ಕರ್ನಾಟಕವು 2023-24ರಲ್ಲಿ ದೇಶದಲ್ಲೇ ಅತಿ ಹೆಚ್ಚು ಎಂಬಿಬಿಎಸ್ ಸೀಟುಗಳನ್ನು ಹೊಂದಿತ್ತು. ಹಾಗೆಯೇ ರಾಜ್ಯವು 11 ವರ್ಷಗಳ ಹಿಂದೆ 2013-14ರಲ್ಲಿಯೂ ಅದೇ ಸ್ಥಾನವನ್ನು ಪಡೆದುಕೊಂಡಿತ್ತು. ಕರ್ನಾಟಕವು ಒಟ್ಟಾರೆಯಾಗಿ ಮೆಡಿಕಲ್ ಹಬ್ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯು ಉಲ್ಲೇಖ ಮಾಡಿದೆ.
ಕರ್ನಾಟಕವು ಈಗ ಮೆಡಿಕಲ್ ಹಬ್ ಆಗಿದೆ. ಇದರಿಂದಾಗಿಯೇ ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಎಂಬಿಬಿಎಸ್ ಮಾಡಿಕೊಳ್ಳುತ್ತಾರೆ. ಆದರೆ ಈಗ ಉತ್ತರ ಭಾರತದ ರಾಜ್ಯಗಳಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿನ ಅಗಾಧವಾದ ಹೆಚ್ಚಳವಾಗುವ ಸಮಸ್ಯೆಯೂ ಇದೆ ಎಂದು ವರದಿ ಹೇಳಿದೆ.

ಸರ್ಕಾರದ ಅಂಕಿ- ಅಂಶ ಹೇಳುವುದೇನು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023-24ರಲ್ಲಿ 11,745 ಎಂಬಿಬಿಎಸ್ ಸೀಟುಗಳು 2013-14ರಲ್ಲಿ 6,755 ರಿಂದ ಹೆಚ್ಚಳವಾಗಿದೆ. 2013-14ರಲ್ಲಿ 6,215 ಮತ್ತು 2023-24ರಲ್ಲಿ 11,650 ಸೀಟುಗಳನ್ನು ಪಡೆದಿದ್ದ ತಮಿಳುನಾಡು ಕರ್ನಾಟಕ ಬಳಿಕ ಎರಡನೇ ಸ್ಥಾನದಲ್ಲಿದೆ.
ವೈದ್ಯಕೀಯ ಕಾಲೇಜು: ಕರ್ನಾಟಕ ಯಾವ ಸ್ಥಾನ?
ತಮಿಳುನಾಡು 2023-24ರಲ್ಲಿ 74 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು ಮತ್ತು 2013-14ರಲ್ಲಿ 45 ವೈದ್ಯಕೀಯ ಕಾಲೇಜುಗಳಿದ್ದು ಎರಡನೇ ಸ್ಥಾನದಲ್ಲಿದೆ. 2013-14ರಲ್ಲಿ ದೇಶದಲ್ಲೇ ಅತಿ ಹೆಚ್ಚು (46) ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದ ಕರ್ನಾಟಕ 11 ವರ್ಷಗಳ ನಂತರ ಎರಡನೇ (70 ಕಾಲೇಜುಗಳು) ಸ್ಥಾನ ಪಡೆದಿದೆ.
ದಕ್ಷಿಣ ಭಾರತದ ರಾಜ್ಯಗಳು ಶೇಕಡ 39.4 ರಷ್ಟು ದೇಶದ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಹೊಂದಿದ್ದರೂ, ಉತ್ತರದಲ್ಲಿ ಅದ್ಭುತ ಬೆಳವಣಿಗೆಯನ್ನು ನಾವು ಕಾಣಬಹುದು. ಉದಾಹರಣೆಗೆ, 2013-14ರಲ್ಲಿ ಸುಮಾರು 200 ಸೀಟುಗಳನ್ನು ಹೊಂದಿದ್ದ ಉತ್ತರ ಪ್ರದೇಶವು ಈಗ 9,903 ಎಂಬಿಬಿಎಸ್ ಸೀಟುಗಳನ್ನು ಹೊಂದಿದೆ.
ಉತ್ತರ ಪ್ರದೇಶವು ಶೇಕಡ 4851 ಹೆಚ್ಚಳದೊಂದಿಗೆ ಬೆಳವಣಿಗೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಂತಹ ರಾಜ್ಯಗಳು ಸಹ ಶೇಕಡ 200 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಕರ್ನಾಟಕದಲ್ಲಿ 48 ಖಾಸಗಿ ಮತ್ತು 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ.
ಯುಪಿಯಲ್ಲಿ ವೈದ್ಯಕೀಯ ಸೀಟುಗಳ ಬೆಳವಣಿಗೆ ದರವು ಕರ್ನಾಟಕ (ಶೇಕಡ 73.8) ಮತ್ತು ತಮಿಳುನಾಡು (ಶೇಕಡ 87.4) ಗಿಂತ ಅಧಿಕವಾಗಿದೆ. ಈ ನಡುವೆ ಹೊಸ ಕಾಲೇಜುಗಳು ಮತ್ತು ಸೀಟುಗಳ ಮಂಜೂರಾತಿಯನ್ನು ಸಂಬಂಧಿತ ರಾಜ್ಯದ ಜನಸಂಖ್ಯೆಗೆ ಜೋಡಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗವು ಈಗ ಒಂದು ವರ್ಷದವರೆಗೆ ತಡೆಹಿಡಿಯಲಾದ ಕ್ರಮದಿಂದ ದೊಡ್ಡ ಮತ್ತು ಜನಸಂಖ್ಯೆಯುಳ್ಳ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.


Click it and Unblock the Notifications