ಕರ್ನಾಟಕ ಬಜೆಟ್‌ಗೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇವೆ. ಬಜೆಟ್ ಮಂಡನೆಗೆ ಸಕಲ ತಯಾರಿಗಳು ನಡೀತಿವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮಾರ್ಚ್ 6ರಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ರಾಜ್ಯದ ಜನರ ನಿರೀಕ್ಷೆ ಹೆಚ್ಚಾಗಿವೆ. 17ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿ ಯಾವ ಯೋಜನೆಗೆ ಒತ್ತು ಕೊಡಬಹುದು ಎಂಬ ಕುತೂಹಲ ಮನೆ ಮಾಡಿದೆ. ಇದರ ನಡುವೆ ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು. ಗ್ಯಾರಂಟಿ ಯೋಜನೆಗಳ ಬಗ್ಗೆ ಇರುವ ಗೊಂದಲಗಳೇನು? ಇದೆಲ್ಲದರ ಕುರಿತು ಇಲ್ಲಿ ಓದಿ.

ಪಂಚ ಗ್ಯಾರಂಟಿ ಇರುತ್ತವೆಯೇ?
ಹೌದು, ಸರ್ಕಾರ ಘೋಷಣೆ ಮಾಡಿರುವ ಪಂಚ ಗ್ಯಾರಂಟಿಗಳ ಬಗ್ಗೆ ಫಲಾನುಭವಿಗಳಿಗೆ ಭಾರಿ ಗೊಂದಲ ಮೂಡಿದೆ. 2026-27ನೇ ಸಾಲಿನ ಬಜೆಟ್ ನಂತರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಇರುತ್ತವೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಆದರೆ ಮೂಲಗಳ ಪ್ರಕಾರ ಈ ಬಾರಿಯ ಬಜೆಟ್ ನಂತರವೂ ಪಂಚ ಗ್ಯಾರಂಟಿಗಳು ಮುಂದುವರಿಯುತ್ತವೆ.
ಅಲ್ಲದೇ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಗೆ ಬಜೆಟ್‌ನಲ್ಲಿ ಮತ್ತಷ್ಟು ಪ್ರಾಮುಖ್ಯತೆ ನೀಡಬಹುದು ಎಂಬ ನಿರೀಕ್ಷೆ ಇದೆ. ಅಂದರೆ ಈ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಮೀಸಲಾಗಬಹುದು. ಸಾರ್ವಜನಿಕ ವರದಿಗಳ ಪ್ರಕಾರ ಈ ಯೋಜನೆಗಳು ಮುಂದುವರಿಯುತ್ತವೆ ಮತ್ತು ನಿಲ್ಲಿಸುವ ಸಾಧ್ಯತೆ ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಹೊರತುಪಡಿಸಿ ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು ಎಂದು ತಿಳಿಯಿರಿ.
ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಯೋಜನೆಗಳು:
ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಉತ್ತರ ಕನ್ನಡ, ಮಂಗಳೂರು ಜಿಲ್ಲೆಯಲ್ಲಿ ಆಸ್ಪತ್ರೆಗಳ ನಿರ್ಮಾಣದ ನಿರೀಕ್ಷೆ ಇದೆ. ಅಲ್ಲದೆ ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಮಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ ವೃದ್ಧಿಸುವ ನಿರೀಕ್ಷೆಯಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಲವರ್ಧನೆ ಮತ್ತು ಆಯುಷ್ಮಾನ್ ಯೋಜನೆಗಳಿಗೆ ಹೆಚ್ಚುವರಿ ಅನುದಾನದ ಅಪೇಕ್ಷೆ ಇದೆ.
ರಸ್ತೆ ಮತ್ತು ನಗರ ಮೂಲಸೌಕರ್ಯ:
ಮೂಲಸೌಕರ್ಯ ಯೋಜನೆಗಳ ಬಗ್ಗೆ ಭಾರಿ ನಿರೀಕ್ಷೆಯಿದೆ. ಬೆಂಗಳೂರು ನಗರದ ಗುಂಡಿ ರಸ್ತೆಗಳನ್ನು ಸುಧಾರಿಸಲು ವಿಶೇಷ ಅನುದಾನದ ನಿರೀಕ್ಷೆಯಿದೆ. ನಗರ ಪ್ರದೇಶಗಳಲ್ಲಿ ವೈಟ್‌ಟಾಪಿಂಗ್ ಮತ್ತು ರಸ್ತೆ ಸುಧಾರಣೆ ಕಾರ್ಯಗಳಿಗೆ ಹಣ ವಿತರಣೆ. ಹಾಗೂ ಕಸದ ನಿರ್ವಹಣೆಗೆ 4 ದಿಕ್ಕುಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಬಗ್ಗೆ ನಿರೀಕ್ಷೆ ಇದೆ.
