ಕರ್ನಾಟಕದಲ್ಲಿ ಬಸ್ ದರ ಹೆಚ್ಚ: ಕರ್ನಾಟಕದಲ್ಲಿ ಒಂದಾದ ಮೇಲೊಂದರ ದರ ಹೆಚ್ಚಳವಾಗುತ್ತಿದೆ. ಅದರಂತೆ ಈಗ ಹಬ್ಬದ ಸೀಸನ್, ಹಾಗೂ ಬೇಸಿಗೆಯ ರಜೆ ಸಮಯ. ಹೀಗಾಗಿ ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಆದರೆ ಈಗ ಅವರ ಜೇಬಿಗೂ ಕತ್ತರಿ ಬೀಳೋ ಸಮಯ ಬಂದಿದೆ. ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಪ್ರಯಾಣ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಇಂದು ಮಹಾವೀರ ಜಯಂತಿ ಕಾರಣ ಇಂದು ಸಾರ್ವಜನಿಕ ರೆ ಇದೆ. ಈ ರಜೆ ಐದು ದಿನಗಳ ಕಾಲವಿದ್ದು ಜನರು ಊರುಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಜನದಟ್ಟಣೆಯನ್ನು ಖಾಸಗಿ ಬಸ್ ನಿರ್ವಾಹಕರು ಲಾಭದ ಅವಕಾಶಕ್ಕಾಗಿ ಬಳಸಿಕೊಂಡಿದ್ದಾರೆ. ಬಸ್ ಟಿಕೆಟ್ ದರ ಹೆಚ್ಚಿಸುವ ಮೂಲಕ ಜೇಬಿಗೆ ಕತ್ತರಿ ಹಾಕಿದ್ದಾರೆ. ಕಡಿಮೆಯಲ್ಲ, ಎರಡು ಅಥವಾ ಮೂರಷ್ಟು ಪಟ್ಟು ಹೆಚ್ಚಿಸುವ ಮೂಲಕ ಪ್ರಯಾಣಿಕರನ್ನು ಆರ್ಥಿಕವಾಗಿ ದೋಚುತ್ತಿದ್ದಾರೆ. ಉದಾಹರಣೆಗೆ, ಮಂಗಳವಾರ ದೇವದುರ್ಗದಿಂದ ಬೆಂಗಳೂರಿಗೆ ₹750ಕ್ಕೆ ಲಭ್ಯವಿದ್ದ ಟಿಕೆಟ್, ಗುರುವಾರದ ವೇಳೆಗೆ ₹2,000ಕ್ಕೆ ಏರಿದೆ. ಇದು ಅನೇಕ ಪ್ರಯಾಣಿಕರಲ್ಲಿ ಅಸಹನೆ ಹುಟ್ಟಿಸಿದೆ.
ಈ ಹಿಂದೆ ಖಾಸಗಿ ಬಸ್ ಟಿಕೆಟ್ ದರ ಎಷ್ಟಿತ್ತು, ಈಗ ಎಷ್ಟಿದೆ..?
ಬೆಂಗಳೂರು-ಧಾರವಾಡ ಮಾರ್ಗ: ಹಿಂದಿನ ದರ ಶ್ರೇಣಿ ₹750ರಿಂದ ₹2,999 ರವರೆಗೆ ಇದ್ದರೆ, ಈಗ ಇದು ₹850 ರಿಂದ ₹10,000ರ ತನಕ ಏರಿದೆ.
ಬೆಂಗಳೂರು-ಧರ್ಮಸ್ಥಳ ಮಾರ್ಗ: ₹600 ರಿಂದ ₹850ರಷ್ಟು ಇದ್ದ ದರಗಳು ಈಗ ₹1,250 ರಿಂದ ₹2,000ರಷ್ಟಾಗಿ ಹೆಚ್ಚಿವೆ.
ಬೆಂಗಳೂರು-ಮೈಸೂರು ಮಾರ್ಗ: ಮೊದಲು ₹190 ರಿಂದ ₹1,600ರಷ್ಟಿದ್ದ ಟಿಕೆಟ್ ದರಗಳು ಈಗ ₹300 ರಿಂದ ₹5,999ರಷ್ಟು ಧಾವಿಸುತ್ತಿವೆ.
ಬೆಂಗಳೂರು-ಕೊಡಗು ಮಾರ್ಗ: ಮೊದಲು ಟಿಕೆಟ್ ₹580 ರಿಂದ ₹990ರಷ್ಟಿದ್ದರೆ, ಈಗ ₹1,000 ರಿಂದ ₹1,900ರಷ್ಟಾಗಿದೆ.
ಬೆಂಗಳೂರು-ಚಿಕ್ಕಮಗಳೂರು ಮಾರ್ಗ: ಮೊದಲು ₹500 ರಿಂದ ₹700ರಷ್ಟು ಇದ್ದ ದರ ಈಗ ₹599 ರಿಂದ ₹1,150ರಷ್ಟಾಗಿದ್ದು, ಆಟೋಜೋನ್ ಮಾರ್ಗದಲ್ಲಿ ₹600 ರಿಂದ ₹2,999ದಷ್ಟಿದ್ದ ದರ ಈಗ ₹900 ರಿಂದ ₹3,000ರಷ್ಟು ಏರಿಕೆಯಾಗಿದೆ.
