K-RERA..ಅಂದರೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ..ಈ ಪ್ರಾಧಿಕಾರವನ್ನು ಆರಂಭಿಸಿದಾಗ ಮನೆ ಖರೀದಿದಾರರ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ವಾಸ್ತುಶಿಲ್ಪ ಅಭಿವೃದ್ಧಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಉದ್ದೇಶದ ಮೂಲಕ ಇದು ಅಚ್ಚರಿ ಮೂಡಿಸಿತ್ತು. ಆದರೆ ವಾಸ್ತವದಲ್ಲಿ ಈ ಗುರಿ ನಿರ್ವಹಣೆಯಾಗದಂತೆ ಕಾಣುತ್ತಿದೆ.. ಈ ನಿಯಂತ್ರಣ ಸಂಸ್ಥೆ ಪ್ರಾಮಾಣಿಕತೆಯನ್ನು ಹೆಚ್ಚಿಸುವುದಕ್ಕಿಂತ, ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.

ಅಂದರೆ, ಕೆ-ರೇರಾ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವಂತೆ ಕಾಣುತ್ತಿದೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ನೋಡಬಹುದು. ಅಧಿಕೃತ ವೆಬ್‌ಸೈಟ್ ಪ್ರಕಾರ ,678 ವಸತಿ ಯೋಜನೆಗಳು ನಿಗದಿತ ವೇಳಾಪಟ್ಟಿಯಂತೆ ಪೂರ್ಣಗೊಳ್ಳದೆ ವಿಳಂಬಗೊಂಡಿವೆ ಎನ್ನಲಾಗುತ್ತಿದೆ. ಇದು ಕಟ್ಟಡ ನಿರ್ಮಾಣದ ನಿರ್ವಹಣಾ ದೋಷಗಳನ್ನು ಮಾತ್ರವಲ್ಲ, ಮನೆ ಖರೀದಿದಾರರ ಆರ್ಥಿಕ ಪರಿಸ್ಥಿತಿಯ ಮೇಲೂ ಭಾರಿ ಪರಿಣಾಮ ಬೀರುತ್ತದೆ. ವಾಸ್ತವದಲ್ಲಿ, ಮನೆ ಖರೀದಿದಾರರು ನೀಡಿದ ಹಣಕ್ಕೆ ತಕ್ಕಂತೆ ತಮ್ಮ ಆಸ್ತಿಗಳನ್ನು ಸ್ವೀಕರಿಸದೆ ವರ್ಷಗಟ್ಟಲೆ ಕಾಯುವಂತಹ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಗೃಹ ಯೋಜನೆಗಳ ವಿಳಂಬದಿಂದ, ಅನೇಕ ಮಂದಿ ಮನೆ ಖರೀದಿದಾರರು ಸಂಕಷ್ಟಕೊಳಗಾಗಿದ್ದಾರೆ. ತಮ್ಮ ಬದುಕಿನ ಹಂಗಾಮಿಯಾದ ಉಳಿತಾಯವನ್ನು ಹೂಡಿಕೆ ಮಾಡಿರುವ ಈ ಯೋಜನೆಗಳು, ನಿರೀಕ್ಷಿತ ಗಡುವಿಗೆ ಪೂರ್ಣಗೊಳ್ಳದೇ ಇರುವುದರಿಂದ ಅವರು ದುಪ್ಪಟ್ಟಿಯಾಗಿ ಹಾನಿಗೊಳಗಾಗುತ್ತಿದ್ದಾರೆ. ಅಷ್ಟೋ ಇಷ್ಟು ಹಣ ಕೂಡಿಟ್ಟು, ಒಂದಿಷ್ಟು ಸಾಲ ಮಾಡಿಕೊಂಡು ಮನೆಯ ಕನಸಲ್ಲಿದ್ದವರಿಗೆ ನಿರಾಸೆಯಾದಂತೆ ಕಾನುತ್ತೊದೆ. ಈಗಾಗಲೇ ಇರುವ ಆರ್ಥಿಕ ಬಾಧ್ಯತೆಗಳ ಜೊತೆಗೆ, ಸಾಲದ ಬಡ್ಡಿಯನ್ನು ತೀರಿಸುವ ಹೊರೆ ಹೆಚ್ಚುತ್ತಿದೆ. ಈ ಬಗ್ಗೆ ಅನೇಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಡಿಜಿಟಲ್ ಸೌಟ್ ಟ್ರಸ್ಟ್‌ನ ಸಂಸ್ಥಾಪಕ ಸುಧಾಕರ್ ಲಕ್ಷ್ಮಣರಾಜ ಅವರು ಗಮನಹರಿಸಿದ್ದಾರೆ. ಇದಕ್ಕೊಂದು ಪರಿಹಾರ ನೀಡುವ ಸಲುವಾಗಿ, ಕರ್ನಾಟಕದ ವಸತಿ ಅಭಿವೃದ್ಧಿ ಸಂಸ್ಥೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಪತ್ರದಲ್ಲಿ ಏನಿದೆ ಎಂದರೆ ವಸತಿ ನಿರ್ಮಾಣ ಮಾಡುವವರು ಯೋಜನೆಗಳನ್ನು ಪೂರ್ಣಗೊಳಿಸದಿದ್ದರೂ, ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ದೋಷಿತವಾಗಿ ಮಾಪನೀಯವಾಗಿದೆ ಎಂಬ ಗಂಭೀರ ಆರೋಪಗಳಿವೆ.
