ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ಎಂಬುದು ರಾಜ್ಯದಲ್ಲಿ ಸ್ಥಾಪಿತವಾದರೂ ವಿಶ್ವದೆಲ್ಲೆಡೆ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಸಹಕಾರಿ ಸಂಸ್ಥೆಯ ಮುಖ್ಯ ಬ್ರಾಂಡ್ "ನಂದಿನಿ" (Nandini) ಆಗಿದೆ. ಭಾರತದ ಎರಡನೇ ಅತೀ ದೊಡ್ಡ ಡೈರಿ ಸಹಕಾರಿ ಸಂಸ್ಥೆ ಇದೆಂದು ಗುರುತಿಸಿಕೊಂಡಿದೆ. ಕರ್ನಾಟಕದ ಹೆಮ್ಮೆಯ ನಂದಿನಿ ಬ್ರಾಂಡ್ ತುಪ್ಪ, ಹಾಲು, ಮೊಸರು, ಸಿಹಿತಿಂಡಿಗಳನ್ನು ಮಾರಾಟ ಮಾಡುವುದಲ್ಲದೇ, ತಿರುಪತಿ ಲಡ್ಡು ತಯಾರಿಕೆಯಲ್ಲೂ ತನ್ನದೇ ಖ್ಯಾತಿಯನ್ನು ಗಳಿಸಿಕೊಂಡಿದೆ. ಇದೀಗ ಅಂತಹ ಜನಪ್ರಿಯ ಬ್ರಾಂಡ್ ಗ್ರಾಹಕರ ಅನುಕೂಲಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ನಂದಿನಿ ಬ್ರಾಂಡ್‌ನ ಉತ್ಪನ್ನಗಳು ಬಳಕೆಯಲ್ಲಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ನಂದಿನಿ ಬೂತ್‌ಗಳೂ ಇದೆ. ಆದರೆ ಇದೀಗ ನಂದಿನಿ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳ ಜೊತೆ, ಬೇರೆ ಉತ್ಪನ್ನಗಳು ಮಾರಾಟ ಮಾಡುವಂತಿಲ್ಲ. ಈಗಾಗಲೇ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ನಂದಿನಿ ಬೂತ್‌ಗಳಲ್ಲಿ ಕ್ರಮ ಕೈಗೊಳ್ಳಲು ಕೆಎಂಎಫ್ ಮುಂದಾಗಿದೆ.
ನಂದಿನಿ ಬಿಟ್ಟು ಬೇರೆ ಉತ್ಪನ್ನ ಮಾರುವಂತಿಲ್ಲ!
ಹೌದು, ಈಗಾಗಲೇ ನಂದಿನಿ ಹಲವಾರು ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದೆ. ಜೊತೆಗೆ ಮಾರಾಟವೂ ಮಾಡುತ್ತಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ನಂದಿನಿ ಮಲಿಗೆಗಳು ಕೂಡಾ ಚಾಲ್ತಿಯಲ್ಲಿದೆ ಇತ್ತೀಚೆಗೆ ಈ ನಂದಿನಿ ಮಳಿಗೆಗಳಲ್ಲಿ ನಂದಿನಿ ಬಿಟ್ಟು ಬೇರೆ ಕಂಪನಿ ಉತ್ಪನ್ನಗಳು ಮಾರಾಟವಾಗುತ್ತಿರುವುದನ್ನು ಕೆಎಂಎಫ್ ಕಂಡುಕೊಂಡಿದೆ. ಆದ್ರೆ ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೆಎಂಎಫ್ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಂದರೆ ನಂದಿನಿ ಹೊರತುಪಡಿಸಿ ಬೇರೆ ಕಂಪನಿ ಪ್ರೊಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕರಿಗೆ KMF ನೋಟಿಸ್ ನೀಡಲು ಮುಂದಾಗಿದ್ದು, ಸೂಚನೆ ಮೀರಿಯೂ ಒಂದು ವೇಳೆ ತನ್ನ ಬುದ್ಧಿ ಬಿಡದಿದ್ದರೆ ಅಂತಹ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಕೆಎಂಎಫ್ ಎಂಡಿ ಶಿವಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ.
ಸೂಚನೆ ಬೆನ್ನಲ್ಲೇ ಎಚ್ಚೆತ್ತ ಮಾರಾಟಗಾರರು
ನಂದಿನಿ ಮಳಿಗೆಯಲ್ಲಿ ಕೇವಲ ನಂದಿನಿ ಉತ್ಪನ್ನಗಳು ಮಾತ್ರವಲ್ಲದೇ ಬೇರೆ ಕಂಪನಿಗಳ ತಿಂಡಿ, ಲೇಸ್, ನೀರಿನ ಬಾಟಲಿ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯಾಗಿತ್ತು. ಈ ಹಿನ್ನೆಲೆ ಕೆಎಂಎಫ್ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಲಿದೆ. ಇದೀಗ ಈ ಕ್ರಮ ಬೆನ್ನಲ್ಲೇ ಎಚ್ಚೆತ್ತ ಮಾರಾಟಗಾರರು ಪ್ರತಿಕ್ರಿಯಿಸಿ, ನಂದಿನಿ ಮಳಿಗೆಗಳ ಬಾಡಿ ಹೆಚ್ಚಿರುವ ಕಾರಣ, ಕೇವಲ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದ್ರೆ ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೇ ಕೆಎಂಎಫ್ ಕೂಡಾ ಈ ಸಂಬಂಧ ನೋಟಿಸ್ ನೀಡಿದೆ ಆದ್ದರಿಂದ ಇನ್ಮುಂದೆ ನಂದಿನಿ ಮಳಿಗೆಗಳಲ್ಲಿ ಬೇರೆ ಪ್ರೊಡಕ್ಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಶುದ್ಧತೆ ಮತ್ತು ಗುಣಮಟ್ಟದಿಂದಾಗಿ ನಂದಿನಿ ಉತ್ಪನ್ನಗಳು ಭಾರೀ ಖ್ಯಾತಿಯನ್ನು ಪಡೆದುಕೊಂಡಿದೆ. ಆದ್ರೆ ಇತ್ತೀಚೆಗೆ ಗ್ಯಾಂಗ್‌ವೊಂದು ನಂದಿನಿ ಬ್ರಾಂಡ್‌ನ ಖ್ಯಾತಿಗೆ ಮಸಿ ಬಳಿಯುವ ಯತ್ನ ಮಾಡಿತ್ತು. ಆದ್ರೆ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಪ್ರಕರಣದ ಬೆನ್ನಲ್ಲೇ ಕೆಎಂಎಫ್ ಕೂಡಾ ಎಚ್ಚೆತ್ತುಕೊಡಿದ್ದು, ಖತರ್ನಾಕ್ ಚೋರರನ್ನು ಜೈಲಿಗಟ್ಟಲು ನಿರ್ಧರಿಸಿದೆ. ಅಲ್ಲದೇ ಈ ಕ್ರಮಕ್ಕೆ ಮುಂದಾಗಿದೆ.


Click it and Unblock the Notifications