ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣವನ್ನಾಗಿ ಮರುನಾಮಕರಣ ಮಾಡಿದ ನಂತರ ಮತ್ತೊಂದು ಜಿಲ್ಲೆಯ ಹೆಸರನ್ನು ಬದಲಾವಣೆಯಾಗಿದೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಉತ್ತರ ಜಿಲ್ಲೆಯಾಗಿದೆ. ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲು 14ನೇ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇಂದು ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ (Cabinet Meeting) ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಯುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಅನುಮೋದನೆಯನ್ನು ಕೊಟ್ಟಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಕೇಂದ್ರ ಬಾಗೇಪಲ್ಲಿ ಹೆಸರು ಬದಲಾವಣೆಗೂ ಕೂಡ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಹಾಗೂ ಹೂಡಿದಾರನ್ನು ತನ್ನ ಕಡೆಗೆ ಸಳೆಯಲು ನಿಟ್ಟಿನಲ್ಲಿ ರಾಜ್ಯಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಜಿಲ್ಲೆಯನ್ನು 'ಬೆಂಗಳೂರು ಉತ್ತರ' ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಇಟ್ಟಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 'ಬೆಂಗಳೂರು ಉತ್ತರ' ಮರುನಾಮಕರಣದ ಜೊತಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕ್ಕನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆಯನ್ನು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದಕ್ಕೂ ಕೂಡ ಸಂಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ.
ಬೆಂಗಳೂರು ಉತ್ತರ ಎಂದು ಮರುನಾಮಕರಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ ಬಿಸಿನೆಸ್ ಪಾರ್ಕ್ ಮತ್ತು ಫಾಕ್ಸ್‌ಕಾನ್‌ನ ಐಫೋನ್ ಅಸೆಂಬ್ಲಿ ಘಟಕದಂತಹ ಪ್ರಮುಖ ಕೈಗಾರಿಕೆಗಳಿಗೆ ಬೆಂಗಳೂರು ಗ್ರಾಮಾಂತರದಲ್ಲಿ ಇವೆ. ಇಂತಹ ದೊಡ್ಡ ದೊಡ್ಡ ಕೈಗಾರಿಕೆಗಳು ಜಿಲ್ಲೆಯಲ್ಲಿ ಇದ್ದರೂ ಸಹ ಹೂಡಿಕೆದಾರಿಗೆ ಬೆಂಗಳೂರು 'ಗ್ರಾಮೀಣ' ಎಂಬ ಹೆಸರು ತಪ್ಪಾಗಿ ಸಂದೇಶವನ್ನು ರವಾನೆ ಮಾಡಲಾಗುತ್ತದೆ ಎಂಬ ರಾಜಕೀಯ ನಾಯಕರು ಹಾಗೂ ಸ್ಥಳೀಯ ಸಾರ್ವಜನಿಕರು ಹೇಳಿದ್ದಾರೆ. ಆದರಿಂದಾಗಿ ಜಿಲ್ಲೆಯ ಹೆಸರನ್ನು ಬದಲಾಯಿಸುವಂತಹ ಕಾರ್ಯಗಳು ನಡೆಯುತ್ತಿದ್ದವು. ಬೆಂಗಳೂರು ಉತ್ತರ ಎಂದು ಬೆಂಗಳೂರು ಗ್ರಾಮಂತರ ಜಿಲ್ಲೆ ಮರುನಾಮಕರಣದ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಇಂದು ಬೆಂಗಳೂರಿನ ಗ್ರಾಮಾಂತರ ಪ್ರದೇಶ ಗ್ರಾಮೀಣ ಪ್ರದೇಶವಾಗಿ ಇಲ್ಲ. ಬೇಗವಾಗಿ ಬೆಳೆಯುತ್ತಿರುವ ಸಿಟಿಯಾಗಿ ರೂಪುಗೊಂಡಿದೆ.ಈ ಭಾಗಕ್ಕೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವುದರಿಂದ ಜಿಲ್ಲೆಯ ಆರ್ಥಿಕತೆಗೆ ಅನುಗುಣವಾಗಿ ಹೆಸರು ಕೂಡ ಇರುತ್ತದೆ ಇದರಿಂದಾಗಿ ಹೂಡಿಕೆದಾರನ್ನು ಈಪ್ರದೇಶ ಹೆಚ್ಚು ಸಳೇಯಲು ಅವಕಾಶವನ್ನು ಮಾಡಿಕೊಂಡುತ್ತದೆ.
