ಅಬ್ಬಬ್ಬಾ..ಕರ್ನಾಟಕ ಕಾಸ್ಟ್ಲಿ ಆಗುತ್ತಿದೆ. ಇನ್ನು ಯಾವ್ಯಾವ ಅಗತ್ಯತೆಗಳ ಬೆಲೆ ಏರಿಕೆಯಾಗುತ್ತೋ ಗೊತ್ತಿಲ್ಲ. ಬಜೆಟ್ ಘೋಷಣೆಯಾದಾಗಿನಿಂದ ಒಂದಾದ ಮೇಲೊಂದರ ಬೆಲೆ ಏರಿಕೆಯ ಬಗ್ಗೆ ಸುದ್ದಿಯಾಗುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಶುಲ್ಕ ವಿಧಿಸಿದ್ದಾಯ್ತು, ಟೋಲ್ ದರ ಹೆಚ್ಚಿಸಿದ್ದಾಯ್ತು, ಹಾಲಿನ ದರವೂ ಏರಿಕೆಯಾಯ್ತು.. ಹೀಗೆ ಬೆಲೆ ಏರಿಕೆಗಳನ್ನೇ ನೋಡಿದ ಜನರು, ಇನ್ಮುಂದೆ ಡೀಸೆಲ್ ಹಾಕಿಸಿಕೊಳ್ಳೋದಕ್ಕೆ ಒದ್ದಾಡಬೇಕಾಗುತ್ತದೆ. ಏಕೆಂದರೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ₹2 ಹೆಚ್ಚಿಸುವ ತೀರ್ಮಾನವನ್ನು ಪ್ರಕಟಿಸಿದೆ.

ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನರಿಗೆ ಇದೊಂದು ದೊಡ್ಡ ಹೊರೆಯಾಗಿ ಪರಿಣಮಿಸಬಹುದು. ಅಲ್ಲದೇ ಈ ಬೆಲೆ ಏರಿಕೆಯ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಬೇಕೆಂದು ಆದೇಶವನ್ನು ಕೂಡ ಹೊರಡಿಸಲಾಗಿದೆ. ಒಂದಾದ ಮೇಲೊಂದರ ಬೆಲೆ ಏರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದರ ವಿರುದ್ಧ ಪ್ರತಿಪಕ್ಷಗಳು ಕೂಡ ಕಿಡಿ ಕಾರುತ್ತಿವೆ. ಜನಸಾಮಾನ್ಯರ ಮೇಲೆ ನಿರ್ದಯವಾಗಿ ಹೊರೆ ಹಾಕಲಾಗಿದೆ ಎಂಬ ಆಕ್ಷೇಪ ಕೇಳಿ ಬಂದಿದೆ. ಡೀಸೆಲ್ ದರ ಹೆಚ್ಚಳವು ಸಾಮಾನ್ಯ ಜನರಿಂದ ಉದ್ಯಮಗಳವರೆಗಿನ ಎಲ್ಲವನ್ನೂ ಪ್ರಭಾವಿಸುತ್ತದೆ. ಕರ್ನಾಟಕ ಸರ್ಕಾರವು ಲೀಟರ್‌ಗೆ ₹2 ದರ ಹೆಚ್ಚಳವನ್ನು ಘೋಷಿಸಿದ ನಂತರ, ಈ ನಿರ್ಧಾರದ ಪರಿಣಾಮಗಳು ವಿವಿಧ ಕ್ಷೇತ್ರಗಳಲ್ಲಿ ತೀವ್ರವಾಗಿ ಅನುಭವವಾಗಲಿವೆ.
ಅಂದಹಾಗೆ ಈಗಾಗಲೇ ಡೀಸೆಲ್ ದರವು ಲೀಟರ್‌ಗೆ ₹88.99 ಆಗಿದೆ. ಈ ಹೆಚ್ಚಳದಿಂದ ದೈನಂದಿನ ಜೀವನದಲ್ಲಿ ಹೆಚ್ಚಿನ ವ್ಯಯ ಉಂಟಾಗಲಿದೆ. ಈ ನಿರ್ಧಾರದ ಬಗ್ಗೆ ಕಿಡಿ ಕಾರಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದು ಜನವಿರೋಧಿ ನಡೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಳೆದ 10 ತಿಂಗಳಲ್ಲಿ ಕರ್ನಾಟಕ ಸರ್ಕಾರ ಡೀಸೆಲ್ ದರವನ್ನು ಒಟ್ಟು ₹5 ಹೆಚ್ಚಿಸಿರುವುದನ್ನು ಗಂಭೀರವಾಗಿ ಟೀಕಿಸಿದ್ದಾರೆ.
