ಕೇಂದ್ರ ಸರ್ಕಾರ ನೀಡಿರುವ ಪರಿಷ್ಕೃತ ವಿತರಣಾ ವಲಯ ಯೋಜನೆ ಅಡಿಯಲ್ಲಿ, ರಾಜ್ಯಗಳು ವಿದ್ಯುತ್ ಸ್ಮಾರ್ಟ್ ಮೀಟರ್ಗಳ ಅಳವಡಿಕೆಗೆ ಶೇ. 15 ರಷ್ಟು ಸಬ್ಸಿಡಿ ಪಡೆಯಲು ಅರ್ಹವಾಗಿರುತ್ತವೆ. ಆದರೆ ಕರ್ನಾಟಕ ಸರ್ಕಾರಕ್ಕೆ ಅದರ ಭಾಗ್ಯವಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರವಲ್ಲ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯವೂ ಮಾಡುತ್ತಿಲ್ಲ. ಆದರೂ ಏಕೆ ಸಬ್ಸಿಡಿ ವಿಚಾರದಲ್ಲಿ ನಿರಾಸೆಯಾಗುತ್ತಿದೆ ಎಂದರೆ, ಇದಕ್ಕೆ ಕಾರಣ ಸರ್ಕಾರಿ ಇಲಾಖೆಗಳು.

ಹೌದು, ಕರ್ನಾಟಕದಲ್ಲಿರುವ ಸರ್ಕಾರಿ ಇಲಾಖೆಗಳು ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳಿಗೆ) ಪಾವತಿಸಬೇಕಾದ ₹8,500 ಕೋಟಿ ಬಾಕಿ ಉಳಿಸಿಕೊಂಡಿವೆ. ಈ ಕಾರಣದಿಂದ ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಮೀಟರ್ಗಳ ಮೇಲಿನ ಸಬ್ಸಿಡಿ ಸಿಗುತ್ತಿಲ್ಲ. ಕೇಂದ್ರದ ನಿಯಮ ಪ್ರಕಾರ, ರಾಜ್ಯ ಸರ್ಕಾರಗಳು ಎಸ್ಕಾಂಗಳಿಗೆ ಬಾಕಿ ಮೊತ್ತ ಹೊಂದಿದ್ದರೆ, ಕೇಂದ್ರ ಸರ್ಕಾರ SGST ಹಿಂತಿರುಗಿಸುವ ಮೊತ್ತದಿಂದ ಅದನ್ನು ಕಡಿತಗೊಳಿಸುತ್ತದೆ. ಆದರೆ ಕರ್ನಾಟಕ ಸರ್ಕಾರ ಈ ಆಯ್ಕೆಯನ್ನು ನಿರಾಕರಿಸಿದೆ, ಇದರಿಂದ ರಾಜ್ಯ RDSS ಯೋಜನೆಯಿಂದ ಹೊರಗುಳಿಯಿತು.
ಇನ್ನು ಕೇಂದ್ರ ಸರ್ಕಾರವು ಪರಿಷ್ಕೃತ ವಿತರಣಾ ವಲಯ ಯೋಜನೆಯಡಿಯಲ್ಲಿ, ಸ್ಮಾರ್ಟ್ ಮೀಟರ್ ಅಳವಡಿಸಲು ಪ್ರತಿ ಗ್ರಾಹಕರಿಗೆ ಗರಿಷ್ಠ ₹900 ರೂ.ಗಳ ಸಬ್ಸಿಡಿ ನೀಡುತ್ತಿದೆ. ಇಂಧನ ಇಲಾಖೆಯ ಪ್ರಕಾರ, ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆಗಳು ಒಟ್ಟು ₹8,500 ಕೋಟಿ ರೂ.ಗಳಷ್ಟು ಬಾಕಿ ಉಳಿಸಿಕೊಂಡಿವೆ. ಈ ಕಾರಣದಿಂದ ರಾಜ್ಯವನ್ನು RDSS ಯೋಜನೆಯಿಂದ ಹೊರಗಿಡಲಾಗಿದೆ, ಇದರಿಂದ ಗ್ರಾಹಕರು ಸಬ್ಸಿಡಿ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ.
ಇನ್ನು ಕರ್ನಾಟಕ ಸರ್ಕಾರ RDSS ಯೋಜನೆಯಿಲ್ಲ. ಹೀಗಿದ್ದರೂ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯನ್ನು ಮುಂದುವರಿಸುತ್ತಿದೆ. ಆದರೆ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಕಡ್ಡಾಯವಾಗಿದೆ. ಹಳೆಯ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಆಯ್ಕೆ ಬೇಕಾದರೆ ಮಾತ್ರ ಅಳವಡಿಸಿಕೊಳ್ಳಬಹುದು. ಆದರೆ ಸ್ಮಾರ್ಟ್ ಮೀಟರ್ ಅಳವಡಿಸಲು ₹4,998 ರೂ.ಗಳ ಮುಂಗಡ ಪಾವತಿಸಬೇಕು. ನಿರ್ವಹಣೆಗಾಗಿ ತಿಂಗಳಿಗೆ ₹75 ರೂ.ಗಳ ಶುಲ್ಕ ವಿಧಿಸಲಾಗುತ್ತದೆ, ಇದು ಸಿಮ್ ಕಾರ್ಡ್, ಸರ್ವರ್, ಸಾಫ್ಟ್‌ವೇರ್ ಮತ್ತು ಮೊಬೈಲ್ ಅಪ್ಲಿಕೇಶನ್ ವೆಚ್ಚವನ್ನು ಒಳಗೊಂಡಿರುತ್ತದೆ.
