ಕಳೆದ ಕೆಲವು ದಿನಗಳಿಂದ ಭಾರೀ ಚಳಿಯಿಂದ (Cold) ನಡುಗುತ್ತಿದ್ದ ಕರ್ನಾಟಕ ಇದೀಗ, ಬಿಸಿಲಿನ (Summer) ಬೇಗೆಗೆ ಸಜ್ಜಾಗಿದೆ. ಚಳಿ ವಾತಾವರಣ ಕಡಿಮೆಯಾಗಿ, ಇನ್ಮೇಲೆ ಬೇಸಿಗೆಯ ಬಿಸಿ ಹೆಚ್ಚಾಗಲಿದೆ ಎಂದು ಮೊದಲೇ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಆದ್ರೆ ನಿರೀಕ್ಷೆಗೂ ಮೊದಲೇ ಬೇಸಿಗೆ ಬರುತ್ತಿರುವುದರಿಂದ, ಈ ಬಾರಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಇಂದು ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಲ್ಲಿರಲಿದೆ. ಅಂದರೆ ಯಾವುದೇ ಚಳಿ, ಮಳೆಯಿಲ್ಲದೇ ಬಹುತೇಕ ಬಿಸಿಲಿನ ವಾತಾವರಣ (Weather) ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ನಿಂದ 33 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆ ಇದೆ. ಇನ್ನು ಸಂಜೆ ಅಥವಾ ರಾತ್ರಿ ವೇಳೆಗೆ ಮಾತ್ರ ಚಳಿ ವಾತಾವರಣವಿರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯದ ಇತರ ಭಾಗಗಳ ಹವಾಮಾನ ಪರಿಸ್ಥಿತಿ ಹೇಗಿದೆ?
ಉತ್ತರ ಕರ್ನಾಟಕ: ಬಳ್ಳಾರಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಗರಿಷ್ಠ ತಾಪಮಾನ 32 ರಿಂದ 35 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಹೇಳಲಾಗಿದೆ. ಅಲ್ಲದೇ ರಾಯಚೂರು, ವಿಜಯಪುರ ಜಿಲ್ಲೆಗಳಲ್ಲೂ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಸಂಜೆಯ ತನಕ ತಾಪಮಾನದಲ್ಲಿ ಏರಿಕಯಾಗಲಿದ್ದು, ರಾತ್ರಿ ವೇಳೆಗೆ ತಕ್ಕ ಮಟ್ಟಿಗೆ ಸೆಖೆ ಜಾಸ್ತಿಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಬಿಸಿಲು ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ರಾತ್ರಿ ವೇಳ, ಹಗಲಿನಲ್ಲಿ ಸೆಖೆಯೂ ಜಾಸ್ತಿಯಾಗಲಿದೆ.
ಇನ್ನು ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಕ್ಕಮಟ್ಟಿಗೆ ಬಿಸಿಲು ಹೆಚ್ಚಾಘುವ ಸಾಧ್ಯತೆ ಇದೆ. ಆದರೆ ಬೆಳಗ್ಗೆ ಮಾತ್ರ ಮಂಜು ಮುಸುಕಿದ ವಾತಾವರಣ ಈ ಜಿಲ್ಲೆಗಳಲ್ಲಿರುವ ಸಾಧ್ಯತೆ ಇದೆ. ಅದೇ ರೀತಿ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಲ್ಲಿ ಸಾಮಾನ್ಯ ವಾತಾವರಣ ಇರಲಿದೆ.
ಮಳೆ ವಾತಾವರಣ:
ಸದ್ಯ ರಾಜ್ಯದಲ್ಲಿ ಯಾವುದೇ ಮಳೆ ಎಚ್ಚರಿಕೆ ನೀಡಲಾಗಿಲ್ಲ. ಅಂದರೆ ಯಾವುದೇ ಜಿಲ್ಲೆಗಳಲ್ಲಿ ಮಳೆ ಬರುವ ವಾತಾವರಣವಿಲ್ಲ. ಮುಂದಿನ ದಿನಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಸೆಖೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಇನ್ನು ಸ್ವಲ್ಪ ಸಮಯಗಳ ಕಾಲ ಮಳೆ ಬಗ್ಗೆ ಯಾವುದೇ ಸೂಚನೆ ಬರುವ ಸಾಧ್ಯತೆ ಕಡಿಮೆ.
ಜನರಿಗೆ ಸಲಹೆ:
ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಸ್ವಲ್ಪ ತಂಪು ವಾತಾವರಣ, ತಂಪಾದ ಗಾಳಿ ಬೀಸುವುದರಿಂದ ಈ ಸಮಯದಲ್ಲಿ ಹೊರಗಡೆ ಬರುವವರು, ಜಾಕೆಟ್, ಕ್ಯಾಪ್ ಧರಿಸುವುದು ಉತ್ತಮ. ಆದ್ರೆ ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ಮಟ್ಟ ತೀವ್ರವಾಗಿರುವುದರಿಂದ ಸನ್‌ಸ್ಕ್ರೀನ್, ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ.


Click it and Unblock the Notifications