Gig economy: ನಗರದಿಂದ ಹಳ್ಳಿವರೆಗೂ ಬೆಳೆದ ಗಿಗ್‌ ವಲಯ...ನಗರ ಪ್ರದೇಶಗಳ ಆರ್ಥಿಕತೆ, ಉದ್ಯೋಗಕ್ಕೆ ಪುಷ್ಠಿ!

ಕರ್ನಾಟಕದಲ್ಲಿ ಡಿಜಿಟಲ್ ಕೆಲಸದ ವಲಯ ನಗರಗಳ ಸೀಮೆಯನ್ನು ದಾಟಿ ಹಳ್ಳಿಗಳತ್ತ ತನ್ನ ಹೆಜ್ಜೆ ಹಾಕಿದ ದಿನದಿಂದಲೇ ಗ್ರಾಮೀಣ ಉದ್ಯೋಗದ ಚಿತ್ರಣವೇ ಬದಲಾಗುತ್ತಿದೆ. ತುಮಕೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ ಈಗ ಬೆಳಿಗ್ಗೆ ಮನೆಯ ಬಾಗಿಲಿಗೇ ಆನ್‌ಲೈನ್ ಆರ್ಡರ್ ತಲುಪಿಸುವ ಜನರನ್ನು ನೋಡುವುದು ಸಾಮಾನ್ಯವಾಗಿದೆ. ಹಿಂದೆ ನಗರಗಳಲ್ಲಿ ಮಾತ್ರ ಕಾಣುತ್ತಿದ್ದ ಇ-ಕಾಮರ್ಸ್ ಪರಿಣಾಮ ಇದೀಗ ಗ್ರಾಮೀಣ ಬದುಕಿನ ಭಾಗವಾಯಿತು.

ದಿಲ್ಲಿಯಿಂದ ಹಳ್ಳಿವರೆಗೂ ಬೆಳೆದ ಗಿಗ್‌ ವಲಯ!

ಇಂಟರ್ನೆಟ್ ಪ್ರವೇಶ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ, ಆನ್‌ಲೈನ್ ಮೂಲಕ ಸೇವೆ ನೀಡುವ ಕೆಲಸಗಳಿಗೂ ಹೊಸ ಮಾರುಕಟ್ಟೆ ರೂಪುಗೊಳ್ಳುತ್ತಿದೆ. ಮೈಸೂರಿನ ಸುತ್ತಮುತ್ತಲಿನ ನಂಜನಗೂಡು, ಹುಣಸೂರು, ತಿ.ನರಸೀಪುರ ಮತ್ತು ಹಾಸನ ಜಿಲ್ಲೆಯ ಅಲೂರು, ಚನ್ನರಾಯಪಟ್ಟಣ, ಸಾಂದಳಪುರ, ಅರ್ಕಳಗೂಡು ಭಾಗಗಳಲ್ಲೂ ಈಗ ಗಿಗ್ ಉದ್ಯೋಗವು ಯುವಕರಿಗೆ ಆದಾಯದ ಸ್ಥಿರ ಮೂಲವಾಗುತ್ತಿದೆ.

ಹಳ್ಳಿಯೊಳಗೆ ಕೆಲಸ:

ಇತ್ತೀಚಿನವರೆಗೂ ಉದ್ಯೋಗಕ್ಕಾಗಿ ಗ್ರಾಮೀಣ ಯುವಕರು ಮೈಸೂರಿನ ಕೈಗಾರಿಕಾ ಪ್ರದೇಶ ಅಥವಾ ಬೆಂಗಳೂರಿಗೆ ತೆರಳಬೇಕಾಗುತ್ತಿತ್ತು. ಆದರೆ ಈಗ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಜೆಪ್ಟೋ, ಬಿಗ್ ಬಾಸ್ಕೆಟ್ ಮುಂತಾದ ಸಂಸ್ಥೆಗಳ ಸೇವೆಗಳು ಹಳ್ಳಿಗಳವರೆಗೂ ವಿಸ್ತರಿದ್ದರಿಂದ, ಯುವಕರು ಮನೆ ಬಿಟ್ಟು ಹೋಗದೆ ಹಣ ಗಳಿಸುವ ಸ್ಥಿತಿ ನಿರ್ಮಾಣವಾಗಿದೆ.

ಇವತ್ತು ಹಲವಾರು ಹಳ್ಳಿಗಳಲ್ಲೇ ಸಣ್ಣ ವಿತರಣೆ ಕೇಂದ್ರಗಳು, ಗೋದಾಮುಗಳು ಸ್ಥಾಪನೆಯಾಗಿವೆ. ಇವು ಸ್ಥಳೀಯರಿಗೆ ಸತತ ಕೆಲಸ ನೀಡುತ್ತಿವೆ. ಒಂದು ವೇಳೆ ಕೃಷಿ-ಬೇಸಿಗೆ ಇದ್ದರೂ, ಉಳಿದ ಸಮಯದಲ್ಲಿ ಯುವಕರು ಆಪ್ ಆಧಾರಿತ ಕೆಲಸಗಳ ಮೂಲಕ ದಿನದ ಕೂಲಿ ಮುಟ್ಟಿಸಿಕೊಂಡು ಹೋಗುತ್ತಿದ್ದಾರೆ.

