ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ. ಬೆಳಂ ಬೆಳಗ್ಗೆ ಬೆಂಗಳೂರಿನಲ್ಲಿ ಕೂಡ ಭಾರೀ ಮಳೆಯಾಗುತ್ತಿದ್ದು,ಇನ್ನೂ ಮೂರು ದಿನಗಳವರೆಗೂ ಹೀಗೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹೌದು,ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತದೆಯೋ ಅಂತಹ ಜಿಲ್ಲೆಗೆ ರೆಡ್ ಅಲರ್ಟ್ ಹಾಗೂ ಸಾಧಾರಣ ಮಳೆಯಾಗುವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯನ್ನು ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿಯನ್ನು ತಿಳಿಸಿದೆ.

ಬೆಂಗಳೂರಿನಲ್ಲಿ ವರಣಾರ್ಭಟ ಜೋರಾಗಿನೇ ಇದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 103 ಮಿ.ಮೀ ಮಳೆಯಾಗಿ ಬೆಂಗಳೂರಿನ ರಸ್ತೆಗಳು ಅಂತೂ ತುಂಬಿ ಕರೆಗಳಂತೆ ಇವೆ.
ರೆಡ್ ಅಲರ್ಟ್ ಜಿಲ್ಲೆಗಳು (ಅತ್ಯಧಿಕ ಮಳೆಯ ಮುನ್ಸೂಚನೆ):
ಉಡುಪಿ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಚಿಕ್ಕಮಗಳೂರು
ಶಿವಮೊಗ್ಗ
ಬೆಳಗಾವಿ
ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ:
ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ, ಮೀನುಗಾರರುಎರಡು ದಿನಗಳು ಸಮುದ್ರಕ್ಕೆ ಇಳಿಯಬಾರದು ಹಾಗೂ ಕಡಲ ತೀರದ ನಿವಾಸಿಗಳೂ ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಳೆ ಎಚ್ಚರಿಕೆಯನ್ನು ನೀಡಿದೆ
ಸಾರ್ವಜನಿಕರಿಗೆ ಸಲಹೆ:
- ಮಳೆ ಇರುವುವದರಿಂದ ಅನಾವಶ್ಯಕ ಪ್ರಯಾಣವನ್ನು ಮಾಡಬೇಡಿ
- ನೆರೆ ಹರಿವು, ಮುಚ್ಚಿದ ರಸ್ತೆ ಹಾಗೂ ಭದ್ರವಿಲ್ಲದ ಕಟ್ಟಡಗಳಿಂದ ದೂರವಿರಿ.
- ಆರೋಗ್ಯ ಇಲಾಖೆ ನೀಡುವಂತಹ ಸೂಚನೆಗಳನ್ನು ಚಾಚು ತಪ್ಪದೇ ಪಾಲನೆಯನ್ನು ಮಾಡಿ.
ಆರೆಂಜ್ ಅಲರ್ಟ್ ಜಿಲ್ಲೆಗಳು (ಭಾರೀ ಮಳೆ)
ಬಾಗಲಕೋಟೆ
ಬೆಳಗಾವಿ
ಧಾರವಾಡ
ಚಿಕ್ಕಮಗಳೂರು
ಹಾಸನ
ಕೊಡಗು
ಶಿವಮೊಗ್ಗ
ಈ ಜಿಲ್ಲೆಗಳಲ್ಲಿ ಭಾರೀ ಮಳೆ ಇರಬಹುದೆಂಬ ಮುನ್ಸೂಚನೆಯಿಂದ, ಸಾರ್ವಜನಿಕರು ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಯನ್ನು ಮಾಡಿದೆ.
ಯೆಲ್ಲೋ ಅಲರ್ಟ್ ಜಿಲ್ಲೆಗಳು (ಭಾರಿ ಮಳೆ + ಗುಡುಗು-ಮಿಂಚು)
ಮುಂದಿನ ಐದು ದಿನಗಳ ಕಾಲ, ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಣೆಯನ್ನು ಮಾಡಲಾಗಿದೆ.
ಬೆಂಗಳೂರು ನಗರದ ಮಳೆ ಪರಿಸ್ಥಿತಿ
ಇಂದು ಬೆಳಗ್ಗಿನಿಂದಲೇ ವ್ಯಾಪಕ ಮಳೆ ಮುಂದುವರಿದಿದೆ. ಈಗಾಗಲೇ ಬಂದ ಮಳೆಯ ಪರಿಣಾಮವಾಗಿ ನಗರದಲ್ಲಿ ಕೆಲವೆಡೆ ಜಲಾವೃತ, ರಸ್ತೆ ಜಾಮ್, ಮತ್ತು ವಿದ್ಯುತ್ ವ್ಯತ್ಯಯ ಸಮಸ್ಯೆಗಳು ಎದುರಾಗುತ್ತಿವೆ.
ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನಕ್ಕೆ ತೊಂದರೆಯಾಗುತ್ತಿದೆ. ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.
ಬಿಬಿಎಂಪಿ (BBMP) ಕ್ರಮಗಳು
- ನಿರಂತರ ಮಳೆಯ ಪರಿಣಾಮ ಎದುರಿಸಲು ಬಿಬಿಎಂಪಿ ಪರಿಹಾರ ಕ್ರಮಗಳು ಕೈಗೊಂಡಿದೆ:
- ಕಣ್ಗಾವಲು ತಂಡಗಳು (control rooms) ಕಾರ್ಯನಿರ್ವಹಿಸುತ್ತಿವೆ.
- ನೀರು ನಿಂತ ಪ್ರದೇಶಗಳಲ್ಲಿ ಡ್ರೈನೇಜ್ ತೆರವು ಕಾರ್ಯ ನಡೆಯುತ್ತಿದೆ.
- ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆ ಘೋಷಣೆ ಸಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಲಾಗಿದೆ.
ಮಳೆಯ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿ
- ಬಾಗಿಲು-ಕಿಟಕಿಗಳನ್ನು ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದಿರುವುದು ಉತ್ತಮ (ಗುಡುಗು-ಮಿಂಚು ಇದ್ದರೆ)
- ನೀರು ಒಳಬರುವ ಸಾಧ್ಯತೆ ಇರುವ ವಾಸಸ್ಥಳವಿದ್ದರೆ, ಮುಖ್ಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳನ್ನು ಸುರಂಕ್ಷಿತವಾಗಿ ಇಡಿ.
- ನಿಮ್ಮ ಮನೆ ತಗ್ಗು ಪ್ರದೇಶವಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ.
- ನೀವು ಹೊರಗಡೆ ಹೋದಾಗ ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲಬೇಡಿ (ಗುಡುಗು-ಮಿಂಚು ಹಾಗೂ ಮರ ಬಿಳುವಂತಹ ಅಪಾಯಗಳು ಇರುತ್ತವೆ)
- ನೀರು ನಿಂತ ರಸ್ತೆಗಳ ಮೂಲಕ ನಡೆಯುವುದು ಅಥವಾ ವಾಹನ ಚಲಾಯಿಸುವುದು ಅಪಾಯಕಾರಿ
- ಮಿಂಚು ಹೊಡೆಯುವ ಸಂಭವವಿರುವ ಪ್ರದೇಶಗಳಿಂದ ದೂರವಿರಿ
- ಜಲಾವೃತ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ.
- ವರ್ ಬ್ಯಾಂಕ್, ಟಾರ್ಚ್, ಬಾಟಲಿನ ನೀರು, ವೈದ್ಯಕೀಯ ಕಿಟ್ ಹತ್ತಿರ ಇಟ್ಟುಕೊಳ್ಳಿ.
- ಸರ್ಕಾರದ ಅಥವಾ ಹವಾಮಾನ ಇಲಾಖೆ (IMD) ನಿಂದ ನೀಡುವ ಎಚ್ಚರಿಕೆಗಳನ್ನು ಗಮನಿಸಿ.
ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಿಂದ ಸುರಕ್ಷಿತವಾಗಿ ಇರಬಹುದು.


Click it and Unblock the Notifications