ಬೆಂಗಳೂರಿನ ಗ್ರಾಮಾಂತರದ ಪ್ರದೇಶ 1986ರಲ್ಲಿ ಬೆಂಗಳೂರು ಜಿಲ್ಲೆಯಿಂದ ಬೇರ್ಪಟ್ಟಿತ್ತು.ಇದೀಗ ಈ ಜಿಲ್ಲೆಯಲ್ಲಿ ಪ್ರಸ್ತುತ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಎಂಬ ನಾಲ್ಕು ತಾಲೂಕುಗಳಿವೆ. 2007ರಲ್ಲಿ, ಜಿಲ್ಲೆಯ ದಕ್ಷಿಣ ಭಾಗವನ್ನು ವಿಭಜಿಸಿ ರಾಮನಗರ ಜಿಲ್ಲೆಯನ್ನು ಸಹ ಮಾಡಲಾಗಿತ್ತು. ಆದರೆ ಇತ್ತೀಚಿಗೆ ರಾಮನಗರ ಜಿಲ್ಲೆಯನನ್ನು ಬೆಂಗಳೂರು ದಕ್ಷಿಣ ಎಂದು ಸರ್ಕಾರ ಮರುನಾಮಕರಣವನ್ನು ಮಾಡಿತ್ತು. ಆದರೆ ಇದೀಗ ಮತ್ತಷ್ಟು ಆರ್ಥೀಕವಾಗಿ ಮುಂದುವರೆಯಲು ಮತ್ತು ಹೂಡಿಕೆದಾರನ್ನು ತನ್ನ ಪ್ರದೇಶಕ್ಕೆ ಕರೆದುತರಲು ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ಮುಂದಾಗಿದೆ
ಆರ್ಥಿಕ ಪ್ರಗತಿ
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಗೆ ಸಚಿವ ಸಂಪುಟ ಅನುಮೋದನೆಯನ್ನು ಕೊಟ್ಟರೆ ಬೆಂಳೂರು ಗ್ರಾಮಾಂತರ ಬೆಂಗಳೂರು ಉತ್ತರ ಎಂದು ಮರುನಾಮಕರಣ ಆಗುತ್ತದೆ. ಜೊತಗೆ ಆರ್ಥಿಕ ಅಭಿವೃದ್ಧಿಗೂ ಸಹ ನೆರವಾಗುತ್ತದೆ. ಬೆಂಗಳೂರಿನಲ್ಲಿ ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಮರುನಾಮಕರಣ ಮಾಡುವುದರಿಂದ ಕೈಗಾರಿಕಾ ಬೆಳವಣಿಗೆಯನ್ನು ಸಮಾನವಾಗಿ ವಿಸ್ತರಿಸಲು ಸಹಾಯವಾಗುತ್ತದೆ. ಈ ಮರುನಾಮಕರಣಕ್ಕೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಹ ಬೆಂಬಲ ಸಹ ಬೇಕಾಗುತ್ತದೆ. ಜಾಗತಿಕ ಹೂಡಿಕೆದಾರರು 'ಗ್ರಾಮೀಣ' ಎಂದು ಕೇಳಿದಾಗ, ಅವರು ಹಿಂದುಳಿದಿರುವ ಬಗ್ಗೆ ಯೋಚನೆ ಮಾಡುತ್ತಾರೆ ಎಂಬುವುದನ್ನು ನಿರ್ಧಾಋವನ್ನು ತಗದುಕೊಳ್ಲಲಾಗುತ್ತದೆ,
ಬಾಗೇಪಲ್ಲಿಗೆ ಭಾಗ್ಯನಗರ ಹೆಸರು
ಬೆಂಗಳೂರು ಗ್ರಾಮಾಂತರದ ಹೆಸರು ಬದಲಾವಣೆಯ ಜೊತೆಗೆ, ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಕೇಂದ್ರ ಬಾಗೇಪಲ್ಲಿ ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆಯನ್ನು ನಡೆಸಿತ್ತು ಅದಕ್ಕೂ ಕೂಡ ಇಂದು ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ.


Click it and Unblock the Notifications