ಕರ್ನಾಟಕ ಸರ್ಕಾರ ಆರೋಪಗಳಿಗೆ ಪದೇ ಪದೇ ಗುರಿಯಾಗುತ್ತಲೇ ಇದೆ. ಕಳೆದ ಕೆಲವು ತಿಂಗಳುಗಳಲ್ಲಿ ಸರ್ಕಾರ ಒಂದಿಲ್ಲಾ ಒಂದು ಆರೋಪಕ್ಕೆ ಸಿಲುಕುತ್ತಲೇ ಬಂದಿದೆ. ಮೊದಲು ವಾಲ್ಮೀಕಿ ಹಗರಣ ಆಡಳಿತ ರೂಡ ಪಕ್ಷದ ನಿದ್ದೆ ಗೆಡಿಸಿದರೆ, ಬಳಿಕ ಮುಡಾ ಹಗರಣ ಸರ್ಕಾರವನ್ನು ಇಕಟ್ಟಿಗೆ ಸಿಲುಕಿಸಿದೆ. ಈಗ ಬೆಳಕಿಗೆ ಬಂದಿರುವ ವಕ್ಫ್ ಆಸ್ತಿ ವಿವಾದಗಳಿಂದ ಕೆಂಗೆಟ್ಟಿರುವ ಸರ್ಕಾರಕ್ಕೆ ಮತ್ತೊಂದು ವಿವಾದ ಕೊರಳು ಸುತ್ತಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿ ಮಧ್ಯ ಮಾರಾಟಗಾರರ ಸಂಘ ರಾಜ್ಯಪಾಲರಿಗೆ ದೂರು ನೀಡಿದೆ.
ಅಬಕಾರಿ ಸಚಿವರು ಹಾಗೂ ಇಲಾಖೆ ಸುಲಿಗೆಗೆ ಇಳಿದಿದೆ ಎಂದು ಮಧ್ಯ ಮಾರಾಟಗಾರರ ಸಂಘ ಆರೋಪಿಸಿದೆ. ಇಲಾಖೆಯಲ್ಲಿ ಕಾರ್ಯವನ್ನು ಮಾಡುವ ಅಧಿಕಾರಿಗಳ ವರ್ಗಾವಣೆಗೆ ಸಚಿವ ಆರ್.ಬಿ ತಿಮ್ಮಾಪುರ್ ಲಂಚ ಪಡೆಯುತ್ತಿದ್ದು, ಅಧಿಕಾರಿಗಳು ಮದ್ಯದಂಗಡಿಯಿಂದ ಬಹಿರಂಗವಾಗಿ ಹಣ ಪಡೆಯುತ್ತಿದ್ದಾರೆ ಎಂದು ರಾಜ್ಯಪಾಲಿರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಏನೆಲ್ಲಾ ಇದೆ?
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಮಧ್ಯ ಮಾರಾಟಗಾರರ ಸಂಘ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕೋಟಿ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ಪಡೆಯಲಾಗಿದೆ ಎಂದು ಗಂಭೀರ ಆರೋಪ ಸಹ ಹೊರಿಸಲಾಗಿದೆ. ಕಳೆದ ಮೂರು ವರ್ಷದಿಂದ ಹಣ ವರ್ಗಾವಣೆ ನಡೆಯುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಿಎಲ್ 7 ಪರವಾನಿಗೆಗೆ ಎಷ್ಟು ಹಣ?
ಕಾನೂನು ನಿಯಮಗಳನ್ನು ಇಲಾಖೆ ಗಾಳಿಗೆ ತೂರಿದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿಎಲ್ 7 ಪರವಾನಿಗೆ ಪಡೆಯಲು 30 ರಿಂದ 70 ಲಕ್ಷ ಹಣವನ್ನು ನೀಡಬೇಕಾಗುತ್ತದೆ. ಕಳೆದ ಒಂದು ವರ್ಷದಲ್ಲಿ 1000ಕ್ಕಿಂತಲೂ ಹೆಚ್ಚು ಅಕ್ರಮ ಪರವಾನಿಗೆ ನೀಡಲಾಗಿದ್ದು, 300-700 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕರ್ನಾಟಕದಲ್ಲಿ CL-7 ಮದ್ಯದ ಪರವಾನಗಿಯನ್ನು ಹೊಟೇಲ್‌ಗಳು, ಬೋರ್ಡಿಂಗ್ ಹೌಸ್‌ಗಳಿಗೂ ನೀಡಲಾಗಿದೆ. ಈ ಪರವಾನಿಗೆಗೆ ವಾರ್ಷಿಕ 4 ರಿಂದ 8.5 ಲಕ್ಷದ ರೂಪಾಯಿಗಳ ವರೆಗೆ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಪರವಾನಿಗೆಯ ಶುಲ್ಕ, ಪರವಾನಿಗೆ ಪಡೆದ ಸ್ಥಳದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಮೊತ್ತ ಸಿಟಿ ಹಾಗೂ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಮಿತಿ ಮೀರಿದೆ.
ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡಿಮೆ ಮಾಡಲು, ಸಿಎಲ್ 7 ಪರವಾನಿಗೆ ನೀಡುವುದನ್ನು ಕಡಿಮೆ ಮಾಡಲು ಸಂಘ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿತ್ತು. ಇನ್ನು ಅಧಿಕಾರಿಗಳು ಸಹ ತಾವು ಈ ಹುದ್ದೆಗೆ ಏರಲು ಸಚಿವರಿಗೆ ಹಣ ನೀಡಿದ್ದೇವೆ ಎಂದು ತಿಳಿಸುತ್ತಾರೆ. ಕಳೆದ ಒಂದು ವರ್ಷದಲ್ಲಿ 1,000 ಲೈಸೆನ್ಸ್ ಹಣ ಪಡೆದು ಲೈಸೆನ್ಸ್ ನೀಡಲಾಗಿದೆ ಎಂದು ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ ಆರೋಪಿಸಿದ್ದಾರೆ.


Click it and Unblock the Notifications