ಬೆಂಗಳೂರು ಏರ್ಪೋರ್ಟ್‌ನಲ್ಲಿ ಈಗ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಸೌಲಭ್ಯವನ್ನು ಒದಗಿಸಲಾಗುತ್ತದೆ.ಹೌದು,ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ದೇಶದ ಇತರ ಆರು ವಿಮಾನ ನಿಲ್ದಾಣಗಳಿಂದ ನಿರ್ಗಮಿಸುವ ಭಾರತೀಯರು ಮತ್ತು ಸಾಗರೋತ್ತರ ಭಾರತೀಯ ಕಾರ್ಡ್ ಹೊಂದಿರುವವರಿಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಉಪಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನಿಂದ ವರ್ಚುವಲ್ ಮೂಲಕ ನಿನ್ನೆ ಗುರುವಾರ ಉದ್ಘಾಟನೆ ಮಾಡಿದ್ದಾರೆ ಹಾಗಿದ್ರೆ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಸೌಲಭ್ಯ ಎಂದರೇನು? ಆನ್‌ಲೈನ್‌ನಲ್ಲಿ ನೋಂದಣಿ.. ಹೇಗೆ? ಎಂಬ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಪ್ರಯಾಣಿಕರು ಗೃಹ ಸಚಿವಾಲಯದ ಅಡಿಯಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡರೆ ವಲಸೆ ಕೌಂಟರ್‌ಗಳನ್ನು ಬೈಪಾಸ್ ಮಾಡಬಹುದು ಮತ್ತು ಇ-ಗೇಟ್‌ಗಳ ಮೂಲಕ ಹಾದುಹೋಗಬಹುದು ಎಂದು ವಿಮಾನ ನಿಲ್ದಾಣದ ನಿರ್ವಾಹಕರು, ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮೂಲಗಳು ಮಾಹಿತಿಯನ್ನು ತಿಳಿಸಿವೆ.

ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ
ವಿಮಾನ ನಿಲ್ದಾಣದಲ್ಲಿ 'ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ' (ಎಫ್‌ಟಿಐ-ಟಿಟಿಪಿ) ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ.ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ನವದೆಹಲಿಯಲ್ಲಿ ಕಳೆದ ವರ್ಷ ಇದನ್ನು ಆರಂಭ ಮಾಡಲಾಗಿತು.
ಆನ್‌ಲೈನ್‌ನಲ್ಲಿ ನೋಂದಣಿ ಹೇಗೆ?
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರಾಯ ರೀತಿಯೇ ಇರುತ್ತದೆ.ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿದೇಶಕ್ಕೆ ಹೋಗುವವರು ಆನ್‌ಲೈನ್ ಪೋರ್ಟಲ್‌ನಲ್ಲಿ ಎಫ್‌ಟಿಐ-ಟಿಟಿಪಿಗಾಗಿ https://ftittp.mha.gov.in.ನಲ್ಲಿ ನೋಂದಾಯಿಸಿಕೊಳ್ಳಬೇಕು. ನೀವು ಮೊದಲಿನಲ್ಲಿ ನೋಂದಣಿ ಮಾಡಿದರೆ, ಫ್ಲೈಯರ್ ವಲಸೆ ಕೌಂಟರ್‌ಗಳನ್ನು ಬೈಪಾಸ್ ಮಾಡಬಹುದು ಮತ್ತು ಇ-ಗೇಟ್‌ಗಳ ಮೂಲಕ ಕ್ಲಿಯರೆನ್ಸ್ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಸಾಗುತ್ತದೆ ಎಂದು ಅವರು ಮಾಹಿತಿ ತಿಳಿಸಿದ್ದರು.
OCI ಕಾರ್ಡ್ ಹೊಂದಿರುವವರಿಗೆ ಈ ಸೌಲಭ್ಯ ಉಚಿತ
ಪ್ರಯಾಣಿಕರಿಗೆ ವಿಶ್ವ ದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸುವುದು,ಅಂತರರಾಷ್ಟ್ರೀಯ ಪ್ರಯಾಣವನ್ನು ತಡೆರಹಿತ ಮತ್ತು ಸುರಕ್ಷಿತಗೊಳಿಸುವುದು ಇದರ ಉದ್ದೇಶವಾಗಿದೆ. ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಗರಿಕರು ಮತ್ತು OCI ಕಾರ್ಡ್ ಹೊಂದಿರುವವರಿಗೆ ಈ ಸೌಲಭ್ಯವು ಉಚಿತವಾಗಿರುತ್ತದೆ. ಬಯೋಮೆಟ್ರಿಕ್ ಡೇಟಾವನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಅಥವಾ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವಾಗ ಸೆರೆಹಿಡಿಯಲಾಗುತ್ತದೆ ಎಂದುಪಿಐಬಿ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಬೋರ್ಡಿಂಗ್ ಪಾಸ್
ನೋಂದಾಯಿತ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಅನ್ನು ಇ-ಗೇಟ್‌ನಲ್ಲಿ ಸ್ಕ್ಯಾನ್ ಮಾಡಬಹುದು ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅದನ್ನು ಅನುಸರಿಸಬಹುದು. ಆಗಮನ ಮತ್ತು ನಿರ್ಗಮನದ ಸ್ಥಳಗಳಲ್ಲಿ, ಪ್ರಯಾಣಿಕರ ಬಯೋಮೆಟ್ರಿಕ್ಸ್ ಅನ್ನು ಇ-ಗೇಟ್‌ಗಳಲ್ಲಿ ದೃಢೀಕರಿಸಲಾಗಿದೆ. ಅದು ಸ್ವಯಂಚಾಲಿತವಾಗಿ ತೆರೆಯುತ್ತದೆ ಮತ್ತು ವಲಸೆ ಕ್ಲಿಯರೆನ್ಸ್ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್‌ನಲ್ಲಿ ಈಗ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಉಪಕ್ರಮವು ವಿಕಸಿತ ಭಾರತ 2047 ದೃಷ್ಟಿಕೋನದ ಭಾಗವಾಗಿದೆ.ಈ ಕಾರ್ಯಕ್ರಮವು ದೇಶಾದ್ಯಂತ 21 ಪ್ರಮುಖ ವಿಮಾನ ನಿಲ್ದಾಣಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಬೆಂಗಳೂರು ವಿಮಾನ ನಿಲ್ದಾಣವು 2024ರಲ್ಲಿ ಅಧಿಕ ಪ್ರಯಾಣಿಕರನ್ನ ಹೊಂದುವ ಮೂಲಕ ದಾಖಲೆಯನ್ನ ಮಾಡಿದೆ. ಒಂದೇ ವರ್ಷದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಮಿಲಿಯನ್ ಪ್ರಯಾಣಿಕರನ್ನ ಹೊಂದುವ ಮೂಲಕ ದಾಖಲೆಯನ್ನ ಸೃಷ್ಟಿ ಮಾಡಿದೆ. ಅಲ್ಲದೆ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕವಾಗಿ "ದೊಡ್ಡ ವಿಮಾನ ನಿಲ್ದಾಣ" ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ.


Click it and Unblock the Notifications