ತೀರದ ಸಾಲ..ಸಾಲಕ್ಕೆ ಮುಂದಾದ ಸಿದ್ದರಾಮಯ್ಯ! ಶೇ.15 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದ್ದರೂ ಸಾಲ ತಗೆದುಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದೆ ಹೌದು,ಭವಿಷ್ಯ ನಿಧಿ (ಪಿಎಫ್) ಹಾಗೂ ಇಂಧನ ಖರೀದಿ ಮಾಡಿದ ಬಾಕಿ ಹಣವನ್ನು ಪಾವತಿ ಮಾಡಲು 624 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳಲು ಸಿದ್ದವಾಗಿದೆ. ಹಾಗಿದ್ರೆ ಬ್ಯಾಂಕ್ ಸಾಲಕ್ಕೆ ಯಾವ ದಾಖಲೆಗಳನ್ನು ಒತ್ತೆ ಇಡಬೇಕು? ಯಾವ ಬ್ಯಾಂಕ್‌ನಲ್ಲಿ ಸಾಲ ? ಮರುಪಾವತಿ ಯಾವಾಗ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಸರ್ಕಾರದ ಆದೇಶದಂತೆ ಕೆಎಸ್‌ಆರ್‌ಟಿಸಿ ಈ ಸಾಲವನ್ನು ಪಡೆಯುತ್ತಿದೆ. ಭವಿಷ್ಯ ನಿಧಿ ಮತ್ತು ಡೀಸೆಲ್‌ಗೆ ಸಂಬಂಧಿಸಿದ ಬಾಕಿ ಬಾಕಿಗಳನ್ನು ತೀರಿಸಲು ಎಲ್ಲಾ ಆರ್‌ಟಿಸಿಗಳು 2,000 ಕೋಟಿ ರೂ. ಸಾಲವನ್ನು ಪಡೆಯುತ್ತವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾಹಿತಿ ತಿಳಿಸಿದ್ದಾರೆ.

623.8 ಕೋಟಿ ರೂ.ಗಳ ಟರ್ಮ್ ಲೋನ್
ಸಾಲವನ್ನು ಪಡೆಯಲು ಸರ್ಕಾರಿ ಸಾರ್ವಜನಿಕ ಸಾರಿಗೆ ಸಂಸ್ಥೆಯು 623.8 ಕೋಟಿ ರೂ.ಗಳ ಟರ್ಮ್ ಲೋನ್‌ಗಾಗಿ ಹಣಕಾಸು ಸಂಸ್ಥೆಗಳಿಂದ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಆಹ್ವಾನವನ್ನು ನೀಡಿದೆ. ಸಾಲವನ್ನು ಒಂದೇ ಕಂತಿನಲ್ಲಿ ಪಡೆಯಲಿದೆ. ಸಾಲದ ಮರುಪಾವತಿಗೆ ಏಳು ವರ್ಷಗಳ ಕಾಲಾವಕಾಶವನ್ನು ನೀಡಲಾಗಿದೆ.
ನಾಲ್ಕು ನಿಗಮಗಳಿಂದ ಇರುವ ಸಾಲದ ಬಾಕಿಯೆಷ್ಟು?
ಸಾರಿಗೆ ಇಲಾಖೆಯಿಂದ ನಾಲ್ಕು ನಿಗಮಗಳಿಮದ ಒಟ್ಟು ಸುಮಾರು 4,800 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದೆ. ಬಾಕಿ ಮೊತ್ತ 3,000 ಕೋಟಿ ಆಗಿದೆ. ಈಗಾಗಲೇ ಸರ್ಕಾರ ಸಾರಿಗೆ ಇಲಾಖೆಗೆ 2,000 ಕೋಟಿ ರೂ.ಗಳ ಸಾಲವನ್ನು ಅನುಮೋದಿಸಿದೆ.ಈ ಸಾಲವನ್ನು ಸರ್ಕಾರ ಖಾತರಿಪಡಿಸುವುದರಿಂದ ನಾವು ಯಾವುದೇ ಸ್ವತ್ತುಗಳನ್ನು ಒತ್ತೆ ಇಡುತ್ತಿಲ್ಲ ಎಂದು ಅವರು ಸಾಲದ ದಾಖಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದರು.
