ಬೆಂಗಳೂರಿನ ಲಾಲ್‌ಬಾಗ್ ಪುಷ್ಪ ಪ್ರದರ್ಶನ ಈ ಬಾರಿ ವಿಭಿನ್ನವಾಗಿ ಮೂಡಿಬರಲಿದೆ. ಉದ್ಯಾನನಗರಿ ಬೆಂಗಳೂರು ರಾಜ್ಯದ ಕಣ್ಮನ ಸೆಳೆಯಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಒಟ್ಟು 11 ದಿನಗಳ ಪುಷ್ಪ ಪ್ರದರ್ಶನಕ್ಕೆ ಸಾಕಷ್ಟು ಮೊತ್ತವನ್ನ ವೆಚ್ಚ ಮಾಡಿ ಬರ್ಜರಿಯಾಗಿ ತಯಾರಿ ನಡೆಸ್ತಿದೆ. ಅಲ್ಲದೆ ಈ ಬಾರಿ ಬೆಂಗಳೂರಿಗರಲ್ಲದೆ ಬೆರೆಕಡೆಯಿಂದಲೂ ಕೂಡ ಜನಗಳು ಬರುವ ನಿರೀಕ್ಷೆ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನವರಿ 16ರಂದು ಪುಷ್ಪ ಪ್ರದರ್ಶನವನ್ನ ನಡೆಸಲಾಗ್ತಿದೆ. ಈ ಪುಷ್ಪ ಪ್ರದರ್ಶನಕ್ಕಾಗಿ ಈಗಾಗಲೇ ಸಿದ್ದತೆಗಳು ಕೂಡ ಆರಂಭವಾಗಿವೆ. ಈ ವರ್ಷ 217ನೇ ಪುಷ್ಪ ಪ್ರದರ್ಶನದ ಸಂಭ್ರದಲ್ಲಿ ಸಿಲಿಕಾನ್ ಸಿಟಿ ಮಂದಿ ಇದ್ದಾರೆ. ಅಲ್ಲದೆ ಫಲ ಫುಷ್ಪ ಪ್ರದರ್ಶನಕ್ಕೆ ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಪುಷ್ಪ ಪ್ರದರ್ಶನಕ್ಕೆ ಬೇಕಾಗುವ ಎಲ್ಲಾ ಕೆಲಸಗಳು ಆರಂಭವಾಗಿವೆ.

ಪ್ರತೀ ವರ್ಷ ಕೂಡ ವರ್ಷದ ಆರಂಭದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ಪುಷ್ಪ ಪ್ರದರ್ಶನವನ್ನ ಮಾಡಲಾಗುತ್ತದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯವರು ನಾನಾ ರೀತಿಯ ವುಷಯಗಳನ್ನ ಇಟ್ಟುಕೊಂಡು ಪ್ರತೀ ವರ್ಷ ಕೂಡ ವಿಭಿನ್ನವಾಗಿ ಪುಷ್ಪ ಪ್ರದರ್ಶನಗಳನ್ನ ನೆಡೆಸುತ್ತಾರೆ. ಜನವರಿ 16 ರಿಂದ ಆರಂಭವಾಗುವ ಪುಷ್ಪ ಪ್ರದರ್ಶನ ಜನವರಿ 26 ರವರೆಗೆ 11 ದಿನಗಳ ಕಾಲ ನಡೆಯಲಿದೆ. ಈ ಪುಷ್ಪ ವೈಬೋಗವನ್ನ ಕಣ್ತುಂಬಿಕೊಳ್ಳಲು ಬೆಂಗಳೂರು ಮಾತ್ರವಲ್ಲದೆ ಬೇಬೇರೆ ಭಾಗಗಳಿಂದ ಕೂಡ ಜನರು ಆಗಮಿಸುತ್ತಾರೆ.
ಈ ವರ್ಷದ ಪುಷ್ಪ ಪ್ರದರ್ಶನದ ಥೀಮ್ ಏನು?
ಪ್ರತೀ ವರ್ಷ ಕೂಡ ಒಂದೊಂದು ಥೀಮ್‌ಗಳನ್ನ ಇಟ್ಟುಕೊಂಡು ಲಾಲ್‌ಬಾಗ್ ಪುಷ್ಪಪ್ರದರ್ಶನವನ್ನ ಆಯೋಜಿಸಲಾಗುತ್ತದೆ. ಹಾಗೆ ಈ ಬಾರಿ ಕೂಡ ಮಹರ್ಷಿ ವಾಲ್ಮಿಕಿ ಅವರ ವಿಷಯವನ್ನಿಟ್ಟುಕೊಂಡು ಪುಷ್ಪ ಪ್ರದರ್ಶನವನ್ನ ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ರಾಮಾಯಣ ಕೆಲ ಸನ್ನಿವೇಶಗಳನ್ನ ಕೂಡ ಹೂಗಳಿಂದ ಸೃಷ್ಟಿ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ಸಜ್ಜಾಗ್ತಿದೆ. ಜೊತೆಗೆ ಬೇರೆ ಬೇರೆ ಕಡೆಗಳಿಂದ ನಾನಾ ರೀತಿಯ ಹೂವುಗಳನ್ನ ತರಿಸಲಾಗ್ತಿದೆ.
ಈ ಬಾರಿಯ ಪುಷ್ಪ ಪ್ರದರ್ಶನಕ್ಕೆ 25 ಲಕ್ಷಕ್ಕೂ ಹೆಚ್ಚು ಹೂವುಗಳನ್ನ ತರಿಸಲಾಗ್ತಿದೆ. ಜೊತೆಗೆ 85 ವಿಭಿನ್ನ ಹೂವುಗಳ ಮೂಲಕ ಈ ಬಾರಿಯ ಲಾಲ್‌ಬಾಗ್ ಪುಷ್ಪ ಪ್ರದರ್ಶನ ಮೂಡಿಬರಲಿದೆ. ಇನ್ನು ಇದರ ಜೊತೆಗೆ ಲಾಲ್ ಬಾಗ್‌ನಲ್ಲಿ ಬೆಳೆಯುವ ಹೂಗಳನ್ನ ಕೂಡ ಬಳಕೆ ಮಾಡಲಾಗ್ತಿದೆ. ಸೇವಂತಿಗೆ, ಗುಲಾಬಿ ಹೀಗೆ 10 ತರದ ಹೂಗಳನ್ನ ಬಳಕೆ ಮಾಡಲಾಗ್ತಿದೆ.
ಈ ಬಾರಿ ಪುಷ್ಪ ಪ್ರದರ್ಶನದ ಬಜೆಟ್ ಎಷ್ಟು?
ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕಾಗಿ ಬಾರಿ ಮೊತ್ತವನ್ನ ಬಳಕೆ ಮಾಡಲಾಗುತ್ತಿದೆ. ಇತರೆ ಭಾಗಗಳಿಂದ ಬೇರೆನೇರೆ ಜಾತಿಯ ಹೂಗಳ ತರಿಸಲು ಹಾಗೆ ವರ್ಷದ ಥೀಮ್‌ನ ಪ್ರಕಾರ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲು ತೋಟಗಾರಿಕೆ ಇಲಾಖೆ ದೊಡ್ಡ ಮೊತ್ತವನ್ನ ವೆಚ್ಚ ಮಾಡಿ ನಡೆಸಲಾಗುತ್ತಿದೆ. ಹೌದು ಈ ವರ್ಷದ 2.5 ಕೋಟಿ ವೆಚ್ಚದ ಪುಷ್ಪ ಪ್ರದರ್ಶನವನ್ನ ನಡೆಸಲಾಗುತ್ತಿದೆ.
ಈ ಹಿಂದೆ 2024ರಲ್ಲಿ ಸ್ವತಂತ್ರ ದಿನಾಚರಣೆ ವೇಳೆ 27 ಲಕ್ಷ ಹೂವುಗಳನ್ನ ಬಳಕೆ ಮಾಡುವ ಮೂಲಕ ಪುಷ್ಪ ಪ್ರದರ್ಶನವನ್ನ ನಡೆಸಲಾಗಿತ್ತು ಹಾಗೆ 2.8 ಕೋಟಿ ವೆಚ್ಚದ ಪುಷ್ಪ ಪ್ರದರ್ಶನವನ್ನ ನಡೆಸಲಾಗಿತ್ತು. ಹಾಗೆ 2023ರಲ್ಲಿ ಸ್ವತಂತ್ರ ದಿನಾಚರಣೆಯ ವೇಳೆ 81.5 ಲಕ್ಷ ವೆಚ್ಚದ ಪುಷ್ಪ ಪ್ರದರ್ಶನವನ್ನ ನಡೆಸಲಾಗಿತ್ತು. ಆಗ ಕೂಡ ಪುಷ್ಪ ಪ್ರದರ್ಶನವನ್ನ ನೋಡಲು 2 ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದರು.
ಹಾಗೆ ಈ ವರ್ಷ 2025ರಲ್ಲಿ ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕೆ 10 ಲಕ್ಷಲ್ಲೂ ಹೆಚ್ಚು ಜನರನ್ನ ಆಕರ್ಷಿಸುವ ನಿರೀಕ್ಷೆ ಇದೆ. ಫೈಬರ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ವಾಲ್ಮೀಕಿಯ ಪ್ರತಿಮೆಯನ್ನ 11 ಅಡಿ ಪುಷ್ಪ ನಮನದೊಂದಿಗೆ ಇಡಲಾಗುವುದು.
ಇನ್ನು ಇದಕ್ಕಾಗಿ ಉಷ್ಣವಲಯದ ಹೂವುಗಳಾದ ಸಾಲ್ವಿಯಾ, ಜಿನ್ನಿಯಾ ಮತ್ತು ಪೆಟೂನಿಯಾ ಜೊತೆಗೆ ಉಪೋಷ್ಣವಲಯದ ಮತ್ತು ಸಮಶೀತೋಷ್ಣ ಹೂವುಗಳಾದ ಕೆಮಿಲಿಯಾ, ಅಜೇಲಿಯಾ, ಸೈಕ್ಲಾಮೆನ್, ಬಿಗೋನಿಯಾ, ಇಂಪೇಷಿಯೆನ್ಸ್‌ಗಳನ್ನು ಹೂವುಗಳನ್ನ ಕರ್ನಾಟಕದ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ತಮಿಳುನಾಡಿನ ಊಟಿಯಿಂದ ತರಿಸಲಾಗುತ್ತಿದೆ.
ಪುಷ್ಪ ಪ್ರದರ್ಶನದ ಟಿಕೆಟ್ ಬೆಲೆಗಳು
ಈ ವರ್ಷದ ಪುಷ್ಪ ಪ್ರದರ್ಶನವನ್ನ ನೋಡಲು ಈಗಾಗಲೇ ಟಿಕೆಟ್ ದರವನ್ನ ನಿಗದಿ ಮಾಡಲಾಗಿದೆ. ವಯಸ್ಕರರಿಗೆ ವಾರದ ದಿನಗಳಲ್ಲಿ 80 ರೂ. ನಿಗದಿ ಮಾಡಲಾಗಿದೆ. ಹಾಗೆ ವಾರಾಂತ್ಯದಲ್ಲಿ 100 ರೂ.ಗಳನ್ನ ನಿಗದಿ ಮಾಡಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ಟಿಕೆಟ್ ದರ 30 ರೂ. ಇರಲಿದೆ. ಹಾಗೆ ಸಮವಸ್ತ್ರದಲ್ಲಿರುವ 10ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ.


Click it and Unblock the Notifications