ಸಂಚಾರ ನಿಯಮಗಳನ್ನು (Traffic Rules) ಪಾಲಿಸೋದು ಪ್ರತಿಯೊಬ್ಬ ಚಾಲಕನ ಕರ್ತವ್ಯ. ಆದರೂ ಕೆಲವರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ, ಫೈನ್ ಕಟ್ಟದೆ ಸಂಚಾರ ಮಾಡುತ್ತಲೇ ಇರುತ್ತಾರೆ. ಇನ್ನು ಟ್ರಾಫಿಕ್ ಪೊಲೀಸರು ಕೂಡಾ ನಿಯಮಗಳನ್ನು ಚಾಲಕರು ಪಾಲಿಸಬೇಕೆಂದು ಏನೇನೋ ಯೋಜನೆಗಳನ್ನು ಜಾರಿ ತರುತ್ತಾರೆ. ಆದರೆ ದಿನ ಹೋದಂತೆ ಸಂಚಾರ ನಿಯಮ ಪಾಲಿಸ್ತಿಲ್ಲ, ಫೈನ್ ಕಟ್ಟಲ್ಲ ಅನ್ನೋ ದೂರುಗಳು ಕೇಳುತ್ತಲೇ ಇದೆ. ಆದರೆ ಸಾವಿರಗಟ್ಟಲೆ ಟ್ರಾಫಿಕ್ ಫೈನ್ ಕಟ್ಟದೇ, ಹಾಗೇ ಇದ್ದವರಿಗೆ ಕರ್ನಾಟಕ ಸರ್ಕಾರ (Karnataka Govt) ಸೂಪರ್ ಡಿಸ್ಕೌಂಟ್ (Traffic Fine Discount) ನೀಡುತ್ತಿದೆ. ರಾಜ್ಯದಲ್ಲಿರುವ ಟ್ರಾಫಿಕ್ ಫೈನ್‌ಗಳನ್ನು ಕ್ಲಿಯರ್ ಮಾಡುವ ಉದ್ದೇಶದಂದ ಸರ್ಕಾರ ಶೇ.50% ರಿಯಾಯಿತಿಯನ್ನು ಘೋಷಿಸಿದೆ.

ಹೌದು, ಇದೀಗ ಕರ್ನಾಟಕ ಸರ್ಕಾರ ಬಾಕಿ ಉಳಿಸಿರುವ ಸಂಚಾರ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದೆ. ಆದ್ದರಿಂದ ಯಾರೆಲ್ಲಾ ಸಾವಿರಗಟ್ಟಲೆ ಟ್ರಾಫಿಕ್ ಫೈನ್ ಕಟ್ಟದೇ ಹಾಗೇ ಕುಳಿತಿದ್ದೀರೋ, ಇದೇ ಬೆಸ್ಟ್ ಟೈಂ. ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ 50% ಶೇ.ದಷ್ಟು ಡಿಸ್ಕೌಂಟ್ ಪಡೆಯಬಹುದು.
ಯಾವಾಗದಿಂದ ಆಫರ್?
ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಹೊರಡಿಸಿರುವ ಆದೇಶದಂತೆ, ನಾಳೆಯಿಂದ ಅಂದರೆ ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಈ ಡಿಸ್ಕೌಂಟ್ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ಉಳಿದಿರುವ ದಂಡವನ್ನು ಕಟ್ಟಿ ಕ್ಲಿಯರ್ ಮಾಡಿಕೊಳ್ಳಬಹುದು.
ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಅಸ್ತು ಎಂದು ಸರ್ಕಾರ!
ಸಾರಿಗೆ ಇಲಾಖೆ ಕೆಲ ದಿನಗಳ ಹಿಂದಷ್ಟೇ ಸಂಚಾರ ದಂಡ ರಿಯಾಯಿತಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಇದನ್ನು ಪರಿಶೀಲಿಸಿದ ಬಳಿಕ ಸರ್ಕಾರ ರಿಯಾಯಿತಿ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿ, ತಕ್ಷಣ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ. ಇನ್ನು ಇದೇ ವರ್ಷದ ಆಗಸ್ಟ್‌ನಲ್ಲೂ ಟ್ರಾಫಿಕ್ ಫೈನ್ ಕಟ್ಟಲು ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಈ ವೇಳೆ ಕೋಟಿಗಟ್ಟಲೆ ಹಣ ಸರ್ಕಾರದ ಬೊಕ್ಕಸಕ್ಕೆ ತುಂಬಿತ್ತು. ಅದೇ ಪ್ರತಿಕ್ರಿಯೆಯನ್ನು ನೋಡಿ ಕರ್ನಾಟಕ ಸರ್ಕಾರ ಇದೀಗ ಮತ್ತೆ ರಿಯಾಯಿತಿ ಘೋಷಣೆ ಮಾಡಿದೆ.
ರಿಯಾಯಿತಿಗೆ ಯಾರೆಲ್ಲಾ ಅರ್ಹರು?
- ರಾಜ್ಯದ ಯಾವುದೇ ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ, ದಂಡ ಕಟ್ಟದೆ ಹಾಗೇ ಬಾಕಿ ಉಳಿಸಿಕೊಂಡಿರುವ ಚಾಲಕರು.
- ಅಪರಾಧ ಪ್ರಕರಣಗಳಲ್ಲಿ ಪರಿಗಣಿಸಲ್ಪಟ್ಟ ದಂಡಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ.
ಯಾವೆಲ್ಲಾ ಉಲ್ಲಂಘನೆಗಳು:
ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ವೇಗದ ಮಿತಿ ಮೀರಿದ ಚಾಲನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸೀಟ್ ಬೆಲ್ಟ್ ಹಾಕದಿರುವುದು, ಚಾಲನೆಯಲ್ಲಿ ಮೊಬೈಲ್ ಬಳಕೆ, ಪಾರ್ಕಿಂಗ್ ನಿಯಮ ಉಲ್ಲಂಘನೆ, ತ್ರಿಬಲ್ ರೈಡ್ ಇತ್ಯಾದಿ ಸೇರಿದಂತೆ ಎಲ್ಲಾ ಸಂಚಾರ ನಿಯಮ ಉಲ್ಲಂಘನೆ ಮಾಡಿದವರು ಈ ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಬಹುದು.
ಎಲ್ಲಿ ದಂಡ ಕಟ್ಟುವುದು?
ಬಾಕಿ ಉಳಿದಿರುವ ದಂಡವನ್ನು ವಾಹನ ಸವಾರರು ಬೆಂಗಳೂರು ಸಂಚಾರ ಪೊಲೀಸ್ ಸ್ಟೇಷನ್‌ಗಳಲ್ಲಿ, ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ಒನ್ ವೆಬ್‌ಸೈಟ್, ಕರ್ನಾಟಕ ಒನ್ ವೆಬ್‌ಸೈಟ್‌ಗಳಲ್ಲಿ ವಿವರ ಪಡೆದುಕೊಂಡು ಪಾವತಿಸಬಹುದು. ಅಲ್ಲದೇ ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆಪ್ ಮೂಲಕವೂ ಆನ್‌ಲೈನ್ ಮೂಲಕ ದಂಡ ಪಾವತಿಸಬಹುದು.


Click it and Unblock the Notifications