Lalbagh Flower Show: ಲಾಲ್‌ಬಾಗ್‌ ಫ್ಲವರ್‌ ಶೋನಲ್ಲಿ "ತೇಜಸ್ವಿ ವಿಸ್ಮಯ"! ಟಿಕೆಟ್‌ ದರ ಎಷ್ಟು?

ಬೆಂಗಳೂರು: ಪ್ರತೀ ವರ್ಷ ಸ್ವಾಂತಂತ್ರ್ಯ ದಿನಾಚರಣೆ ವೇಳೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತದೆ. ವಿಭಿನ್ನ ಥೀಮ್‌ ಮೂಲಕ ಹೂವುಗಳನ್ನು ಅಲಂಕರಿಸಿ, ಫ್ಲವರ್‌ ಶೋ (Lalbagh Flower Show 2026) ಹಮ್ಮಿಕೊಳ್ಳಲಾಗುತ್ತದೆ. ಇದೀಗ 2026 ರಲ್ಲೂ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಕಾರ್ಯಕ್ರಮ ಆರಂಭವಾಗಿದೆ.

ಲಾಲ್‌ಬಾಗ್‌ ಫ್ಲವರ್‌ ಶೋನಲ್ಲಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಥೀಮ್‌ನಲ್ಲಿ ಫ್ಲವರ್‌ ಶೋ:
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 2026ರ ಜನವರಿ ಗಣರಾಜ್ಯೋತ್ಸವದಂದು ನಡೆಯುವ ಪುಷ್ಪ ಪ್ರದರ್ಶನವು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ವೈಭವವನ್ನು ಹೂವಿನ ಲೋಕದಲ್ಲಿ ಅನಾವರಣಗೊಳಿಸಲಿದೆ. "ತೇಜಸ್ವಿ ವಿಸ್ಮಯ" ಎಂಬುದು ಈ ಬಾರಿಯ ಮುಖ್ಯ ವಿಷಯವಾಗಿದೆ. ನಗರದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳಲ್ಲೊಂದಾದ ಈ ಕಾರ್ಯಕ್ರಮ, ಆಕರ್ಷಕ ಥೀಮ್‌ಗಳೊಂದಿಗೆ ಈಗಾಗಲೇ ವೀಕ್ಷಕರಿಗೆ ನೋಡಲು ಸಿದ್ಧಗೊಂಡಿದೆ.

2025ರ ಆಗಸ್ಟ್ ಸ್ವಾತಂತ್ರ್ಯೋತ್ಸವದ ಪುಷ್ಪ ಪ್ರದರ್ಶನಕ್ಕೆ ಹೋಲಿಸಿದರೆ, 2026ರ ಜನವರಿಯ ಪ್ರದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ. ಸುಮಾರು 11 ಲಕ್ಷ ಜನರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಇದು ಬೆಂಗಳೂರಿನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

"ತೇಜಸ್ವಿ ವಿಸ್ಮಯ" 13 ದಿನಗಳ ಈ ಫಲಪುಷ್ಪ ಪ್ರದರ್ಶನದ ಮುಖ್ಯ ವಿಷಯ. ಮಹಾನ್ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ, ಸಾಹಿತ್ಯ ಮತ್ತು ಆಸಕ್ತಿಗಳಿಗೆ ವಿಶೇಷ ಗೌರವ ಸಲ್ಲಿಸುವುದು ಇದರ ಉದ್ದೇಶ. ಅವರ ಸಮಗ್ರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಹೂಗಳಿಂದ ಇಲ್ಲಿ ಮರುಸೃಷ್ಟಿಸಲಾಗುತ್ತದೆ.

ವಿವಿದ ಹೂವುಗಳಿಂದ ಅಲಂಕಾರ
ಪ್ರದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ 95ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಡಾರ್ಜಿಲಿಂಗ್‌ಗಳಿಂದ ಸಂಗ್ರಹಿಸಲಾಗಿದೆ. ಒಟ್ಟು 32 ಲಕ್ಷ ಹೂಗಳಿಂದ ತೇಜಸ್ವಿಯವರ ಕಲಾ ಪಯಣಕ್ಕಾಗಿ ಲಾಲ್‌ಬಾಗ್‌ನ್ನು ಶೃಂಗಾರಗೊಳಿಸಲಿವೆ. ಇವುಗಳಲ್ಲಿ 27 ಲಕ್ಷ ಹೂವುಗಳು ಲಾಲ್‌ಬಾಗ್‌ನಲ್ಲೇ ಬೆಳೆದವಾಗಿವೆ.

219ನೇ ಆವೃತ್ತಿಯ ಈ ಪುಷ್ಪ ಪ್ರದರ್ಶನವು ತೇಜಸ್ವಿ ಅವರ ಬರಹಗಳ ದಿನಗಳು, ಪ್ರಾಣಿ ಶಿಲ್ಪಗಳು, ಗ್ರಾಮೀಣ ಜೀವನ ಹಾಗೂ ಅರಣ್ಯಗಳನ್ನು ಹೂವಿನಲ್ಲಿ ಮರುಸೃಷ್ಟಿಸಲಿದೆ.

ಇನ್ನು ಇದೇ ಮೊದಲ ಬಾರಿಗೆ ಲಾಲ್‌ಬಾಗ್‌ನಲ್ಲಿ ಪರಿಸರ ಮತ್ತು ಕಾಡು ಪ್ರಾಣಿಗಳ ಕುರಿತಾದ ಬೃಹತಾಕಾರದ ಸ್ತಬ್ಧ ಚಿತ್ರಗಳಲ್ಲಿ ತಯಾರಿಸಲಾಗುತ್ತಿದೆ. ಇದು ನೋಡುಗರನ್ನು ಮತ್ತಷ್ಟು ಸೆಳೆಯುವಂತೆ ಮಾಡುತ್ತದೆ.

300ಕ್ಕೂ ಹೆಚ್ಚು ಬಗೆಯ ಕಾಡು ಹಣ್ಣುಗಳು (ತಿನ್ನಬಹುದಾದ, ತಿನ್ನಲಾರದ) ಪ್ರದರ್ಶಿತವಾಗಲಿವೆ. ತೇಜಸ್ವಿ ಆಸಕ್ತಿ ಬಿಂಬಿಸುವ 150ಕ್ಕೂ ಹೆಚ್ಚು ಪಕ್ಷಿ ಫೋಟೋಗಳು ಮತ್ತು 250 ಕೀಟಶಾಸ್ತ್ರದ ಮಾದರಿಗಳ ಫೋಟೋ ಗ್ಯಾಲರಿ ಕೂಡಾ ಇರಲಿದೆ ಎಂದು ಹೇಳಲಾಗಿದೆ. ಅಲ್ಲದೇ ತೇಜಸ್ವಿಯವರ ಪುಸ್ತಕಗಳನ್ನೂ ಇಲ್ಲಿ ಖರೀದಿಸಬಹುದು.

ಫ್ಲವರ್‌ ಶೋ ಸಮಯ:
ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026 ಜನವರಿ 14 ರಿಂದ 26 ರವರೆಗೆ ಪ್ರತಿದಿನ ಬೆಳಗ್ಗೆ 9:00 ರಿಂದ ಸಂಜೆ 6:00 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಆಗಮಿಸುವ ಅವಕಾಶ ಇರಲಿದೆ.

ಟಿಕೆಟ್‌ ಖರೀದಿಸುವುದು ಹೇಗೆ?
ಪ್ರವೇಶ ಟಿಕೆಟ್‌ಗಳನ್ನು ಡಬಲ್ ರೋಡ್, ಸಿದ್ಧಾಪುರ, ವೆಸ್ಟ್ ಗೇಟ್ ಮತ್ತು ಮುಖ್ಯ ದ್ವಾರಗಳಲ್ಲಿ ಖರೀದಿಸಬಹುದು. ಅಧಿಕೃತ ಆನ್‌ಲೈನ್ ಪೋರ್ಟಲ್‌ಗಳ ಮೂಲಕವೂ ಟಿಕೆಟ್‌ ಖರೀದಿಸಬಹುದು. ಇದು ಲಾಲ್‌ಬಾಗ್‌ ಫ್ಲವರ್‌ಶೋಗೆ ಹೋಗುವವರಿಗೆ ಸುಲಭ ಮತ್ತು ಅನುಕೂಲಕರವಾಗಿದೆ.

ಲಾಲ್‌ಬಾಗ್ ಪುಷ್ಪ ಪ್ರದರ್ಶನದ ಟಿಕೆಟ್ ದರಗಳು:
ವಾರದ ದಿನಗಳಲ್ಲಿ ವಯಸ್ಕರಿಗೆ ₹80, ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ವಯಸ್ಕರಿಗೆ ₹100 ರೂ. ಇರಲಿದೆ. 12 ವರ್ಷದೊಳಗಿನ ಮಕ್ಕಳಿಗೆ ₹30 ರೂ. ಈ ದರಗಳು ಎಲ್ಲರಿಗೂ ಕೈಗೆಟುಕುವಂತೆ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+