ಪ್ರವೇಶಕ್ಕೆ ದೊಡ್ಡ ಅಡ್ಡಿಗಳು ಇಲ್ಲ:

  • ಈ ಕ್ಷೇತ್ರಕ್ಕೆ ಕಾಲಿಡಲು ಪದವಿ ಬೇಕಾಗಿಲ್ಲ, ದೊಡ್ಡ ಸಂದರ್ಶನವೂ ಇಲ್ಲ.
  • "ಫೋನ್ ಬಳಕೆ ಬರಲಿ, ವಾಹನ ಓಡಿಸಲು ಬರುವಂತಿರಲಿ, ಉಳಿದುದನ್ನು ಕೆಲಸ ಮಾಡುವಾಗಲೇ ಕಲಿತುಕೊಳ್ಳಬಹುದು" - ಇದು ಈಗ ಹಲವಾರು ಯುವಕರ ಧೈರ್ಯ.
    ದಿಲ್ಲಿಯಿಂದ ಹಳ್ಳಿವರೆಗೂ ಬೆಳೆದ ಗಿಗ್‌ ವಲಯ!

ಕೆಲವು ಮೂಲಭೂತ ಅವಶ್ಯಕತೆಗಳಿವೆ:

  • ಮಾನ್ಯ ಲೈಸೆನ್ಸ್
  • ವಾಹನ
  • ಸ್ಥಳ ಪರಿಚಯ
  • ಆಪ್ ಬಳಕೆಯ ತಿಳುವಳಿಕೆ
  • ಈ ಎಲ್ಲವೂ ಇದ್ದರೆ, ಕೆಲ ದಿನಗಳಲ್ಲಿ ಕೆಲಸ ಆರಂಭಿಸಬಹುದಾಗಿದೆ.

ಕೇವಲ ಯುವಕರೇ ಅಲ್ಲ-ಹಳ್ಳಿಯ ಮಧ್ಯವಯಸ್ಕರೂ, ಮಹಿಳೆಯರೂ ಸೇರಿಸುತ್ತಿದ್ದಾರೆ

ಗಿಗ್ ಮಾರುಕಟ್ಟೆ ಎಲ್ಲರಿಗೂ ತೆರೆದಿರುವುದರಿಂದ, ವಯೋಮಿತಿ ದೊಡ್ಡ ಅಡ್ಡಿಯಲ್ಲ. ಮೈಸೂರಿನ ಕೆಲವು ಭಾಗಗಳಲ್ಲಿ 50ಕ್ಕೂ ಮೇಲ್ಪಟ್ಟವರೂ ಸ್ವತಂತ್ರವಾಗಿ ಡೆಲಿವರಿ ಕೆಲಸ ಮಾಡುತ್ತಿರುವುದು ಸಾಮಾನ್ಯ.
ಹಾಸನದ ಕೆಲವು ಹಳ್ಳಿಗಳಲ್ಲಿ ಮಹಿಳೆಯರು ಮನೆ ಮಾಡಿದ ತಿಂಡಿಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ 'ಮೈಕ್ರೋ-ಗಿಗ್' ಮಾದರಿ ಕೂಡ ಪ್ರಾರಂಭವಾಗಿದೆ.

ಗ್ರಾಮೀಣ ಆರ್ಥಿಕತೆಯ ಮೇಲೆ ಪ್ರಭಾವ:

1) ಹೊಸ ಆದಾಯದ ಸರಪಳಿ

ಹಳ್ಳಿಗಳಲ್ಲಿ ಮೊದಲು ಇರುವ ಆದಾಯದ ಮೂಲಗಳು ಸೀಮಿತವಾಗಿದ್ದವು. ಈಗ ಗಿಗ್ ಮಾರುಕಟ್ಟೆಯಿಂದ ಯುವಕರಿಗೆ ಕೆಲಸ, ಸ್ಥಳೀಯ ಅಂಗಡಿಗಳಿಗೆ ಹೆಚ್ಚು ಮಾರಾಟ, ವಾಹನ ಬಾಡಿಗೆ, ಗ್ಯಾರೇಜುಗಳಿಗೆ ಹೊಸ ವ್ಯಾಪಾರ, ಮನೆಯಲ್ಲಿ ತಯಾರಿಸುವ ತಿಂಡಿ-ತಿನಿಸುಗಳಿಗೆ ಬೇಡಿಕೆ, ಇತ್ಯಾದಿ ಅನೇಕ ಮಾರ್ಗಗಳಲ್ಲಿ ಆರ್ಥಿಕ ಚಲನೆ ತಂದಿದೆ.

2) ವಲಸೆ ಕಡಿಮೆ:

ನಗರಗಳಿಗೆ ಹೋಗಿ ಅಶ್ರಯದ ಸಮಸ್ಯೆ, ಭಾರಿ ಖರ್ಚು ಈ ಎಲ್ಲವುಗಳಿಂದ ತಪ್ಪಿಸಿಕೊಂಡು ಊರಲ್ಲೇ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

3) ಸಣ್ಣ ಪಟ್ಟಣಗಳಿಂದ ದೊಡ್ಡ ಮಾರುಕಟ್ಟೆಗೆ ಸಂಪರ್ಕ:

  • ಹಳ್ಳಿಗಳಲ್ಲೂ ಗ್ರಾಹಕರು ಈಗ ದೊಡ್ಡ ನಗರಗಳಂತೆಯೇ ಸೇವೆಗಳನ್ನು ಪಡೆಯುತ್ತಾರೆ.
  • ಇದರಿಂದ ಗ್ರಾಮೀಣ-ನಗರ ಆರ್ಥಿಕ ಅಂತರ ನಿಧಾನವಾಗಿ ಕಡಿಮೆಯಾಗುತ್ತಿದೆ.

ಗ್ರಾಮೀಣ ಯುವಕರ ಅಭಿಪ್ರಾಯಗಳು:

ತುಮಕೂರಿನ ರೋಹಿತ್ ಎಂ. ಅವರು ಈ ಬಗ್ಗೆ ಮಾತನಾಡಿದ್ದಾರೆ. "ನಾನು ನಗರಕ್ಕೆ ಹೋಗದೇ ಊರಲ್ಲೇ ಗಿಗ್ ಕೆಲಸ ಮಾಡ್ತಿದ್ದೇನೆ. ಮುಂಚೆ ಕೆಲಸ ಸಿಗೋದಕ್ಕೂ, ಮನೆಗೆ ಹಣ ಕಳುಹಿಸಲಿಕ್ಕೂ ಕಷ್ಟವಾಗುತ್ತಿತ್ತು. ಈಗ ದಿನಕ್ಕೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಬಹುದು. ಇದು ನಮ್ಮ ಹಳ್ಳಿಯಲ್ಲೇ ಹೊಸ ಉದ್ಯೋಗದ ಹಾದಿ‌ಬೆಳೆದುಕೊಂಡಿದೆ" ಎಂದಿದ್ದಾರೆ.

ಹಾಗೆಯೇ ವಿಶ್ವನಾಥ್ ಎಂಬುವರು ಕೂಡ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ಮೈಸೂರು ಸುತ್ತಲಿನ ಗ್ರಾಮಗಳಲ್ಲೂ ಗಿಗ್ ಕೆಲಸಗಳು ಬೇಗ ಬರುತ್ತಿವೆ. ಕಾಲೇಜು ಓದುತ್ತಾ ಭಾಗಕಾಲದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹಳ್ಳಿಯ ಹುಡುಗಿಯರಿಗೂ ಇದು ಸುರಕ್ಷಿತ ಮತ್ತು ಸಿಗುವಂತ ಆದಾಯದ ಮಾರ್ಗʼ ಎಂದಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಗಿಗ್ ವಲಯದ ಬೆಳವಣಿಗೆ ಕೇವಲ ಯುವಕರ ಆದಾಯವಷ್ಟೇ ಹೆಚ್ಚಿಸುತ್ತಿಲ್ಲ ಅದು ಹಳ್ಳಿಗಳ ಆರ್ಥಿಕ ಚಲನವಲನಕ್ಕೂ ಹೊಸ ಜೀವ ತುಂಬುತ್ತಿದೆ. ಮನೆ ಮನೆ ತಲುಪುವ ಸೇವೆಗಳು ಬೆಳೆದಂತೆ ಪಟ್ಟಣ ಮತ್ತು ಹಳ್ಳಿ ನಡುವಿನ ಅಂತರ ಕಡಿಮೆಯಾಗುತ್ತಿದೆ. ಸಣ್ಣ ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಸಿಗುತ್ತಿದ್ದಾರೆ ಸ್ಥಳೀಯವಾಗಿ ತಯಾರಾದ ವಸ್ತುಗಳಿಗೆ ಹೊಸ ಮಾರುಕಟ್ಟೆ ದೊರೆಯುತ್ತಿದೆ ಮತ್ತು ದೀರ್ಘಕಾಲದಿಂದ ಕೆಲಸದ ಕೊರತೆಯಿಂದ ಬಳಲುತ್ತಿದ್ದ ಗ್ರಾಮೀಣ ಯುವಕರಿಗೆ ಹೊಸ ನಂಬಿಕೆ ಉದಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+