ಕರ್ನಾಟಕದ ಹವಾಮಾನ ದಿನೇ ದಿನೆ ಬದಲಾಗುತ್ತಿದೆ. ಸುಡು ಬಿಸಿಲಿಗೆ ಕರುನಾಡು ಬೆಂದು ಹೋಗಿದೆ. ಕರ್ನಾಟಕದ ಹವಾಮಾನ ಬದಲಾವಣೆಯಲ್ಲಿ, ಆರೋಗ್ಯಗಳ ಸಮಸ್ಯೆ ಕೂಡ ಉಲ್ಬಣವಾಗುತ್ತಿದೆ. ಒಂದೆಡೆ ತೀವ್ರವಾದ ಬಿಸಿಲು, ಮತ್ತೊಂದೆಡೆ ಕೊಂಚ ಮಳೆ, ಮತ್ತೊಂದೆಡೆ ಶೀತದ ಅಲೆ. ಹೀಗೆ ಕರ್ನಾಟಕ ನಾನಾ ರೀತಿಯ ವಾತಾವರಣಗಳಿಗೆ ಸಾಕ್ಷಿಯಾಗುತ್ತಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ತಿಳಿಸಿರುವ ಮಾಹಿತಿ ಪ್ರಕಾರ, ಇಂದು (ಶನಿವಾರ) ರಾಜ್ಯದ ಹೆಚ್ಚಿನ ಭಾಗಗಳಲ್ಲಿ..ಅದರಲ್ಲೂ ಉತ್ತರ ಒಳನಾಡಿನಲ್ಲಿ ಶೀತದ ಅಲೆಯ ಎಚ್ಚರಿಕೆ ನೀಡಿದೆ.

ಹೌದು, ಉತ್ತರ ಒಳನಾಡು ಎಂದರೆ ಉತ್ತರ ಕರ್ನಾಟಕದ ಜಿಲ್ಲೆಗಳು ಮೊದಲೇ ಬಿಸಿಲಿನ ವಾತಾವರಣ ಇರುವಂತಹ ಜಿಲ್ಲೆಗಳು. ಬೀದರ್, ಕಲಬುರಗಿ ಮತ್ತು ವಿಜಯಪುರ ಅತಿಹೆಚ್ಚು ಬಿಸಿಲಿನಿಂದ ಕೂಡಿರುವಂತಹ ಪ್ರದೇಶ. ಅದರಲ್ಲೂ ಬೇಸಿಗೆಯಲ್ಲಿ ಇಲ್ಲಿನ ಬಿಸಿಲಿನ ಪ್ರಮಾಣ ಕೇಳೋದೇ ಬೇಡ. ಹೀಗಿರುವಾಗ ಇಂದು ಈ ಮೂರು ಜಿಲ್ಲೆಗಳಲ್ಲಿ ತೀವ್ರ ಶೀತಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಈ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಸೂಚನೆ ನೀಡಲಾಗಿದೆ.
ಇನ್ನು ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ, 4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇಳಿಯುತ್ತದೆ ಎನ್ನಲಾಗಿದೆ. ಇಂದು ವಿಜಯಪುರದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್, ಹಾಸನದಲ್ಲಿ 10.3 ಡಿಗ್ರಿ ಸೆಲ್ಸಿಯಸ್ ಮತ್ತು ಚಿಂತಾಮಣಿಯಲ್ಲಿ 10.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಕನಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅಂದರೆ ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎನ್ನಬಹುದು. ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 12.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಇನ್ನು ಈಗಾಗಲೇ ಯೆಲ್ಲೊ ಅಲರ್ಟ್ ನೀಡಲಾಗಿರುವ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ, ಎರಡ್ಮೂರು ದಿನಗಳವರೆಗೆ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬರಲಿದೆ. ಹಾಗೆಯೇ ಗುಡ್ಡಗಾಡು ಪ್ರದೇಶಗಳಿಂದ ಉತ್ತರ ದಿಕ್ಕಿನ ಗಾಳಿ ಬೀಸುತ್ತಿರುವುದರಿಂದ, ಈ ಶೀತದ ಅಲೆ ಸಂಭವಿಸಿದೆ.
ಆದರೆ ಇತ್ತ ದಕ್ಷಿಣ ಒಳನಾಡಿನ ಪ್ರದೇಶಗಳಿಗೆ ಯಾವುದೇ ಶೀತದ ಅಲೆಯ ಎಚ್ಚರಿಕೆ ನೀಡಲಾಗಿಲ್ಲ. ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬರುವ ಪ್ರದೇಶವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ನಂತರ ಗಾಳಿಯ ಸ್ವರೂಪ ಮತ್ತೆ ಬದಲಾಗಲಿದ್ದು, ಪೂರ್ವ ದಿಕ್ಕಿನ ಗಾಳಿ ಬೀಸಲಿದ್ದು, ಇದರಿಂದಾಗಿ ಕನಿಷ್ಠ ತಾಪಮಾನ ಏರಿಕೆಯಾಗಲು ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ತಾಪಮಾನ ಕಡಿಮೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಈ ಶಿತದ ಅಲೆಯ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ಇಲ್ಲವಾದರೆ ಆರೋಗ್ಯದಲ್ಲಿ ನಾನಾ ಬದಲಾವಣೆಗಳಾಗುತ್ತವೆ. ಹಾಗೆಯೇ ಅದು ಬೇರೆ ವಿಚಾರಗಳಲ್ಲೂ ಒಂದಷ್ಟು ಪರಿಣಾಮಕಾರಿಯಾಗಿರುತ್ತದೆ. ಹಾಗಾದರೆ ಶೀತದ ಅಲೆಯಿಂದ ಎದುರಾಗುವ ಸಮಸ್ಯೆಗಳೇನು ಎಂದು ನೋಡುವುದಾದರೆ..
ಆರೋಗ್ಯದ ಮೇಲೆ ಪರಿಣಾಮ:
ಶಿತದ ಗಾಳಿ ಹೆಚ್ಚಾಗಿ ಸಂಭವಿಸಿದರೆ ತೀವ್ರ ಚಳಿ ಮೂಲಕ ಶೀತ, ಫ್ಲೂ, ತ್ವಚಾ ಸಮಸ್ಯೆಗಳು ಹೆಚ್ಚಾಗಬಹುದು. ಜೊತೆಗೆ ಅದು ಹೃದಯ ಸಂಬಂಧಿತ ಸಮಸ್ಯೆಗಳಿರುವವರಿಗೆ ತೀವ್ರ ಚಳಿ ಆರೋಗ್ಯದ ಮೇಲೆ ದುಷ್ಪ್ರಭಾವ ಬೀರುತ್ತದೆ. ಹೀಗಾಗಿ ಶೀತದ ಗಾಳಿ ಸಮಯದಲ್ಲಿ ಚಿಕ್ಕ ಮಕ್ಕಳು ಹಾಗೂ ವೃದ್ಧರು ಎಚ್ಚರಿಕೆಯಿಂದ ಇರಬೇಕು.
ಕೃಷಿ ಮತ್ತು ಪಶುಸಂಗೋಪನೆ:
ಇನ್ನು ತೀವ್ರ ತಾಪಮಾನ ಕುಸಿದರೆ ಬೆಳೆಗಳಿಗೂ ಹಾನಿಯುಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಹೆಚ್ಚು ಹಾನಿಯಾಗುತ್ತದೆ. ಅಷ್ಟೇ ಅಲ್ಲ ತೀವ್ರವಾದ ಚಳಿಯಿಂದ ಪಶುಗಳು ಕೂಡ ತೊಂದರೆ ಅನುಭವಿಸಬಹುದು, ಇದರಿಂದ ಹೈಪೋಥರ್ಮಿಯಾ ಸಮಸ್ಯೆ ಉಂಟಾಗಬಹುದು.
ಪ್ರಯಾಣಿಕರಿಗಾಗಿ ಎಚ್ಚರಿಕೆ:
ಬೆಳಗಿನ ಜಾವ ತೀವ್ರ ಹಿಮಾಂಶನಿಂದ ರಸ್ತೆಗಳ ಮೇಲೆ ಮಂಜು ಅಥವಾ ಕೊಳಕು ಹುಟ್ಟಬಹುದು, ಇದರಿಂದ ರಸ್ತೆ ಪ್ರಯಾಣ ಸ್ವಲ್ಪ ಅಪಾಯಕಾರಿ ಆಗಬಹುದು. ಮೊದಲು ನಿಗದಿಯಾಗಿದ್ದ ವಿಮಾನಯಾನ ಮತ್ತು ರೈಲು ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀಳಬಹುದು.
ಹೀಗೆ ಶೀತದ ಅಲೆಯಿಂದ ನಾನಾ ರೀತಿಯ ಬದಲಾವಣೆಗಳಾಗುತ್ತವೆ. ಅವು ನಾನಾ ರೀತಿಯಲ್ಲಿ ಪರಿಣಾಮ ಬೀರುತ್ತವೆ.


Click it and Unblock the Notifications