ಕರ್ನಾಟಕ ಸರ್ಕಾರವು ಯಾವುದೇ ಡ್ರೋನ್, ಹಾಟ್ ಏರ್ ಬಲೂನ್ ಸೇರಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ಉಪ- ಸಂಪ್ರದಾಯಿಕ ವೈಮಾನಿಕ ಹಾರಾಟದ ಮೇಲೆ ಫೆಬ್ರವರಿ ೧೦ ರಿಂದ ಐದು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೌದು ಲೋಹದ ಹಕ್ಕಿಗಳ ಕಲರವಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗುತ್ತಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಸೆಕ್ಷನ್ ಲಾಸ್ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಂ (ಬಿಎನ್‌ಎಸ್‌ಎಸ್) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಆಯುಕ್ತರು ತಮ್ಮ ಆದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಅಹಿತಕರ ಘಟನೆಗಳನ್ನು ತಪ್ಪಿಸಲು ನಿಷೇಧವು "ಅನಿವಾರ್ಯ ಅಗತ್ಯವಾಗಿದೆ" ಎಂದು ಹೇಳಿದ್ದು , ಉಪ-ಸಾಂಪ್ರದಾಯಿಕ ವೈಮಾನಿಕ ವೇದಿಕೆಗಳಲ್ಲಿ ಮಾನವರಹಿತ ವೈಮಾನಿಕ ವಾಹನಗಳ ರೋಬೋಟಿಕ್ ಪ್ರಕ್ರಿಯೆ ಆಟೋಮೇಷನ್, ಪ್ಯಾರಾಗ್ಲೈಡರ್‌ಗಳು, , ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳು, , ಸಣ್ಣ ವಿಮಾನಗಳು, ಡ್ರೋನ್‌ಗಳು, ಕ್ವಾಡ್-ಕಾಪ್ಟರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳು ಇತ್ಯಾದಿಗಳು ಸೇರಿವೆ.
ಕನ್ನಡಿಗರ ಹೆಮ್ಮ ಬೆಂಗಳೂರು ಏರ್ ಶೋ
ಏಷ್ಯಾದ ಅತಿದೊಡ್ಡ ಏರ್ ಶೋ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವುದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ. ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್ ವತಿಯಿಂದ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಉದ್ಯಮದ ವಿವಿಧ ದೇಶಗಳ ಕಂಪನಿಗಳು ಮತ್ತು ತಯಾರಕರು ಭಾಗವಹಿಸುತ್ತಾರೆ. ಆಕಾಶದಲ್ಲಿ ದೃಶ್ಯ ವೈಭವ ಸೃಷ್ಟಿಸುವ ಲೋಹದ ಹಕ್ಕಿಗಳು, ಅವುಗಳ ವೇಗ ಮತ್ತು ನಿಖರತೆ ನೋಡುಗರಲ್ಲಿ ಚಮತ್ಕಾರವನ್ನುಂಟು ಮಾಡುತ್ತದೆ. ಈ ವರ್ಷ 15ನೇ ಆವೃತ್ತಿಯ ಅವೃತ್ತಿಯ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬೆಂಗಳೂರಿನ ಜನ ಏರ್ ಶೋ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಐದು ದಿನಗಳ ಕಾಲ ನಡೆಯುವ ಏರ್ ಶೋ ಗೆ ಫೆಬ್ರವರಿ 10 ರಿಂದ 12 ರವರೆಗೆ ಬಿ 2 ಬಿ ( ಬ್ಯೂಸಿನೆಸ್ ಟು ಬ್ಯೂಸಿನೆಸ್ ) ಸಭೆಗಳು ನಡೆಯಲಿದ್ದು, ಕೊನೆಯ ಎರಡು ದಿನ ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ. ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನ ಇರಲಿದೆ.
ಕಮಿಷನರ್ ಪ್ರಕಾರ, ಇವು ಸ್ಫೋಟಕಗಳನ್ನು ಒಯ್ಯಬಹುದು ಅಥವಾ ಇವುಗಳ ಮೂಲಕ ಜನರನ್ನು ಬೆದರಿಸಲು, ಹಾನಿ ಮಾಡಲು, ಗಾಯಗೊಳಿಸಲು ಮತ್ತು ಪ್ರಾಣ ಹಾನಿಗೆ ಆಸ್ತಿಗಳನ್ನು ನಾಶಮಾಡಲು ಬಳಕೆ ಮಾಡಬಹುದು. ಅಲ್ಲದೆ ಶಸ್ತ್ರಾಸ್ತ್ರಗಳು ಅಥವಾ ಕಣ್ಗಾವಲು ವಸ್ತುಗಳಾಗಿ ಬಳಸಬಹುದು. ಹೀಗಾಗಿ ಯಾವುದೇ ಅನಾಹುತಗಳಾಗದಂತೆ ಮುನ್ನೆಚ್ಚರಿಕ ಕ್ರಮವಾಗಿ ಈ ನಿಷೇದ ಹೇರಲಾಗಿದೆ.
ಈಗಾಗಲೇ ಸಾರ್ವಜನಿಕರು ಪಾಸ್ ಪಡೆಯಲು ನೋಂದಣಿ ಆರಂಭ
ಶರವೇಗದಲ್ಲಿ ಮುನ್ನುಗ್ಗಿ ಚಮತ್ಕಾರ, ಸಾಹಸ. ನೀಲಿ ಆಕಾಶದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳ ರಣ ರೋಚಕ, ಜೊತೆಗೆ ಅಗಸದಲ್ಲಿ ಮೋಹಕ ಚಿತ್ತಾರ ಬೇರೆ. ಇಂತಹ ಲೋಹದ ಹಕ್ಕಿಗಳ ಕಸರತ್ತು ನೋಡಲು ಯಾರಿಗೆ ತಾನೇ ಬಯಕೆ ಇರುವುದಿಲ್ಲ ಹೇಳಿ. ಸಾರ್ವಜನಿಕರು ಕೂಡಾ ಈ ಶೋ ನೋಡಲು ಅವಕಾಶ ಇರೋದ್ರಿಂದ ಏರೋ ಇಂಡಿಯಾ-2025 ಪಾಸುಗಳಿಗಾಗಿ ನೋಂದಣಿ ಆರಂಭವಾಗಿದೆ. ಉದ್ಯಮಿಗಳು, ಪ್ರದರ್ಶನದಲ್ಲಿ ಭಾಗಿಯಾಗುವ ಕಂಪನಿಗಳು, ವೈಮಾನಿಕ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ನೋಂದಣಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ https://www.aeroindia.gov.in/ ಸಂಪರ್ಕಿಸಬಹುದು.


Click it and Unblock the Notifications