ನೀರು, ಕೃಷಿ ಮತ್ತು ಸಿಂಚನ ಯೋಜನೆಗಳು:
ಇನ್ನು ಕೃಷಿ ಹಾಗೂ ಜಲ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ನಿರೀಕ್ಷೆಗಳಿವೆ. ಅದರಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವಿಕೆ ಇದೆ. ಹಾಗೂ ಕಾವೇರಿ 6ನೇ ಹಂತ, ವಾರಾಹಿ ಬಲದಂಡೆ, ಯುಕೆಪಿ 3ನೇ ಹಂತಕ್ಕೆ ಅನುದಾನ ಬಿಡುಗಡೆ. ಕೆರೆ ತುಂಬಿಸುವ ಯೋಜನೆಗಳು ಮತ್ತು ನೀರಾವರಿ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ. ರೈತರಿಗೆ ನೇರ ಸಹಾಯ ಮತ್ತು ಕೃಷಿ ಯಂತ್ರೋಪಕರಣಗಳಿಗೆ ವಿಶೇಷ ಅನುದಾನದ ನಿರೀಕ್ಷೆ ಇದೆ.
ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ:
ಶಿಕ್ಷಣಕ್ಕೆ ಸಂಬಧಿಸಿದಂತೆ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಹೊಸ ಮೆಡಿಕಲ್ ಕಾಲೇಜುಗಳು ಬೇಕು ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಕೋಲಾರ, ಪುತ್ತೂರು, ಬಿಜಾಪುರ ಜಿಲ್ಲೆಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಇನ್ನು ಶಾಲಾ ಶಿಕ್ಷಣ, ಮಕ್ಕಳ ಆಹಾರ ಯೋಜನೆ, ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚಳದ ನಿರೀಕ್ಷೆಯೂ ಇದೆ.
ರೈಲ್ವೆ ಮತ್ತು ಮೂಲಸೌಕರ್ಯ ಅಭಿವೃದ್ಧಿ:
ಗದಗದಿಂದ ಉಲವಗಿಗೆ 58 ಕಿ.ಮೀ. ರೈಲ್ವೆ ಯೋಜನೆಗೆ ಅನುದಾನ. ಸಾರ್ವಜನಿಕ ಸಾರಿಗೆ ಸುಧಾರಣೆ, ರಸ್ತೆ ಸುರಕ್ಷತೆ, ಹಾಗೂ ಶೇಕಡಾ 100 ಕವರೇಜ್ ಯೋಜನೆಗಳ ವಿಸ್ತರಣೆಯ ನಿರೀಕ್ಷೆ ಇದೆ..
ಕರಾವಳಿ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ:
ಇನ್ನು ಉತ್ತರ ಕನ್ನಡ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಮೀನುಗಾರಿಕೆ ಉತ್ತೇಜನಕ್ಕೆ ವಿಶೇಷ ಅನುದಾನ. ಬಂದರು ಅಭಿವೃದ್ಧಿಗೆ ಸಹ ಅನುದಾನ ನೀಡಲು ನಿರೀಕ್ಷೆ ಇದೆ. ಹಾಗೂ ಮೀನುಗಾರರಿಗೆ ನೇರ ಹಣಕಾಸು ನೆರವು ಮತ್ತು ತರಬೇತಿ ಕಾರ್ಯಕ್ರಮಗಳು ಇವೆ.
ಪ್ರವಾಸೋದ್ಯಮ ಮತ್ತು ರಾಜ್ಯ ಅಭಿವೃದ್ಧಿ:
ಹಂಪಿ, ಹಳೆಬೀಡು, ಚಿಕ್ಕಮಗಳೂರು, ಕೋಣೂರಿನ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಹೆಚ್ಚುವರಿ ಅನುದಾನ. ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವು, ಸುಧಾರಿತ ಮೂಲಸೌಕರ್ಯ, ಮಾರ್ಗ ಸೂಚಿ ಮತ್ತು ಭದ್ರತೆಯ ನಿರೀಕ್ಷೆ ಇದೆ.
ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ:
- ಮಲೆನಾಡು ಮಂಗನ ಕಾಯಿಲೆಗೆ ವ್ಯಾಕ್ಸಿನ್ ಘಟಕ.
- ಕಾಡಾನೆ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್.
- ಸಾರ್ವಜನಿಕ ಆರೋಗ್ಯ ಮತ್ತು ವಿಪತ್ತು ನಿರ್ವಹಣೆಗೆ ವಿಶೇಷ ಅನುದಾನ.
ಒಟ್ಟಿನಲ್ಲಿ ಕರ್ನಾಟಕ ಬಜೆಟ್ 2026-27 ರಾಜ್ಯದ ಎಲ್ಲಾ ಹಂತದ ಜನರ, ರೈತ, ವಿದ್ಯಾರ್ಥಿ, ಉದ್ಯಮಿ ಮತ್ತು ಮಹಿಳೆಯರಿಗೆ ಹಿತಕರವಾಗಲಿದೆ. ಆರೋಗ್ಯ, ಶಿಕ್ಷಣ, ನೀರು, ರಸ್ತೆ, ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗುವುದು. ಈ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ದಾರಿತೋರುವಂತೆ ನಿರೀಕ್ಷಿಸಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications