ಇತ್ತೀಚಿಗೆ ಸ್ಟಾಕ್ ಎಕ್ಸ್‌ಚೇಂಜ್ ವರದಿಯೊಂದು ಬಂದಿತ್ತು. ಈ ವರದಿಯನ್ನು ಕರ್ನಾಟಕ ಸರ್ಕಾರ ತಳ್ಳಿ ಹಾಕಿದೆ. ಅಕ್ಟೋಬರ್ 21 ರಂದು ನೀಡಿದ ವರದಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಜಿಡಿಪಿ ದರವು ಕಡಿಮೆ ಆಗಿತ್ತು ಎಂದು ವರದಿ ಮಾಡಿದೆ. ಕಳೆದ ವರ್ಷ 13.1 ರಷ್ಟಿದ ದರ ಈ ವರ್ಷ 9.4ಕ್ಕೆ ಕುಸಿದಿದೆ ಎಂದು ವರದಿ ಮಾಡಿತ್ತು. ಈ ವರದಿಯನ್ನು ಸರ್ಕಾರ ತಳ್ಳಿ ಹಾಕಿದೆ.
ಪ್ರಸಕ್ತ ಹಣಕಾಸು ಸಾಲಿಗೆ ಎನ್‌ಎಸ್‌ಸಿ ರಾಜ್ಯ 9.4 ರಷ್ಟು ಜೆಎಸ್‌ಡಿಪಿ ಪ್ರಗತಿಯನ್ನು ಹೊಂದಲಿದೆ ಎಂದು ಅಂದಾಜಿಸಿದೆ. ಇದು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕಡಿಮೆ ಆಗಿದೆ. ರಾಷ್ಟ್ರೀಯ ಸರಾಸರಿ 10.5 ಆಗಿದೆ. ಆದರೆ ಕರ್ನಾಟಕದ ಸರ್ಕಾರ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಜಿಎಸ್‌ಡಿಪಿ ದರವನ್ನು ಶೇ 14 ಎಂದು ಅಂದಾಜಿಸಿದೆ.

ರಾಜ್ಯದ ಜಿಎಸ್‌ಡಿಪಿ ಏರಿಕೆ
ಕರ್ನಾಟಕ ರಾಜ್ಯವು ದೇಶದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ರಾಜ್ಯದಲ್ಲಿ ಇರುವ ಹಲವು ಸವಾಲುಗಳ ನಡುವೆ ಜಿಎಸ್‌ಡಿಪಿ ಬೆಳವಣಿಗೆ ನಿರಂತರವಾಗಿ ಏರುಗತಿಯಲ್ಲಿದೆ. ಆದರೆ ರಾಷ್ಟ್ರೀಯ ಸರಾಸರಿಗಿಂತ ನಮ್ಮ ಜಿಎಸ್‌ಡಿಪಿ ಹಿಂದೆ ಬಿದ್ದಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ರಾಜ್ಯ ಸರ್ಕಾರದ ಬೆಳವಣಿಗೆ ಪರವಾದ ನೀತಿಗಳು ಆರ್ಥಿಕತೆ ಉತ್ತೇಜನವನ್ನು ನೀಡುತ್ತಿವೆ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
2023-24ನೇ ಸಾಲಿನಲ್ಲಿ ಕರ್ನಾಟಕ ಶೇಕಡಾ 4ರಷ್ಟು ಜಿಎಸ್‌ಡಿಪಿ ಬೆಳವಣಿಗೆ ಯೋಚಿಸಿತ್ತು. ಆದರೆ ವರ್ಷದ ಅಂತ್ಯಕ್ಕೆ ಈ ದರ 13.1ಕ್ಕೆ ಏರಿಕೆ ಆಗಿದೆ. ಈ ವ್ಯತ್ಯಾಸವು ಮಾಪನದಲ್ಲಿ ಆದ ದೋಷವನ್ನು ಎತ್ತಿ ತೋರಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಜೆಎಸ್‌ಡಿಪಿ 10.2 ರಷ್ಟಿದೆ. ಇದು ರಾಷ್ಟ್ರೀಯ ಬೆಳವಣಿಗೆ ಸರಾಸರಿಗಿಂತ ಮಿಗಿಲಾಗಿದೆ. ರಾಜ್ಯ ಎದುರಿಸಿರುವ ಸವಾಲುಗಳನ್ನು ನೋಡಿದರೆ ಈ ಸಾಧನೆ ಹೆಮ್ಮೆ ತರುತ್ತದೆ. ಐಟಿ ಹಾಗೂ ಬರ ಸದ್ಯದ ರಾಜ್ಯದ ಸ್ಥಿತಿಯನ್ನು ಕೊಂಚ ಏರು ಪೇರು ಮಾಡಿದೆ ಎಂದು ಎಂದು ಸಿಎಂ ಕಾರ್ಯಾಲಯ ಒಪ್ಪಿಕೊಂಡಿದೆ.
ರಾಜ್ಯದಲ್ಲಿ ಬರ
ರಾಜ್ಯ ಕಳೆದ ಒಂದು ದಶಕದಲ್ಲಿ ಕಾಣದಂತ ಬರಗಾಲಕ್ಕೆ ಸಾಕ್ಷಿಯಾಗಿದೆ. ಇದು ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿದ್ದು, ಉತ್ಪಾದನೆಗೂ ಹೊಡೆತ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ. ಇನ್ನು ತಂತ್ರಜ್ಞಾನ ಹಾಗೂ ಹಾರ್ಡ್‌ವೇರ್ ಕ್ಷೇತ್ರಗಳ ಮೇಲೆ ರಾಜ್ಯ ಹೆಚ್ಚಾಗಿ ಅವಲಂಬಿತವಾಗಿದೆ. ಆದರೆ ಜಾಗತಿಕ ಆರ್ಥಿಕ ಕುಸಿತ ಈ ಕ್ಷೇತ್ರದ ಮೇಲೂ ಪರಿಣಾಮ ಬಿದ್ದಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
ಟೆಕ್ ಬಾಡಿ ನಾಸ್ಕಾಮ್ ಪ್ರಕಾರ, ಭಾರತದ ಉದ್ಯಮ ವಲಯದ ಆದಾಯದ ಬೆಳವಣಿಗೆಯೂ 2022ರಲ್ಲಿ ಶೆಕಡಾ 15.5 ರಷ್ಟಿತ್ತು. 2023ರಲ್ಲಿ ಈ ದರ ಶೇಕಡಾ 8ಕ್ಕೆ ಕುಸಿತ ಕಂಡಿದೆ. ಇದು ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕವಾಗಿ ಹಿನ್ನಡೆ ಅನುಭವಿಸಿದೆ ಎಂದು ವಿವರಿಸಲಾಗಿದೆ.
ಕರ್ನಾಟಕದ ಜಿಎಸ್‌ಡಿಪಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದ್ದು, ನೆರೆಯ ತೆಲಂಗಾಣಕ್ಕೆ ಸಮಾನವಾಗಿದೆ. ಕಾಂಗ್ರೆಸ್ ನೇತೃತ್ವದ ಎರಡೂ ರಾಜ್ಯ ಸರ್ಕಾರಗಳು ಆರ್ಥಿಕತೆಯಲ್ಲಿ ಪ್ರಗತಿ ಪ್ರದರ್ಶಿಸುತ್ತಿವೆ. ಕರ್ನಾಟಕದ ಜನಪರ ನೀತಿಗಳಾದ ಗ್ಯಾರಂಟಿಗಳು, ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕರನ್ನು ತಲುಪುತ್ತಿವೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.


Click it and Unblock the Notifications