ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಕಸ ನಿರ್ವಹಣೆ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಕರ್ನಾಟಕದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ತ್ಯಾಜ್ಯ ನಿರ್ವಹಣೆಯ ಪ್ರಯತ್ನಗಳ ಕುರಿತು ಹೇಳುವಂತಹ ವೀಡಿಯೊ ಪೋಸ್ಟ್‌ವೊಂದನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಗ್ರಾಮದ ರೀತಿಯ ಅಭ್ಯಾಸ ಬೆಂಗಳೂರಿನಲ್ಲೂ ಕೂಡ ಅಳವಡಿಸಿದರೆ ನಾವು ಸ್ವಚ್ಛ ಬೆಂಗಳೂರನ್ನ ಕಾಣಬಹುದು ಎಂದು ಹೇಳಿದ್ದಾರೆ.
ವಂಡ್ಸೆ ಗ್ರಾಮದಲ್ಲಿ ಗ್ರಾಮದ ತ್ಯಾಜ್ಯವನ್ನು ಹೇಗೆ ಪರಿಣಾಮಕಾರಿಯಾಗಿ ಬೇರ್ಪಡಿಸುತ್ತದೆ ಮತ್ತು ಮರುಬಳಕೆ ಮಾಡುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನಾವು ಕಾಣಬಹುದು.ಒಬ್ಬರಿಂದ ಶೂರುವಾದ ಈ ಸ್ವಚ್ಛತೆ ಕಾರ್ಯ ಇಡೀ ಗ್ರಾಮವನ್ನೇ ಆವರಿಸುವಂತೆ ಮಾಡಿತು. ತಾವು ಬಳಸುವ ಹಸಿ ಹಾಗು ಒಣ ಕಸವನ್ನ ತಾವೆ ಬೇರ್ಪಡಿ ಹಸಿಕಸವನ್ನ ಗೊಬ್ಬರ ಹಾಗೆ ಹಸುಗಳಿಗೆ ನೀಡಿದ್ರೆ, ಇನ್ನು ಒಣ ಕಸ ಅಂದರೆ ಪ್ರಾಸ್ಟಿಕ್, ಗಾಜು ಕಬ್ಬಿಣ ಇಂತ ತ್ಯಾಜ್ಯಗಳನ್ನ ಮರುಬಳಕೆಗೆ ಮಾರುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಯ ಜೊತೆ ಜೊತೆಗೆ ಇಲ್ಲಿರುವ ಜನರು ಕಸದಿಂದ ಸಂಪಾದನೆಯನ್ನ ಕೂಡ ಮಾಡ್ತಿದ್ದಾರೆ. ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಈ ಮಾದರಿಯಾಗಿ ಪ್ರಸ್ತುತಪಡಿಸುತ್ತದೆ. ಹಳ್ಳಿಯ ವಿಧಾನದಿಂದ ಪ್ರಭಾವಿತರಾದ ಶಾ, ಬೆಂಗಳೂರಿನಲ್ಲಿ ಇದೇ ರೀತಿಯ ಉಪಕ್ರಮಗಳಿಗೆ ಕರೆ ನೀಡಿದರು, ನಗರದಲ್ಲಿ ಪ್ರತಿ ವಾರ್ಡ್‌ಗಳಲ್ಲೂ ಇದೇ ರೀತಿ ಕಸ ಮುಕ್ತ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನ ಶಾ ಅವರು ಒತ್ತಾಯಿಸಿದರು.

ಅವರ ಪೋಸ್ಟ್‌ನಲ್ಲಿ, ಶಾ ಪ್ರತ್ಯೆಕವಾಗಿ ಹೇಳಿರುವುದನ್ನ ನಾವು ನೋಡೋದಾದ್ರೆ, ಈ ಗ್ರಾಮ ನಮ್ಮೆಲ್ಲರಿಗೂ ಮಾದರಿ. ನಮ್ಮ ನಗರದಲ್ಲಿ ಪ್ರತಿ ವಾರ್ಡ್‌ಗಳಲ್ಲೂ ಈ ಕಸ ಮುಕ್ತ ಮಾದರಿ ವಾರ್ಡ್ಅನ್ನು ನಾವು ರಚಿಸಬಹುದೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿವಾಸಿಗಳು ಮತ್ತು ಸ್ಥಳೀಯ ಅಧಿಕಾರಿಗಳು ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯತ್ತ ಗಮನಹರಿಸುವಂತೆ ಉತ್ತೇಜಿಸಲು "ಸ್ವಚ್ಛ ವಾರ್ಡ್" ಸ್ಪರ್ಧೆಯನ್ನು ಪ್ರಾರಂಭಿಸುವಂತೆ ಅವರು ಶಿಫಾರಸು ಮಾಡಿದರು.
