ಬೇಸಿಗೆಯ ಧಗೆ ಎಲ್ಲೆಡೆ ಹೆಚ್ಚಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ಕೊಂಚ ಹೆಚ್ಚಾಗಿಯೇ ಇದೆ. ಬೆಂಗಳೂರಿನ ಬಿಸಿಲಿನ ಬಗ್ಗೆ ಕೇಳಿದ್ರೇನೆ ಸುಸ್ತಾಗುತ್ತದೆ. ಅಷ್ಟಿದೆ ಬೆಂಗಳೂರಿನ ರಣಬಿಸಿಲು. ಬೆಳಗ್ಗೆ ಹತ್ತು ಗಂಟೆ ಮೇಲೆ ಮನೆಯಿಂದ ಹೊರಗೆ ಹೋಗೋಕೇ ಕಷ್ಟ. ಹವಾಮಾನದಲ್ಲಿ ಅತಿಹೆಚ್ಚು ವೈಪರೀತ್ಯ ಕಾಣುತ್ತಿರುವ ಕಾರಣದಿಂದ, ಈ ಬಾರಿ ಪೂರ್ವ ಮುಂಗಾರಿನಲ್ಲಿ ಕರ್ನಾಟಕದಾದ್ಯಂತ ಅತಿಹೆಚ್ಚು ಮಳೆಯಾಗಲಿದೆ ಎನ್ನಲಾಗುತ್ತಿದೆ.

ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಈ ತಿಂಗಳಲ್ಲಿ..ಅಂದರೆ ಫೆಬ್ರವರಿಯಲ್ಲಿ ಸಾಮಾನ್ಯಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ತಾಪಮಾನವು ಹೆಚ್ಚಾಗಿದೆ. ಹೀಗಾಗಿ ಪೂರ್ವ ಮುಂಗಾರಿನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಈಗಾಗಲೇ ಮುನ್ನೆಚ್ಚರಿಕೆ ಸಿಕ್ಕಿರುವ ಕಾರಣ ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಲು..ಅಂದರೆ ಮುಂಗಾರು ಋತುಗಳು, ಕೃಷಿ, ಕುಡಿಯುವ ನೀರು ಸರಬರಾಜು, ಹವಾಮಾನ ಪರಿಸ್ಥಿತಿಗಳು ಮತ್ತು ಜಲಾಶಯದ ನೀರಿನ ಮಟ್ಟಗಳ ಕುರಿತು ಚರ್ಚಿಸಲು ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ, ಅಧ್ಯಕ್ಷತೆಯಲ್ಲಿ ಗುರುವಾರ ಸಂಪುಟ ಉಪಸಮಿತಿ ರಚನೆಯಾಯಿತು.
ಕುಡಿಯುವ ನೀರಿನ ಬಗ್ಗೆ ಕಂದಾಯ ಸಚಿವರೇಳಿದ್ದೇನು..?
ರಾಜ್ಯಾದ್ಯಂತ ಯಾರಿಗೂ ನೀರಿನ ಕೊರತೆ ಉಂಟಾಗಬಾರದು. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ, ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ರಾಜ್ಯದ 14 ಪ್ರಮುಖ ಜಲಾಶಯಗಳು ಸದ್ಯ 535.21 ಟಿಎಂಸಿ ನೀರನ್ನು ಹೊಂದಿವೆ. ಇದು ಸರಾಸರಿ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 60%ನಷ್ಟು ನೀರಿದೆ ಎನ್ನಲಾಗುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ, ನೀರಿನ ಸಂಗ್ರಹವು 332.52 ಟಿಎಂಸಿ ಆಗಿತ್ತು ಎಂದಿದ್ದಾರೆ.
ಇನ್ನು ಪ್ರಮುಖ ಜಲಾಶಯಗಳಲ್ಲಿ ಈಗ ಇರುವ ನೀರಿನ ಸಂಗ್ರಹವನ್ನು ಕೂಡ, ಈಗಾಗಲೇ ಸಹ ಸಂಪುಟ ಉಪಸಮಿತಿ ಪರಿಶೀಲನೆ ನಡೆಸಿದೆ. ಕೆಲವು ಜಲಾಶಯಗಳಲ್ಲಿರುವ ನೀರಿನ ಮಟ್ಟವು ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ಕೂಡ ವ್ಯಕ್ತವಾಗಿದೆ. ಹೀಗಾಗಿ ನೀರಾವರಿ ಅವಶ್ಯಕತೆಗಳು ಮತ್ತು ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರುವ ನೀರನ್ನು ನಿರ್ವಹಿಸಬೇಕೆಂದು ಒತ್ತಿ ಹೇಳಿದ್ದಾರೆ.
ಇನ್ನು ಮುಬರುವ ಮುಂಬರುವ ತಿಂಗಳುಗಳ ವರದಿಯನ್ನು ಸಿದ್ಧಗೊಳಿಸುವಂತೆ, ಜಲಸಂಪನ್ಮೂಲ ಇಲಾಖೆಗೆ ಈಗಾಗಲೇ ತಿಳಿಸಲಾಗಿದೆ. ಮುಖ್ಯವಾಗಿ ಯಾವುದೇ ನೀರನ್ನು ಬಿಡುಗಡೆ ಮಾಡುವ ಮೊದಲು ಕುಡಿಯುವ ನೀರಿನ ಅಗತ್ಯಗಳಿಗೆ ಆದ್ಯತೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಎಂದು ತಿಳಿಸಲಾಗಿದೆ.
ಹಾಗೆಯೇ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ನೀರಿನ ಗುಣಮಟ್ಟ ಕುಸಿಯುತ್ತಿರುವುದರಿಂದ ಟ್ಯಾಂಕರ್‍ಗಳು ಮತ್ತು ಬೋರ್ವೆಲ್ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗುತ್ತದೆ. ಇದೊಂದು ಹಲವು ವರ್ಷಗಳಿಂದ ಉಳಿದುಕೊಂಡಿರುವ ನಿರಂತರ ಪ್ರಕ್ರಿಯೆಯಾಗಿದೆ. ಸದ್ಯ ಈಗ ಐದು ಜಿಲ್ಲೆಗಳಲ್ಲಿ...ಅಂದರೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ, 13 ತಾಲ್ಲೂಕುಗಳಾದ್ಯಂತ 66 ಹಳ್ಳಿಗಳಿಗೆ ಟ್ಯಾಂಕರ್‌ಗಳು ಮತ್ತು ಬೋರ್ವೆಲ್ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವುದಕ್ಕಿಂತ, ಈಗಲೇ ಎಲ್ಲರೂ ಎಚ್ಚರಿಕೆ ತೆಗೆದುಕೊಂಡರೆ ಸಮಸ್ಯೆ ನಿವಾರಿಸಬಹುದಾಗಿದೆ. ಅಲ್ಲದೇ ಸಮಸ್ಯೆಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡಿರುವ ಸಚಿವರು, ಆರ್ಥಿಕ ನಿರ್ಬಂಧಗಳು ಪರಿಹಾರ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ₹ 488.30 ಕೋಟಿ ಲಭ್ಯವಿರುತ್ತದೆ ಎಂದು ಕಂದಾಯ ಸಚಿವರು ಉಲ್ಲೇಖಿಸಿದ್ದಾರೆ .


Click it and Unblock the Notifications