ಯುಗಾದಿ ರಂಜಾನ್ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಹೌದು, ಹೊಟೇಲ್ ತಿಂಡಿ ಇನ್ನಷ್ಟು ದುಬಾರಿಯಾಗಲಿದೆ
ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಕಾವು ಏರಿಕೆಯಾಗುತ್ತಲೇ ಇದೆ. ದಿನ ನಿತ್ಯಕ್ಕೆ ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಈ ವರ್ಷದ ಮೊದಲ ತಿಂಗಳಿಂದ ಕೆಎಸ್‌ಆರ್ ಟಿಸಿ, ಬಿಎಂಟಿಸಿ ಟಿಕೆಟ್ ದರಗಳು ವಿದ್ಯುತ್ ದರ ಏರಿಕೆ,ಮೆಟ್ರೋ ನೀರು, ದರವನ್ನು ಏರಿಕೆ ಮಾಡಿದ್ದು, ಮೊನ್ನೆಯಷ್ಟೇ ಕುಡಿಯುವ ಹಾಲಿನ ದರವನ್ನು ಏರಿಕೆ ಮಾಡಿದೆ. ಪ್ರತಿಯೊಂದರಲ್ಲೂ ಸರ್ಕಾರ ಬೆಲೆ ಏರಿಕೆಯ ಹೊರೆಯನ್ನು ಸಮಾನ್ಯ ಮಾರ್ಗದವ ಮೇಲೆ ಹೊರೆಸುತ್ತಲೇ ಇದೆ. ಇದೀಗ ಹೊಟೆಲ್ ತಿಂಡಿಗಳ ಬೆಲೆ ಏರಿಕೆ ಮುಂದಾಗುತ್ತಿದ್ದು,ರಾಜ್ಯ ದುಬಾರಿ ದುನಿಯಾವಾಗುತ್ತಿದೆ.

ಬೆಲೆ ಏರಿಕೆಯಿಂದ ಜನರು ಹೈರಾಣಾಗುತ್ತಿರುವ ಬೆನ್ನಲ್ಲೇ ರಾಜ್ಯದ ಜನತೆಗೆ ಹೋಟೆಲ್ ದರ ಏರಿಕೆಯ ಶಾಕ್ ಎದುರಾಗಿದೆ. ಹಾಲಿನ ದರ ಏರಿಕೆಯಾದ ನಂತರ ಹೊಟೆಲ್ ತಿನಿಸುಗಳ ಬೆಲೆ ಹೆಚ್ಚಾಗುವುದೇ ಆದರೆ ಅನಿವಾರ್ಯವಾಗಿದೆ. ಹಾಲು ಖರ್ಚುಗಳಲ್ಲಿ ಏರಿಕೆ ಸಂಭವಿಸುವುದರಿಂದ, ಇದು ಹೊಟೆಲ್ ಮಾಲೀಕರು ಮತ್ತು ಗ್ರಾಹಕರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೊಟೆಲ್ ಮಾಲೀಕರು ಬೆಲೆ ಏರಿಕೆಯ ನಿರ್ಧಾರವನ್ನು ತಗೆದುಕೊಂಡಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ವಿದ್ಯುತ್, ಪ್ರಯಾಣ, ಹಾಲಿನ ದರ ಏರಿಕೆಯಿಂದ ನಷ್ಟವಾಗುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು ಇದೀಗ ತಿನಿಸುಗಳ ಬೆಲೆ ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ಈ ನಿರ್ಧಾರವನ್ನು ಮಾಡಿದ್ದೇವೆ ಎಮದು ಹೇಳಿದ್ದಾರೆ.
ನಂದಿನ ಹಾಲು, ಮೊಸರು ದರ ಏರಿಕೆಯೂ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತವನ್ನು ತಂದಿದೆ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರು ಹೋಟೆಲ್ ಮಾಲೀಕರು ಇದೀಗ ಕಾಫಿ, ತಿಂಡಿ, ಊಟ ಸೇರಿದಂತೆ ಹೋಟೆಲ್ ತಿನಿಸುಗಳ ಬೆಲೆ ಏರಿಕೆಗೆ ಮಾಡಲು ಸಿದ್ದರಾಗಿದ್ದಾಋಎ
ವಿದ್ಯುತ್ ಹಾಗೂ ಹಾಲು ಹೋಟೆಲ್ ಉದ್ಯಮದ ಜೀವಾಳ ಆದರೆ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲು,ಮೊಸರಿಗೆ 4 ರೂ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಪ್ರತಿ ಯೂನಿಟ್ 36 ಪೈಸೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಇದು ನೇರವಾಗಿ ಹೋಟೆಲ್ ಉದ್ಯಮವನ್ನು ನಷ್ಟ ಹಾದಿಯಲ್ಲಿ ಇಟ್ಟಿದೆ. ಆದರೆ ಇವರೆರಡ ಬೆಲೆ ಏರಿಕೆ ಹೋಟೆಲ್ ಉದ್ಯಮವನ್ನು ಮತ್ತಷ್ಟು ಕಷ್ಟವನ್ನು ತಂದಿದೆ ಎಂದು ಹೋಟೆಲ್ ಮಾಲೀಕರು ಕಳವಳವನ್ನು ತೊಡಿಕೊಂಡಿದ್ದಾರೆ.
