ಮೈಕ್ರೋ ಫೈನಾನ್ಸ್ ಗೆ ಕೊನೆಗೂ ಮೂಗುದಾರ: ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕದಲ್ಲಿ ಅದರಲ್ಲೂ ಗ್ರಾಮೀಣ ಜನರ ಕಾಡುತ್ತಿರುವ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಅಧ್ಯಾದೇಶ ತರಲು ಸಚಿವ ಸಂಪುಟದಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ.

ಜನವರಿ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೈಕ್ರೋಫೈನಾನ್ಸ್ ಹಾವಳಿಯನ್ನು ತಡೆಯುವ ಸಲುವಾಗಿ ಹೊಸ ಮಸೂದೆಯೊಂದನ್ನು ಜಾರಿಗೆ ತರಲು ಅನುಮೋದನೆ ನೀಡಲಾಯಿತು. ಈ ಮಸೂದೆಯನ್ನು ಜಾರಿಗೆ ತರುವ ಸಲುವಾಗಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತವನ್ನು ಪಡೆಯಲು ನಿರ್ಧರಿಸಲಾಯಿತು. ಮೈಕ್ರೋಫೈನಾನ್ಸ್ ವಿಷಯಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಮುಖ್ಯಮಂತ್ರಿಗೆ ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರವನ್ನು ಕ್ಯಾಬಿನೆಟ್ ನೀಡಿದ್ದು, ಮಸೂದೆಯಲ್ಲಿ ಕೆಲವು ಅಂಶಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಈ ಕಾರಣದಿಂದಾಗಿ, ಚರ್ಚೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ."

ಸುಗ್ರೀವಾಜ್ಞೆಗೆ ಅನುಮೋದನೆ: ಮೈಕ್ರೋ ಫೈನಾನ್ಸ್‌ಗೆ ಮೂಗುದಾರ

ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್ ಅವರು, "ಫೈನಾನ್ಸ್ಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು. ಅಮಾನವೀಯವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ವಸೂಲಿ ಮಾಡಲಾಗುತ್ತಿದೆ. ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಕೂಡ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ, ಮಸೂದೆಯನ್ನು ತರಲು ತೀರ್ಮಾನಿಸಲಾಗಿದ್ದು, ಕೆಲವು ತಾಂತ್ರಿಕ ಅಂಶಗಳ ಬಗ್ಗೆ ಚರ್ಚಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ಹಿರಿಯ ಸಚಿವರ ಸಭೆಯನ್ನು ಕರೆದಿದ್ದಾರೆ. ಕೆಲವು ಮಹತ್ವದ ವಿಷಯಗಳಿರುವುದರಿಂದ ಸಭೆ ನಡೆಸಲಾಗುತ್ತಿದೆ. ಸಂಜೆ 4 ಗಂಟೆಗೆ ಮಸೂದೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗುವುದು" ಎಂದು ಅವರು ಸ್ಪಷ್ಟಪಡಿಸಿದರು.

ಸುಗ್ರೀವಾಜ್ಞೆ ತರಲು ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ. ನಮ್ಮಲ್ಲಿರುವ ಕಾನೂನುಗಳು ಕೆಲವು ಪ್ಲಸ್ ಆಗಲಿವೆ. ಕೆಲವು ಮೈನಸ್ ಆಗಲಿವೆ. RBI ಕಾನೂನು ಸುಗ್ರೀವಾಜ್ಞೆಗೆ ಸದ್ಯ ಅಡ್ಡಿಯಾಗುತ್ತಿದೆ. ಹೀಗಾಗಿ ಇದನ್ನು ನಿವಾರಿಸಿಕೊಳ್ಳುವುದು ಹೇಗೆ? ಎನ್ನುವ ಬಗ್ಗೆ ಚರ್ಚಿಸಲಿದ್ದಾರೆ. ಹೀಗಾಗಿ ಕಾನೂನಾತ್ಮಕ ತೀರ್ಮಾನಕ್ಕೆ ಸಂಜೆ ಹಿರಿಯ ಸಚಿವರ ಸಭೆ ಕರೆಯಲಾಗಿದೆ ಎಂದು ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

ಏನಿದು ಮೈಕ್ರೋಫೈನಾನ್ಸ್

ರಾಜ್ಯದಲ್ಲಿ ಸದ್ಯ ಬಿಸಿಬಿಸಿ ಚರ್ಚೆಯಲ್ಲಿರುವ ಮೈಕ್ರೋ ಫೈನಾನ್ಸ್ ಬಲೆಗೆ ಬಿದ್ದು ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದು, ಇನ್ನೂ ಅನೇಕರು ತಮ್ಮ ಮನೆ-ಮಠಗಳನ್ನು ಎದುರಿಸುತ್ತಿರುವ ಭೀತಿ ಎದುರಿಸುತ್ತಿದ್ದಾರೆ

ಮೈಕ್ರೋ ಫೈನಾನ್ಸ್, ಮೈಕ್ರೋ ಕ್ರೆಡಿಟ್ ಅಥವಾ ಕಿರುಬಂಡವಾಳ ಸೇವೆ ಎನ್ನುವುದು, ಕಡಿಮೆ ಆದಾಯದ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಒದಗಿಸಲಾಗುವ ಬ್ಯಾಂಕಿಂಗ್ ಸೇವೆಯಾಗಿದೆ. ಶಿಕ್ಷಣ, ವ್ಯಾಪಾರ, ವೈಯಕ್ತಿಕ ಸಾಲ ಸೇರಿದಂತೆ ಹಲವು ಬಗೆಯ ಆರ್ಥಿಕ ನೆರವನ್ನು ನಿರ್ದಿಷ್ಟ ವ್ಯಕ್ರಿಗಳು ಅಥವಾ ಗುಂಪುಗಳು ಪಡೆಯಬಹುದಾಗಿದೆ. ಮೈಕ್ರೋ ಫೈನಾನ್ಸ್, ಮೈಕ್ರೋ ಕ್ರೆಡಿಟ್ ಅಥವಾ ಕಿರುಬಂಡವಾಳ ಸೇವೆ ಎನ್ನುವುದು ಕಡಿಮೆ ಆದಾಯದ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಒದಗಿಸಲಾಗುವ ಒಂದು ಬಗೆಯ ಬ್ಯಾಂಕಿಂಗ್ ಸೇವೆಯಾಗಿದೆ. ಈ ಸೇವೆಯಡಿ, ಶಿಕ್ಷಣ, ವ್ಯಾಪಾರ, ವೈಯಕ್ತಿಕ ಸಾಲ ಸೇರಿದಂತೆ ಹಲವು ಬಗೆಯ ಆರ್ಥಿಕ ನೆರವನ್ನು ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳು ಪಡೆಯಬಹುದು. ಮೈಕ್ರೋ ಫೈನಾನ್ಸ್ ಸೇವೆಗಳು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿದ್ದರೂ, ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇಂಡೋನೇಷ್ಯಾ, ಕಾಂಬೋಡಿಯಾ, ಕಾಂಗೋ ಮುಂತಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಿರುಬಂಡವಾಳ ಸೇವೆ ಹೆಚ್ಚು ಜನಪ್ರಿಯವಾಗಿದೆ. ಸಾಂಪ್ರದಾಯಿಕ ಸಾಲದಾತರಂತೆ, ಮೈಕ್ರೋ ಫೈನಾನ್ಷಿಯರ್‌ಗಳು ಕೂಡ ಸಾಲಗಳ ಮೇಲೆ ಬಡ್ಡಿಯನ್ನು ವಿಧಿಸುತ್ತಾರೆ ಮತ್ತು ನಿರ್ದಿಷ್ಟ ಮರುಪಾವತಿ ಯೋಜನೆಗಳನ್ನು ರೂಪಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+