ಬೆಂಗಳೂರು ಕೂಡ ವಂಡ್ಸೆ ಗ್ರಾಮದಂತಹ ಕಸ ಮುಕ್ತ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಕಿರಣ್ ಮಜುಂದಾರ್-ಶಾ ಅವರ ಪೋಸ್ಟ್‌ಗೆ, ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಅವುಗಳಲ್ಲಿ ಹೆಚ್ಚಿನವು ತ್ಯಾಜ್ಯ ನಿರ್ವಹಣೆಯ ರಚನಾತ್ಮಕ ವಿಧಾನದ ಅಗತ್ಯವನ್ನು ಒತ್ತಿಹೇಳಿದವು.
ಇನ್ನು ಪೋಸ್ಟ್‌ಗೆ ಬಂದಂತ ಪ್ರತಿಕ್ರಿಯೆಗಳನ್ನ ನಾವು ಗಮನಿಸಿದ್ರೆ ಅದರಲ್ಲಿ ಒಬ್ಬರು, 1972ರ ಅಪಾರ್ಟ್‌ಮೆಂಟ್ ಕಾಯಿದೆಯಂತೆಯೇ ಬೆಂಗಳೂರಿನ ವಾರ್ಡ್‌ಗಳನ್ನು ಉಪ-ವಾರ್ಡುಗಳಾಗಿ ವಿಭಜಿಸುವುದು ಒಂದು ಸಲಹೆಯಾಗಿದೆ ಎಂದರು. ಹಾಗೆ ಉಪಕಾನೂನುಗಳ ಮೂಲಕ ಚುನಾಯಿತ ಸಮಿತಿಗಳು ತ್ಯಾಜ್ಯ ವಿಂಗಡಣೆ, ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು, ಪಾರ್ಕಿಂಗ್ ಮತ್ತು ಉದ್ಯಾನವನ ನಿರ್ವಹಣೆಯನ್ನು ನಿರ್ವಹಿಸುತ್ತವೆ. ಹೀಗಾಗಿ "ವಾರ್ಡ್‌ಗಳನ್ನು ಮತ್ತಷ್ಟು ಉಪ-ವಾರ್ಡುಗಳಾಗಿ ವಿಂಗಡಿಸಬೇಕು ಮತ್ತು ಉಪ-ವಾರ್ಡ್‌ನೊಳಗಿನ ಚುನಾಯಿತ ಸಮಿತಿಯು ತ್ಯಾಜ್ಯ ವಿಂಗಡಣೆ, ನೀರು, ಮಳೆನೀರು ಕೊಯ್ಲು, ಪಾರ್ಕಿಂಗ್ ಮತ್ತು ಉದ್ಯಾನವನಗಳು ಮತ್ತು ಮೈದಾನಗಳನ್ನು ನಿರ್ವಹಿಸಬೇಕು" ಎಂದು ಒಬ್ಬರು ನಟ್ಟಿಗರು ತಮ್ಮ ಪ್ರತಿಕ್ರಿಯೆಯನ್ನ ಪ್ರಸ್ತಾಪಿಸಿದರು.
ಇತರರು ಇದು ಸರಳವಾಗಿದೆ ಆದರೆ ಪರಿಣಾಮಕಾರಿ ಪರಿಹಾರ ಎಂದು ಕರೆದರು. ಅಲ್ಲದೆ ಘಟಕ-ಮಟ್ಟದ ಪ್ರತ್ಯೇಕತೆ ಮತ್ತು ತ್ಯಾಜ್ಯವನ್ನು ಖಾಲಿ ಮಾಡುವುದು ಉತ್ತಮ ಪರಿಹಾರವಾಗಿದೆ. ಸರಳವಾದರೂ ತುಂಬಾ ಪರಿಣಾಮಕಾರಿಯಾಗಿದೆ. ಇದು ಪ್ರತ್ಯೇಕಿಸದ ಬೃಹತ್ ಮಟ್ಟದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಮತ್ತೊಬ್ಬರು ಹೇಳಿದರು.
ಪ್ರತಿ ವಾರ್ಡ್‌ನೊಳಗೆ ಸ್ವಚ್ಛ ಕಚೇರಿ, ಸ್ವಚ್ಛ ರಸ್ತೆ, ಮತ್ತು ಸ್ವಚ್ಛ ಪ್ರದೇಶ ದಂತಹ ಉಪ-ಸ್ಪರ್ಧೆಗಳನ್ನು ಪರಿಚಯಿಸುವಂತಹ ಆಲೋಚನೆಗಳನ್ನು ಸಾಮೂಹಿಕ ಕ್ರಿಯೆಯನ್ನು ಪ್ರೇರೇಪಿಸುವ ಬಗ್ಗೆ ಹೇಳಿದ್ರು. ಒಂದು ಹೆಜ್ಜೆ ಮುಂದೆ ಸ್ವಚ್ಛ ಕಚೇರಿಯಂತಹ ಉಪ-ಸ್ಪರ್ಧೆಗಳು ಆಗಿರಬಹುದು. ಹೆಚ್ಚು ಜನರನ್ನು ತೊಡಗಿಸಿಕೊಳ್ಳಲು ಪ್ರತಿ ವಾರ್ಡ್‌ನೊಳಗೆ ಸ್ವಚ್ಛ ರಸ್ತೆ ಮತ್ತು ಸ್ವಚ್ಛ ಪ್ರದೇಶ ಎಂಬ ಸ್ಪರ್ಧೆಗಳನ್ನ ಮಾಡುವ ಮೂಲಕ ಕೂಡ ನಾವು ತ್ಯಜ್ಯಗಳನ್ನ ಸರಿಯಾಗಿ ನಿರ್ವಹಿಸಬಹುದು ಎಂದರು.
ಹೀಗಿದ್ದರು ಕೂಡ, ಕೆಲವರು ಸಂದೇಹವನ್ನ ವ್ಯಕ್ತಪಡಿಸಿದರು, ಬೆಂಗಳೂರಿನಲ್ಲಿ ಕಸ ಮಾಫಿಯಾ ನಿಭಾಯಿಸಲು ತುಂಬಾ ದೊಡ್ಡದಾಗಿರುವುದರಿಂದ ಇದು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರು.
ಇತ್ತೀಚೆಗೆ ನಾವು ಗಮನಿಸುವುದಾದ್ರೆ, 71 ವರ್ಷದ ಉದ್ಯಮಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರನ್ನು ಅವಲಂಬಿಸುವ ಬದಲು ನಗರದ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಗೆ ವಹಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿರುವುದು ನಿಜವಾಗ್ಲೂ ಗಮನಾರ್ಹ.
ಒಟ್ನಲ್ಲಿ ಅದೇನೆ ಇರಲಿ ಒಂದು ವಂಡ್ಸೆ ಎನ್ನುವ ಗ್ರಾಮ ತನ್ನ ಗ್ರಾಮವನ್ನ ಸ್ವಚ್ಛವಾಗಿಟ್ಟುಕೊಳ್ಳಲು ಇಂತಹ ಪ್ರಯತ್ನಗಳಿಗೆ ಮುಂದಾಗ್ತಿದೆ ಎಂದರೆ, ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಈ ಬಗ್ಗೆ ನಿಜವಾಗ್ಲೂ ಆಲೋಚನೆ ಮಾಡಬೇಕಾಗುತ್ತದೆ. ಕಸ ನಿರ್ವಹಣೆ ಎನ್ನುವಂತದ್ದು ಪಿಡುಗಲ್ಲ ಎನ್ನುವುದನ್ನ ಈ ಗ್ರಾಮ ಇಂದು ತೋರಿಸಿಕೊಟ್ಟಿದೆ. ಜೊತೆಗೆ ಇದೇ ಗ್ರಾಮವನ್ನ ಮಾಧರಿಯಾಗಿ ಇಟ್ಟುಕೊಂಡು ಜನರು ಎಲ್ಲರೂ ಒಟ್ಟಾಗಿ ಕಸ ನಿರ್ವಹಣೆಗೆ ಕೈ ಜೋಡಿಸಿದ್ರೆ ನಿಜವಾಗ್ಲು ಒಂದು ದಿನ ನಾವು ಸ್ವಚ್ಛ ಕರ್ನಾಟಕ ಮುಂದೊಂದು ದಿನ ಸ್ವಚ್ಛ ಭಾರತವನ್ನು ಕಾಣಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications