ಭಾರತದ ಕಿರಿಯ ಪೈಲಟ್ ಆಗಿ 18 ವರ್ಷದ ಸಮೈರಾ ಹುಲ್ಲೂರ್ ಅವರು ದಾಖಲೆಯನ್ನ ಬರೆದಿದ್ದಾರೆ. ಅಲ್ಲದೇ ವಾಣಿಜ್ಯ ಪೈಲಟ್ ಲೈಸೆನ್ಸ್ (ಸಿಪಿಎಲ್) ಹೊಂದಿರುವ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ವಿಮಾನಯಾನ ಉದ್ಯಮದಲ್ಲಿ ಸಾಧನೆ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿ ಇವರು ಹೊರಹೊಮ್ಮಿದ್ದಾರೆ. ಇವರು ಉದ್ಯಮಿ ಅಮಿನ್ ಹುಲ್ಲೂರ್ ಅವರ ಪುತ್ರಿಯಾಗಿದ್ದು, ಅತೀ ಚಿಕ್ಕ ವಯಸ್ಸಿನಲ್ಲೇ ಏವಿಯೇಷನ್ ಅಕಾಡಮಿ ಮತ್ತು ಕಾರ್ವರ್ ಏಷಿಯನ್‌ನಲ್ಲಿ ಕಲಿತು ಸಿಪಿಎಲ್ ಪಡೆಯುವ ಮೂಲಕ ಇಂದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.
ಇವರ ವಿಮಾನಯಾನದ ತರಬೇತಿ ಮೊದಲು ಶುರುವಾಗಿದ್ದು, ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ. ಆರು ತಿಂಗಳು ಸತತವಾಗಿ ತೀರ್ವ ತರಬೇತಿ ಪಡೆಯುವ ಮೂಲಕ ಇವರು ತಮ್ಮ ವಾಯುಯಾನದ ಪ್ರಯಾಣ ಆರಂಭವಾಯಿತು. ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಅವರ ಮಾರ್ಗದರ್ಶನದಲ್ಲಿ, ತರಬೇತಿಯನ್ನ ಆರಭಿಸಿದ್ದರು. ಅಲ್ಲದೇ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ CPL ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.

ಆದ್ರೆ ದಿನ ಕಳೆದಂತೆ ಈ ವಾಯುಯಾನ ಅಷ್ಟು ಸುಲಭವಾಗಿರಲಿಲ್ಲ. ಆದ್ರೆ ಅವರ ದಿಟ್ಟತನ ನಿರಂತರ ಬೆಂಬಲ, ನಿರಂತರ ಪ್ರಯತ್ನದಿಂದಾಗಿ ಎಲ್ಲಾ ಕಷ್ಟಗಳು ಕೂಡ ಸುಲಭವಾದವು. ನನ್ನ ಈ ಸಾಧನೆಗೆ ಮುಖ್ಯ ಕಾರಣ ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್. ನನ್ನ ಈ ಎಲ್ಲಾ ಯಶಸ್ಸು ಅವರ ಇಷ್ಟು ದಿನದ ಬೆಂಬಲ, ಮಾರ್ಗದರ್ಶನಕ್ಕೆ ಸಲ್ಲುತ್ತದೆ ಎಂದು ಸಮೈರಾ ಹೇಳಿದರು.
ಮೊದಲು ನಾನು ವಿಮಾನಯಾನ ಒಳಗೊಂಡಂತೆ ಆರು ಕಡ್ಡಾಯ ಕೋರ್ಸ್‌ಗಳನ್ನ ಮಾಡಿದೆ.
ಅಲ್ಲಿ 200 ಗಂಟೆಗಳ ಹಾರಾಟದ ಅನುಭವವನ್ನ ನಾನು ಪಡೆದಿದ್ದೇನೆ ಎಂದು ಸಮೈರಾ ಅವರು ಹೇಳಿದ್ರು. ಅಲ್ಲದೆ ಈ ಒಂದು ಪ್ರತ್ಯೇಕ ಕ್ಷೇತ್ರದಲ್ಲಿ ನನ್ನ ವಯಸ್ಸಿನ ಯಾವ ಹುಡುಗಿಯು ತೇರ್ಗಡೆಯಾಗದ ಕಾರಣ ವಿಜಯಪುರಕ್ಕೆ ಇದು ಹೊಸ ವಿಚಾರವೇ ಸರಿ.ಅಲ್ಲದೆ ಈಗ ನಾನು ದೇಶದ ಅತ್ಯಂತ ಕಿರಿಯ ವಾಣಿಜ್ಯ ಪೈಲೆಟ್ ಆಗಿದ್ದೇನೆ ಎಂದು ಸಮೈರಾ ಹೇಳಿದರು.
ನಂತರ ಇದಕ್ಕೆ ಸಂಬಂದಪಟ್ಟಂತೆ ಕೆಲವು ಪರೀಕ್ಷೆನ್ನ ಬರೆದು ಅದರಲ್ಲಿ ಒಳ್ಳೆಯ ಸಾಧನೆ ಮಾಡಿ. ನಂತರ ಮಹಾರಾಷ್ಟ್ರದಲ್ಲಿರುವ ಬಾರಾಮತಿಯಲ್ಲಿರುವ ಕಾರ್ವಲೆಎ ಏವಿಯೇಷನ್ ಅಕಾಡೆಮಿಯಲ್ಲಿ ಏಳು ತಿಂಗಳ ವಿಮಾನಯಾನ ತರಬೇತಿಯನ್ನ ತೆಗೆದುಕೊಂಡರು. ಆ ಅಕಾಡೆಮಿಯ ಸಮಗ್ರ ಮತ್ತು ಬೇಡಿಕೆಯ ಕಾರ್ಯಕ್ರಮವು ಅವಳ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚು ಮಾಡಿದವು. ಇದು ಅವರಿಗೆ ಎಲ್ಲಾ ಸಾಲುಗಳನ್ನು ಎದುರಿಸಲು ಸಹಾಯ ಮಾಡಿತು. ಜೊತೆಗೆ ವಾಯುಯಾನದಲ್ಲಿ ಬರುವ ನಿಜವಾದ ಸಂಕಷ್ಟಗಳ ಬಗ್ಗೆ ಅವರಿಗೆ ಅರಿವಾಯಿತು. ಇನ್ನು ನಾನು ಕಾರ್ವರ್ ಏವಿಯೇಷನ್ ಅಕಾಡೆಮಿ ಮೂಲಕ ತಾಂತ್ರಿಕ ಪರಿಣತಿಯನ್ನು ಬಲಪಡಿಸಿಕೊಂಡೆ. ಜೊತೆಗೆ ವಾಯುಯಾನದ ಬಗ್ಗೆ ನನಗೆ ಆಳವಾದ ಜ್ಞಾನವನ್ನ ಪಡೆಯಲು ಇಲ್ಲಿ ನನಗೆ ಸಾಧ್ಯವಾಯಿತು ಎಂದು ಸಮೈರಾ ಹೇಳಿದ್ರು. ಇನ್ನು ಈ ನನ್ನ ಸಾಧನೆಗೆ ಸ್ಫೂರ್ತಿ ಕ್ಯಾಪ್ಟನ್ ತಪೇಶ್ ಕುಮಾರ್ ಅವರು. ಅವರು ತಮ್ಮ 25 ವರ್ಷ ವಯಸ್ಸಿನಲ್ಲೇ ಪೂಲಟ್ ಆಗುವ ಮೂಲಕ ಭಾರತದ ಕಿರಿಯ ಪೈಲಟ್ ಎಂಬ ದಾಖಲೆಯನ್ನು ಹೊಂದಿದ್ದರು. ಆದ್ರೀಗ ನಾನೇ ಕಿರಿಯ ವಾಣಿಜ್ಯ ಪೈಲಟ್ ಇದು ನನಗೆ ಬಹಳ ಖುಷಿ ತಂದೆ ಎಂದು ಅವರು ನನಗೆ ಹೇಳಿದ್ರು.
ಇನ್ನು ಇವರ ತಾಯಿ ಫ್ಯಾಷನ್ ಡಿಸೈನರ್ ಮತ್ತು ಶಿಕ್ಷಕಿಯಾಗಿದ್ದು, ತಮ್ಮ ಮಗಳಿಗೆ ವಾಯುಯಾನದ ಲೈಸೆನ್ಸ್ ಸಿಕ್ಕಿರುವುದು ಹಾಗೆ ದೇಶದಲ್ಲೇ ಅತ್ಯಂತ ಕಿರಿಯ ಪೈಲಟ್ ಎಂದು ಘೋಷಿಸಿರುವುದು ಬಹಳ ಆಶ್ಷರ್ಯಕರ ಸಂಗತಿ ಹಾಗೆ ಇದನ್ನ ನಂಬಲು ಕಷ್ಟವಾಗುತ್ತಿದೆ ಜೊತೆಗೆ ನನ್ನ ಮಗಳನ್ನ ನೋಡಲು ಹೆಮ್ಮೆಯಾಗುತ್ತದೆ ಎಂದರು
ಹಲವಾರು ಜನರು ತಮ್ಮ ಕನಸುಗಳನ್ನ ಬೆನ್ನಟ್ಟಿ ಸಾಗ್ತಾ ಇರ್ತಾರೆ. ಆದ್ರೆ ಕೆಲವರು ಮಾತ್ರ ತಮ್ಮ ಕನಸುಗಳನ್ನ ಪೂರೈಸುವಲ್ಲಿ ಯಶಸ್ವಿಯಾಗುತ್ತಾರೆ ಅಂತವರಲ್ಲಿ ಸಮೈರಾ ಕೂಡ ಒಬ್ಬರು. ಪ್ರತಿಯೊಬ್ಬರು ಸಾಧನೆಯ ಶಿಖರವನ್ನ ಏರಲು ಬಯಸುತ್ತಾರೆ. ಆದ್ರೆ ಆತ್ಮಸ್ಥೈರ್ಯ, ಬೆಂಬಲ, ಮಾರ್ಗದರ್ಶನ ಸಿಗದೇ ಅರ್ಧಕ್ಕೇ ತಮ್ಮ ಸಾಧನೆಗಳಿಗೆ ವಿರಾಮ ನೀಡಿ ಬಿಡ್ತಾರೆ. ಆದ್ರೆ ಸತತ ಪ್ರಯತ್ನ ತೀವ್ರವಾದ ನಂಬಿಕೆ ಇದ್ದರೆ ಎನನ್ನಾದರೂ ಸಾಧಿಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಹಾಗೆ ಇನ್ನು ಕೆಲವು ವಯಸ್ಸಿನ ಹೋಲಿಕೆ ಮಾಡುತ್ತಾ ಒಂದುನಿಯಮದಡಿ ಬದುಕುತ್ತಾ ಆ ವಯಸ್ಸಿನಲ್ಲಿದ್ದಿದ್ದರೆ ನಾನು ಮಾಡುತ್ತಿದ್ದೆ, ಈಗ ವಸ್ಸಾಯಿತು ಅಥವಾ ನನ್ನ ವಯಸ್ಸು ಇನ್ನೂ ಚಿಕ್ಕದು ಎಂದು ಅಂತೆ ಕಂತೆಗಳ ಕಥೆಯಲ್ಲೇ ಜೀವನ ಮುಗಿಸುತ್ತಾರೆ.
ಮತ್ತೊಮ್ಮೆ ಜೀವನದಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ ನಮ್ಮ ಆತ್ಮಬಲ, ನಮ್ಮ ನಂಬಿಕೆ ನಮಗೆ ನಮ್ಮ ಸಾಧನೆಗೆ ವಜ್ರಖವಚ ಎನ್ನುವುದನ್ನ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡುವ ಮೂಲಕ ಸಮೈರಾ ನಿರೂಪಿಸಿದ್ದಾರೆ. ಸಾಧನೆ ಹಾದಿಯಲ್ಲಿ ಬರುವ ಸಾವಿರಾರು ಸವಾಲುಗಳನ್ನ ಎದುರಿಸಿ ಮುನ್ನುಗ್ಗಿದರೆ ಮಾತ್ರ ನಿಜವಾದ ಯಶಸ್ಸು ದೊರೆಯುವುದು ಎಂದು ಇವರು ನಿರೂಪಿಸಿದ್ದಾರೆ. ಅಲ್ಲದೆ ಯುವ ಜನಾಂಗಕ್ಕೆ ಯಶಸ್ವಿಯಾಗಲು ಆತ್ಮಬಲ ಮುಖ್ಯ ಎನ್ನುವುದನ್ನ ಇವರು ಚಿಕ್ಕ ವಯಸ್ಸಿನಲ್ಲೇ ನಿರೂಪಿಸಿದ್ದಾರೆ.


Click it and Unblock the Notifications