ಕರ್ನಾಟಕದ ರೈಲ್ವೆ ಸಂಪರ್ಕ ಮತ್ತಷ್ಟು ಬಲಗೊಳ್ಳುತ್ತಿದೆ. ರೈಲ್ವೆ ಸಚಿವ ವಿ.ಸೋಮಣ್ಣ ಅವರು ಮಹತ್ವದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಒತ್ತುವರಿಯಿಂದ ರಾಜ್ಯದ ಜನತೆಗೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ, ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸಿದ್ದಾರೆ. ಅದೇನೆಂದರೆ ರಾಜ್ಯದ ಆರು ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗುವ ಎರಡು ಹೊಸ ರೈಲು ಮಾರ್ಗಗಳ ಅಂತಿಮ ಸಮೀಕ್ಷೆಗೆ ಅನುಮೋದನೆ ದೊರೆತಿದೆ ಎಂಬ ಸುದ್ದಿಯನ್ನು, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹಂಚಿಕೊಂಡಿದ್ದಾರೆ.

ಯಾವೆಲ್ಲಾ ಮಾರ್ಗಗಳಿಗೆ ಅನುಮೋದನೆ? ಯಾವ ಜಿಲ್ಲೆಗಳಿಗೆ ಲಾಭ?
ಆಲಮಟ್ಟಿ - ಯಾದಗಿರಿ ರೈಲು ಮಾರ್ಗ (162 ಕಿ.ಮೀ)
ಭದ್ರಾವತಿ - ಚಿಕ್ಕಜಾಜೂರು ರೈಲು ಮಾರ್ಗ (73 ಕಿ.ಮೀ)
ಸದ್ಯ ಆಲಮಟ್ಟಿ ಇಂದ ಯಾದಗಿರಿಗೆ 162 ಕಿ.ಮೀವರೆಗೂ ರೈಲು ಮಾರ್ಗ ಇರಲಿದೆ. ಭದ್ರಾವತಿ ಇಂದ ಚಿಕ್ಕಜಾಜೂರು 73 ಕಿ.ಮೀವರೆಗೂ ರೈಲು ಮಾರ್ಗ ಇರಲಿದೆ. ಈ ಯೋಜನೆಗಳಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜನರಿಗೆ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಿಗೆ ನೇರ ಲಾಭವಾಗಲಿದೆ. ಈ ಜಿಲ್ಲೆಗಳ ಕೆಲವೊಂದು ಕಡೆಗಳು ಈಗಾಗಲೇ ರೈಲು ಸಂಪರ್ಕದಿಂದ ದೂರವಾಗಿದ್ದು, ಈ ಹೊಸ ಮಾರ್ಗಗಳು ಆ ಶೂನ್ಯತೆಯನ್ನು ತುಂಬಲಿವೆ.
ಸಮೀಕ್ಷೆಗೆ ಅನುದಾನ ನೀಡಿದ ಮಾಹಿತಿ:
ಈಗಾಗಲೇ ಸರ್ಕಾರವು ಈ ರೈಲು ಮಾರ್ಗಗಳಿಗಾಗಿ ಸಮೀಕ್ಷೆಗಾಗಿ ಹಣವನ್ನು ಕೂಡ ಬಿಡುಗಡೆ ಮಾಡಿದೆ. ಈ ಎರಡೂ ಮಾರ್ಗಗಳಿಗೆ ಸೇರಿ ಈಗ ಒಟ್ಟು, ₹5.87 ಕೋಟಿ ರೂ ಅನುದಾನ ಬಿಡುಗಡೆ ಆಗಿದೆ. ಅಂದರೆ ಆಲಮಟ್ಟಿ - ಯಾದಗಿರಿ ಮಾರ್ಗಕ್ಕೆ ₹4.05 ಕೋಟಿ ಹಾಗೂ ಭದ್ರಾವತಿ - ಚಿಕ್ಕಜಾಜೂರು ಮಾರ್ಗಕ್ಕೆ ₹1.82 ಕೋಟಿ ಬಿಡುಗಡೆಯಾಗಿದೆ. ಈ ಅನುದಾನವನ್ನು ಭೂಮಾಪನ, ತಾಂತ್ರಿಕ ಸಮೀಕ್ಷೆ, ಪರಿಸರದ ಪ್ರಭಾವ ಅಧ್ಯಯನ ಇತ್ಯಾದಿಗಳಿಗೆ ಉಪಯೋಗಿಸಲಾಗುವುದು. ಸರ್ಕಾರದ ಪ್ರಕಾರ, ಸಮೀಕ್ಷೆ ಪೂರ್ಣಗೊಂಡ ನಂತರ ಯೋಜನೆಯ ಅನುಷ್ಠಾನ ಶೀಘ್ರವಾಗಲಿದೆ.
ಭದ್ರಾವತಿ - ಚಿಕ್ಕಜಾಜೂರು ಮಾರ್ಗದ ವಿಶೇಷತೆಗಳು:
ಭದ್ರಾವತಿ ಹಾಗೂ ಚಿಕ್ಕಜಾಜೂರು ಮಾರ್ಗದ ರೈಲುಗಳ ಮಾರ್ಗದ ಮೂಲಕ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣಕ್ಕೆ ನೇರ ಸಂಪರ್ಕ ಸಿಗಲಿದೆ. ಈ ಮಾರ್ಗದಲ್ಲಿ ಬರುವ ಸ್ಥಳಗಳು ಅಡಿಕೆ ಕೃಷಿಗೆ ಪ್ರಸಿದ್ಧ ಸ್ಥಳವಾಗಿದೆ. ಅಲ್ಲದೇ ಇದು ತುಮಕೂರು ಜಿಲ್ಲೆಯಲ್ಲಿ ಇರುವ, ಅಡಿಕೆ ಮಾರುಕಟ್ಟೆಗೆ ಸಾಗಣೆ ಸುಲಭವಾಗಲಿದೆ. ಇದರ ಜೊತೆಗೆ ಪ್ರವಾಸೋದ್ಯಮಕ್ಕೂ ಈ ಮಾರ್ಗ ಹೊಸ ಹಾದಿ ತೆಗೆಯಲಿದೆ. ಹೋದಿಗೆರೆಯಲ್ಲಿ ಇರುವ ಶಹಾಜಿ ರಾಜೆ ಬೋಸ್ಲೆ ಸಮಾಧಿ, ಹಾಗು ಏಷ್ಯಾದ ಎರಡನೇ ದೊಡ್ಡ ಕೆರೆ , ಸೂಳೆಕೆರೆ ಇವುಗಳಿಗೆ ಪ್ರವಾಸಿಗರು ಸುಲಭವಾಗಿ ಹೋಗಬಹುದಾದ ಮಾರ್ಗವಾಗಿ ಈ ರೈಲು ಮಾರ್ಗ ರೂಪುಗೊಳ್ಳಲಿದೆ.
ಆಲಮಟ್ಟಿ - ಯಾದಗಿರಿ ಮಾರ್ಗದ ಲಾಭಗಳು:
ಆಲಮಟ್ಟಿ - ಯಾದಗಿರಿ ಮಾರ್ಗವು ಮುದ್ದೇಬಿಹಾಳ, ತಾಳಿಕೋಟೆ, ಸುರಪುರ ಮುಂತಾದ ಪ್ರಮುಖ ಪಟ್ಟಣಗಳ ಮೂಲಕ ಯೋಜಿಸಲಾಗಿದೆ. ಇದರಿಂದ ವಿಜಯಪುರ ಜಿಲ್ಲೆಯ ಪ್ರಮುಖ ತಾಲೂಕು ಮುದ್ದೇಬಿಹಾಳ ಪ್ರದೇಶಕ್ಕೆ ನೇರ ರೈಲು ಸಂಪರ್ಕ ಸಿಗಲಿದೆ. ಈಗಿನ ಸ್ಥಿತಿಯಲ್ಲಿ ಈ ಪ್ರದೇಶದ ಜನರು ಆಲಮಟ್ಟಿ ನಿಲ್ದಾಣಕ್ಕೆ ಹೋಗಿ ರೈಲು ಹಿಡಿಯಬೇಕಾದ ಅನಿವಾರ್ಯತೆ ಇದೆ. ಹೊಸ ಮಾರ್ಗದೊಂದಿಗೆ, ಸ್ಥಳೀಯರಿಗೆ ಕಿಸೆಗೆ ತಕ್ಕ ಅನುಕೂಲ ಹಾಗೂ ಸಮಯದ ಲಾಭ ದೊರೆಯಲಿದೆ.
