ನವದೆಹಲಿ, ಏಪ್ರಿಲ್ 29: ದುಬೈ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣವನ್ನು ಪ್ರಾರಂಭಿಸಿದೆ. ಇದನ್ನು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಮುಂಬರುವ ವರ್ಷಗಳಲ್ಲಿ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು ಎಂದು ಎಮಿರೇಟ್ ಸರ್ಕಾರ ಘೋಷಿಸಿದೆ.

UAE PM HH ಶೇಖ್ ಮೊಹಮ್ಮದ್ ಅವರು ಭಾನುವಾರ ಎಕ್ಸ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. "ಇಂದು, ನಾವು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್‌ಗಳ ವಿನ್ಯಾಸಗಳನ್ನು ಅನುಮೋದಿಸಿದ್ದೇವೆ. ದುಬೈನ ಏವಿಯೇಷನ್ ಕಾರ್ಪೊರೇಷನ್ ತಂತ್ರದ ಭಾಗವಾಗಿ AED 128 ಶತಕೋಟಿ ವೆಚ್ಚದಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ದುಬೈನಲ್ಲಿ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣದ ವೈಶಿಷ್ಟ್ಯಗಳು
ಸಾಮರ್ಥ್ಯ:
ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದ್ದು, ವಾರ್ಷಿಕವಾಗಿ 260 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಗಾತ್ರ:
ಇದು ಪ್ರಸ್ತುತ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.
ಮೂಲಸೌಕರ್ಯ:
ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವು 400 ವಿಮಾನ ಗೇಟ್‌ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ
ರನ್ವೇಗಳು
ಇದು ವಾಯು ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಐದು ಸಮಾನಾಂತರ ರನ್‌ವೇಗಳನ್ನು ಹೊಂದಿರುತ್ತದೆ.
ಆವಿಷ್ಕಾರ:
ಯೋಜನೆಯು ಹೊಸ ವಾಯುಯಾನ ತಂತ್ರಜ್ಞಾನಗಳನ್ನು ಪರಿಚಯಿಸುತ್ತದೆ. ಇದು ವಾಯುಯಾನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸುತ್ತದೆ.
ವೆಚ್ಚ:
ಈ ಯೋಜನೆಗೆ ಸುಮಾರು ₹2900 ಕೋಟಿ ವೆಚ್ಚವಾಗಲಿದೆ.
ಅವಧಿ:
ವರ್ಷಕ್ಕೆ 150 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಮೊದಲ ಹಂತವು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ದುಬೈ ಸೌತ್‌ನ ವಿಮಾನ ನಿಲ್ದಾಣದ ಸುತ್ತಲೂ ಅವರು ಸಂಪೂರ್ಣ ನಗರವನ್ನು ನಿರ್ಮಿಸುತ್ತಿದ್ದಾರೆ. ಇದು ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ವಲಯಗಳಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸುತ್ತದೆ. ನಾವು ಭವಿಷ್ಯದ ಪೀಳಿಗೆಗೆ ಹೊಸ ಯೋಜನೆ ರೂಪಿಸುತ್ತಿದ್ದೇವೆ. ಇದು ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರವಾದ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ, ದುಬೈ ವಿಶ್ವದ ವಿಮಾನ ನಿಲ್ದಾಣ, ಅದರ ಬಂದರು, ಅದರ ನಗರ ಕೇಂದ್ರ ಮತ್ತು ಅದರ ಹೊಸ ಜಾಗತಿಕ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.


Click it and Unblock the Notifications