ಕೇರಳ ಮೂಲದ 43 ವರ್ಷದ ಉದ್ಯಮಿಗೆ ದುಬೈನಲ್ಲಿ 7.5 ಕೋಟಿ ಲಾಟರಿ

ಕೇರಳ ಮೂಲದ ಉದ್ಯಮಿ, 43 ವರ್ಷದ ರಂಜನ್ ಕುರಿಯನ್ ಎಂಬುವರಿಗೆ ಬುಧವಾರ ನಡೆದ DDF ಮಿಲೇನಿಯಂ ಮಿಲಿಯನೇರ್ ಡ್ರಾನಲ್ಲಿ ಹತ್ತು ಲಕ್ಷ ಡಾಲರ್ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಡಿಡಿಎಫ್ ಅಂದರೆ ದುಬೈ ಡ್ಯೂಟಿ ಫ್ರೀ ಎಂದರ್ಥ. ಕೇರಳ ರಾಜ್ಯದ ಕೊಟ್ಟಾಯಂನ ರಂಜನ್ ಗಲ್ಫ್ ನ್ಯೂಸ್ ಜತೆ ಮಾತನಾಡಿದ್ದಾರೆ.

ಈಗ ನಾನು ಗೆದ್ದಿರುವ ಈ ಹಣದಲ್ಲಿ ದೊಡ್ಡ ಮೊತ್ತವನ್ನು ಅಗತ್ಯ ಇರುವವರಿಗಾಗಿ ಮೀಸಲಿಡುತ್ತೇನೆ. ಈ ಗೆಲುವಿಗಾಗಿ ನಾನು ಆಭಾರಿ. ಯಾರಿಗೆ ಹಣದ ಅಗತ್ಯ ಇದೆಯೋ ಅವರೊಂದಿಗೆ ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ರಂಜನ್ ಕುರಿಯನ್ ಅವರು ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮದಲ್ಲಿ ಇದ್ದು, ಗೆದ್ದಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಉದ್ಯಮದ ಅಭಿವೃದ್ಧಿಗಾಗಿಯೂ ಬಳಸುತ್ತೇನೆ ಎಂದಿದ್ದಾರೆ.

ಕಳೆದ ಕೆಲವು ತಿಂಗಳಿಂದ ಕೊರೊನಾ ಕಾರಣದಿಂದಾಗಿ ಬಹಳ ಕಷ್ಟ ಇತ್ತು ಎಂದಿರುವ ಕುರಿಯನ್, ನನ್ನ ವ್ಯಾಪಾರ- ವ್ಯವಹಾರ ನಿಂತುಹೋಗಿತ್ತು. ಈ ಬಹುಮಾನದ ಹಣವನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ಕೇರಳ ಮೂಲದ 43 ವರ್ಷದ ಉದ್ಯಮಿಗೆ ದುಬೈನಲ್ಲಿ 7.5 ಕೋಟಿ ಲಾಟರಿ

ಇನ್ನು ಕಳೆದ 30 ವರ್ಷಗಳಿಂದ ದುಬೈನಲ್ಲೇ ನೆಲೆಸಿರುವ, ಭಾರತ ಮೂಲದ 57 ವರ್ಷ ಸೈಯದ್ ಹೈದ್ರೋಸ್ ಅಬ್ದುಲ್ಲಾ ಅವರಿಗೆ ಲಕ್ಕಿ ಡ್ರಾದಲ್ಲಿ ಬಿಎಂಡಬ್ಲ್ಯು ಬೈಕ್ ಬಂದಿದೆ. ದುಬೈನ ಪಾನೀಯ ಮಾರಾಟ ಕಂಪೆನಿಯಲ್ಲಿ ಅವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+