ನಮ್ಮ ಮೆಟ್ರೋ ಸೇವೆಯನ್ನು ಸರ್ಕಾರವು ವಿಸ್ತರಣೆ ಮಾಡುತ್ತಾ ಸಾಗುತ್ತಿದೆ. ಯಾವೆಲ್ಲ ಪ್ರದೇಶಕ್ಕೆ ಮೆಟ್ರೋ ಸೇವೆ ಇಲ್ಲವೋ ಅಲ್ಲಿಗೆ ವಿಸ್ತರಣೆ ಮಾಡುವ ಕಾರ್ಯವನ್ನು, ಯೋಜನೆಯನ್ನು ರೂಪಿಸಲಾಗುತ್ತಿದೆ. ಹೀಗೆಯೇ ಬೆಂಗಳೂರು ನಮ್ಮ ಮೆಟ್ರೋ ಸೇವೆಯನ್ನು ನೆಲಮಂಗಲಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನೆಲಮಂಗಲದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನ ಹಾಗೂ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾಹಿತಿಯನ್ನು ತಿಳಿಸಿದ್ದಾರೆ. ನೆಲಮಂಗಲಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ.

ಈಗ ಈ ಮನವಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ನೆಲಮಂಗಲದಲ್ಲಿ ಮೆಟ್ರೋ ಆರಂಭದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದಿದ್ದಾರೆ. ಇನ್ನು ಮನವಿ ನೀಡಿದ ಜನರು ಪ್ರಮುಖವಾಗಿ ನೆಲಮಂಗಲದಲ್ಲಿ ಶೀಘ್ರವಾಗಿ ಜನಸಂಖ್ಯೆ ಅಧಿಕವಾಗುತ್ತಿದೆ. ಹಾಗೆಯೇ ಸಂಚಾರದಟ್ಟಣೆಯು ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಸೌಲಭ್ಯ ಇಲ್ಲಿಗೂ ವಿಸ್ತರಿಸಬೇಕು ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ. ಈ ಪ್ರಯತ್ನದ ಭಾಗವಾಗಿ ಮೆಟ್ರೋ ಬಗ್ಗೆ ಚಿಂತನೆಯು ನಡೆಸಲಾಗುತ್ತಿದೆ ಎಂದು ವರದಿಯು ಉಲ್ಲೇಖಿಸಿದೆ. ಮೆಟ್ರೋ ವಿಸ್ತರಣೆಯ ಜೊತೆಗೆ ಕಾವೇರಿ ಮತ್ತು ವೃಷಭಾವತಿ ನದಿಗಳಿಗೆ ಜಲ ಪುನರುಜ್ಜೀವನ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ನೆಲಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಿಗೆ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಯನ್ನು, ನೀರಿನ ಕೊರತೆಯನ್ನು ಪರಿಹರಿಸಲು ಈ ಕರ್ನಾಟಕ ಸರ್ಕಾರವು ಕಾವೇರಿ ಮತ್ತು ವೃಷಭಾವತಿ ನದಿಗಳಿಗೆ ಜಲ ಪುನರುಜ್ಜೀವನ ಯೋಜನೆ ಜಾರಿ ಮಾಡಲು ಮುಂದಾಗುತ್ತಿದೆ. ಸರ್ಕಾರವು ಕೆರೆಗಳನ್ನು ತುಂಬಿಸುವ ಮೂಲಕ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆ ಸರಿ ಮಾಡುವ ಪ್ರಯತ್ನ ಸರ್ಕಾರ ಮಾಡಲಿದೆ.
ಬಿಎಂಟಿಸಿ ಆದಾಯ ಹೆಚ್ಚಳಕ್ಕೂ ಗಮನ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂಲಕ ಆದಾಯ ಹೆಚ್ಚಿಸುವತ್ತಲೂ ಸರ್ಕಾರ ಗಮನ ಹರಿಸುತ್ತಿದೆ. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ತನ್ನ ಒಡೆತನದ ಆಸ್ತಿಗಳನ್ನು ಬಿಎಂಆರ್‌ಸಿಎಲ್‌ಗೆ (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಗುತ್ತಿಗೆ ನೀಡುವುದು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಆದಾಯ ಪಡೆಯುವ ಗಮನ ಹರಿಸುತ್ತಿದೆ.
ಬಿಎಂಆರ್‌ಸಿಎಲ್ ಆಸ್ತಿಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಬಿಬಿಎಂಪಿ ಆದಾಯ ಸಂಗ್ರಹಣೆ ಹೆಚ್ಚಿಸಲು ಮುಂದಾಗಿದೆ. ಒಪ್ಪಂದದ ಪ್ರಕಾರ, ಆಡಳಿತವು ಬಿಎಂಆರ್‌ಸಿಎಲ್‌ನಿಂದ ಸೇವಾ ಶುಲ್ಕದಲ್ಲಿ ವಾರ್ಷಿಕ 2.14 ಕೋಟಿ ರೂಪಾಯಿ ಪಡೆಯಲಿದೆ. ಮೆಟ್ರೋ ಸೇವೆಯು 73.81-ಕಿಲೋಮೀಟರ್ ಕಾರಿಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.


Click it and Unblock the Notifications