ರಾಜ್ಯದಲ್ಲಿ ಹಣಕಾಸು ಖಾತೆಯನ್ನು ಕೂಡಾ ಹೊಂದಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ (ಫೆಬ್ರವರಿ 16) ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ಧರಾಮಯ್ಯರ ದಾಖಲೆಯ 15ನೇ ಬಜೆಟ್ ಇದಾಗಿದ್ದು, ಸಿಎಂ ಆಗಿ ಎಂಟನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿದೆ.
ಈ ವರ್ಷದಲ್ಲೇ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಜೆಟ್ ಅತೀ ಮಹತ್ವದ್ದಾಗಿದೆ. ಈ ಬಜೆಟ್ ಗಾತ್ರ ಸುಮಾರು 3.80 ಲಕ್ಷ ಕೋಟಿ ರೂಪಾಯಿ ಆಗಿರಲಿದೆ ಎದು ಈಗಾಗಲೇ ಸಿಎಂ ತಿಳಿಸಿದ್ದು, ಇದು ಕಳೆದ ಜುಲೈನಲ್ಲಿ ಸರ್ಕಾರ ಮಂಡಿಸಿದ ಬಜೆಟ್‌ಗಿಂತ ಹೆಚ್ಚಿನ ಗಾತ್ರವಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಬರ ಕಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈ ನಡುವೆ ಕೃಷಿ ಕ್ಷೇತ್ರಕ್ಕೆ ಉಳಿದೆಲ್ಲ ಕ್ಷೇತ್ರಕ್ಕಿಂತ ಅಧಿಕ ಆದ್ಯತೆ ನೀಡುವ, ಅಧಿಕ ಅನುದಾನವನ್ನು ನೀಡುವ ನಿರೀಕ್ಷೆಯಿದೆ. ಈ ಹಿಂದೆ ರಾಜ್ಯದಲ್ಲಿ ಬರಪೀಡಿತ ಪ್ರದೇಶದ ರೈತರಿಗೆ ಬರ ಪರಿಹಾರ ನೀಡಲು ನಿಧಿ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.
ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಜೆಟ್ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಈ ಬಜೆಟ್ ನಮ್ಮ ರಾಜ್ಯಕ್ಕೆ ಹೊಸ ದಾರಿಯನ್ನು ತೋರಿಸಲಿದೆ ಎಂಬ ವಿಶ್ವಾಸವಿದೆ. ನಾವು ನಮ್ಮ ಗ್ಯಾರಂಟಿ ಯೋಜನೆ ಭರವಸೆಯನ್ನು ಜಾರಿ ಮಾಡಿದಂತೆಯೇ, ನಮ್ಮ ರಾಜ್ಯದ ಜನರ ಕಲ್ಯಾಣಕ್ಕಾಗಿ ಬೇಕಾದ ಎಲ್ಲ ಕಾರ್ಯವನ್ನು ಮಾಡುತ್ತೇವೆ," ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬೆಳ್ಳಿಗ್ಗೆ 10:15ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸಿಎಂ ವಿಶೇಷ ಸಂಪುಟ ರಜೆ ನಡೆಸಲಿದ್ದಾರೆ. ಸೋಮವಾರದಿಂದ ಕರ್ನಾಟಕ ವಿಧಾನಮಂಡಲದ 10 ದಿನಗಳ ಬಜೆಟ್ ಅಧಿವೇಶನ ಆರಂಭವಾಗಿದೆ.
ಈ ಬಜೆಟ್ ಈ ಹಿಂದಿನ ಬಜೆಟ್‌ಗಿಂತ ಸುಮಾರು 70,000 ಕೋಟಿ ರೂ. ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ವರ್ಷ ಜುಲೈನಲ್ಲಿ ಸಿಎಂ ಅವರ ಹಿಂದಿನ ಬಜೆಟ್ ಒಟ್ಟು 3,27,747 ಕೋಟಿ ರೂ.ಗಳನ್ನು ಹೊಂದಿದ್ದು, ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಫೆಬ್ರವರಿ 2023 ರಲ್ಲಿ ಅವರ ಹಿಂದಿನ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ 3,09,182 ಕೋಟಿ ರೂ. ಇತ್ತು.


Click it and Unblock the Notifications