ಶೀಘ್ರದಲ್ಲೇ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಗಬಹುದು. ಹೌದು,ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು(Kisan Credit Card Limit) ಸದ್ಯದಲ್ಲಿ ಮೋದಿಸರ್ಕಾರ ಹೆಚ್ಚಿಗೆ ಮಾಡಬಹುದು.ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದೆ.ವರದಿಗಳ ಪ್ರಕಾರ, ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಗೆ ಮಾಡಲು ಪ್ಲಾನ್ ಮಾಡುತ್ತಿದೆ.
ಹೌದು, ರೈತರಿಗಾಗಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭ ಮಾಡಿದ್ದು,ಈ ಯೋಜನೆಯ ರೈತರ ಹಣಕಾಸು ಅಗತ್ಯವನ್ನು ಸರಿದೂಗಿಸುವಂತಹ ಕಾರ್ಯವನ್ನು ಮಾಡುತ್ತಿದೆ.

ರೈತರಿಗೆ ಶೀಘ್ರದಲ್ಲೇ ಸಿಹಿಸುದ್ದಿ
ಕೃಷಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿಯಲ್ಲಿ, ರೈತರು ಮುಂಗಡವಾಗಿ ಹೆಚ್ಚಿನ ಸಾಲವನ್ನು ಪಡೆದುಕೊಳ್ಳಬಹುದು.ಮುಂಗಾರು ಋತುವಿಗೆ ಆರಂಭಕ್ಕೂ ಮುನ್ನ ರೈತರಿಗೆ ನೆರವು ನೀಡುವುದು ಸರ್ಕಾರದ ಈ ಕ್ರಮದ ಉದ್ದೇಶವಾಗಿದೆ. ಯೋಜನೆಯನ್ನು ಪಶುಸಂಗೋಪನೆ ಮತ್ತು ಮೀನುಗಾರರು ಸಹ ಪ್ರಯೋಜನ ಪಡೆಯುತ್ತಾರೆ. ಪ್ರಸ್ತುತ ಈ ಯೋಜನೆಯಲ್ಲಿ ರೈತರು ಈಗಾಗಲೇ ಕೆಸಿಸಿ ಮೂಲಕ 3 ಲಕ್ಷ ರೂ.ಗಳವರೆಗೆ ಸಾಲ ಪಡೆಯುತ್ತಿದ್ದು, ಇದನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲು ಯೋಚನೆಯನ್ನು ಮಾಡಲಾಗಿದೆ ಈ ಸಾಲ ಶೇಕಡಾ 4 ರಷ್ಟು ರಿಯಾಯಿತಿ ಬಡ್ಡಿದರವನ್ನು ನೀಡುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು
ಕೇಂದ್ರ ಸರ್ಕಾರ 1998 ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿತ್ತು. ರೈತರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶ. ಈ ಕಾರ್ಡ್ ಮೂಲಕ ರೈತರು ಕೇವಲ ಶೇ.4 ರ ವಾರ್ಷಿಕ ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ಸುರಕ್ಷಿತ ಮತ್ತು ಅಸುರಕ್ಷಿತ ಸಾಲ ಆಯ್ಕೆಗಳನ್ನು ಒಳಗೊಂಡಿದೆ.
ಕೆಸಿಸಿಗೆ ಅಗತ್ಯವಿರುವ ದಾಖಲೆಗಳು
ಸುರಕ್ಷಿತ ಸಾಲಗಳಿಗೆ ಭೂಮಿಯಂತಹ ಮೇಲಾಧಾರ ಬೇಕಾಗುತ್ತದೆ, ಆದರೆ ಅಸುರಕ್ಷಿತ ಸಾಲಗಳಿಗೆ ಯಾವುದೇ ಒತ್ತೆ ಇಡುವಂತಹ ಅಗತ್ಯವಿಲ್ಲ. ಕೆಸಿಸಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳಲ್ಲಿ ಪಾಸ್‌ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಮತ್ತು ಭೂ ದಾಖಲೆಗಳು ಸೇರಿವೆ.
ಕೆಸಿಸಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
ಹಂತ 1: ನೀವು ಯಾವ ಬ್ಯಾಂಕ್‌ನಿಂದ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತೀರೋ ಆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು
ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ
ಹಂತ 3: ಅಪ್ಲೈ ಮೇಲೆ ಕ್ಲಿಕ್ ಮಾಡಿ
ಹಂತ 4: ಫಾರ್ಮ್ ಅನ್ನು ಭರ್ತಿ ಮಾಡಿಕೊಳ್ಳಿ
ಹಂತ 5: ಸಬಿಟ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ನೀವು ಮೊದಲಿಗೆ ನಿಮ್ಮ ಹತ್ತಿರದ ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಿ. ತದನಂತರ ಬ್ಯಾಂಕ್‌ನ ಪ್ರತಿನಿಧಿಗಳ ಸಹಾಯದ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಎಲ್ಲ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅವು ಎಲ್ಲವನ್ನು ಬ್ಯಾಂಕ್‌ಗೆ ಸಲ್ಲಿಕೆ ಮಾಡಿದರೆ ಅರ್ಜಿ ಸಲ್ಲಿಕೆಯಾಗುತ್ತದೆ.
ಸಹಾಯವಾಣಿ
ರೈತರ ಸಹಾಯಕ್ಕಾಗಿ, ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯವಾಣಿ 0120-6025109 / 155261 ಅಥವಾ [email protected] ಇಮೇಲ್ ಮೂಲಕವೂ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈ ಮೇಲಿನಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಲಿಕೆ ಮಾಡುವ ಮೂಲಕ ರೈತರು ಸಾಲವನ್ನು ಪಡೆದುಕೊಂಡು ರೈತರು ತಮ್ಮ ಹಣಕಾಸು ಅಗತ್ಯವನ್ನು ಸರಿದೂಗಿಸಬಹುದಾಗಿದೆ.ಈ ಯೋಜನೆಯ ಮೂಕಲ ಎಷ್ಟೋ ರೈತರ ಪ್ರಾಣ ಉಳಿದಿದೆ.


Click it and Unblock the Notifications