೆ ರೂಪಿಸಲಾಗಿದೆ.
Mar 06, 2026, 12:08 pm IST
‘ಅಕ್ಕ ಪಡೆ’ ಯೋಜನೆ
ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ವಿತರಿಸುವುದರ ಜೊತೆಗೆ, ಧನಶ್ರೀ ಯೋಜನೆ ಫಲಾನುಭವಿಗಳಿಗೆ ನೀಡುವ ಪ್ರೋತ್ಸಾಹಧನವನ್ನು 30 ಸಾವಿರ ರೂಪಾಯಿಯಿಂದ 45 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತದೆ. 18 ವರ್ಷದೊಳಗಿನ ಮಕ್ಕಳಿಗಾಗಿ ಮಾದಕ ವ್ಯಸನ ನಿವಾರಣೆ ಹಾಗೂ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯೂ ಇದೆ. ಅಲ್ಲದೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ
Mar 06, 2026, 12:06 pm IST
ಹೊಸ ಅಬಕಾರಿ ನೀತಿ
ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಬರಲಿದೆ. ಮದ್ಯದ ಬೆಲೆ ನಿಗದಿ ಮಾಡುವ ಜವಾಬ್ದಾರಿ ಉತ್ಪಾದಕರಿಗೆ ಬಿಡಲಾಗಿದೆ. ಅಮದರೆ ಇನ್ಮುಂದೆ ಮದ್ಯದ ಬೆಲೆ ಸರ್ಕಾರದಿಂದ ನಿಗದಿಯಾಗಲ್ಲ. ಬದಲಾಗಿ ಮದ್ಯ ಉತ್ಪಾದಕರೇ ನಿಗದಿ ಮಾಡಲಿದ್ದು, ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.
Mar 06, 2026, 11:59 am IST
ಹೊಸ ಹಾಸ್ಟೆಲ್ಗಳ ಘೋಷಣೆ
ಸಮಾಜ ಕಲ್ಯಾಣ, ಪರಿಶಿಷ್ಟ, ಹಿಂದುಳಿದ, ಅಲ್ಪಸಂಖ್ಯಾತ ಇಲಾಖೆಯಲ್ಲಿ ಹುದ್ದೆ ಭರ್ತಿಗೆ ಅನುದಾನ
Mar 06, 2026, 11:58 am IST
ಬ್ಯುಸಿನೆಸ್ ಕಾರಿಡಾರ್
ಈ ವರ್ಷವೇ ಬ್ಯುಸಿನೆಸ್ ಕಾರಿಡಾರ್ ಗಳನ್ನು ಸರ್ಕಾರ ಪೂರ್ಣಗೊಳಿಸಲಿದ್ದು, ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೂ ಬ್ಯುಸಿನೆಸ್ ಕಾರಿಡಾರ್ ಘೋಷಣೆ ಮಾಡಲಾಗಿದೆ.
Mar 06, 2026, 11:54 am IST
ಆರೋಗ್ಯ ಇಲಾಖೆಗೆ ಸಿಕ್ಕಿದ್ದೇನು?
ಮಕ್ಕಳ ಪೌಶ್ಟಿಕ ಪುನಶ್ಚೇತನ ಆರಂಭ ಹಾಗೈ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡಲಾಗುತ್ತದೆ. ಬಳ್ಳಾರಿ, ವಿಜಯನಗರದಲ್ಲಿ ಸಮಗ್ರ ಆರೋಗ್ಯ ಯೋಜನೆ, ರೋಗಿಗಳಿಗಾಗಿ ಇಸ್ಕಾನ್ ಮೂಲಕ ಆಹಾರ ಪೂರೈಕೆ, ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮುನಿರಾಬಾದ್ ಟಿಬಿ ಡ್ಯಾಂನಲ್ಲಿ ಕ್ಯಾನ್ಸರ್ ಆಸ್ಪತ್ರೆ, ವಾಣಿವಿಲಾಸದಲ್ಲಿ ಐವಿಎಫ್ ಕೇಂದ್ರ. ಒಟ್ಟಾರೆ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂ. ಮೀಸಲಿಡಲಾಗಿದೆ.
Mar 06, 2026, 11:52 am IST
ಮೀನುಗಾರಿಕೆ
ಮಂಗಳೂರು ವಿವಿಯಲ್ಲಿ ಮೀನುಗಾರಿಕಾ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ 7,000 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಘೋಷಣೆ ಮಾಡಿದೆ.
1,700 ಕೋಟಿ ರೂ. ವೆಚ್ಚದಲ್ಲಿ158 ಕಿ.ಮೀ ವೈಟ್ ಟ್ಯಾಪಿಂಗ್ ಘೋಷಣೆ.
ಪ್ರಮುಖ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 1,936 ಕೋಟಿ ಮೀಸಲು.
ಸಿಲ್ಕ್ ಬೋರ್ಟ್ ನಿಂದ ಕೆಆರ್ ಪುರಂ ಔಟರ್ ರಿಂಗ್ ರೋಡ್ ಅಭಿವೃದ್ಧಿಗಾಗಿ 50 ಕೋಟಿ ಅನುದಾನ ಘೋಷಣೆ.
ಬೆಂಗಳೂರು ಹೊರ ವಲಯದಲ್ಲಿ ಚಿರತೆಗಳ ಓಡಾಟಕ್ಕೆ ಬ್ರೇಕ್ ನೀಡಲು ವಿಶೇಷ ಅನುದಾನ. ಅಲ್ಲದೇ ಸೆರೆಹಿಡಿದ ಚಿರತೆಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ.
Mar 06, 2026, 11:35 am IST
ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರದಿಂದ ಅನುದಾನ
ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು CBSE ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.
2026-27ನೇ ಸಾಲಿನಲ್ಲಿ 25 ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ವಸತಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಕ್ಕೆ ಘೋಷಣೆ.
2025-26ನೇ ಸಾಲಿನಲ್ಲಿ 117 ಮೌಲಾನಾ ಆಜಾದ್ ಮಾಧ್ಯಮ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಣಕ್ಕೆ ಒತ್ತು.
ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಮೀಸಲು.
ಬೌದ್ಧ ಧರ್ಮದ ಧರ್ಮಾಚಾರಿಗಳಿಗೆ 6,000 ರೂ.ಗಳ ಮಾಸಿಕ ಗೌರವಧನ ಘೋಷಣೆ.
Mar 06, 2026, 11:25 am IST
ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಸಿಕ್ಕಿದ್ದೇನು?
ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ
ಶಾಲಾ-ಕಾಲೇಜು ನಿರ್ವಹಣೆಗಾಗಿ 125 ಕೋಟಿ ಅನುದಾನ.
8-12ನೇ ತರಗತಿಗೆ ಎಐ ಆಧಾರಿತ ಕಲಿಕಾ ಸೌಲಭ್ಯ.
ವಿದ್ಯಾರ್ಥಿಗಳ ಒತ್ತಡ ನಿರ್ವಹಣೆಗೆ ಆರೋಗ್ಯ ಸಲಹೆಗಾರರ ನೇಮಕ.
ಶಾಲಾ-ಕಾಲೇಜುಗಳ ಖಾಲಿ ಇರುವ ಶಿಕ್ಷಕ ಹುದ್ದೆಗೆ ನೇಮಕಾತಿ.
15 ಸಾವಿರ ಭೋಧಕ ಹುದ್ದೆಗಳ ಭರ್ತಿ.
565 ಕೋಟಿ ವೆಚ್ಚದಲ್ಲಿ ಶಾಲೆಗಳ ದುರಸ್ತಿಗೆ ಕ್ರಮ.
ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಶಾಲೆಗಳಲ್ಲಿ ಕಠಿಣ ನಿಯಮ ಜಾರಿ.
Mar 06, 2026, 11:19 am IST
ಮದ್ಯ ಪ್ರಿಯರಿಗೆ ಶಾಕ್
ಕರ್ನಾಟಕ ಬಜೆಟ್ನಲ್ಲಿ ಮದ್ಯ ಪ್ರಿಯರಿಗೆ ಶಾಕ್ ನೀಡಲಾಗಿದ್ದು, ಹಂತ ಹಂತವಾಗಿ ಮದ್ಯದ ದರ ಏರಿಕೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಅಬಕಾರಿ ಆದಾಯ ತೆರಿಗೆ ಹೆಚ್ಚಳ ಮಾಡಲು ಮುಕ್ತ ಅವಕಾಶ ನೀಡಲಾಗಿದ್ದು, ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಏಕ ರೂಪ ಅಬಕಾರಿ ಸುಂಕ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದ್ದು, ಎಕ್ಸ್ ಫ್ಯಾಕ್ಟರಿ ದರ ಪಟ್ಟಿ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ.
Mar 06, 2026, 11:15 am IST
ಗರ್ಭಿಣಿ ಮತ್ತು ಬಾಣಂತಿಯರಿಗೆ ಇನ್ಮೇಲೆ ಬಿಸಿಯೂಟ
ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ರೇಷನ್ ರದ್ದು ಪಡಿಸಿದ್ದು, ಇನ್ಮೇಲೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ನೀಡುವುದಾಗಿ ಘೋಷಣೆ ಮಾಡಲಾಗಿದೆ.
Mar 06, 2026, 11:13 am IST
ಅರಣ್ಯ ಮತ್ತು ಅರಣ್ಯದಂಚಿನ ವಸತಿರಹಿತ ಮನೆ ಮನೆ ನಿರ್ಮಾಣಕ್ಕೆ 4 ಲಕ್ಷ ಸಾಲ!
ಅರಣ್ಯ ಮತ್ತು ಅರಣ್ಯದಂಚಿನ ವಸತಿರಹಿತ ಮನೆ ನಿರ್ಮಾಣಕ್ಕೆ 4 ಲಕ್ಷ ಸಾಲ.
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ
Mar 06, 2026, 11:08 am IST
ಸಾರಿಗೆ ನೌಕರರಿಗೆ ಗುಡ್ ನ್ಯೂಸ್
ಏಪ್ರಿಲ್ 1,2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದದೆ. ವೇತನ ಬಾಕಿ ಪಾವತಿಗಾಗಿ 1271 ಕೋಟಿ ಮೀಸಲಿಡಲಾಗಿದೆ. ಈ ಮೂಲಕ 1-1-2021 ರಿಂದ 28-02-2023ರ ವರೆಗಿನ ಬಾಕಿ ವೇತನವನ್ನು ಪಾವತಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
Mar 06, 2026, 11:05 am IST
ಸಿದ್ದರಾಮಯ್ಯ ಬಜೆಟ್ನಲ್ಲಿ ಕೃಷಿಗೆ ಸಿಕ್ಕಿದ್ದೇನು?
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ
ರಾಜ್ಯದ 5 ಕಡೆ ರೇಷ್ಮೆ ಪಾರ್ಕ್
ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ.
ಕೃಷಿ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಅಳವಡಿಕೆ.
ಕೋಲಾರದಲ್ಲಿ ರೈತ ಮಾಲ್.
Mar 06, 2026, 10:59 am IST
ಮಕ್ಕಳಿಗೆ ಸೋಷಿಯಲ್ ಬ್ಯಾನ್
16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿ, ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.
Mar 06, 2026, 10:58 am IST
ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ!
ಬೆಂಗಳೂರಿನಲ್ಲಿರುವ ಜನಪ್ರಿಯ ವಿಕ್ಟೋರಿಯಾ ಆಸ್ಪತ್ರೆಯ ಹೆಸರು ಬದಲಾವಣೆ ಮಾಡಲಾಗಿದ್ದು, ಇನ್ಮೇಲೆ ಶಾಂತವೇರಿ ಗೋಪಾಲಗೌಡ ಹೆಸರು ಎಂದು ಮರುನಾಮಕರಣ ಮಾಡಲಾಗಿದೆ.
Mar 06, 2026, 10:55 am IST
2026-27ನೇ ಸಾಲಿನ ಕರ್ನಾಟಕ ಬಜೆಟ್ ಕ್ಷೇತ್ರವಾರು ಹಂಚಿಕೆ:
ಪಶುಸಂಗೋಪನೆ ಇಲಾಖೆ – ₹4,084 ಕೋಟಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆ – ₹8,373 ಕೋಟಿ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ – ₹7,942 ಕೋಟಿ
ಲೋಕೋಪಯೋಗಿ ಇಲಾಖೆ (PWD) – ₹11,424 ಕೋಟಿ
ಸಮಾಜ ಕಲ್ಯಾಣ ಇಲಾಖೆ – ₹18,612 ಕೋಟಿ
ಕಂದಾಯ ಇಲಾಖೆ – ₹19,845 ಕೋಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ₹17,818 ಕೋಟಿ
ಶಿಕ್ಷಣ ಇಲಾಖೆ – ₹47,224 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – ₹34,929 ಕೋಟಿ
ಇಂಧನ ಇಲಾಖೆ – ₹29,947 ಕೋಟಿ
ಗ್ರಾಮೀಣಾಭಿವೃದ್ಧಿ ಇಲಾಖೆ – ₹26,559 ಕೋಟಿ
ನೀರಾವರಿ ಇಲಾಖೆ – ₹22,436 ಕೋಟಿ
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ – ₹22,203 ಕೋಟಿ
ಒಳಾಡಳಿತ ಮತ್ತು ಬಂದರು ಇಲಾಖೆ – ₹23,100 ಕೋಟಿ
ಇತರೆ ವೆಚ್ಚಗಳು – ₹1,72,757 ಕೋಟಿ
Mar 06, 2026, 10:52 am IST
ಬೀದಿನಾಯಿಗಳ ಸಮಸ್ಯೆಗೆ ಪರಿಹಾರಕ್ಕೆ ನಿರ್ಧಾರ
ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ನೀಡಲು ಈ ಬಜೆಟ್ನಲ್ಲಿ ನಿರ್ಧರಿಸಲಾಗಿದ್ದು, ಅದಕ್ಕಾಗಿ ಬೆಂಗಳೂರು ಹಾಗೂ ಬೀದರ್ ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಯೋಜಿಸಲಾಗಿದೆ.
Mar 06, 2026, 10:51 am IST
ಬೆಂಗಳೂರು ಅಭಿವೃದ್ಧಿಗೆ 7000 ಕೋಟಿ ಅನುದಾನ
ಬೆಂಗಳೂರಿನ ಅಭಿವೃದ್ಧಿಗೆ ಹಿಂದಿನ ಅನುದಾನವನ್ನೇ ಸರ್ಕಾರ ಮುಂದುವರೆಸಿದೆ. ಹಿಂದಿನ ವರ್ಷ ಘೋಷಿಸಿದ್ದ 7 ಸಾವಿರ ಕೋಟಿ ಅನುದಾನವನ್ನೇ, ಈ ವರ್ಷವೂ ಸರ್ಕಾರ ಮುಂದುವರೆಸಿದೆ.
Mar 06, 2026, 10:46 am IST
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
75 ಲಕ್ಷ ವಿದ್ಯಾರ್ಥಿಗಳಿಗೆ 2676 ಕೋಟಿ ರೂ. ವಿದ್ಯಾರ್ಥಿ ವೇತನ ಘೋಷಣೆ.
Mar 06, 2026, 10:45 am IST
ಶಿಕ್ಷಣ ಇಲಾಖೆಗೆ ವಿಶೇಷ ಅನುದಾನ ಘೋಷಣೆ!
25 ಸಂತ ಶಿಶುನಾಳ ಷರೀಫ್ ವಸತಿ ಶಾಲೆ ನಿರ್ಮಾಣ.
1,39,844 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಹೆಚ್ಚುವರಿ ಯಾಗಿ ಒಂದು ಜೊತೆ ಸಮವಸ್ತ್ರ ವಿತರಣೆ.
ಒಟ್ಟು 104 ಶಾಲೆಗಳ ಆರಂಭಕ್ಕೆ ಆದ್ಯತೆ.
Mar 06, 2026, 10:42 am IST
ಪಂಚ ಗ್ಯಾರಂಟಿಗೆ 'ಕೈ' ಬಲ!
ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಘೋಷಣೆ.
ಗೃಹಜ್ಯೋತಿ ಯೋಜನೆಗೆ 10,578 ಕೋಟಿ ಘೋಷಣೆ.
ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ.
ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ಅನುದಾನ.
ಯುವನಿಧಿ ಯೋಜನೆಗೆ ಯಾವುದೇ ಅನುದಾನ ನೀಡಲಾಗಿಲ್ಲ.
Mar 06, 2026, 10:40 am IST
ರೈತರ ಆರ್ಥಿಕ ಅಭಿವೃದ್ಧಿಗೆ ಸಿಎಂ ಕೃಷಿ ವಿಸ್ತಾರ್ ಯೋಜನೆ
83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ಸಾಲ ಘೋಷಣೆ.
40 ಲಕ್ಷ ಜನ ರೈತರಿಗೆ 468 ಕೋಟಿ ಬಿತ್ತನೆ ಬೀಜ ಸಹಾಯ ಧನ ಘೋಷಣೆ.
ರೈತರ ಆರ್ಥಿಕ ಅಭಿವೃದ್ಧಿಗೆ ಸಿಎಂ ಕೃಷಿ ವಿಸ್ತಾರ್ ಯೋಜನೆ ಆರಂಭಿಸಿದ್ದು, ಇದಕ್ಕಾಗಿ ಮೂರು ವರ್ಷಗಳ ಗುರಿಗೆ 100 ಕೋಟಿ ಮೀಸಲಿಡಲಾಗಿದೆ.
Mar 06, 2026, 10:36 am IST
ಹಲವು ಇಲಾಖೆಗಳಿಗೆ ಭರ್ಜರಿ ಅನುದಾನ!
ಶಿಕ್ಷಣ ಇಲಾಖೆಗೆ 47,224 ಕೋಟಿ ಅನುದಾನ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನುದಾನ.
ಇಂಧನ ಇಲಾಖೆಗೆ 29,947 ಕೋಟಿ ಅನುದಾನ.
ನೀರಾವರಿಗೆ 22,436 ಕೋಟಿ ಅನುದಾನ.
ನಗರಾಭಿವೃದ್ಧಿ ಮತ್ತು ಮಸತಿ ಇಲಾಖೆಗೆ 22,203 ಕೋಟಿ ಅನುದಾನ.
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 23,100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದರು.
Mar 06, 2026, 10:32 am IST
ಬೆಂಗಳೂರಿನ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ
ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೆ 1255 ಕೋಟಿ ಅನುದಾನ. ಅದೇ ರೀತಿ ಬೆಂಗಳೂರಿನಲ್ಲಿ 158 ಕಿ.ಮೀ ವೈಟ್ ಟ್ಯಾಪಿಂಗ್ 1700 ಕೋಟಿ ಅನುದಾನ ಬಿಡುಗಡೆ.
Mar 06, 2026, 10:30 am IST
56,432 ಖಾಲಿ ಹುದ್ದೆಗಳ ಭರ್ತಿ
56,432 ಪ್ರಮುಖ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ.
Mar 06, 2026, 10:24 am IST
ಕರ್ನಾಟಕ ಬಜೆಟ್ನ ಗಾತ್ರ ಎಷ್ಟು?
2026-27ನೇ ಆರ್ಥಿಕ ವರ್ಷದ ಬಜೆಟ್ ಗಾತ್ರ 4.49 ಲಕ್ಷ ರೂ. ಆಗಿದೆ. ಕಳೆದ ವರ್ಷಕ್ಕಿಂದ ಈ ಬಾರಿ 40 ಸಾವಿರ ಕೋಟಿ ಹೆಚ್ಚಳವಾಗಿದೆ.
Mar 06, 2026, 10:22 am IST
2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಆರಂಭ
ಸಚಿವ ಸಂಪುಟ ಸಭೆಯಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ.
Mar 06, 2026, 9:55 am IST
ಬಜೆಟ್ ಮಂಡನೆಗೆ ಅನುಮೋದನೆ
ಬಜೆಟ್ ಮಂಟನೆಗೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ 17ನೇ ದಾಖಲೆಯ ಬಜೆಟ್ ಮಂಡನೆ ಆರಂಭಿಸಲಿದ್ದಾರೆ.
Mar 06, 2026, 9:54 am IST
ವಿಧಾನಸೌಧದಲ್ಲಿ ಸಂಪುಟ ಸಭೆ ಆರಂಭ
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ, ಸಚಿವ ಸಂಪುಟ ಸಭೆ ಆರಂಭವಾಗಿದ್ದು ಈ ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮೋದನೆ ಪಡೆಯಲಿದ್ದಾರೆ.
Mar 06, 2026, 9:37 am IST
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ!
ಬಜೆಟ್ ಸೂಟ್ಕೇಸ್ನೊಂದಿಗೆ ಇದೀಗ ಆರ್ಥಿಕ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಆರಂಭವಾಗಲಿದ್ದು, ಬಜೆಟ್ ಮಂಡನೆಯೂ ಆಗಲಿದೆ.
Mar 06, 2026, 9:30 am IST
ಗೃಹಲಕ್ಷ್ಮಿಯರಿಗೆ ಸಿಗುತ್ತಾ ಗುಡ್ ನ್ಯೂಸ್?
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಹಳ ಮಹತ್ವದ್ದಾಗಿದೆ. ಈಗಾಗಲೇ ಈ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ 2000 ರೂ.ನಂತೆ ಪ್ರತೀ ತಿಂಗಳು ನೀಡಲಾಗುತ್ತಿದೆ. ಇದೀಗ 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ 2000 ರೂ. ಜೊತೆಗೆ ಸೀರೆ ವಿತರಣೆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
Mar 06, 2026, 9:04 am IST
ರಾಜ್ಯದ ಜನರಿಗೆ ತೆರಿಗೆ ಹೆಚ್ಚಳದ ಆತಂಕ?
ಕರ್ನಾಟಕ ಬಜೆಟ್ನಲ್ಲಿ ಈ ಬಾರಿ ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ 1 ರೂ. ಹೆಚ್ಚಳ, ಮೋಟಾರು ವಾಹನ ತೆರಿಗೆ, ಅಬಕಾರಿ ಸುಂಕ ಸೇರಿದಂತೆ ಇತರೆ ತೆರಿಗೆ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
Mar 06, 2026, 8:28 am IST
ಬಜೆಟ್ ಗಾತ್ರದ ನಿರೀಕ್ಷೆ?
ಕಳೆದ ಬಾರಿ ಕರ್ನಾಟಕ ಬಜೆಟ್ ಗಾತ್ರ ಒಟ್ಟು 4,09,549 ಕೋಟಿ ಆಗಿತ್ತು. ಆದರೆ ಈ ವರ್ಷದ ಗಾತ್ರ ಹೆಚ್ಚಾಗಲಿದ್ದು, ಸುಮಾರು 4.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Mar 06, 2026, 7:38 am IST
ಇತಿಹಾಸ ಪುಟಗಳಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆ!
ಇದೇ ಜನವರಿ ತಿಂಗಳಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ಅಂದರೆ ಬರೋಬ್ಬರಿ 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಿ.ದೇವರಾಜ ಅರಸು ಅವರ ದಾಖಲೆಯನ್ನು ಮೀರಿ, ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದರು. ಇದೀಗ 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮೂಲಕ ಮತ್ತೊಂದು ದಾಖಲೆ ಬರೆಯಲಿದ್ದಾರೆ.
Mar 06, 2026, 7:01 am IST
ಎಷ್ಟು ಗಂಟೆ ಕರ್ನಾಟಕ ಬಜೆಟ್ ಆರಂಭ?
2026-27ನೇ ಸಾಲಿನ ಬಹುನಿರೀಕ್ಷೆಯ ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಸಚಿವರು, ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯನವರು ಇಂದು (ಮಾರ್ಚ್ 6) ಬೆಳಿಗ್ಗೆ 10:15 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ.
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.