ಕೇರಳದಲ್ಲಿ ಕೊರೊನಾವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಆಗುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಕೇರಳ ಸರ್ಕಾರ 20,000 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದರು.
ಗುರುವಾರ ಕೇರಳದಲ್ಲಿ 25ನೇ ವ್ಯಕ್ತಿಗೆ ಲಸಿಕೆ ಇಲ್ಲದ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಢಪಡುತ್ತಿದ್ದಂತೆ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಧಾರ ಪ್ರಕಟಿಸಿದ್ದಾರೆ.

2018 ರಲ್ಲಿ ಇತಿಹಾಸದ ಭೀಕರ ಪ್ರವಾಹ ಮತ್ತು 2019 ರಲ್ಲಿ ಅದರ ವಿನಾಶಕಾರಿ ಪುನರಾವರ್ತನೆಯ ನಂತರ ಘೋಷಿಸಿದ್ದ ಪರಿಹಾರ ಪ್ಯಾಕೇಜ್‌ಗಿಂತ ಈ ಹಣಕಾಸಿನ ಪ್ಯಾಕೇಜ್ ದೊಡ್ಡದಾಗಿದೆ. ಏಕೆಂದರೆ ವೈರಸ್-ಪರಿಣಾಮವು ವ್ಯಾಪಕವಾಗಲಿದೆ ಎಂದು ವಿಜಯನ್ ಹೇಳಿದ್ದಾರೆ.
ಹಣಕಾಸು ಪ್ಯಾಕೇಜ್‌ನಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸರ್ಕಾರ ನೀಡಬೇಕಾಗಿರುವ ವಿವಿಧ ಬಾಕಿಗಳನ್ನು ತೆರವುಗೊಳಿಸಲು 1,40,000 ಕೋಟಿ, ಗ್ರಾಹಕ ಸಾಲದಲ್ಲಿ 2000 ಕೋಟಿ, ಎರಡು ತಿಂಗಳ ಕಲ್ಯಾಣ ಪಿಂಚಣಿಯನ್ನು ಮುಂಚಿತವಾಗಿ ವಿತರಿಸಲು 1,320 ಕೋಟಿ, ಮತ್ತು 500 ಕೋಟಿ ರುಪಾಯಿ ಆರೋಗ್ಯ ಪ್ಯಾಕೇಜ್ ಸೇರಿವೆ ಎಂದು ವಿಜಯನ್ ಹೇಳಿದರು.
ಇದರಲ್ಲಿ 2000 ಕೋಟಿಯನ್ನು ಉದ್ಯೋಗ ಖಾತರಿ ಕಾರ್ಯಕ್ರಮದಡಿ ಹೆಚ್ಚಿನ ಗ್ರಾಮೀಣ ಉದ್ಯೋಗಗಳಿಗೆ ಬಳಸಲಾಗುವುದು ಮತ್ತು 100 ಕೋಟಿಯನ್ನು ಈ ತಿಂಗಳವರೆಗೆ ಉಚಿತ ಪಡಿತರಕ್ಕಾಗಿ ಬಳಸಲಾಗುತ್ತದೆ ಎಂದು ಸಿಎಂ ಹೇಳಿದರು.


Click it and Unblock the Notifications