ಸಾರಿಗೆ ಇಲಾಖೆಯು ಓಲಾ, ಉಬರ್ ಮತ್ತು ಸಾಂಪ್ರದಾಯಿಕ ಟ್ಯಾಕ್ಸಿ ನಿರ್ವಾಹಕರು ನಿರ್ವಹಿಸುವ ಟ್ಯಾಕ್ಸಿಗಳ ದರವನ್ನು ಪರಿಷ್ಕರಿಸಿದೆ. ಇಲಾಖೆಯು 2021 ರಲ್ಲಿ ಪರಿಚಯಿಸಲಾದ ಫ್ಲೆಕ್ಸಿ-ಫೇರ್ ಆಯ್ಕೆಯನ್ನು ತೆಗೆದುಹಾಕಿದೆ. ನಿರ್ವಾಹಕರು ಇನ್ನು ಮುಂದೆ ನಿಗದಿತ ದರಗಳಿಗೆ ಬದ್ಧವಾಗಿರುವುದನ್ನು ಕಡ್ಡಾಯಗೊಳಿಸಿದೆ.
ಶನಿವಾರ ಹೊರಡಿಸಿದ ಆದೇಶದ ಪ್ರಕಾರ, ಈಗ ವಾಹನಗಳ ಬೆಲೆಯನ್ನು ಆಧರಿಸಿ ಮೂರು ವಿಭಾಗಗಳಲ್ಲಿ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. 10 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ವಾಹನಗಳಿಗೆ ಮೊದಲ ನಾಲ್ಕು ಕಿಲೋಮೀಟರ್‌ಗಳಿಗೆ 100 ರೂಪಾಯಿ ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 24 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಎಲ್ಲ ವಾಹನಗಳ ದರ ಇಲ್ಲಿದೆ ಮುಂದೆ ಓದಿ...

ಎಷ್ಟು ದರ ನಿಗದಿ?
10 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗಿನ ಬೆಲೆಯ ವಾಹನಗಳಿಗೆ ಮೊದಲ ನಾಲ್ಕು ಕಿಲೋಮೀಟರ್‌ಗಳಿಗೆ 115 ರೂಪಾಯಿ ನಂತರದ ಪ್ರತಿ ಕಿಲೋಮೀಟರ್‌ಗೆ 28 ರೂಪಾಯಯಿ ವಿಧಿಸಲಾಗುತ್ತದೆ. 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಮೊದಲ ನಾಲ್ಕು ಕಿಲೋಮೀಟರ್‌ಗಳಿಗೆ 130 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 32 ರೂ. ವಿಧಿಸಬಹುದಾಗಿದೆ.
ಇನ್ನು "2021 ರಲ್ಲಿ, ಸಾರಿಗೆ ಇಲಾಖೆಯು ಹೊಂದಿಕೊಳ್ಳುವ ಟ್ಯಾಕ್ಸಿ ದರಗಳನ್ನು ನಿಗದಿಪಡಿಸುವ ಅಧಿಸೂಚನೆಯನ್ನು ಹೊರಡಿಸಿತ್ತು. ಇದನ್ನು ಈಗ ಹಿಂಪಡೆಯಲಾಗಿದೆ ಮತ್ತು ಆರಂಭಿಕ 4 ಕಿಲೋಮೀಟರ್‌ಗಳ ನಂತರ ಪ್ರತಿ ಕಿಲೋಮೀಟರ್‌ಗೆ ನಿಗದಿತ ದರವನ್ನು ವಿಧಿಸಲಾಗಿದೆ," ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ (ಕೆಎಸ್‌ಟಿಎ) ಕಾರ್ಯದರ್ಶಿ ಎಲ್ ಹೇಮಂತ ಕುಮಾರ್ ತಿಳಿಸಿದರು.
"ಟ್ಯಾಕ್ಸಿ ಡ್ರೈವರ್ ಯೂನಿಯನ್‌ಗಳು ಅಥವಾ ಸಂಸ್ಥೆಗಳಿಂದ ಬೇಡಿಕೆಗಳನ್ನು ಅನುಸರಿಸಿ ದರದ ರಚನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ನಿಯಮವು ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳು ಮತ್ತು ಬೆಂಗಳೂರು ಮತ್ತು ರಾಜ್ಯದಾದ್ಯಂತ ಇತರರಿಗೆ ಅನ್ವಯಿಸುತ್ತದೆ," ಎಂದು ಎಲ್ ಹೇಮಂತ ಕುಮಾರ್ ಹೇಳಿದರು.


Click it and Unblock the Notifications