ವಿದ್ಯುತ್ ದರವೂ ಏರಿಕೆ...ಯುನಿಟ್‌ಗೆ 10 ಪೈಸೆ ಇಳಿಸಿ ಮತ್ತೊಂದು ರೀತಿಯಲ್ಲಿ ಜೇಬಿಗೆ ಕತ್ತರಿ..! ಗ್ರಾಹಕರಿಂದ ಎಷ್ಟು ವಸೂಲಿ..?

ಸದಾ ಬಡವರ ಉತ್ತೇಜನಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ, ಮತ ಹಾಕಿದ ಜನರೇ ತಿರುಗಿಬೀಳುವಂತಹ ಕೆಲಸವಾಗುತ್ತಿದೆ. ದಿನಕ್ಕೊಂದು ಅಗತ್ಯತೆಗಳ ದರ ಹೆಚ್ಚಾಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ. ಕೆಲವರು ಇದು ಬಡವರ ಉತ್ತೇಜನಗೊಳಿಸುವ ಸರ್ಕಾರವಲ್ಲ, ಬಡವರ ರಕ್ತ ಹೀರುತ್ತಿರುವ ಸರ್ಕಾರ ಎಂದು ಕಿಡಿ ಕಾರುತ್ತಿದ್ದಾರೆ. ಬಸ್ ಟಿಕೆಟ್ ರೇಟ್, ಮೆಟ್ರೋ ಟಿಕೆಟ್ ರೇಟ್ ಆಯ್ತು. ನಿನ್ನೆ ಹಾಲಿನ ದರವೂ ಹೆಚ್ಚಳವಾಯಿತು. ಇದರ ನೆರಳಲ್ಲೇ ಈಗ ವಿದ್ಯುತ್ ದರ ಹೆಚ್ಚಿಸಿರುವುದು ಕನ್ನಡಿಗರನ್ನು ಕೆಂಡಾಮಂಡಲವಾಗಿಸಿದೆ.

ವಿದ್ಯುತ್ ದರವೂ ಏರಿಕೆ..ಗ್ರಾಹಕರಿಂದ ಎಷ್ಟು ವಸೂಲಿ..?

ಇತ್ತೀಚೆಗೆ ಕರ್ನಾಟಕದ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರಗಳ ಕುರಿತು ಮಹತ್ವದ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದ ರಾಜ್ಯದಲ್ಲಿರುವ ಎಲ್ಲಾ ಗ್ರಾಹಕರ ಮೇಲೆ ಅತಿಹೆಚ್ಚು ಪ್ರಭಾವ ಬೀರುವಂತದ್ದಾಗಿದೆ. ದರ ಪರಿಷ್ಕರಣೆಯ ನಂತರದ ಹೊಸ ದರಗಳು ಏಪ್ರಿಲ್ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಹೊಸ ದರದ ಪ್ರಕಾರ ನಿಗದಿತ ಶುಲ್ಕವನ್ನು ಪ್ರತಿ ಕಿಲೋವಾಟ್‌ಗೆ 25 ರೂಪಾಯಿಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಮನೆ ಬಳಕೆದಾರರು, ಉದ್ಯಮಗಳು, ಹಾಗೂ ಇತರ ವಾಣಿಜ್ಯ ಕೇಂದ್ರಗಳಿಗೆ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವ ಅನಿವಾರ್ಯತೆ ಎದುರಾಗಲಿದೆ.

ಇನ್ನು ಪ್ರತಿಯೂನಿಟ್ ವಿದ್ಯುತ್ ದರವನ್ನು 10 ಪೈಸೆ ಕಡಿತಗೊಳಿಸಲಾಗಿದೆ. ಆದರೆ ಇನ್ನೊಂದು ರೀತಿಯಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿರುವುದಂತೂ ಸುಳ್ಳಲ್ಲ. ಗ್ರಾಹಕರಿಗೆ ಯಾವುದೇ ರೀತಿಯ ಲಾಭ ತರದ ಮಟ್ಟಿಗೆ ನಿಗದಿತ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಉದಾಹರಣೆಗೆ, ಈ ಹಿಂದಿನ ದರ ಪ್ರಕಾರ ಗೃಹಬಳಕೆದಾರರು 3 ಕಿಲೋವಾಟ್ 360 ರೂ. ನಿಗದಿತ ಶುಲ್ಕ ಪಾವತಿಸುತ್ತಿದ್ದರು. ಈ ಹೊಸ ನಿಯಮದಂತೆ ಈ ನಿಗದಿತ ಶುಲ್ಕ 435 ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ಪ್ರತಿ ತಿಂಗಳು 75 ರೂ. ಹೆಚ್ಚುವರಿಯಾಗಿ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.

ಇದಿಷ್ಟೇ ಅಲ್ಲ, ಇದರಂತೆಯೇ ವಾಣಿಜ್ಯ ಹಾಗೂ ಕೈಗಾರಿಕಾ ವಿದ್ಯುತ್ ಬಳಕೆದಾರರಿಗೂ ನಿಗದಿತ ಶುಲ್ಕ ಹೆಚ್ಚಳ ಆಗಿದೆ. ಅವರಿಗೂ ಯೂನಿಟ್ ದರದಲ್ಲಿ ಕೇವಲ 10 ಪೈಸೆ ಇಳಿಕೆ ಮಾಡಿದ್ದಾರೆ. ಈ ಬದಲಾವಣೆಯಿಂದ ಉದ್ದಿಮೆದಾರರು ಮತ್ತು ಉದ್ಯಮ ಸಂಸ್ಥೆಗಳ ವಿದ್ಯುತ್ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದೆ.

ಗ್ರಾಹಕರ ಮೇಲೆ ಆರ್ಥಿಕ ಹೊರೆ:

ಈ ಬೆಲೆ ಏರಿಕೆಗಳ ನಡುವೆ ಕಂಗಾಲಾಒಗಿರುವ ಜನರಿಗೆ ಹೊರೆ ಹೆಚ್ಚಾಗುತ್ತಿದೆಯೇ ಹೊರತು, ಕಡಿಮೆಯಂತೂ ಆಗುತ್ತಿಲ್ಲ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಆದರೂ ಇದು ಒತ್ತಡ ಹೆಚ್ಚಿಸಲಿದೆ. ಅಂದರೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 30 ರೂಪಾಯಿಯಿಂದ, 50 ರೂಪಾಯಿವರೆಗೂ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಉಚಿತ ವಿದ್ಯುತ್ ಸೇವೆಯ ಉದ್ದೇಶಕ್ಕೂ ಕೂಡ ಅಡ್ಡಿ ಉಂಟಾಗಬಹುದು. ಹೀಗೆ, ಸರ್ಕಾರ ನೇರವಾಗಿ ವಿದ್ಯುತ್ ದರವನ್ನು ಹೆಚ್ಚಿಸದೆ, ನಿಗದಿತ ಶುಲ್ಕವನ್ನು ಏರಿಸುವ ಮೂಲಕ ಪರೋಕ್ಷವಾಗಿ ಹೆಚ್ಚುವರಿ ವೆಚ್ಚವನ್ನು ಜನಸಾಮಾನ್ಯರ ಮೇಲಾಗಿಸಿದೆ.

ಮುಂದಿನ ಮೂರು ವರ್ಷಗಳ ದರ ನಿರ್ಧಾರ ಹೀಗಿದೆ:

2025-2028ರ ಅವಧಿಯವರೆಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರಗಳಲ್ಲಿ ಮಹತ್ವದ ಪರಿಷ್ಕರಣೆಗಳನ್ನು ಮಾಡಿದೆ. ಇದರ ಅನುಸಾರವಾಗಿ 2025-26 ಮತ್ತು 2026-27ನೇ ಆರ್ಥಿಕ ವರ್ಷಗಳಲ್ಲಿ ಪ್ರತಿ ಯೂನಿಟ್‌ಗೆ ವಿದ್ಯುತ್ ದರ ₹5.80 ಆಗಿರಲಿದೆ. ಹಾಗೆಯೇ 2027-28ನೇ ವರ್ಷದಲ್ಲಿ ಈ ದರವನ್ನು 5 ಪೈಸೆ ಕಡಿಮೆ ಮಾಡಿ ₹5.75ಗೆ ನಿಗದಿಪಡಿಸಲಾಗಿದೆ.

ಇನ್ನು ಅದೇ ರೀತಿ ನಿಗದಿತ ಶುಲ್ಕದಲ್ಲೂ ಮೂರು ವರ್ಷಗಳ ಅವಧಿಗೆ ದರ ನಿಗದಿ ಮಾಡಲಾಗಿದೆ. ನಿಗದಿತ ಶುಲ್ಕದಲ್ಲೂ ಹಂತ ಹಂತವಾಗಿ ಹೆಚ್ಚಳ ಮಾಡಲಾಗಿದೆ. ಅಂದರೆ 2025-26ರಲ್ಲಿ ನಿಗದಿತ ಶುಲ್ಕ ₹145 ಆಗಿದ್ದು, 2026-27ರಲ್ಲಿ ಅದನ್ನು ₹150ಕ್ಕೆ ಮತ್ತು 2027-28ರಲ್ಲಿ ₹160ಕ್ಕೆ ಏರಿಸಲಾಗುತ್ತದೆ. ಈ ದರ ಪರಿಷ್ಕರಣೆಗಳಿಂದಾಗಿ ಸಾಮಾನ್ಯ ಗ್ರಾಹಕರು, ವಾಣಿಜ್ಯ ವಲಯ ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಹೆಚ್ಚುವರಿ ವೆಚ್ಚವನ್ನು ನಿಭಾಯಿಸಲು ಸಾರ್ವಜನಿಕರು ಮತ್ತು ವ್ಯವಹಾರ ವಲಯಗಳು ಹೊಸ ತಂತ್ರಗಳನ್ನು ಆವರಿಸಿಕೊಳ್ಳಬೇಕಾಗಬಹುದು.

ವಿದ್ಯುತ್ ದರ ಏರಿಕೆಯ ಪರಿಣಾಮ:

ಇನ್ನು ವಿದ್ಯುತ್ ನಿಗದಿತ ದರದಲ್ಲಿ ಏರಿಕೆಯಾಗಿರುವ ಪರಿಣಾಮದಿಂದ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೂ ಹೆಚ್ಚಿನ ಮಟ್ಟದ ಹೊರೆಯಾಗಲಿದೆ. ಅತಿಹೆಚ್ಚು ವಿದ್ಯುತ್ ಬಳಸುವುದೇ ಹೋಟೆಲ್‌ಗಳು, ಅಂಗಡಿಗಳು, ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು. ಈ ವಿದ್ಯುತ್ ದರ ಏರಿಕೆಯಾಗಿರುವುದರಿಂದ, ಅವರ ಮಾಸಿಕ ವಿದ್ಯುತ್ ಬಿಲ್ ಲಕ್ಷಾಂತರ ರೂ. ಹೆಚ್ಚಾಗುವ ಸಾಧ್ಯತೆ ಇದೆ. ಈ ಹೊರೆಯನ್ನು ಅವರು ಗ್ರಾಹಕರ ಮೇಲೆ ಎತ್ತಿಹಾಕಬಹುದು.

ಇನ್ನು ಕೆಇಆರ್‍‌ಸಿಯ ಈ ನಿರ್ಧಾರದ ಹಿಂದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಇತರ ವಿದ್ಯುತ್ ವಿತರಣಾ ಕಂಪನಿಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಪಾವತಿಗಾಗಿ ಹಣ ಸಂಗ್ರಹಿಸುವ ಉದ್ದೇಶವಿದೆ ಎಂಬುದಾಗಿದೆ. ಫೆಬ್ರವರಿ 18, 2024 ರಂದು ಕೆಇಆರ್‍‌ಸಿ ನಡೆಸಿದ ಪರಿಷ್ಕರಣೆ ಪ್ರಕಾರ, ಪ್ರತಿಯೂನಿಟ್ 36 ಪೈಸೆ ಹೆಚ್ಚಳ ಮಾಡಲಾಗಿತ್ತು. ಮತ್ತು ಈ ಬಾರಿಯ ಪರಿಷ್ಕರಣೆ ಕೂಡ ಅದೇ ದಾರಿಗೆ ಹೋಗಿದೆ. ಗ್ರಾಹಕರ ಮೇಲೆ ಬಿದ್ದ ಈ ಆರ್ಥಿಕ ಹೊರೆ ಬಗ್ಗೆ ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಾಲಿನ ಬೆಲೆಯೂ ₹4-₹5 ಏರಿಕೆಯಾದ ಹಿನ್ನೆಲೆ, ವಿದ್ಯುತ್ ದರ ಹೆಚ್ಚಳವು ಜನ ಸಾಮಾನ್ಯರ ಜೀವನದ ಖರ್ಚನ್ನು ಮತ್ತಷ್ಟು ಹೆಚ್ಚಿಸಲಿದೆ.

ಈ ಪರಿಷ್ಕರಣೆ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗುವುದಿಲ್ಲ ಎಂಬ ಅಭಿಪ್ರಾಯ ಬಹುತೇಕ ಗ್ರಾಹಕರಲ್ಲಿದೆ. ಸರಕಾರ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಂಡು ಜನಸಾಮಾನ್ಯರ ಮೇಲೆ ಬೀರುವ ಆರ್ಥಿಕ ಹೊರೆ ಕಡಿಮೆ ಮಾಡುವ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ದರ ಪರಿಷ್ಕರಣೆ ಪ್ರತಿ ಗ್ರಾಹಕನ ಮೇಲೂ ಆರ್ಥಿಕ ಪರಿಣಾಮ ಬೀರುತ್ತದೆ. ಬೆಳವಣಿಗೆಯಿಂದ ವಿದ್ಯುತ್ ಬಳಕೆದಾರರು ಹೆಚ್ಚಿನ ಖರ್ಚನ್ನು ಭರಿಸುವ ಅನಿವಾರ್ಯತೆ ಎದುರಿಸಬೇಕಾಗಬಹುದು. ಈ ಹೆಚ್ಚಳದ ನಿಜವಾದ ಪರಿಣಾಮವನ್ನು ಮುಂದಿನ ವರ್ಷಗಳಲ್ಲಿ ಅರಿಯಲು ಸಾಧ್ಯವಾಗುತ್ತದೆ. ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಆರ್ಥಿಕ ನಿಗಾ ವಹಿಸಿಕೊಳ್ಳುವ ಅಗತ್ಯವಿದೆ, ಮತ್ತು ಸರ್ಕಾರವು ಈ ನಿರ್ಧಾರಕ್ಕೆ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.

ಒಟ್ಟಿನಲ್ಲಿ ಈ ಹೊಸ ವಿದ್ಯುತ್ ದರ ಪರಿಷ್ಕರಣೆ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಈ ಪರಿಷ್ಕರಣೆಗಳು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಉದ್ಯಮಗಳು, ಕಾರ್ಖಾನೆಗಳು, ಶಾಪಿಂಗ್ ಮಾಲ್‌ಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ವಿದ್ಯುತ್ ಬಳಕೆಯ ಕಾರಣದಿಂದ ಅವರ ಮಾಸಿಕ ವಿದ್ಯುತ್ ವೆಚ್ಚವು ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ. ಇದರಿಂದಾಗಿ ಉತ್ಪಾದನಾ ವೆಚ್ಚ ಏರಿಕೆಯಾಗಬಹುದು ಮತ್ತು ಕೊನೆಗೆ ಗ್ರಾಹಕರ ಮೇಲೆಯೇ ಈ ಹೊರೆಯನ್ನು ಬದಲಾಯಿಸುವ ಸಾಧ್ಯತೆ ಹೆಚ್ಚು. ಹಾಗೆಯೇ 2025 ರಿಂದ 2028ರವರೆಗೆ ಕರ್ನಾಟಕದಲ್ಲಿ ವಿದ್ಯುತ್ ದರಗಳ ಪರಿಷ್ಕರಣೆ ಹಂತಹಂತವಾಗಿ ಜಾರಿಗೆ ಬರಲಿದೆ. ಇದರಿಂದ ಪ್ರತಿ ಯೂನಿಟ್ ದರವು 2025-26 ಮತ್ತು 2026-27ರಲ್ಲಿ ₹5.80 ಆಗಿದ್ದು, 2027-28ರಲ್ಲಿ ₹5.75 ಗೆ ಇಳಿಯಲಿದೆ. ಆದರೆ ನಿಗದಿತ ಶುಲ್ಕವನ್ನು ಪ್ರತಿ ವರ್ಷ ಹಂತ ಹಂತವಾಗಿ ಹೆಚ್ಚಿಸಲಾಗಿದ್ದು, 2027-28ರ ಹೊತ್ತಿಗೆ ₹160 ಗೆ ಏರಲಿದೆ ಎಂಬುದರ ಬಗ್ಗೆ ಗಮನಹರಿಸಬೇಕಾಗಿದೆ.

FAQs
ಶಾಸಕರು ದರ ಏರಿಕೆಗೆ ಸಂಬಂಧಿಸಿದಂತೆ ಏನು ಕ್ರಮ ತೆಗೆದುಕೊಳ್ಳಬೇಕಾಗಿದೆ?

ಸರಕಾರವು ಜನಸಾಮಾನ್ಯರ ಮೇಲೆ ಬೀರುವ ಆರ್ಥಿಕ ಹೊರೆ ಕಡಿಮೆ ಮಾಡುವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ನಿರೀಕ್ಷಿಸುತ್ತಿದ್ದಾರೆ.

ಈ ದರ ಪರಿಷ್ಕರಣೆಗಳಿಂದ ಗ್ರಾಹಕರು ಏನನ್ನು ನಿರೀಕ್ಷಿಸಬೇಕು?

ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಏರಿಕೆಗಳನ್ನು ನಿರೀಕ್ಷಿಸಬೇಕು, ಏಕೆಂದರೆ ನಿಗದಿತ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ನೂತನ ವಿದ್ಯುತ್ ದರಗಳು ಎಲ್ಲಿ ಜಾರಿಗೆ ಬರಲಿವೆ?

ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ, ಮತ್ತು ನಿಗದಿತ ಶುಲ್ಕವನ್ನು ಪ್ರತಿ ಕಿಲೋವಾಟ್‌ಗೆ 25 ರೂಪಾಯಿಯನ್ನು ಹೆಚ್ಚಿಸಲಾಗಿದೆ.

GoodReturns Finance

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+