ಅತೀ ಶೀಘ್ರದಲ್ಲೇ ಸಭೆ
ಹೋಟೆಲ್ ನಲ್ಲಿ ಸಿಗುವ ಟೀ,ಕಾಫಿ, ತಿಂಡಿ,ಊಟ ದರ ಪರಿಷ್ಕರಣೆ ಗೆ ಚಿಂತನೆಯನ್ನು ಮಾಡಲಾಗುತ್ತಿದೆ. ಈ ಕುರಿತು ಅತೀ ಶೀಘ್ರದಲ್ಲೇ ಹೋಟೆಲ್ ಮಾಲೀಕರ ಸಂಘ ಸಭೆ ನಡೆಸಿ ಅಂತಿಮ ತಿರ್ಮಾನವನ್ನು ಕೈಗೊಳ್ಳಲಾಗಿದೆ. ಹೋಟೆಲ್ ಮಾಲೀಕರ ಸಂಘದ ಪ್ರಕಾರ ಶೇ.10 ರಿಂದ 15 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್ ತಿಂಗಳಲ್ಲೇ ಪರಿಷ್ಕೃತ ದರ ಜಾರಿಯಾಗಲಿದೆ.
ಹಾಲು, ವಿದ್ಯುತ್, ಅಡುಗೆ ಅನಿಲ ಸಿಲಿಂಡರ್ ದರಗಳಲ್ಲಿ ಹೆಚ್ಚಳವು ಹೋಟೆಲ್ ಉದ್ಯಮವನ್ನು ಹೆಚ್ಚಿನ ಪ್ರಭಾವನ್ನು ಬೀರುತ್ತಿದೆ. ಇವುಗಳು ಮುಖ್ಯವಾಗಿ ಹೋಟೆಲ್ ವ್ಯವಹಾರದಲ್ಲಿ ಬಳಸುವ ಮೂಲಭೂತ ವಸ್ತುಗಳು, ಮತ್ತು ಅವರ ದರ ಏರಿಕೆಯಿಂದ ಹೊಟೆಲ್ ಮಾಲೀಕರು ತಮ್ಮ ಸೇವೆಗಳ ಬೆಲೆಯನ್ನು ಹೆಚ್ಚಿಸದಿದ್ದರೆ, ತಮ್ಮ ಲಾಭವನ್ನು ಪಡುಕೊಳ್ಳವಲ್ಲಿ ವಿಫಲರಾಗುತ್ತಾರೆ.
ಹೋಟೆಲ್ ಮಾಲೀಕರು ಶೇ. 10-15 ರಷ್ಟು ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆಯು ಇದೆ. ಇದರಿಂದ ಗ್ರಾಹಕ ಜೇಬಿಗೆ ಮತ್ತೆ ಕತ್ತರಿ ಬೀಳುತ್ತದೆ. ಹೋಟೆಲ್ ಉದ್ಯಮದಲ್ಲಿ ಇಂತಹ ಬೆಲೆ ಏರಿಕೆಯಿಂದ ನೇರವಾಗಿ ವ್ಯಾಪಾರದಲ್ಲಿ ಕುಸಿತ ಕಾಣಬಹುದು, ಏಕೆಂದರೆ ಗ್ರಾಹಕರು ಹೆಚ್ಚಿದ ಬೆಲೆ ಇದ್ದ ಕಡಿಗೆ ಹೋಗುವುದನ್ನು ಕಡಿಮೆ ಮಾಡಬಹುದು.
ಬೆಲೆ ಏರಿಕೆಯಿಂದ ನೇರವಾಗಿ ಹೋಟೆಲ್ ಉದ್ಯಮ ವ್ಯಾಪಾರ ವಹಿವಾಟಿನಲ್ಲಿ ಕುಸಿತವಾಗುತ್ತದೆ ಎಂದು ಹೊಟೇಲ್ ಮಾಲೀಕರು ಹೇಳಿದ್ದಾರೆ.


Click it and Unblock the Notifications