ನವದೆಹಲಿ, ಮಾರ್ಚ್ 19: ಚುನಾವಣಾ ಆಯೋಗ ಭಾನುವಾರ ಚುನಾವಣಾ ಬಾಂಡ್ ಗಳ ಹೊಸ ದತ್ತಾಂಶವನ್ನು ಬಹಿರಂಗಗೊಳಿಸಿದ್ದು ಸುಪ್ರೀಂ ಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಮಾಹಿತಿಯನ್ನು ಆಯೋಗ ಬಹಿರಂಗಪಡಿಸಿದೆ. ಕರ್ನಾಟಕದ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳಕ್ಕೂ ಸುಮಾರು 90 ಕೋಟಿ ರೂ. ದೇಣಿಗೆ ಸಂದಾಯವಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಮೈತ್ರಿ ಸರ್ಕಾರದ ಇದ್ದಾಗ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಜೆಡಿಎಸ್‌ಗೆ ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿಎಂಬಸಿ ಗ್ರೂಪ್, ಇನ್ಫೋಸಿಸ್ ಮತ್ತು ಬಯೋಕಾನ್ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳಿವೆ.

ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ " ನಮ್ಮ ಸಂಸ್ಥೆ ಯಾವುದೇ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿಲ್ಲ ಆದರೆ ವೈಯಕ್ತಿಕ ಮಟ್ಟದಲ್ಲಿ ಜೆಡಿಎಸ್ ಮತ್ತು ಇತರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದೇನೆ" ಎಂದು ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನ ಬರೆದುಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಬಯೋಕಾನ್ ಸಂಸ್ಥೆಯೂ, ಜೆಡಿಎಸ್ ಅಥವಾ ಇತರ ಯಾವುದೇ ಪಕ್ಷಕ್ಕೆ ಚುನಾವಣೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ವೈಯಕ್ತಿಕ ಮಟ್ಟದಲ್ಲಿ, ನಾನು ಜೆಡಿಎಸ್ ಮತ್ತು ಹಲವಾರು ಪಕ್ಷಗಳಿಗೆ ದೇಣಿಗೆ ನೀಡಿದ ಚುನಾವಣಾ ಬಾಂಡ್‍ಗಳನ್ನು ಖರೀದಿಸಿದೆ. ಚುನಾವಣೆಗೆ ಪ್ರಚಾರಗಳಿಗೆ ಧನಸಹಾಯ ನೀಡುವ ತತ್ವದ ಮೇಲೆ ನನ್ನ ದೇಣಿಗೆಗಳು ನಾಮಮಾತ್ರವಾಗಿದೆ . ದೇಣಿಗೆ ನೀಡಿದ ಹಣವೂ ಸಂಪೂರ್ಣ ವೈಟ್ ಮನಿಯಾಗಿದೆ ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಇದಲ್ಲದೇ ಪ್ರತ್ಯೇಕ ಪೋಸ್ಟ್‌ಗಳಲ್ಲಿ "ಮಜುಂದಾರ್-ಶಾ ಅವರು, "ನಾನು ವೈಯಕ್ತಿಕವಾಗಿ ಮಾಡುವ ಕೆಲಸವು ನನ್ನ ಕಂಪನಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅದು ನನ್ನ ವೈಯಕ್ತಿಕ ಹಣ ಮತ್ತು ನನ್ನ ಖಾತೆ. ಚುನಾವಣಾ ಬಾಂಡ್‌ಗಳ ಮೂಲಕ ಅವರು ನೀಡಿದ ಒಟ್ಟು ದೇಣಿಗೆ 6 ಕೋಟಿ ರೂ. ಎಂದು ಹೇಳಿದ್ದಾರೆ"
ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮಜುಂದಾರ್ ಅವರು ಪ್ರತಿ ತಿಂಗಳು 5 ಕೋಟಿ ದೇಣಿಗೆ ನೀಡುತ್ತಿದ್ದರು ಎಂದು ಬಳಕೆದಾರರೊಬ್ಬರು ಆರೋಪಿಸಿದ್ದರು. ಅದಕ್ಕೆ ಈ ಪೋಸ್ಟ್ ನಲ್ಲಿ ಉತ್ತರಿಸಿರುವ ಶಾ ಅವರು ನಿಮ್ಮ ಲೆಕ್ಕ ತಪ್ಪು ನಾನು ಇದುವರೆಗೂ ಕೇವಲ 6ಕೋಟಿ ರೂ.ಗಳನ್ನು ಮಾತ್ರ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಮಾಜಿ ವಕ್ತಾರ ತನ್ವೀರ್ ಅಹಮದ್, "ನೀವು ವೈಯಕ್ತಿಕವಾಗಿ ಹಣವನ್ನು ದೇಣಿಗೆ ನೀಡುವ ಮೂಲಕ ಜೆಡಿಎಸ್ ಪ್ರಚಾರಕ್ಕೆ ಸಹಾಯ ಮಾಡಿದ್ದೀರಿ, ಬಯೋಕಾನ್ ಸಂಸ್ಥೆಯಿಂದ ನೀಡಿದ ನೆರವು ಅಲ್ಲ. ನಗದು ದೇಣಿಗೆಯನ್ನು ನೀಡುವ ಚುನಾವಣಾ ಬಾಂಡ್‌ಗಳ ಸ್ಥಗಿತಗೊಳಿಸಬೇಕು ಎಂದು ನೀವು ಆ ವೇಳೆ ನನ್ನ ಬಳಿ ಮಾತನಾಡಿದ್ದು ನನಗೆ ನೆನಪಿದೆ . ಬಯೋಕಾನ್ ನಮಗೆ ಏನನ್ನೂ ನೀಡಲಿಲ್ಲ. ಆದರೆ ನೀವು ನೀಡಿದ ನಿಮ್ಮ ವೈಯಕ್ತಿಕ ಹಣ,ದೇಣಿಗೆ ನಿಜವಾಗಿಯೂ ನಮಗೆ ಸಹಾಯ ಮಾಡಿದೆ. ನಾನು ನಿಮ್ಮಿಂದ ಬಾಂಡ್‌ಗಳನ್ನು ಸ್ವೀಕರಿಸಿದ ಕಾರಣ ನನಗೆ ಇದು ನೆನಪಿದೆ." ಎಂದು ಬರೆದುಕೊಂಡಿದ್ದಾರೆ. ಕಿರಣ್ ಮಜುಂದಾರ್-ಶಾ ಅವರ ಸ್ಪಷ್ಟೀಕರಣಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.


Click it and Unblock the Notifications