ಪ್ರಸ್ತುತ ಅಕಾಲಿಕವಾಗಿ ಮಳೆ ಸುರಿಯುವುದು ಸಾಮಾನ್ಯವಾಗುತ್ತಿದೆ. ಇದರಿಂದ ರೈತರಿಗೂ ಭಾರೀ ನಷ್ಟವಾಗುತ್ತಿದೆ. ಈ ನಡುವೆ ಕರ್ನಾಟಕದ ಈ ಪ್ರದೇಶ ಒಂದರಲ್ಲಿ ನಾವು ಊಹಿಸಲಾಗದಷ್ಟು ಮಳೆ ಸುರಿದಿದೆ. ಒಂದೇ ದಿನದಲ್ಲೇ ದಾಖಲೆಯನ್ನು ಈ ಮಳೆ ಪ್ರಮಾಣ ಮುರಿದಿದೆ.
ಹೌದು, ಕರ್ನಾಟಕದ ಸುಳ್ಯ ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದೆ. ಜನವರಿಯಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಮಳೆಯಾಗಿದೆ. ಈ ಲೆಕ್ಕಾಚಾರವು ರೈತರು ತಮ್ಮ ಸ್ಥಳದ ಮಳೆ ಮಾಪಕಗಳ (on-site rain gauges) ಸಹಾಯದಿಂದ ನಿಖರವಾದ ಮಳೆಯ ಡೇಟಾವನ್ನು ಸಂಗ್ರಹಿಸಿದ್ದು ಆಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸುಳ್ಯ ತಾಲೂಕಿನ ಬಾಳಿಲದಲ್ಲಿರುವ ತಮ್ಮ ಮನೆಯಲ್ಲಿ 1976 ರಿಂದ ಮಳೆಯ ಅಂಕಿಅಂಶಗಳನ್ನು ಸಂಗ್ರಹಿಸುತ್ತಿರುವ ಪಿ ಜಿ ಎಸ್ ಎನ್ ಪ್ರಸಾದ್ ಅವರು 2000ನೇ ಇಸವಿಯ ನಂತರ ಜನವರಿಯಲ್ಲಿ ಒಂದೇ ದಿನದಲ್ಲಿ ಕಂಡ ಅತಿ ಹೆಚ್ಚು ಮಳೆಯಾಗಿದೆ ಎಂದು ಹೇಳಿದ್ದಾರೆ. ಬಾಳಿಲದಲ್ಲಿ 105 ಮಿಮೀ ಮಳೆಯಾಗಿದೆ ಎಂದು ತಿಳಿಸಿದರು.
ಜನವರಿ 12, 2000 ರಂದು, 42 ಮಿಮೀ ಮಳೆಯನ್ನು ಅವರು ದಾಖಲಿಸಿದ್ದಾರೆ. ಇದು ಈವರೆಗಿನ ಅತಿ ಹೆಚ್ಚು ಮಳೆಯ ಪ್ರಮಾಣವಾಗಿತ್ತು. ಜನವರಿ 7, 2024ರಂದು ಈ ಹಿಂದಿನ ದಾಖಲೆ ಮುರಿದು ಮಳೆಯಯಾಗಿದೆ. 105 ಮಿಮೀ ಮಳೆಯಾಗಿದೆ.
ಮತ್ತೊಬ್ಬ ರೈತ ಕಿಶನ್ ದಿನಕರ್ ತನ್ನ ತಂದೆಯ ಮಳೆಯ ಡೇಟಾವನ್ನು ಹಂಚಿಕೊಳ್ಳುವ ಮೂಲಕ ತನ್ನ ಗ್ರಾಮವಾದ ಅಡೆಂಜ ಉರುವಾಲು ಜನವರಿ 6, 2021 ರಂದು 96 ಮಿಮೀ ಮಳೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಮತ್ತೋರ್ವ ರೈತ ರವಿಪ್ರಸಾದ್ ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡಿ, ಪೆಂಬತ್ತಾಡಿ ಗ್ರಾಮದ ನೆಕ್ರೆಕಜೆಯಲ್ಲಿ 171 ಮಿ.ಮೀ ಮಳೆಯಾಗಿದೆ. ಹವಾಮಾನಶಾಸ್ತ್ರಜ್ಞರು ಜನವರಿಯಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದ್ದಾರೆ. ಎಲ್ಲಾ ದಾಖಲೆಗಳು ಚೂರುಚೂರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಆದರೆ ಈ ಅಕಾಲಿಕ ಮಳೆಯು ಒಳ್ಳೆಯ ಸುದ್ದಿಯಲ್ಲ. ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗಾರರಿಗೆ ಇದು ಕಹಿ ಸುದ್ದಿ ಎನ್ನಬಹುದು. ಈಗಾಗಲೇ ಅಂಗಳದಲ್ಲಿ ಅಡಿಕೆಯನ್ನು ಒಣಗಿಸಲು ಹಾಕಿರುವ ಅಡಿಕೆ ಬೆಳೆಗಾರರಿಗೆ ನಷ್ಟವಾಗುವ ಸಾಧ್ಯತೆಯಿದೆ.
ಹವಾಮಾನ ವೈಪರೀತ್ಯದಿಂದಾಗಿ ರಬ್ಬರ್ ಬೆಳೆಗಾರರು ಕಡಿಮೆ ಲ್ಯಾಟೆಕ್ಸ್ ನಿಂದಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸುಳ್ಯ ತಾಲೂಕಿನಲ್ಲಿ ಮಾವು ಮತ್ತು ಹಲಸಿನ ಇಳುವರಿಗೂ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪ್ರಸಾದ್ ತಿಳಿಸಿದರು.
ಕರ್ನಾಟಕದಲ್ಲಿ ಮಳೆ
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಐಎಂಡಿ ಉಲ್ಲೇಖಿಸಿದಂತೆ ಕೊಣನೊರು (ಹಾಸನ ಜಿಲ್ಲೆ), ಸಿ ಆರ್ ಪಟ್ನಾ (ಹಾಸನ ಜಿಲ್ಲೆ); ತಿಪಟೂರು (ತುಮಕೊರು ಜಿಲ್ಲೆ), ಗೋಕಾಕ (ಬೆಳಗಾವಿ ಜಿಲ್ಲೆ), ಬೆೈಲಹೆೊಂಗಲ (ಬೆಳಗಾವ ಜಿಲ್ಲೆ), ಮೊರ್ನಾಡು, ಭಾಗಮಂಡಲ (ಕೆೊಡಗು ಜಿಲ್ಲೆ), ಸಕಲೆೇಶಪುರ (ಹಾಸನ ಜಿಲ್ಲೆ), ಹುಣಸೂರು (ಮೈಸೊರು ಜಿಲ್ಲೆ) ಮಳೆಯಾಗಿದೆ.
ಗೋಕರ್ಣ (ಉತ್ತರ ಕನ್ನಡ ಜಿಲ್ಲೆ), ಅರಕಲಗೊಡು (ಹಾಸನ ಜಿಲ್ಲೆ), ತರೀಕೆರೆ, ಅಜ್ಜಪುರ, ಯಗಟಿ (ಚಿಕ್ಕಮಗಳೂರು ಜಿಲ್ಲೆ), ಬೆೇಲೂರು (ಹಾಸನ ಜಿಲ್ಲೆ), ಹಿರಿಯೂರು ಎಚ್‌ಎಂಎಸ್ (ಚಿತ್ರದುರ್ಗ ಜಿಲ್ಲೆ), ಕೃಷ್ಣರಾಜಪೆೇಟೆ (ಮಂಡ್ಯ ಜಿಲ್ಲೆ), ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ) ಯಲ್ಲಿ ಮಳೆಯಾಗಿದೆ.


Click it and Unblock the Notifications