ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಒಂದಲ್ಲ ಒಂದು ರೀತಿಯ ಕಾರ್ಯಗಳನ್ನು ಮಾಡುತ್ತಿದೆ. ಈಗ ಅದರ ಸಲುವಾಗಿಯೇ, ರಾಜ್ಯ ಸರ್ಕಾರ ದೊಡ್ಡ ಮಟ್ಟದ ಮೂಲಸೌಕರ್ಯ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅಂದರೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, 2,215 ಕೋಟಿ ವೆಚ್ಚವನ್ನು ಘೋಷಿಸಿದೆ. ಈ ವೆಚ್ಚದಲ್ಲಿ ಹೆಬ್ಬಾಳ ಮತ್ತು ಮೇಕ್ರಿ ಸರ್ಕಲ್ ನಡುವೆ 2.27 ಕಿಲೋಮೀಟರ್ ಉದ್ದದ ಕಿರು ಸುರಂಗ ಹಾಗೂ 1.27 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ.

ಈ ಯೋಜನೆಗೆ ಹಣಕಾಸು ಇಲಾಖೆ ಮೊದಲೇ ಕೆಲವು ಆಕ್ಷೇಪಣೆಗಳನ್ನು ಮಾಡಿದೆ. ಹೀಗಿದ್ದರೂ ನಗರಾಭಿವೃದ್ಧಿ ಇಲಾಖೆ ಎಲ್ಲಾ ವಿವರಗಳನ್ನು ಸ್ಪಷ್ಟಪಡಿಸಿದೆ. ನಂತರ ಸಚಿವ ಸಂಪುಟ ಅಂತಿಪ ಒಪ್ಪಿಗೆ ನೀಡಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ UDD ನೀಡಿರುವ ವಿವರಗಳ ಪ್ರಕಾರ, ಹೆಬ್ಬಾಳ ಜಂಕ್ಷನ್ ಬಳಿ ಇರುವ ರಸ್ತೆಗಳನ್ನು ಅಗಲಗೊಳಿಸುವುದು ಭೂಸ್ವಾಧೀನ ಸಮಸ್ಯೆಗಳ ಕಾರಣ ಅಸಾಧ್ಯವಾಗಿದೆ. ಆದ್ದರಿಂದ, ಕಟ್-ಅಂಡ್-ಕವರ್ ತಂತ್ರದಲ್ಲಿ ನಿರ್ಮಿಸುವ ಈ ಕಿರು ಸುರಂಗ ಮತ್ತು ಎಲಿವೇಟೆಡ್ ಕಾರಿಡಾರ್ ದೀರ್ಘಕಾಲಿಕ ಟ್ರಾಫಿಕ್ ಪರಿಹಾರ ನೀಡಲಿದೆ. ಜೊತೆಗೆ, ಸರ್ಕಾರ ಯೋಜಿಸುತ್ತಿರುವ 16.75 ಕಿಮೀ ನಾರ್ತ್-ಸೌತ್ ಸುರಂಗ ಮಾರ್ಗ ಮತ್ತು ಈಸ್ಟ್-ವೆಸ್ಟ್ ಎಲಿವೇಟೆಡ್ ಕಾರಿಡಾರ್ ಜೊತೆಗೂ ಈ ಯೋಜನೆ ಹೊಂದಿಕೊಳ್ಳಲಿದೆ.
UDD ತಿಳಿಸಿದಂತೆ, 16.75 ಕಿಮೀ ದೀರ್ಘ ಸುರಂಗದಲ್ಲಿ ಎರಡು ಚಕ್ರ ವಾಹನಗಳು ಹಾಗೂ ಆಟೋಗಳಿಗೆ ನಿರ್ಬಂಧ ಇರುವುದರಿಂದ, ಈ ಕಿರು ಸುರಂಗವು ಸಂಜಯನಗರ, ಆರ್.ಟಿ.ನಗರ, ಗಂಗಾನಗರ ಮತ್ತು ಅಶ್ವತನಗರ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಈ ಯೋಜನೆಯ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸ್, BMS ಎಂಜಿನಿಯರಿಂಗ್ ಕಾಲೇಜಿನ ತಜ್ಞರು ಹಾಗೂ ಖಾಸಗಿ ಸಲಹಾ ಸಂಸ್ಥೆ ಆರ್ಕಾಡಿಸ್‌ಗಳಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗಿದೆ. ಸಂಧರ್ಭದಲ್ಲಿ, ಆರ್ಕಾಡಿಸ್ ಈ ಯೋಜನೆ ಟ್ರಾಫಿಕ್ ಒತ್ತಡವನ್ನು ಸುಮಾರು 40% ಇಳಿಸಬಹುದು ಎಂದು ಅಂದಾಜಿಸಿದೆ.
ಬಿ-ಸ್ಮೈಲ್ ಸಂಸ್ಥೆ ರೋಡಿಕ್ ಕನ್ಸಲ್ಟೆಂಟ್ಸ್ ಮೂಲಕ DPR ತಯಾರಿಸಿದ್ದು, ಯೋಜನೆ ಕಟ್ಟುವ ಜವಾಬ್ದಾರಿ ಸಂಪೂರ್ಣವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮೇಲಿದೆ. ಅಗತ್ಯ ಬಜೆಟ್‌ನ್ನು BDA ಈಗಾಗಲೇ ಒಳ ನಿದಿಗಳಿಂದ ಮೀಸಲು ಮಾಡಿದೆ.
ಹಣಕಾಸು ಇಲಾಖೆ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳಿಗೆ ಉತ್ತರಿಸುವಾಗ, UDD ಹೇಳುವುದೇನು ಎಂದರೆ - ಮೂಲತಃ ಮೇಲ್ಸೇತುವೆ (surface road) ಯೋಜನೆ ಯೋಚಿಸಲಾಗಿತ್ತು. ಆದರೆ ಪಶುವೈದ್ಯಕೀಯ ವಿಶ್ವವಿದ್ಯಾಲಯ ಅಗತ್ಯ ಜಾಗ ಕೊಡಲಿಲ್ಲ. ಇದರಿಂದ ಸುರಂಗ ಮಾರ್ಗಕ್ಕೆ ಬದಲಾವಣೆ ಮಾಡಲಾಯಿತು. ಹೊಸ ಬಾಟಲ್ ನೆಕ್‌ಗಳ ಕುರಿತು ಕೇಳಿದ ಪ್ರಶ್ನೆಗೆ, ಇದು ಈಸ್ಟ್-ವೆಸ್ಟ್ ಎಲಿವೇಟೆಡ್ ರಸ್ತೆಯೊಂದಿಗೆ ಸೇರಿ ಮೇಖ್ರಿ ಸರ್ಕಲ್‌ನಲ್ಲಿ ರೋಟರಿ ಇಂಟರ್ಚೇಂಜ್ ರೂಪಿಸಲಿದೆ, ಆದ್ದರಿಂದ ಟ್ರಾಫಿಕ್ ಸರಾಗವಾಗಿ ಹರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಕೊನೆಗೆ, ಈ ಎಲ್ಲಾ ವಿವರಗಳನ್ನು ಪರಿಶೀಲಿಸಿದ ಸಚಿವ ಸಂಪುಟ, ಯೋಜನೆಗೆ ಅಧಿಕೃತ ಅನುಮೋದನೆ ನೀಡಿ ಟೇಂಡರ್ ಪ್ರಕ್ರಿಯೆಗೆ ಮಾರ್ಗ ಮಾಡಿದೆ.


Click it and Unblock the Notifications