ಇನ್ನು ಯುಗಾದಿ ಸಂಭ್ರಮದಲ್ಲಿದ್ದ ಜನರಿಗೆ ಹೊಸ ವರ್ಷದ ಸಂತಸ ಪಡಬೇಕೋ, ಅಥವಾ ಇದು ಬೆಲೆ ಏರಿಕೆಯ ವರ್ಷ ಎಂದು ದುಃಖ ಪಡಬೇಕೋ ಗೊತ್ತಿಲ್ಲದಂತಾಗಿದೆ. ಈ ನಿರ್ಧಾರದಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ದಿನದಿಂದಲೇ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿ ಆಘಾತಕ್ಕೀಡು ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಇವರಷ್ಟೇ ಅಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಕೂಡ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಅಲ್ಲದೇ ಈ ದರ ಏರಿಕೆಯಿಂದ ರೈತರು, ಕೂಲಿ ಕಾರ್ಮಿಕರು, ಮತ್ತು ಮಧ್ಯಮ ವರ್ಗದ ಜನರು ಆರ್ಥಿಕವಾಗಿ ತೀವ್ರವಾಗಿ ಪೀಡಿತರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜನಸಾಮಾನ್ಯರ ಕಲ್ಯಾಣದ ಕಡೆ ಗಮನಹರಿಸುವ ಬದಲು, ಅವಸರದಲ್ಲಿಯೇ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ದರ ಏರಿಕೆಯ ಪರಿಣಾಮಗಳು:
1. ಸಾರಿಗೆ ಮತ್ತು ಹಣ್ಣು-ತರಕಾರಿಗಳ ಬೆಲೆಯಲ್ಲಿ ಹೆಚ್ಚಳ:
ಡೀಸೆಲ್ ದರ ಏರಿಕೆಗೂ ಸಾರಿಗೆ ಮತ್ತು ಹಣ್ಣು-ತರಕಾರಿಗಳ ಬೆಲೆ ಏರಿಕೆಗೂ ಏನು ಸಂಬಂಧ ಎನ್ನಬಹುದು. ಆದರೆ ಅದಕ್ಕೂ ಸಂಬಂಧವಿದೆ. ಅಂದರೆ ಡೀಸೆಲ್ ದರ ಏರಿಕೆಯಾದರೆ, ಸಾರಿಗೆ ದರ ಸಾಮಾನ್ಯವಾಗಿ ಏರಿಕೆಯಾಗುತ್ತದೆ. ಹಾಗೆಯೇ ಆಮದು, ರಫ್ತು ಮಾಡಲಾಗುವ ದಿನನಿತ್ಯ ಬಳಕೆಯ ಆಹಾರ ಉತ್ಪನ್ನಗಳ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಹಣ್ಣು-ತರಕಾರಿ ಹಾಗೂ ಅವಶ್ಯಕ ವಸ್ತುಗಳ ದರ ಕೂಡ ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ.
2. ರೈತರು ಮತ್ತು ಕೃಷಿ ಮಾರುಕಟ್ಟೆಗೆ ಹೊಡೆತ:
ರೈತರು ಕೃಷಿಗಾಗಿ ಮೆಕಾನಿಕಲ್ ಉಪಕರಣಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅಂದರೆ ಟ್ರ್ಯಾಕ್ಟರ್, ಪಂಪ್‌ಸೆಟ್ ಮುಂತಾದವುಗಳು ಡೀಸೆಲ್ ಬಳಸುವುದರಿಂದ, ಕೃಷಿ ವೆಚ್ಚವೂ ಹೆಚ್ಚಾಗಲಿದೆ. ಇದರಿಂದ ಕೃಷಿ ಉತ್ಪಾದನೆಯ ವೆಚ್ಚ ಹೆಚ್ಚಾಗಿ, ಬೆಳೆ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ.
3. ಉದ್ಯಮ ಮತ್ತು ಲಾಜಿಸ್ಟಿಕ್ಸ್ ಮೇಲಿನ ಪರಿಣಾಮ:
ಲಾಜಿಸ್ಟಿಕ್ ಮೇಲೂ ಡೀಸೆಲ್ ದರ ಪರಿಣಾಮ ಬೀರುತ್ತದೆ. ಹಾಗೆಯೇ ಮಾರುಕಟ್ಟೆ ಸರಪಳಿಯ ವ್ಯವಹಾರದ ಮೇಲೂ ಇದು ಹೆಚ್ಚು ಪರಿಣಾಮ ಬೀರುತ್ತದೆ. ಡೀಸೆಲ್‌ನ ಮೇಲೆ ಅವಲಂಬಿತ ಟ್ರಕ್ ಮತ್ತು ತ್ವರಿತ ಸಾರಿಗೆ ಸೇವೆಗಳ ದರಗಳು ಏರಿದರೆ, ಇದರಿಂದ ವ್ಯಾಪಾರ-ಉದ್ಯಮದ ವೆಚ್ಚವೂ ಹೆಚ್ಚಾಗಲಿದೆ.
4. ಸಾರ್ವಜನಿಕ ಸಾರಿಗೆ ಮತ್ತು ದಿನನಿತ್ಯದ ಜೀವನ:
ಇನ್ನು ಡೀಸೆಲ್ ವಾಹನಗಳು ಏರಿಕೆಯಾದರೆ, ಸಾರ್ವಜನಿಕ ಸಂಚಾರ ಕೂಡ ಜೇಬು ಖಾಲಿ ಮಾಡುತ್ತದೆ. ಹೇಗೆಂದರೆ ಡೀಸೆಲ್ ದರ ಏರಿಕೆಯಾದರೆ ಬಸ್, ಆಟೋ, ಮತ್ತು ಕ್ಯಾಬ್ ಸೇವೆಗಳ ದರ ಹೆಚ್ಚಾಗುವ ಸಂಭವವಿದೆ. ಇದು ದಿನನಿತ್ಯ ಓಡಾಟ ಮಾಡುವವರಿಗೆ ಭಾರೀ ಹೊರೆ ಆಗಲಿದೆ.
5. ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕೆಗಳಿಗೆ ತೊಂದರೆ:
ಕೆಲವು ವಿದ್ಯುತ್ ಉತ್ಪಾದನಾ ಘಟಕಗಳು, ವಿಶೇಷವಾಗಿ ಖಾಸಗಿ ಕಂಪನಿಗಳು, ಡೀಸೆಲ್ ಜನರೇಟರ್‌ಗಳನ್ನು ಬಳಸುತ್ತವೆ. ಡೀಸೆಲ್ ದರ ಏರಿಕೆಯಿಂದ ವಿದ್ಯುತ್ ಉತ್ಪಾದನಾ ವೆಚ್ಚವೂ ಹೆಚ್ಚಾಗಬಹುದು, ಇದರಿಂದ ಕೈಗಾರಿಕೆಗಳಿಗೆ ಆರ್ಥಿಕ ಹೊರೆ ಹೆಚ್ಚಾಗಬಹುದು.
6. ಉದ್ಯೋಗ ಹಾನಿ:
ಉದ್ಯೋಗ ನೀಡುವ ಕಂಪನಿಗಳು, ವಿಶೇಷವಾಗಿ ಲಾಜಿಸ್ಟಿಕ್ ಮತ್ತು ಸರಕು ಸಾಗಣೆ ಸಂಬಂಧಿತ ಉದ್ಯಮಗಳು, ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ. ವಾಹನ ಚಾಲಕರು, ಹೋಟೆಲ್ ಉದ್ಯೋಗಿಗಳು, ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಇತರ ಸಂಪರ್ಕಿತ ವೃತ್ತಿಗಳು ಈ ನಿರ್ಧಾರದ ನೇರ ಪ್ರಭಾವಕ್ಕೆ ಒಳಗಾಗಬಹುದು.
ಅಂದಹಾಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ವಿದ್ಯುತ್ ಬಿಲ್ ದರ, ಹಾಲಿನ ದರ ಹೀಗೆ ನಾನಾ ದರಗಳ ಹೆಚ್ಚಳವಾಗಿದೆ. ಇದರಿಂದ ಸಾಮಾನ್ಯ ಮನೆಮಂದಿಗೆ ಮಾತ್ರವಲ್ಲ, ಮಾರುಕಟ್ಟೆ ಮತ್ತು ಕೈಗಾರಿಕಾ ವಲಯಗಳಿಗೂ ಆರ್ಥಿಕ ಹೊರೆ ಹೆಚ್ಚಾಗಲಿದೆ. ಇಂತಹ ನಿರ್ಧಾರಗಳಿಂದ ಸಾರ್ವಜನಿಕ ಅಸಮಾಧಾನ ಹೆಚ್ಚಾಗುತ್ತಿದೆ. ಸರ್ಕಾರವು ಈ ಕುರಿತು ಸ್ಪಷ್ಟನೆ ನೀಡಬೇಕಾಗಿದ್ದು, ದರ ಏರಿಕೆಯನ್ನು ಹಿಮ್ಮೆಟ್ಟಿಸುವ ಅಥವಾ ಜನರಿಗೆ ಭಾರ ವಿಸೆಯಾಗದಂತೆ ಸಮಾಧಾನಕರ ಪರಿಹಾರಗಳನ್ನು ಒದಗಿಸುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಡೀಸೆಲ್ ದರ ಲೀಟರ್‌ಗೆ ₹2 ಏರಿಕೆಯಾಗಿರುವುದು ಸಾಮಾನ್ಯ ಜನರು, ರೈತರು, ಲಾಜಿಕ್ಸ್ ಮತ್ತು ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಾರಿಗೆ ವೆಚ್ಚ ಹೆಚ್ಚಾದರೆ ದಿನನಿತ್ಯದ ಅವಶ್ಯಕ ವಸ್ತುಗಳ ದರವೂ ಏರಬಹುದು, ಇದರಿಂದ ಗೃಹಬಳಕೆದಾರರು ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುತ್ತಾರೆ. ರೈತರಿಗೆ, ಕೃಷಿ ಯಂತ್ರೋಪಕರಣಗಳ ಕಾರ್ಯಾಚರಣೆ ದುಬಾರಿ ಆಗುತ್ತಿದ್ದು, ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚಿನ ವೆಚ್ಚ ಬೇಕಾಗುತ್ತದೆ. ಲಾರಿ ಮತ್ತು ವಿಮಾನ ಸಾರಿಗೆ ಮೇಲೂ ಪರಿಣಾಮ ಬೀರುತ್ತದೆ, ಇದರಿಂದ ವಾಣಿಜ್ಯ ವಲಯದಲ್ಲಿ ಲಾಭಾಂಶ ಕುಸಿಯುವ ಸಾಧ್ಯತೆ ಇದೆ. ಸರ್ಕಾರಿ ಬಸ್ ಸೇವೆಗಳ ದರವೂ ಏರಬಹುದು, ಇದು ದಿನನಿತ್ಯ ಪ್ರಯಾಣಿಕರ ಖರ್ಚು ಹೆಚ್ಚಿಸುವ ಸಂಭವವಿದೆ.
ಒಟ್ಟಿನಲ್ಲಿ ಕರ್ನಾಟಕ ಸರ್ಕಾರದ ಈ ಡೀಸೆಲ್ ದರ ಏರಿಕೆ ರಾಜ್ಯದ ಸಾಮಾನ್ಯ ಜನಜೀವನ, ಕೃಷಿ, ವ್ಯಾಪಾರ, ಕೈಗಾರಿಕೆ ಮತ್ತು ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಈ ದರ ಏರಿಕೆಯನ್ನು ಹಿಮ್ಮೆಟ್ಟಿಸುವ ವಿಷಯವಾಗಿ ಚಿಂತನೆ ಮಾಡಬಹುದಾ? ಅಥವಾ ಇದನ್ನು ನಿಯಂತ್ರಿಸಲು ಯಾವುದೇ ಪರಿಹಾರ ಕ್ರಮ ಕೈಗೊಳ್ಳಬಹುದಾ? ಈ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಜನಸಾಮಾನ್ಯರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನರ ಆಕ್ರೋಶ ಹೆಚ್ಚಿದರೆ, ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ. ಸರಕಾರವು ಈ ನಿರ್ಧಾರದ ಪರಿಣಾಮಗಳನ್ನು ಮನನ ಮಾಡಿಕೊಳ್ಳಬೇಕಾಗಿದ್ದು, ದರ ಏರಿಕೆ ಹಿಮ್ಮೆಟ್ಟಿಸುವ ಅಥವಾ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಸ್ಪಷ್ಟ ನಿಲುವು ಘೋಷಿಸಬೇಕಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gruha Lakshmi: ಅಯ್ಯಯ್ಯೊ..79 ಕೋಟಿ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮಾ… 2.3 ಲಕ್ಷ ಫಲಾನುಭವಿಗಳ ಖಾತೆ ತಡೆ!

Rain-Summer: ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಶುರು! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್



Click it and Unblock the Notifications