ಚಿತ್ರದುರ್ಗಕ್ಕೆ ಇನ್ನೊಂದು ರೈಲು ಮಾರ್ಗ:
ಇತ್ತೀಚೆಗೆ ವಿ ಸೋಮಣ್ಣ ಅವರು ಚಿತ್ರದುರ್ಗ - ಉಜ್ಜಿನಿ ನಡುವೆಯೂ ಹೊಸ ರೈಲು ಮಾರ್ಗವನ್ನು ಘೋಷಿಸಿದ್ದರು. ಈ ಮೂಲಕ ಚಿತ್ರದುರ್ಗ ಜಿಲ್ಲೆಯಾದ್ಯಂತ ವ್ಯಾಪಕ ರೈಲು ಸಂಪರ್ಕ ಸಾಧ್ಯವಾಗಲಿದೆ. ಈಗ ಭದ್ರಾವತಿ ಮಾರ್ಗವೂ ಸೇರಿಕೊಂಡಂತೆ ಈ ಜಿಲ್ಲೆಗೆ ಉತ್ತಮ ಮೂಲಸೌಕರ್ಯ ದೊರೆಯುತ್ತಿದೆ.
ಪ್ರಾದೇಶಿಕ ಅಭಿವೃದ್ಧಿಗೆ ಪೂರಕ:
ಈ ಹೊಸ ರೈಲು ಮಾರ್ಗಗಳು ಕೇವಲ ಪ್ರಯಾಣಿಕರ ಅನುಕೂಲಕ್ಕಾಗಿ ಮಾತ್ರವಲ್ಲದೆ, ಕೃಷಿ ಉತ್ಪನ್ನಗಳ ಸಾಗಣೆ, ಮಾರುಕಟ್ಟೆ ಸಂಪರ್ಕ, ಉದ್ಯೋಗ ಸೃಷ್ಟಿ, ಮತ್ತು ಪ್ರವಾಸೋದ್ಯಮ ವೃದ್ಧಿಗೆ ಸಹ ಬಲವಾಗಿ ಕೆಲಸ ಮಾಡಲಿವೆ. ನಗರೀಕರಣಕ್ಕೆ ಮಿಕ್ಕಿರುವ ಹಿನ್ನಾಲೆಯ ಜಿಲ್ಲೆಗಳಿಗೆ ಈ ಮೂಲಕ ಸಮಾನ ಅಭಿವೃದ್ಧಿಯ ದಿಕ್ಕಿನಲ್ಲಿ ಅವಕಾಶ ಸಿಗಲಿದೆ.
ಈ ಯೋಜನೆಗಳು ಪೂರ್ಣಗೊಳ್ಳುವುದರಲ್ಲಿ ಕೆಲ ವರ್ಷಗಳು ಹಿಡಿದರೂ, ಈಗಾಗಲೇ ಸಮೀಕ್ಷೆಗೆ ಅನುಮೋದನೆ ಸಿಕ್ಕಿರುವುದು ರಾಜ್ಯದ ರೈಲ್ವೆ ಚರಿತ್ರೆಯ ಪ್ರಮುಖ ಹಂತವಾಗಿದೆ. ಜನರು ವರ್ಷಗಳಿಂದ ಬೇಡಿಕೆ ಇಟ್ಟುಕೊಂಡಿದ್ದ ಸಂಪರ್ಕ ಸಮಸ್ಯೆಗೆ ಇದು ಪರಿಹಾರವಲ್ಲದೆ, ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜೀವನದ ಗುಣಮಟ್ಟವನ್ನೂ ಎತ್ತಿಕೊಳ್ಳಲಿದೆ. ರೈಲ್ವೆ ಸಂಪರ್ಕ ಎಂದರೆ ಕೇವಲ ಪ್ರಯಾಣವಲ್ಲ. ಅದು ಜೀವನದ ಒಟ್ಟಾರೆ ಗುಣಮಟ್ಟವನ್ನೇ ಎತ್ತಿ ಹಿಡಿಯುವ ಒಂದು ಪೂರಕ ಬಲ. ಕರ್ನಾಟಕದ ಹಿನ್ನಾಲೆಯ ಜಿಲ್ಲೆಗಳಿಗೆ ಈ ಮಾರ್ಗಗಳು ಬೆಳಕಿನ ನಂಟಾಗಿ ಪರಿಣಮಿಸುವ ಸಾಧ್ಯತೆ ಬಹಳ ಹೆಚ್ಚು.


Click it and Unblock the Notifications