ಬೆಂಗಳೂರಿಗರು ನಿರಾಳ! ಈ ಪ್ರದೇಶಗಳಲ್ಲಿ ಮಳೆ ಸಾಧ್ಯತೆ.. ಇಲ್ಲಿ ಭಾರೀ ಬಿಸಿಲು.. ಎಲ್ಲೆಲ್ಲಿ ನೋಡಿ

ಬೇಸಿಲಿನ ಬೇಗೆ ಕರ್ನಾಟಕದ ವಿವಿಧ ಭಾಗದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ಝಳ (ತಾಪಮಾನ) ದೆಹಲಿ ತಾಪಮಾನ ಹೆಚ್ಚಾಗಿತ್ತು. ಆದರೆ, ಇನ್ಮುಂದೆ ಬೆಂಗಳೂರು ವಾತಾವರಣ ಕೂಲ್ ಕೂಲ್ ಆಗಲಿದೆ. ಬೆಂಗಳೂರಿನಲ್ಲಿ (Bengaluru rain) ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗಲಿದೆಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದಲ್ಲದೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಕೆಲವು ಕಡೆ ಬಿಸಿಲು ಇನ್ನಷ್ಟು ಸುಡಲಿದೆ ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿದೆ.

ಹೌದು, ಭಾರತ ಹವಾಮಾನ ಇಲಾಖೆ (IMD) ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಮಳೆಯಾಗುವ ಸಾಧ್ಯತೆ ಎಂದು ಹೇಳಿದೆ. ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆಗಾಲ ಪೂರ್ವ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಆದರೆ ಉತ್ತರ ಕರ್ನಾಟಕದಲ್ಲಿ (Karnataka Weather) ತೀವ್ರವಾದ ತಾಪಮಾನನ್ನು ಇರಲಿದೆ ಎಂದು ಮಾಹಿತಿಯನ್ನು ತಿಳಿಸಿದೆ.

ಬೆಂಗಳೂರಿಗರು ನಿರಾಳ! ಈ ಪ್ರದೇಶಗಳಲ್ಲಿ ಮಳೆ ಸಾಧ್ಯತೆ.. ಇಲ್ಲಿ ಬಿಸಿಲು

ಕರ್ನಾಟಕದಲ್ಲಿ ಬಿಸಿಲಿನ ಝಳ ಫೆಬ್ರವರಿ ಎರಡನೇ ವಾರದಿಂದಲೇ ಹೆಚ್ಚಳವಾಗಿದೆ. ಕಳೆದ 10 ದಿನಗಳಿಂದಲೂ ಬಿಸಿಲಿ ಝಳ ಜೋರಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಭರ್ಜರಿ ಮಳೆಯಾಗಲಿದೆ.

ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಶೇ. 30-40 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಫೆಬ್ರವರಿಯಲ್ಲಿ ತ್ರೀವ ಬಿಸಿಲಿನ ನಂತರ ಬೆಂಗಳೂರು ತಂಪಾಗಲಿದೆ.ಈ ಹೆಚ್ಚುವರಿ ಮಳೆಯು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗಲಿನ ತಾಪಮಾನವನ್ನು ಮಧ್ಯಮಗೊಳಿಸಲು ಸಹಾಯ ಮಾಡುತ್ತದೆ.

ಶೇ. 50-60 ರಷ್ಟು ಹೆಚ್ಚಿನ ಮಳೆ

ನಗರಗದ ಇರರೆ ಭಾಗಗಳಲ್ಲಿ ತಾಪಮಾನದ ಪರಿಣಾಮದಿಂದ ಕೆಲವು ಜನನಿಬಿಡ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ಕರಾವಳಿ ಪ್ರದೇಶಗಳು ಮತ್ತು ಮಲೆನಾಡು ಪ್ರದೇಶವು ಸರಾಸರಿಗಿಂತ ಶೇ. 50-60 ರಷ್ಟು ಹೆಚ್ಚಿನ ಮಳೆಯನ್ನು ಅನುಭವಿಸಲಿದ್ದು, ಈ ಪ್ರದೇಶಗಳಲ್ಲಿ ತಂಪಾಗಿಸುವ ಪರಿಣಾಮಕ್ಕೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ತಾಪಮಾನದ ಅಲೆ ಇರಲಿದೆ.

ಉತ್ತರ ಕರ್ನಾಟಕವು ತೀವ್ರ ತಾಪಾಮಾನಕ್ಕೆ ಈಗಲೇ ಸಿದ್ದರಾಗಿ ಎಂದು ಐಎಂಡಿ ಸೂಚನೆ ನೀಡಿದೆ. ಮಾರ್ಚ್‌ನಲ್ಲಿ ತಾಪಮಾನವು 43 ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಐಎಂಡಿ ಈಶಾನ್ಯ ಜಿಲ್ಲೆಗಳಿಗೆ ತಾಪಮಾನ ಅಲೆಯ ಎಚ್ಚರಿಕೆಯನ್ನು ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

ಮಧ್ಯಾಹ್ನ ಹೊರಗಡೆ ಹೋಗುವುದನ್ನು ನಿಲ್ಲಿಸಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೇಹವನ್ನು ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು, ಸೂರ್ಯನ ರಕ್ಷಣೆಗಾಗಿ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಲು ಮತ್ತು ಶಾಖಬ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಮಧ್ಯಾಹ್ನದ ಗರಿಷ್ಠ ಶಾಖದ ಸಮಯದಲ್ಲಿ ಹೊರಗಡೆ ಹೋಗುವುದನ್ನು ಕಡಿಮೆ ಮಾಡಿ ಎಂದು ಶಿಫಾರಸು ಸಹ ಮಾಡಿದೆ.

ಬೆಂಗಳೂರಿನ ಹಗಲಿನ ತಾಪಮಾನವು ಸಾಮಾನ್ಯ ಮಿತಿಯಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಆದರೆ ನಗರದಲ್ಲಿ ರಾತ್ರಿ ವೇಳೆ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆ ಇರುತ್ತದೆ ಎಂದು ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಹೇಳಿದ್ದಾರೆ.

ರಾತ್ರಿ ವೇಳೆ ತಾಪಮಾನವು 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು, ಇದರಿಂದಾಗಿ ಸಂಜೆ ಮತ್ತು ಬೆಳಗಿನ ವೇಳೆ ಅಸಾಮಾನ್ಯವಾಗಿ ಉಷ್ಣತೆ ಇರುತ್ತದೆ.

ಉತ್ತರ ಭಾಗಗಳಲ್ಲಿರುವವರು ಶಾಖ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಆದರೆ ಬೆಂಗಳೂರು ಮತ್ತು ದಕ್ಷಿಣ ಪ್ರದೇಶಗಳಲ್ಲಿರುವವರು ಮಳೆಯ ಹೊರತಾಗಿಯೂ ಬೆಚ್ಚಗಿನ ಪರಿಸ್ಥತಿಯನ್ನು ಎದುರಿಸಬೇಕು ಎಂದು ಹೇಳಿದ್ದರೆ.

ಕರಾವಳಿ ಭಾಗದಲ್ಲಿ ಬಿಸಿಲು ಜೋರು

ರಾಜ್ಯದ ಉತ್ತರ ಒಳನಾಡಿನ ಕೊಪ್ಪಳ, ಹಾವೇರಿ, ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಕನಿಷ್ಠ ತಾಪಮಾನವು ಗಣನೀಯವಾಗಿ ಏರಿಕೆ ಕಂಡಿದೆ. ಅಲ್ಲದೆ ಬೀದರ್‌, ರಾಯಚೂರು ಹಾಗೂ ವಿಜಯಪುರದಲ್ಲಿ ಮತ್ತು ದಕ್ಷಿಣ ಒಳನಾಡಿನ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಕರಾವಳಿಯ ಮಂಗಳೂರು ವಿಮಾನ ನಿಲ್ದಾಣ ಭಾಗದಲ್ಲಿ ಬಿಸಿಲು ಜೋರಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+