ಇನ್ನು ಸ್ಮಾರ್ಟ್ ಮೀಟರ್‍ಗೆ 10 ವರ್ಷಗಳಲ್ಲಿ ಒಟ್ಟು ₹13,920 ರೂ. ವ್ಯಯವಾಗಲಿದೆ. ಈ ಪೈಕಿ ₹4,998 ರೂ. ಮುಂಗಡ ಪಾವತಿಸಲಾಗುವುದು, ಉಳಿದ ₹9,000 ರೂ.ಗಳನ್ನು ಹಂತ ಹಂತವಾಗಿ ವಸೂಲಿ ಮಾಡಲಾಗುತ್ತದೆ. ಒಂದು ವೇಳೆ ಕರ್ನಾಟಕ ಸರ್ಕಾರದಲ್ಲಿ RDSS ಯೋಜನೆಯನ್ನು ಅನುಮೋದಿಸಿದ್ದರೆ, ಪ್ರತಿ ಗ್ರಾಹಕರು ₹4,998 ಮೀಟರ್ ವೆಚ್ಚದಲ್ಲಿ ₹900 ರೂ. ಸಬ್ಸಿಡಿ ಪಡೆಯುವ ಅವಕಾಶವಿತ್ತ. ಇದರಿಂದ ಮೀಟರ್ ಅಳವಡಿಕೆ ಖರ್ಚು ಕಡಿಮೆಯಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಬಾಕಿ ಮೊತ್ತ ತೀರಿಸದ ಕಾರಣ, ಈ ಸಬ್ಸಿಡಿ ಸಿಗದ ಪರಿಸ್ಥಿತಿ ಉಂಟಾಗಿದೆ.
ಇನ್ನು ಸ್ಮಾರ್ಟ್ ಮೀಟರ್ಗಳ ಅಳವಡಿಕೆಗೆ ಹೆಚ್ಚುವರಿ ಹಣ ಭರಿಸುತ್ತಿರುವುದರಿಂದ, ಜನರಲ್ಲಿ ಸ್ವಲ್ಪ ಅಸಮಾಧಾನ ಮೂಡಿದೆ. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಾಗುತ್ತಿರುವುದರಿಂದ, ಹೆಚ್ಚುವರಿ ₹4,998 ಮೀಟರ್‌ಗಳಿಗಾಗಿ ಪಾವತಿಸುವುದು ಹಲವರಿಗೆ ಭಾರವಾಗಿದೆ. ಸರ್ಕಾರವು ಈ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ.
ಒಂದು ವೇಳೆ ಕರ್ನಾಟಕ ಸರ್ಕಾರ ಉಳಿಸಿಕೊಂಡಿರುವ ಬಾಕಿಯನ್ನು ತ್ವರಿತವಾಗಿ ತೆರವುಗೊಳಿಸಿದರೆ, RDSS ಸಬ್ಸಿಡಿಯನ್ನು ಪುನಃ ಪಡೆಯಲು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಗ್ರಾಹಕರು ಸಂಪೂರ್ಣ ವೆಚ್ಚವನ್ನು ಪಾವತಿಸಲು ಒತ್ತಡಕ್ಕೊಳಗಾಗಲಿದ್ದಾರೆ. ಈಗ ನಿವಾಸಿಗಳ ಮುಂದಿರುವ ಆಯ್ಕೆ ಒಂದೇ, ಸ್ಮಾರ್ಟ್ ಮೀಟರ್ ಬಳಕೆಗೊಳಿಸುವುದು, ಆದರೆ ಹೆಚ್ಚಿನ ವೆಚ್ಚ ಭರಿಸುವುದು. ಇದರಿಂದ ವಿದ್ಯುತ್ ಸೇವೆಯಲ್ಲಿ ದೋಷರಹಿತತೆ ಮತ್ತು ಪಾರದರ್ಶಕತೆ ಬರುತ್ತದೆ, ಆದರೆ ಖರ್ಚು ಹೆಚ್ಚಾಗಲಿದೆ. ಸಮರ್ಥ ನಿರ್ವಹಣಾ ನೀತಿಗಳು ಮತ್ತು ಬಾಕಿ ತೆರವುಗೊಳಿಸುವ ಪ್ರಕ್ರಿಯೆ ಸರಿಯಾಗಿ ನಡೆಯುವುದಾದರೆ, ಜನರು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆ ಪಡೆಯಲು ಸಾಧ್ಯ.


Click it and Unblock the Notifications