ದೇಶದ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ (Karnataka) ಕೂಡಾ ಒಂದು. ಉದ್ಯಮ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು ಎಐ, ಟೆಕ್ನಾಲಜಿ, ಕೈಗಾರಿಕೆ, ವ್ಯವಹಾರೋದ್ಯಮಗಳಲ್ಲಿ ದಿನೇ ದಿನೇ ಅಭಿವೃದ್ಧಿ ಕಾಣುತ್ತಲೇ ಇದೆ. ಇದೀಗ ಭಾರತ ಸರ್ಕಾರ ಕರ್ನಾಟಕದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ (Helicopter Final Assembly Line-FAL) ಇಂದು ಆರಂಭವಾಗಲಿದೆ. ಕೋಲಾರದ ವೇಮಗಲ್‌ನ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.

"ಮೇಡ್ ಇನ್ ಇಂಡಿಯಾ"ದ ಮತ್ತೊಂದು ಹೆಜ್ಜೆ!
ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಫ್ಟರ್ ನಿರ್ಮಾಣ ಘಟಕ ಇಂದು (ಫೆ.17) ಉದ್ಘಾಟನೆಯಾಗಲಿದೆ. ಇದು ಭಾರತದ ಮೇಡ್ ಇನ್ ಇಂಡಿಯಾ ಅಭಿಯಾನಕ್ಕೆ ಮಹತ್ವದ ಹೆಜ್ಜೆಯಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಯುರೋಪಿಯನ್ ಏರೋಸ್ಪೇಸ್ ದೈತ್ಯ ಏರ್‌ಬಸ್ ಹೆಲಿಕಾಪ್ಟರ್ಸ್ ಸಂಸ್ಥೆಗಳು ಜೊತೆಗೂಡಿ ಸ್ಥಾಪನೆಯಾಘಿರುವ ಈ ಘಟಕವು, ಏರ್‌ಬಸ್ H125 ಸಣ್ಣ ಮಟ್ಟದಲ್ಲು ಉಪಯೋಗವಾಗುವ ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ.
ಫ್ರಾನ್ಸ್ ಅಧ್ಯಕ್ಷ, ಭಾರತ ಪ್ರಧಾನಿಯಿಂದ ಉದ್ಘಾಟನೆ!
ಇನ್ನು ಈ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ವರ್ಚುವಲ್ ಮೂಲಕ ಇಂದು ಸಂಜೆ ವೇಳೆಗೆ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಹಾಗೂ ಏರೋಸ್ಪೇಸ್ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಯೋಜನೆಯ ವಿವರ:
ಹೆಲಿಕಾಪ್ಟರ್ ಮಾದರಿ: ಏರ್‌ಬಸ್ ಹೆಚ್125 (ಸಣ್ಣ ಹೆಲಿಕಾಪ್ಟರ್). ಇದು ವಿಶ್ವದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿ ಮಾಡುವ ಯೋಜನೆ ಹೊಂದಿದ್ದು, ಮುಂದಿನ 20 ವರ್ಷಗಳಲ್ಲಿ ಸುಮಾರು 500 ಹೆಲಿಕಾಪ್ಟರ್ ಉತ್ಪಾದನೆ ಮಾಡಲು ಘಟಕ ಸಜ್ಜಾಗಿದೆ.
ಬೆಂಗಳೂರಿನಿಂದ ಕೇವಲ 2 ಗಂಟೆಗಳ ದೂರದಲ್ಲಿರುವ, ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಈ ಘಟಕ ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಇನ್ನು ಈ ಯೋಜನೆಯ ಮುಖ್ಯ ಉದ್ದೇಶವೇ, ಭಾರತದ ಉದ್ಯಮ ಜಗತ್ತನ್ನು ವಿಶ್ವಕ್ಕೆ ಪರಿಚಯಿಸುವುದು. ಭಾರತದಲ್ಲಿ ಮಾತ್ರವಲ್ಲದೇ, ಇತರ ದೇಶಗಳಿಗೂ ಉತ್ಪನ್ನವನ್ನು ರಫ್ತು ಮಾಡುವುದೇ ಇದರ ಮುಖ್ಯ ಗುರಿ.
ಇನ್ನು ಈ ಹೆಲಿಕಾಪ್ಟರ್ ಉತ್ಪಾದನಾ ಘಟಕದಿಂದ ಸಾವಿರಾರು ಜನರಿಗೆ ಉದ್ಯೋಗವಕಾಶಗಳು ದೊರೆಯಲಿದೆ. ಅಲ್ಲದೇ ಕೋಲಾರ ಜಿಲ್ಲೆಯ ಯುವಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಗಿಟ್ಟಿಸಲು ಅವಕಾಶ ಸಿಗಲಿದೆ. ಪ್ರಸ್ತುತ ಈ ಘಟಕ ಮೇಡ್ ಇನ್ ಇಂಡಿಯಾ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.
ಫ್ರಾನ್ಸ್ ಹಾಗೂ ಟಾಟಾ ಕಂಪನಿ ಜೊತೆ ಒಪ್ಪಂದ!
ಇನ್ನು ಈ ಹೆಲಿಕಾಪ್ಟರ್ ಉತ್ಪಾದನ ಘಟಕಕ್ಕೆ ಫ್ರಾನ್ಸ್ ಮತ್ತು ಟಾಟಾ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರವಾಗಿ ಕೋಲಾರ ಗುರುತಿಕೊಳ್ಳಲಿದೆ.


Click it and Unblock the Notifications