ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಶಬರಿಮಲೆ (Shabarimala) ಕೂಡಾ ಒಂದು. ಪ್ರತೀ ವರ್ಷವೂ ಶಬರಿಮಲೆಯ ಅಯ್ಯಪ್ಪ ದೇವಾಲಯವು ಮಂಡಲ-ಮಕರವಿಳಕ್ಕು ಸೀಸನ್‌ನಲ್ಲಿ ತೆರೆಯುತ್ತದೆ. ಅದೇ ರೀತಿ ಇದೀಗ ಮಂಡಲ-ಮಕರವಿಳಕ್ಕು (Mandala-Makaravilakku) ಯಾತ್ರೆ ಆರಂಭವಾಗಿದೆ. ಈ ಹಿನ್ನೆಲೆ ದೇವಾಲಯದ ಬಾಗಿಲು ಕೂಡಾ ತೆರೆದಿದೆ.

ನವೆಂಬರ್ 17 ರಂದು ಮಂಡಲಂ-ಮಕರವಿಳಕ್ಕು ಯಾತ್ರಾ ಋತು ಆರಂಭಗೊಂಡಿದೆ. ಈ ಋತು ಆರಂಭಗೊಳ್ಳುವ ದಿನವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮಂಡಲಂ-ಮಕರವಿಳಕ್ಕು ಯಾತ್ರಾ ಋತು ಪ್ರಾರಂಭವಾಗುವ ಒಂದು ದಿನ ಮುನ್ನವೇ, ಇಡುಕ್ಕಿ ಜಿಲ್ಲಾಧಿಕಾರಿ ದಿನೇಶನ್ ಚೆರುವತ್ ಮತ್ತು ಇತರ ಅಧಿಕಾರಿಗಳು ಸೇರಿಕೊಂಡು ಭಾನುವಾರ ಸತ್ರಂ ಸಾಂಪ್ರದಾಯಿಕ ಅರಣ್ಯ ಮಾರ್ಗವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಶಬರಿಮಲೆ ಸನ್ನಿಧಾನಕ್ಕೆ ತೆರಳುವ ಭಕ್ತರಿಗಾಗಿ, ಸತ್ರಂ ಮತ್ತು ಪುಲ್ಲುಮೇಡು ಮೂಲಕ ಹಾದುಹೋಗುವ ಸಾಂಪ್ರದಾಯಿಕ ಅರಣ್ಯ ಮಾರ್ಗವನ್ನು ತೆರೆಯಲಿದೆ.
ಅಧಿಕಾರಿ ಡಿ. ಬೆನ್ನಿ ಅವರ ಪ್ರಕಾರ, ಸತ್ರಂನಿಂದ ಬರುವ ಯಾತ್ರಿಕರಿಗೆ ಬೆಳಿಗ್ಗೆ 7 ಗಂಟೆಯಿಂದ ಸಾಂಪ್ರದಾಯಿಕ ಅರಣ್ಯ ಮಾರ್ಗವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. "ಯಾತ್ರಿಕರ ಪ್ರವೇಶಕ್ಕೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಅನುಮತಿ ಇದೆ. ಭಕ್ತರಿಗೆ ಪ್ರವೇಶ ನೀಡುವ ಮೊದಲು ಇಲಾಖೆಯ ತಂಡವು ಅರಣ್ಯ ಮಾರ್ಗವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ನೀಡಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ ಯಾತ್ರಿಕರಿಗಾಗಿ ಸೀತಕ್ಕುಲಂ, ಝೀರೋ ಪಾಯಿಂಟ್, ಪುಲ್ಲುಮೇಡು ತವಳಂ, ಕಝುತಕ್ಕುಹಿ ಮತ್ತು ಪಂಡಿತವಳಂ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಪುಲ್ಲುಮೇಡಿನಲ್ಲಿ ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಸೀತಕ್ಕುಲಂ ಪಾಯಿಂಟ್‌ನಲ್ಲಿ ವೈದ್ಯಕೀಯ ಆಂಬ್ಯುಲೆನ್ಸ್ ಕೂಡಾ ನಿಲ್ಲಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
"ಅಯ್ಯನ್ ಮೊಬೈಲ್ ಅಪ್ಲಿಕೇಶನ್ ಭಕ್ತರಿಗೆ ಅರಣ್ಯ ಇಲಾಖೆಯ ಸಂಪೂರ್ಣ ಅಪ್ಡೇಟ್ ನೀಡುವುದಲ್ಲದೇ, ಅರಣ್ಯ ಇಲಾಖೆಯು ಸತ್ರಂ ಮಾರ್ಗದ ಮೂಲಕ ಸನ್ನಿಧಾನಂ ತಲುಪುವ ಎಲ್ಲಾ ಯಾತ್ರಿಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಅಯ್ಯನ್ ಅಪ್ಲಿಕೇಶನ್ ಅನ್ನು ಪೆರಿಯಾರ್ ಟೈಗರ್ ರಿಸರ್ವ್ ವೆಸ್ಟ್ ವಿಭಾಗವು ಈಗಾಗಲೇ ಅಭಿವೃದ್ಧಿ ಪಡಿಸಿದ್ದು, ಇದು ಯಾತ್ರಿಕರಿಗೆ, ವಿಶೇಷವಾಗಿ ಸತ್ರಂ ಅರಣ್ಯ ಮಾರ್ಗದಲ್ಲಿ ಸಂಚರಿಸುವವರಿಗೆ ಪ್ರಯೋಜನವಾಗಲಿದೆ" ಎಂದು ಅಧಿಕಾರಿಗಳು ತಿಳಿಸಿದರು.
ಇಡುಕ್ಕಿ ಜಿಲ್ಲಾಧಿಕಾರಿ ದಿನೇಶನ್ ಚೆರುವತ್ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಶೈಜು ಪಿ. ಜಾಕೋಬ್ ಸೇರಿಕೊಂಡು ಮಂಡಲಂ-ಮಕರವಿಳಕ್ಕು ಋತು ಆರಂಭವಾಗುವ ಮುನ್ನ ಅಂದರೆ ನವೆಂಬರ್ 16 ರ ಭಾನುವಾರ ಸಾಂಪ್ರದಾಯಿಕ ಅರಣ್ಯ ಮಾರ್ಗವನ್ನು ಪರಿಶೀಲಿಸಿ, ವ್ಯವಸ್ಥೆಗಳನ್ನು ಪರಿಶೀಲಿಸಲು ತಂಡವನ್ನು ನಿಯೋಜಿಸಿದರು. ಸುರಕ್ಷಿತ ಯಾತ್ರೆಗಾಗಿ ಎಲ್ಲಾ ಇಲಾಖೆಗಳು ಈಗಾಗಲೇ ಸಂಪೂರ್ಣ ಸಿದ್ಧತೆಗಳನ್ನು ಮಾಡಿವೆ ಎಂದು ಜಿಲ್ಲಾಧಿಕಾರಿ ಚೆರುವತ್ ಹೇಳಿದರು.
"ಕಳೆದ ಬಾರಿ ಮಕರ ಜ್ಯೋತಿ ದರ್ಶನದ ನಂತರ ಕೆಲವು ಅಂತರರಾಜ್ಯ ಭಕ್ತರು ರಾತ್ರಿಯಲ್ಲಿ ಪುಲ್ಲುಮೇಡುವಿನಿಂದ ಸನ್ನಿಧಾನಂಗೆ ಚಾರಣ ಮಾಡಲು ಪ್ರಯತ್ನಿಸಿದ್ದರು. ಆದರೆ ಈ ಬಾರಿ ರಾತ್ರಿಯ ಸಮಯದಲ್ಲಿ ಯಾವುದೇ ಭಕ್ತರಿಗೆ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಚಾರಣ ಮಾಡಲು ಅವಕಾಶ ನೀಡಲಾಗುವುದಿಲ್ಲ" ಎಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications