ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಇದೀಗ ಸಾರ್ವಜನಿಕರ ಅನುಕೂಲಕ್ಕಾಗಿ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ. ಆರೋಗ್ಯದಲ್ಲಿ ಏನೇ ತೊಂದರೆಯಾದ್ರೂ, ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯದಲ್ಲಿ (Health Problem) ಸಮಸ್ಯೆಯಾದಾಗ ಆಸ್ಪತ್ರೆ, ಮೆಡಿಕಲ್ ಹೋಗೋದು ಸಾಮಾನ್ಯ. ಆಸ್ಪತ್ರೆಗೆ ಹೋದಾಗ ವೈದ್ಯರು ಒಂದಿಷ್ಟು ಔಷಧಿಗಳನ್ನು ಬರೆದುಕೊಡುತ್ತಾರೆ. ಆದರೆ ಇದೀಗ ಕರ್ನಾಟಕ ಆರೋಗ್ಯ ಇಲಾಖೆಯು ಔಷಧಿ ಸ್ಟ್ರಿಪ್‌ಗಳು ಅಥವಾ ಔಷಧ ಬಾಕ್ಸ್‌ಗಳ ಹಿಂಭಾಗದಲ್ಲಿ ಇಂಡೆಂಟೆಡ್ ಕ್ಯೂ ಆರ್ ಕೋಡ್ (Indented QR Code) ಅಳವಡಿಸಲು ಪ್ಲಾನ್ ಮಾಡಿದೆ. ಈ ಕ್ರಮದ ಮೂಲಕ ದೃಷ್ಟಿಹೀನರಿಗೆ ಔಷಧಿಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವಂತೆ ಮಾಡುವುದೇ ಇಲಾಖೆಯ ಮುಖ್ಯ ಗುರಿ.

ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಮೈಸೂರಿನಲ್ಲಿ ನಡೆದ "Investigation of Medication Practices and Care Technology For Visually Impaired Persons (IMPACT-VIP)" ಎಂಬ ಕಾರ್ಯಕ್ರಮದ ವೇಳೆ ಈ ಕುರಿತು ಮಾಹಿತಿ ನೀಡಿದರು.
ಸಚಿವರು ಹೇಳಿದ್ದೇನು
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, "ನಮ್ಮ ಸರ್ಕಾರ ರಾಜ್ಯದಲ್ಲಿ ಸಮಾನ ಆರೋಗ್ಯ ಸೇವೆ ನೀಡಲು ಮುಂದಾಗಿದೆ. ಆದ್ದರಿಂದ ಹೊಸ ಪರಿಹಾರಗಳೊಂದಿಗೆ ದೃಷ್ಟಿಹೀನರ ಸ್ವಾವಲಂಬನೆಗೆ ಸಹಾಯ ಮಾಡುತ್ತಿದೆ. ಅದೇ ಕಾರಣದಿಂದ ಔಷಧಿ ಸ್ಟ್ರಿಪ್‌ಗಳ ಮೇಲೆ QR ಕೋಡ್ ಅಳವಡಿಸುವ ಮೂಲಕ ಸ್ಮಾರ್ಟ್‌ಫೋನ್ ಮೂಲಕ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಾಯ್ಸ್ ರೂಪದಲ್ಲಿ ಪಡೆಯಲು ಇದು ಸಹಾಯವಾಗಲಿದೆ" ಎಂದು ಹೇಳಿದರು.
ಕ್ಯೂಆರ್ ಕೋಡ್‌ನಿಂದ ತಿಳಿಯಬಹುದಾದ ಮಾಹಿತಿಗಳೇನು?
- ಔಷಧಿಯ ಹೆಸರು
- ತಯಾರಕ ಕಂಪನಿ
- ಬ್ಯಾಚ್ ನಂಬರ್
- ಬಳಕೆಯ ಬಗ್ಗೆ ಮಾಹಿತಿ
- ಎಕ್ಸ್ಪೈರಿ ಡೇಟ್
ಈ ಮಾಹಿತಿಗಳನ್ನು, ಔಷಧಿ ಬಾಕ್ಸ್‌ಗಳಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿದ ತಕ್ಷಣ ವಾಯ್ಸ್ ಮಾದರಿಯಲ್ಲಿ ಕೇಳಬಹುದು. ಇದರಿಂದ ದೃಷ್ಟಿಹೀನರು ಔಷಧಿ ಬಗ್ಗೆ ತಕ್ಷಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಜಪಾನ್ ಸಂಸ್ಥೆಯೊಂದಿಗೆ ಯೋಜನೆ ಆರಂಭ!
ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ಮತ್ತು ಜಪಾನ್ ಆಧಾರಿತ Export Japan Inc ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಈ ರೀತಿಯ ಕ್ಯೂಆರ್ ಕೋಡ್‌ಗಳು ಲಭ್ಯವಿರುವುದರಿಂದ ಔಷಧಿ ಕ್ಷೇತ್ರದಲ್ಲೂ ಇದೀಗ ಈ ಟೆಕ್ನಾಲಜಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಕೇಂದ್ರ ಸರ್ಕಾರದ ಅನುಮೋದನೆ ಬೇಕಿರುವುದರಿಂದ, ಕರ್ನಾಟಕ ಸರ್ಕಾರದಿಂದ ಶೀಘ್ರದಲ್ಲೇ ಕೇಂದ್ರದ ಅಂಗಳಕ್ಕೆ ಈ ಬಗ್ಗೆ ಪ್ರಸ್ತಾಪ ಕಳುಹಿಸಲಾಗುತ್ತದೆ. ಆ ನಂತರ ರಾಜ್ಯದಲ್ಲಿ ಅಧಿಕೃತವಾಗಿ ಈ ಕ್ಯೂಆರ್ ಕೋಡ್ ಪದ್ಧತಿ ಜಾರಿಗೆ ಬರಲಿದೆ.
ಸರ್ಕಾರದ ಈ ಕ್ರಮದಿಂದ ದೃಷ್ಟಿ ಸಮಸ್ಯೆ ಇದ್ದವರಿಗೆ ಬಹಳಷ್ಟು ಅನುಕೂಲವಾಗಲಿದೆ. ಔಷಧಿ ಬೆಲೆಯಿಂದ ಹಿಡಿದು, ಬಳಕೆಯ ವಿಧಾನದವರೆಗೆ ಹಲವು ಮಾಹಿತಿಗಳನ್ನು ಇದು ನೀಡುತ್ತದೆ. ಕೇವಲ ವಾಯ್ಸ್ ಮೂಲಕ ಕ್ಷಣಮಾತ್ರದಲ್ಲಿ ಮಾಹಿತಿ ನೀಡುವ ಈ ಸೇವೆ, ಕರ್ನಾಟಕದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಚಿವರು ಈಗಾಗಲೇ ಭರವಸೆ ನೀಡಿದ್ದಾರೆ.


Click it and Unblock the Notifications