ಇತ್ತೀಚೆಗೆ ಚಿತ್ರದುರ್ಗದಲ್ಲಾದ ಬಸ್ ದುರಂತ (Chitradurga Bus Accident( ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಡಿಸೆಂಬರ್ 25ರ ಗುರುವಾರ ಮುಂಜಾನೆ ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ್ಲಿ ಸೀಬರ್ಡ್ ಟೂರಿಸ್ಟ್ ಬಸ್‌ಗೆ ಲಾರಿ ಡಿಕ್ಕೆ ಹೊಡೆದ ಪರಿಣಾಮ ಟೂರಿಸ್ಟ್ ಬಸ್ ಹೊತ್ತಿ ಉರಿದಿತ್ತು. ಈ ದುರಂತದಿಂದಾಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕಳೆದ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರು ಬರುತ್ತಿದ್ದ ಖಾಸಗಿ ಬಸ್ ಒಂದು, ಆಂಧ್ರದ ಕರ್ನೂಲ್ ಬಳಿ ಹೊತ್ತಿ ಉರಿದಿತ್ತು. ಇದೀಗ ಈ ಎಲ್ಲಾ ದುರಂತಗಳನ್ನು ಗಮನಿಸಿದ ಸರ್ಕಾರ, ಪ್ರಯಾಣಿಕರ ಸುರಕ್ಷತೆಗಾಗಿ, ಬಸ್ ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

ಸರ್ಕಾರದಿಂದ ಮಹತ್ವದ ನಿರ್ಧಾರ!
ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಲೀಪರ್ ಹಾಗೂ ಎಸಿ ಬಸ್‌ಗಳಲ್ಲಿ ಸಂಭವಿಸಿದ ಅಗ್ನಿ ದುರಂತಗಳನ್ನು ಗಮನಿಸಿ, ಕೆಎಸ್‌ರ್‌ಟಿಸಿ ಸುರಕ್ಷತಾ ಕಾಳಜಿ ಹೆಚ್ಚಿಸಿವೆ. ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಎಲ್ಲಾ ಸ್ಲೀಪರ್ ಬಸ್‌ಗಳಿಗೆ ಡ್ಯಾಶ್ ಕ್ಯಾಮೆರಾ ಮತ್ತು ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ, ಚಾಲಕರ ದಕ್ಷ ಸೇವೆಯೇ ಸರ್ಕಾರದ ಉದ್ದೇಶವಾಗಿದೆ.
ಏನಿದರ ಪ್ರಯೋಜನ?
ಇತ್ತೀಚೆಗೆ ಎಸಿ, ಸ್ಲೀಪರ್ ಬಸ್ ದುರಂತಗಳು ಹೆಚ್ಚಾಗಿ ಕೇಳಿಬರುತ್ತಿದೆ. ಈ ಪರಿಣಾಮ ಸಾವು-ನೋವುಗಳು ಹೆಚ್ಚಾಗಿದ್ದು, ಸರ್ಕಾರದ ಮೇಲೂ ಓತ್ತಡ ಹೆಚ್ಚಾಗಿದೆ. ಆದ್ದರಿಂದ ಎಚ್ಚೆತ್ತ ಸರ್ಕಾರ ಇದೀಗ ಕೆಸ್‌ಆರ್‌ಟಿಸಿ ಬಸ್‌ಗಳಲ್ಲಿ ಡ್ಯಾಶ್ ಕ್ಯಾಮೆರಾ ಮತ್ತು ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ. ಏಕೆಂದರೆ ಚಾಲಕರ ವರ್ತನೆ, ಚಾಲನಾ ಮಾದರಿ ಹಾಗೂ ಬಸ್‌ನೊಳಗಿನ ಸುರಕ್ಷತೆಯನ್ನು ಮೇಲ್ವೀಚಾರಣೆ ಮಾಡುವ ಉದ್ದೇಶದಿಂದ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂಬಾರಿ ಉತ್ಸವದಂತಹ ಆಯ್ದ ಪ್ರೀಮಿಯಂ ಬಸ್‌ಗಳಲ್ಲಿದ್ದ ಈ ಸೌಲಭ್ಯವನ್ನು ಈಗ ಸಂಪೂರ್ಣ ಸ್ಲೀಪರ್ ಬಸ್‌ಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ಪ್ರಯಾಣಿಕರ ಸುರಕ್ಷತೆಯೇ ಪ್ರಮುಖ ಆದ್ಯತೆ!
ಪ್ರಯಾಣಿಕರ ಸುರಕ್ಷತೆಯೇ ಪ್ರಮುಖ ಆದ್ಯತೆ ಎಂದಿರುವ ಕೆಎಸ್‌ಆರ್‌ಟಿಸಿ, ಇದೀಗ ಸುರಕ್ಷತಾ ಪ್ರೊಟೊಕಾಲ್‌ಗಳನ್ನು ಬಿಡುಗಡೆ ಮಾಡಿದೆ. ಪಲ್ಲಕ್ಕಿ ಎಸಿ/ನಾನ್-ಎಸಿ ಸ್ಲೀಪರ್, ಕೊರೋನಾ ಎಸಿ/ನಾನ್-ಎಸಿ ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್ ಸೀಟರ್, ಅಂಬಾರಿ ಉತ್ಸವ, ಮತ್ತು ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ಗಳಿಗೆ ಈ ನಿಯಮಗಳು ಅನ್ವಯವಾಗುತ್ತದೆ. .
ಪಲ್ಲಕ್ಕಿ ಮತ್ತು ಅಂಬಾರಿ ಬಸ್‌ಗಳು ಸೇರಿದಂತೆ, ಆಧುನಿಕ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ಗಳಲ್ಲಿ ಫೈರ್ ಡಿಟೆಕ್ಷನ್ ಮತ್ತು ಸುಪ್ರಿಸನ್ ಸಿಸ್ಟಮ್ (FDSS) ಅಳವಡಿಸಲಾಗಿದೆ. ಇವು ಬೆಂಕಿಯ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಿ, ಎಂಜಿನ್ ವಿಭಾಗದಂತಹ ಅಪಾಯಕಾರಿ ಸ್ಥಳಗಳಲ್ಲಿ ಬೆಂಕಿ ತಗುಲದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಬಸ್ ಸಿಬ್ಬಂದಿಗಳಿಗೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡುತ್ತದೆ.
ಇನ್ನು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸುವುದಲ್ಲದೇ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳು, ತುರ್ತು ನಿರ್ಗಮನ, ಅಗ್ನಿಶಾಮಕ ಯಂತ್ರ, ಪ್ಯಾನಿಕ್ ಬಟನ್‌ಗಳನ್ನೂ ಅಳವಡಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೂ ಮತ್ತಷ್ಟು ಸಹಕಾರಿಯಾಗಲಿದೆ.


Click it and Unblock the Notifications