ಬೆಂಗಳೂರು-ಹುಬ್ಬಳ್ಳಿ ಮಾರ್ಗ: ಮೊದಲು ₹759 ರಿಂದ ₹3,800ರಷ್ಟಿದ್ದ ದರ ಈಗ ₹819 ರಿಂದ ₹10,000ಕ್ಕೆ ತಲುಪಿದೆ.
ಬೆಂಗಳೂರು-ಕಾರವಾರ ಮಾರ್ಗ: ₹850 ರಿಂದ ₹2,999ರಷ್ಟಿದ್ದರೆ, ಈಗ ₹1,499 ರಿಂದ ₹3,000 ರವರೆಗೆ ಏರಿಕೆಯಾಗಿದೆ.
ಬೆಂಗಳೂರು-ಕಲಬುರಗಿ ಮಾರ್ಗ: ಮೊದಲಿಗೆ ₹850 ರಿಂದ ₹4,000 ರಷ್ಟು ಇದ್ದ ದರ ಈಗ ₹1,399 ರಿಂದ ₹2,400 ರವರೆಗೆ ಇಳಿಕೆಯಾಗಿದ್ದರೂ, ಮಧ್ಯಮ ಗಮ್ಯಸ್ಥಳಗಳಲ್ಲಿ ದರ ಹೆಚ್ಚಳವೇ ಹೆಚ್ಚಾಗಿದೆ.
ಬೆಂಗಳೂರು-ಶಿವಮೊಗ್ಗ ಮಾರ್ಗ: ಟಿಕೆಟ್ ದರ ₹350 ರಿಂದ ₹1,899ರಷ್ಟಿದ್ದರೆ, ಈಗ ₹799 ರಿಂದ ₹2,299ರಷ್ಟಾಗಿದೆ.
ಈ ದರ ಏರಿಕೆಯಲ್ಲಿ ಕೇವಲ ಖಾಸಗಿ ಬಸ್‌ಗಳಷ್ಟೇ ಭಾಗವಹಿಸಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೂಡ ದರ ಹೆಚ್ಚಿಸಿದೆ. ಅಂದರೆ ಶೇಕಡ 15ರಿಂದ 2ರಷ್ಟು ಟಿಕೆಟ್ ದರ ಹೆಚ್ಚಳವನ್ನು ಅನುಷ್ಠಾನಗೊಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
KSRTC ಬಸ್ ದರ:
ಬೆಂಗಳೂರು AC ಸ್ಲೀಪಸ್ ಬಸ್: ₹1,100ರಿಂದ ₹1,350ಕ್ಕೆ ಏರಿಕೆಯಾಗಿದೆ.
NON-AC ಬಸ್ ದರ: ₹800 ರಿಂದ ₹1,100ಕ್ಕೆ ಏರಕೆಯಾಗಿದೆ.
ಬಿದರ್ ಮಾರ್ಗದ AC ಬಸ್: ₹1,500ರಿಂದ ₹1,90ಗೆ ಏರಿಕೆಯಾಗಿದೆ.
ಮಂಗಳೂರು ಮಾರ್ಗದ NON-AC ಬಸ್ ದರ: ₹1,100ರಿಂದ ₹1,500ಕ್ಕೆ ಏರಿಕೆಯಾಗಿದೆ.
ಈ ಎಲ್ಲ ಏರಿಕೆಗಳು ಸಾರ್ವಜನಿಕ ಸಾರಿಗೆಯ ಗುರಿಯೇನು ಎಂಬ ಪ್ರಶ್ನೆ ಎಬ್ಬಿಸುತ್ತಿವೆ. ಅನುಕೂಲಕರ ಮತ್ತು ತಾತ್ಕಾಲಿಕ ಬಂಡವಾಳದ ಪ್ರಯೋಜನಕ್ಕಾಗಿ ಬಸ್ ಟಿಕೆಟ್ ದರಗಳನ್ನು ನಿರ್ಬಂಧವಿಲ್ಲದೆ ಏರಿಸುತ್ತಿರುವ ಈ ಪ್ರವೃತ್ತಿ ಸಾರ್ವಜನಿಕರ ಬಡ್ತಿ ಆರ್ಥಿಕತೆಗೆ ಹೊಡೆತ ನೀಡುತ್ತಿದೆ. ಬಸ್ ಸೇವೆಗಳು ಹಬ್ಬದ ಸಂದರ್ಭಗಳಲ್ಲಿ ಹೆಚ್ಚು ಲಾಭ ಗಳಿಸಲು ಸ್ಪರ್ಧಿಸುವ ಬದಲು, ಸಾರ್ವಜನಿಕ ಸೇವಾ ಗುರಿಯನ್ನು ಪಾಲಿಸಬೇಕೆಂಬ ಜನದ ಅಭಿಪ್ರಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಖಾಸಗಿ ಹಾಗೂ ಸರ್ಕಾರಿ ಬಸ್ ಸೇವೆಗಳ ಟಿಕೆಟ್ ದರಗಳಿಗೆ ಉಚಿತವಾಗಿ ಏರಿಕೆ ಮಾಡಬಹುದಾದ ಮಟ್ಟವನ್ನು ನಿಯಂತ್ರಿಸುವ ಕಾನೂನು ಅಗತ್ಯವಾಗಿದೆ. ಇಲ್ಲವಾದರೆ ಪ್ರತಿಯೋಂದು ಹಬ್ಬವೂ ಜನಸಾಮಾನ್ಯರ ಖರ್ಚಿಗೆ ಭಾರವಾಗಿ ಮಾರ್ಪಡುತ್ತದೆ.


Click it and Unblock the Notifications