ಅಂತೂ ಕೇರಳ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
2017ರಲ್ಲಿ ನೀಡಿದ್ದ ಮಾತಿನಂತೆ ಕೇರಳ ರಾಜ್ಯ ಸರ್ಕಾರವು ಇಂಟರ್ ನೆಟ್ ಅನ್ನು ಮೂಲಭೂತ ಮಾನವ ಹಕ್ಕು ಎಂದು ಘೋಷಿಸಿ, 20 ಲಕ್ಷ BPL (ಬಡತನ ರೇಖೆಗಿಂತ ಕೆಳಗಿರುವವರು) ಕುಟುಂಬಗಳಿಗೆ ಉಚಿತವಾಗಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ.
ಕೇರಳದಲ್ಲಿ ಅಧಿಕಾರದಲ್ಲಿ ಇರುವ ಈಗಿನ ಸರ್ಕಾರ 2017ರಲ್ಲಿ ಭರವಸೆ ನೀಡಿತ್ತು. ಪ್ರತಿ ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ ಪುಕ್ಕಟೆ ಇಂಟರ್ ನೆಟ್ ನೀಡಲಿದೆ. ಇದಕ್ಕಾಗಿಯೇ ಸರ್ಕಾರದಿಂದ ಬಜೆಟ್ ನಲ್ಲಿ 1500 ಕೋಟಿ ರುಪಾಯಿ ಮೀಸಲಿಡಲಾಗಿದೆ.
ಇಂಟರ್ ನೆಟ್ ಮನುಷ್ಯರ ಮೂಲಭೂತ ಹಕ್ಕು ಎಂದಿರುವ ಸರ್ಕಾರ ಎಲ್ಲರಿಗೂ ಇಂಟರ್ ನೆಟ್ ದೊರಕಿಸುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಈಗ ಇರುವ ನೆಟ್ ವರ್ಕ್ ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್ (KSEB) ಮತ್ತು ಕೇರಳ ಸ್ಟೇಟ್ ಐಟಿ ಇನ್ಫ್ರಾಸ್ಟ್ರಕ್ಚರ್ (KSITL) ಲಿಮಿಟೆಡ್ ಜಂಟಿಯಾಗಿ ಬಿಪಿಎಲ್ ಕುಟುಂಬಗಳಿಗೆ, ಶಾಲೆ, ಸರ್ಕಾರಿ ಕಚೇರಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಒದಗಿಸಲಿವೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಪಾಲಿಗೆ ಈ ಟೆಂಡರ್ ಸಿಕ್ಕಿದೆ. KIIFB ನೆರವಿನೊಂದಿಗೆ 1548 ಕೋಟಿ ರುಪಾಯಿ ಬಜೆಟ್ ಹೊಂದಿಸಲಾಗುತ್ತದೆ. ಈಚೆಗೆ KIIFB ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ತನ್ನ ಮಸಾಲ ಬಾಂಡ್ ಅನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟ್ ಮಾಡಿದೆ.
ಆರಂಭದಲ್ಲಿ ಉಚಿತ ಇಂಟರ್ ನೆಟ್ ಅನ್ನು BPL ಕುಟುಂಬಗಳಿಗೇ ನೀಡಲಾಗುತ್ತದೆ. ಕೇರಳದಲ್ಲಿ 20 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಅವುಗಳಿಗೆ ಸಂಪೂರ್ಣ ಉಚಿತವಾಗಿ ಇಂಟರ್ ನೆಟ್ ಒದಗಿಸಲಾಗುತ್ತದೆ. ಇನ್ನು ಯಾರು BPL ಅಡಿಯಲ್ಲಿ ಬರುವುದಿಲ್ಲವೋ ಆದರೆ ಇಂಟರ್ ನೆಟ್ ಸಂಪರ್ಕ ಪಡೆಯುವಷ್ಟು ಆರ್ಥಿಕ ಚೈತನ್ಯ ಇರುವುದಿಲ್ಲವೋ ಅವರಿಗೆ ಸಬ್ಸಿಡಿ ಇಂಟರ್ ನೆಟ್ ಸಂಪರ್ಕ ಒದಗಿಸಲಾಗುತ್ತದೆ.
ಈ ನೆಟ್ ವರ್ಕ್ ಮೂಲಕ ಎಲ್ಲ ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಸಂಪರ್ಕ ಒದಗಿಸಲಾಗುತ್ತದೆ. ಒಟ್ಟು 30,000 ಅಂಥ ಸ್ಥಳಗಳಲ್ಲಿ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಮೂಲಕ ಸಂಪರ್ಕ ಒದಗಿಸಲಾಗುತ್ತದೆ.


Click it and Unblock the Notifications