ಕರ್ನಾಟಕದಲ್ಲಿ ಕೋವಿಡ್-19 ಅಬ್ಬರ ಮತ್ತೆ ಶುರುವಾಗಿದೆ. ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸಾರ್ವಜನಿಕ ಸಲಹೆಗಳನ್ನು ನೀಡಿದೆ. ಅದೇನೆಂದರೆ ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವ ಪಾಲಿಸುವ ಜವಾಬ್ದಾರಿ ನಾಗರಿಕರ ಮೇಲೆ ಇದೆ. ಹೀಗಾಗಿ ಇದಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಶಾಲೆಗಳಿಗೂ ಸೂಚನೆ:
ಇದೇ ರೀತಿ ಕರ್ನಾಟಕದ ಶಾಲೆಗಳಿಗೂ ಸೂಚನೆ ನೀಡಿದೆ. ಅದೇನೆಂದರೆ ಮಕ್ಕಳಿಗೆ ಕೋವಿಡ್ ಲಕ್ಷಣಗಳಾದ ನೆಗಡಿ, ಜ್ವರ, ಕೆಮ್ಮು ಯಾವುದೇ ರೀತಿಯಿದ್ದರೂ, ಅವರನ್ನು ಮನೆಗೆ ಕಳಿಸುವಂತೆ ಸಲಹೆ ನೀಡಲಾಗಿದೆ. ಹಾಗೆಯೇ ಪೋಷಕರು ತಮ್ಮ ಮಕ್ಕಳ ಆರೋಗ್ಯವನ್ನು ಗಮನಿಸಿ ಶಾಲೆಗೆ ಕಳಿಸುವಂತೆ ಸೂಚನೆ ನೀಡಲಾಗಿದೆ.
ಎಚ್ಚರಿಕೆ ಮತ್ತು ಮಾರ್ಗಸೂಚಿ:
ಇನ್ನು ರಾಜ್ಯದ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕೂಡ, ಕೋವಿಡ್ ನಿಯಂತ್ರಣ ಕುರಿತಂತೆ ಸಲಹೆ ಪ್ರಕಟಿಸಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಸರಣ ತಡೆಗಟ್ಟಲು ಮತ್ತು ಸೋಂಕಿತರ ಆರೈಕೆಗೆ ನಮ್ಮ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಜನರು ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕರಾಗಬೇಕು," ಎಂದು ಅವರು ಹೇಳಿದ್ದಾರೆ.
ಸಂಚಾರಸ್ಥರಿಂದ ಜವಾಬ್ದಾರಿ ನಿರೀಕ್ಷೆ:
ಆಯುಕ್ತರ ಪ್ರಕಾರ, ಸೋಂಕು ಹರಡುವಿಕೆಯನ್ನು ತಕ್ಷಣ ಗುರುತಿಸಲು ಮತ್ತು ನಿಯಂತ್ರಿಸಲು ಎಲ್ಲಾ ನಾಗರಿಕರಿಂದ ಸಹಕಾರ ಅಗತ್ಯ. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿ ಆರೋಗ್ಯ ಸಿಬ್ಬಂದಿಗೆ ತಕ್ಷಣ ನೀಡಬೇಕು. ಯಾವುದೇ ಆತಂಕದಿಂದ ದೂರವಿದ್ದು, ಅಧಿಕೃತ ಮಾಹಿತಿಗೆ ಮಾತ್ರ ಸ್ಪಂದಿಸಿ, ಎಂಬ ಸೂಚನೆ ನೀಡಲಾಗಿದೆ.
ಪ್ರಮಾಣಿತ ಕಣ್ಗಾವಲು ಮತ್ತು ಸಮುದಾಯ ಸಹಭಾಗಿತ್ವ:
ಸರ್ಕಾರದ ಪ್ರಕಾರ, ಸಮುದಾಯ ಮಟ್ಟದ ಮೇಲ್ವಿಚಾರಣೆಗಾಗಿ IHIP (Integrated Health Information Platform) ಪೋರ್ಟಲ್ ಬಳಸಲಾಗುತ್ತಿದೆ. ಜನಸಾಮಾನ್ಯರು ಕೋವಿಡ್ ಲಕ್ಷಣಗಳಾದ ತಲೆನೋವು, ಜ್ವರ, ಗಂಟಲ ನೋವು, ಶ್ವಾಸ ತೊಂದರೆ ಇತ್ಯಾದಿಗಳನ್ನು ಗಮನಿಸಿ ನಿಕಟದ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಬೇಕಾಗಿದೆ.
ತುರ್ತು ಸಂಪರ್ಕ ಮಾಹಿತಿಗಳು:
ಆರೋಗ್ಯ ಸಲಹೆಗಾಗಿ ಟೋಲ್ ಫ್ರೀ ಸಂಖ್ಯೆ: 1800 425 8330
ತುರ್ತು ರೋಗಿಗಳ ಸಾಗಣೆಗಾಗಿ: 108
ಸರ್ಕಾರ ಈಗಾಗಲೇ ಯಾದೃಚ್ಛಿಕ ತಪಾಸಣೆಗಳು ಹಾಗೂ ಮಾದರಿ ಸಂಗ್ರಹ ಪ್ರಕ್ರಿಯೆ ಆರಂಭಿಸಿರುವುದಾಗಿ ತಿಳಿಸಿದೆ. ನಾವು ಒಟ್ಟಿಗೆ ಕೆಲಸ ಮಾಡಿದರೆ, ಯಾವುದೇ ಹೊಸ ರೂಪಾಂತರವನ್ನೂ ತ್ವರಿತವಾಗಿ ಗುರುತಿಸಿ ನಿರ್ವಹಿಸಬಹುದು, ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದ ವರದಿಯ ಪ್ರಕಾರ, ರಾಜ್ಯದಲ್ಲಿ 234 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜನವರಿ 1ರಿಂದ ಈವರೆಗೆ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಎಚ್ಚರಿಕೆಯ ಕ್ರಮಗಳನ್ನು ಮುಂದುವರಿಸಿದೆ. ಒಟ್ಟಿನಲ್ಲಿ ಸರ್ಕಾರ ಜನರಲ್ಲಿ ಆತಂಕವಿಲ್ಲದೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ನೀಡಿದ್ದು, ಪ್ರತಿಯೊಬ್ಬ ನಾಗರಿಕನು ಆರೋಗ್ಯ ಇಲಾಖೆಯ ಶಿಫಾರಸುಗಳನ್ನು ಪಾಲಿಸಿದರೆ, ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ.
ಇದೀಗ ಕರ್ನಾಟಕ ಸರ್ಕಾರ ನೀಡಿರುವ ಈ ಎಚ್ಚರಿಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಮತ್ತು ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಹೆಜ್ಜೆ ಹಾಕಿರುವ ಮಹತ್ವದ ಕ್ರಮವಾಗಿದೆ. ತಜ್ಞರ ಸಲಹೆಗಳನ್ನು ಅನುಸರಿಸಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ನೈರ್ಮಲ್ಯ ಪಾಲಿಸುವುದು ಪ್ರತಿಯೊಬ್ಬನ ಹೊಣೆಗಾರಿಕೆಯಾಗಿದ್ದು, ಎಲ್ಲರ ಸಹಕಾರದೊಂದಿಗೆ ಮಾತ್ರ ಈ ವೈರಸ್‌ಗೆ ತಡೆಯೊಡ್ಡುವುದು ಸಾಧ್ಯ.
ಸಮಾಜದಲ್ಲಿ ಆರೋಗ್ಯ ಮತ್ತು ಸುರಕ್ಷತೆ ಕಾಪಾಡುವುದು ನಾವೆಲ್ಲರ ಒಟ್ಟೂ ಜವಾಬ್ದಾರಿ. ಸರ್ಕಾರ ನೀಡುತ್ತಿರುವ ಸೂಚನೆಗಳನ್ನು ಗಂಭೀರವಾಗಿ ಪಾಲಿಸೋಣ, ಆತಂಕವಿಲ್ಲದೆ ಜಾಗರೂಕರಾಗೋಣ, ಮತ್ತು ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ನಾವು ಸಹಭಾಗಿಯಾಗೋಣ.


Click it and Unblock the Notifications