ಅಂದಹಾಗೆ ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ, ವಸತಿ ಇಲಾಖೆ, ಮತ್ತು ಕೆ-ರೇರಾ ಈ ವಂಚಕರು ಎನ್ನಲಾದ ಬಿಲ್ಡರ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ನೀಡದೇ ಮೌನ ವಹಿಸಿದ್ದಾರೆ. ಇದರಿಂದ ಮನೆ ಖರೀದಿದಾರರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೆ ಇದ್ದರೆ, ಈ ಕ್ಷೇತ್ರವು ಸಂಪೂರ್ಣ ವಿಫಲವಾಗುವ ಭೀತಿ ಇದೆ ಎಂದು ಪತ್ರದ ಮೂಲಕ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇತ್ತ ಮನೆ ಖರೀದಿದಾರರು ತಮ್ಮ ಕನಸಿನ ಮನೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಆದರೆ ಇದರ ನಡುವೆಯೇ ರಾಜ್ಯದಾದ್ಯಂತ 30,000 ಕ್ಕೂ ಹೆಚ್ಚು ವಸತಿ ಘಟಕಗಳು ಇನ್ನೂ ಅಪೂರ್ಣವಾಗಿವೆ ಎಂಬ ಮಾಹಿತಿ ಹೊರ ಬಿದಿದ್ದು, ಮುಂದೇನು ಗತಿ ಎಂಬ ಅನುಮಾನ ಕಾಡುತ್ತಿದೆ. ಇದಲ್ಲದೇ ಅನೇಕ ಮಂದಿ ತಮ್ಮ ಹೂಡಿಕೆಯನ್ನಾದರೂ ವಾಪಸ್ ಪಡೆಯೋಣವೆಂದು ಹಪಹಪಿಸುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಬ್ಯಾಂಕುಗಳು, ನಿರ್ಮಾಪಕರ ಪರವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕರ್ನಾಟಕ ಮನೆ ಖರೀದಿದಾರರ ವೇದಿಕೆಯ ಸಂಚಾಲಕ ಧನಂಜಯ ಪದ್ಮನಾಭಾಚಾರ್ ಈ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಇದನ್ನು ತಕ್ಷಣ ಗಮನಿಸಿ, ಸಿಬಿಐ ತನಿಖೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಲ್ಡರ್‌ಗಳು ಮನೆ ಖರೀದಿದಾರರ ಒಪ್ಪಿಗೆಯಿಲ್ಲದೆ ಒಪ್ಪಂದವನ್ನು ರದ್ದುಗೊಳಿಸುತ್ತಿದ್ದಾರೆ, ಸುಪ್ರೀಂ ಕೋರ್ಟ್ ಆದೇಶಗಳನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಎಲ್ಲಾ ಅನೌಚಿತ್ಯಗಳನ್ನು ತಡೆಯಲು ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾನೂನು ಕ್ರಮಗಳು ಅಗತ್ಯವಿವೆ ಎಂದು ಅವರು ಹೇಳಿದ್ದಾರೆ.
ಇನ್ನು ಕೆ-ರೇರಾ ಪ್ರಾರಂಭವಾದಾಗ, ಮನೆ ಖರೀದಿದಾರರ ಹಕ್ಕುಗಳು ಪೋಷಿತವಾಗುವುದೆಂದು ಭರವಸೆ ನೀಡಲಾಗಿತ್ತು. ಆದರೆ, ವರ್ಷಗಳ ನಂತರವೂ ಮನೆ ಖರೀದಿದಾರರು ಇನ್ನೂ ನ್ಯಾಯಕ್ಕಾಗಿ ಕಾದು ಕಾದು ಕುಳಿತು ಕಂಗಾಲಾಗಿರುವ ಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಬದಲಿಸಲು ತಕ್ಷಣ ಕ್ರಮ ಅಗತ್ಯ. ಸರ್ಕಾರವು ಡೆವಲಪರ್‌ಗಳ ಮೇಲೆ ನಿಯಂತ್ರಣ ತರಲು ಸೂಕ್ತ ಮೆಕಾನಿಸಂ ರೂಪಿಸಿ, ಈ ಯೋಜನೆಗಳ ಮೇಲ್ವಿಚಾರಣೆಗೆ ಸಮರ್ಪಕ ವಹಿವಾಟು ಜಾರಿಗೆ ತರಬೇಕು. ಈ ದಿಕ್ಕಿನಲ್ಲಿ ಪ್ರಾಮಾಣಿಕವಾದ ನಿರ್ಧಾರಗಳು ಕೈಗೊಳ್ಳಲಾಗದಿದ್ದರೆ, ಮನೆ ಖರೀದಿದಾರರ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುವುದು ಮಾತ್ರವಲ್ಲ, ವಸತಿ ಕ್ಷೇತ್ರದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವ ಸಂಭವವಿದೆ.


Click it and Unblock the Notifications