ಮಹಿಳೆಯರಿಗೆ ಮುಟ್ಟಿನ ರಜೆ (Menstrual leave) ನೀಡಬೇಕೆಂಬ ಕೂಗು ಹಲವು ವರ್ಷಗಳಿಂದಲೂ ಇತ್ತು. ಆದ್ರೆ ಇದೀಗ ಕರ್ನಾಟಕ ಸರ್ಕಾರ (Karnataka Govt) ಕೊನೆಗೂ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಅಕ್ಟೋಬರ್ 9 ರಂದು ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ (Woman) ವೇತನ ಸಹಿತ ಋತುಚಕ್ರದ ರಜೆ ನೀಡಬೇಕೆಂದು ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಕರ್ನಾಟಕದ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ನೀಡಬೇಕೆಂದು ಕಡ್ಡಾಯಗೊಳಿಸಿದೆ.

ಕಳೆದ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮುಟ್ಟಿನಿ ರಜೆ ನೀತಿಗೆ ಅನುಮೋದನೆ ನೀಡಲಾಗಿತ್ತು. ಆ ಪ್ರಕಾರ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿವ 18 ರಿಂದ 52 ವರ್ಷ ವಯಸ್ಸಿನ ಮಹಿಳೆಯರಿಗೆ ಈ ನೀತಿ ಅನ್ವಯವಾಗಲಿದೆ.
ಮುಟ್ಟಿನ ರಜೆ ಕಡ್ಡಾಯ
ಸರ್ಕಾರದಿಂದಲೇ ಮುಟ್ಟಿನ ರಜೆ ಕಡ್ಡಾಯಗೊಳಿಸುವಂತೆ ನವೆಂಬರ್ 12 ರಂದು ಆದೇಶ ಹೊರಡಿಸಿದ್ದು, ಆ ಪ್ರಕಾರ 18 ರಿಂದ 52 ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ 12 ತಿಂಗಳು ವೇತನ ಸಹಿತ ಋತುಚಕ್ರದ ರಜೆ ಸಿಗಲಿದೆ.
"ಕಾರ್ಖಾನೆ ಕಾಯ್ದೆ 1948, ಕರ್ನಾಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961, ತೋಟ ಕಾರ್ಮಿಕರ ಕಾಯ್ದೆ 1951, ಬೀಡಿ ಸಿಗಾರ್ ಕಾರ್ಮಿಕರ ಕಾಯ್ದೆ 1966 ಮತ್ತು ಮೋಟಾರು ವಾಹನ ಕಾರ್ಮಿಕರ ಕಾಯ್ದೆ 1961 ರ ಅಡಿಯಲ್ಲಿ ಬರುವ ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷ ವಯಸ್ಸಿನ ಎಲ್ಲಾ ಮಹಿಳಾ ಉದ್ಯೋಗಿಗಳಿಗೂ ವರ್ಷಕ್ಕ 12 ವೇತನ ಸಹಿತ ರಜೆ ನೀಡಬೇಕೆಂದು ಉದ್ಯೋಗದಾತರಿಗೆ ನಿರ್ದೇಶನ ನೀಡಲಾಗಿದೆ" ಎಂದು ಆದೇಶದಲ್ಲಿ ಬರೆಯಲಾಗಿದೆ.
CHRIST (Deemed To Be University)ಯ ಡಾ. ಸ್ವಪ್ನಾ ಎಸ್ ನೇತೃತ್ವದಲ್ಲಿ 18 ಸದಸ್ಯರನ್ನೊಳಗೊಂಡ ಸಮಿತಿಯು ಆರಂಭದಲ್ಲಿ ವರ್ಷಕ್ಕೆ 6 ಮುಟ್ಟಿನ ರಜೆ ನೀಡುವಂತೆ ಸೂಚಿಸಿತ್ತು. ಆದ್ರೆ ಇದನ್ನರಿತ ಕಾರ್ಮಿಕ ಇಲಾಖೆ 12 ರಜೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತು.
ಇನ್ನು ಸರ್ಕಾರದ ಆದೇಶದ ಪ್ರಕಾರ, ಮಹಿಳಾ ಉದ್ಯೋಗಿಗಳು ತಮ್ಮ ಮುಟ್ಟಿನ ರಜೆಯನ್ನು ಅದೇ ತಿಂಗಳಿನಲ್ಲೇ ತೆಗೆದುಕೊಳ್ಳಬೇಕು. ಬೇರೆ ರಜೆಗಳಂತೆ ಮುಂದಿನ ತಿಂಗಳಿಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಹೇಳಲಾಗಿದೆ. "ಸಂಬಂಧಿತ ಉದ್ಯೋಗದಾತರು ತಮ್ಮ 18 ರಿಂದ 52 ವರ್ಷ ವಯಸ್ಸಿನ ಎಲ್ಲಾ ಖಾಯಂ/ಗುತ್ತಿಗೆ/ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಅವರ ಮುಟ್ಟಿನ ಅವಧಿಯಲ್ಲಿ ತಿಂಗಳಿಗೆ ಒಂದು ದಿನ - ವರ್ಷಕ್ಕೆ 12 ದಿನಗಳ ವೇತನ ಸಹಿತ ರಜೆ ನೀಡಬೇಕು" ಎಂದು ಸರ್ಕಾರಿ ಆದೇಶದಲ್ಲಿ ರಜಾ ನೀತಿ ಬಗ್ಗೆ ಸ್ಪಷ್ಟನೆ ನೀಡಲಾಗಿದೆ
ಇನ್ನು ಈ ಮುಟ್ಟಿನ ರಜೆಯನ್ನು ಪಡೆಯಲು ಮಹಿಳಾ ಉದ್ಯೋಗಿಗಳು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಹಿಳೆಯರ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕ್ರಮವು ಕರ್ನಾಟಕದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಲಿದೆ.


Click it and Unblock the Notifications