ಶೇ.15 ರಷ್ಟು ಪ್ರಯಾಣ ದರ ಹೆಚ್ಚಳವಾದರೂ ತೀರದ ಸಾಲ
ಜನವರಿ 2 ರಂದು, ಕರ್ನಾಟಕ ಸಚಿವ ಸಂಪುಟವು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ ಶೇ.15 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮೋದನೆ ಸಹ ನೀಡಲಾಗಿತು.
ಇನ್ನೂ ನವೆಂಬರ್ 2024ರ ತಿಂಗಳಲ್ಲಿ ಭವಿಷ್ಯ ನಿಧಿ(ಇಪಿಎಫ್) ಮತ್ತು ಇಂಧನ ಪಾವತಿಗಳಂತಹ ಬಾಕಿ ಇರುವ ಶಾಸನಬದ್ಧ ಬಾಕಿಗಳನ್ನು ತೆರವುಗೊಳಿಸಲು ಹಣಕಾಸು ಸಂಸ್ಥೆಗಳಿಂದ 2,000 ಕೋಟಿ ರೂ.ಗಳ ಸಾಲವನ್ನು ಖಾತರಿಪಡಿಸುವ ಪ್ರಸ್ತಾವನೆಯನ್ನು ಸಹ ಸಂಪುಟವು ಒಪ್ಪಿಗೆಯನ್ನು ಸೂಚಿಸಿತ್ತು. ಆದರೂ ಸಹ ಸಾಲ ಮಾತ್ರ ಹಾಗೇಯೇ ಉಳಿದಿದೆ.
ಜನವರಿ ತಿಂಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚಳವಾದರೂ ಸಹ ಸಾರಿಗೆ ಇಲಾಖೆ ಸಾಲದಲ್ಲಿ ಮುಳುಗಿ ಹೋಗಿದೆ. ಶಕ್ತಿ ಯೋಜನೆ ಎಫೆಕ್ಟ್ ನಿಂದ ಸಾರಿಗೆ ಇಲಾಖೆ ಸಾಲು ಸಾಲು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ನವೆಂಬರ್ 2024 ರ ವೇಳೆಗೆ ನಾಲ್ಕು ಆರ್‌ಟಿಸಿಗಳು ಪಿಎಫ್ ನಿಧಿ ಬಾಕಿಗಳು, ಗ್ರಾಚ್ಯುಟಿ, ಇಂಧನ ಪೂರೈಕೆ ಬಾಕಿಗಳು, ಪಿಂಚಣಿ ಹೊಣೆಗಾರಿಕೆಗಳು ಮತ್ತು ಇತರ ಬಾಧ್ಯತೆಗಳು ಸೇರಿದಂತೆ 6,330.25 ಕೋಟಿ ರೂ.ಗಳ ಸಂಯೋಜಿತ ಹೊಣೆಗಾರಿಕೆಗಳನ್ನು ಹೊಂದಿದ್ದಾವೆ ಎಂದರು.
ಭವಿಷ್ಯ ನಿಧಿ ವರ್ಗಾವಣೆ, ಪಿಂಚಣಿ ಮತ್ತು ಇತರ ಬಾಕಿಗಳ ಪಾವತಿಗಳನ್ನು ಮುಂದೂಡಲಾಗಿದೆ. ಭವಿಷ್ಯ ನಿಧಿ ಬಾಕಿಯಲ್ಲಿ 2,901.5 ಕೋಟಿ ರೂ. ಮತ್ತು ಇಂಧನ ಬಾಕಿಯಲ್ಲಿ 827.37 ಕೋಟಿ ರೂ. ಸೇರಿದಂತೆ ಎಲ್ಲಾ ಬಾಕಿಗಳನ್ನು ಸರಿದೂಗಿಸಲು ಒಟ್ಟು 5,527.4 ಕೋಟಿ ರೂ. ಅಗತ್ಯವಿದೆ. ಇದರಲ್ಲಿ ಸರ್ಕಾರದಿಂದ 3,728.9 ಕೋಟಿ ರೂ.ಗಳನ್ನು ಕೋರಲಾಗಿದೆ.
ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿ ಟಿಕೆಟ್ ದರವೇ ದುಬಾರಿಯಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications