135 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಕಳೆದ ವರ್ಷ ಮಾರಾಟವಾಗಿರೋದು ಕೇವಲ 52 ಲ್ಯಾಂಬೋರ್ಗಿನಿ ಕಾರುಗಳು ಮಾತ್ರ. 2019ರಲ್ಲಿ ಮಾರಾಟವಾದ 52 ಲ್ಯಾಂಬೋರ್ಗಿನಿ ಕಾರುಗಳಲ್ಲಿ ನಮ್ಮ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಕಾರು ಖರೀದಿಸಿದವರಾಗಿದ್ದಾರೆ.
2019ರಲ್ಲಿ ದೇಶದಲ್ಲಿ 52 ಲ್ಯಾಂಬೋರ್ಗಿನಿ ಕಾರುಗಳು ಮಾರಾಟವಾಗಿದೆ. ಇದು ಹಿಂದಿನ ವರ್ಷಕ್ಕಿಂತ 15 ಪರ್ಸೆಂಟ್ ಬೆಳವಣಿಗೆಯನ್ನು ಸಾಧಿಸಿದೆ. ಆದರೆ ದೇಶದ ವಾಹನ ವಲಯದಲ್ಲಿನ ಮಂದಗತಿಯು ಸೂಪರ್ ಐಷಾರಾಮಿ ಕಾರಿನ ವಿಭಾಗಕ್ಕೆ ಹೊಡೆತ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

''ನಾವು 2020 ಈಗಿರುವ ಬೆಳವಣಿಗೆಯಲ್ಲಿ ವೇಗವನ್ನು ಹೆಚ್ಚಿಸಲು ಬಯಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಬೆಳವಣಿಗೆಯು ಅನಿರೀಕ್ಷಿತವಾಗಿರುವುದರಿಂದ ಎಷ್ಟು ಎಂದು ಹೇಳಲು ಸಾಧ್ಯವಿಲ್ಲ'' ಎಂದು ಲ್ಯಾಂಬೋರ್ಗಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್ ಹೇಳಿದ್ದಾರೆ.
ಸೂಪರ್ ಸ್ಪೋರ್ಟ್ಸ್ ಕಾರು 'ಹುರಾಕನ್ ಇವಿಒ ಆರ್‌ಡಬ್ಲ್ಯುಡಿ' ಬಿಡುಗಡೆಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಗರ್ವಾಲ್, 2.5 ಕೋಟಿಗಿಂತ ಹೆಚ್ಚಿನ ಬೆಲೆಯ ಕಾರುಗಳು ದೇಶದಲ್ಲಿ "ದೊಡ್ಡದಲ್ಲ" ಎಂದು ಹೇಳಿದರು. ಅಂದರೆ ಭಾರತದಲ್ಲಿ ಅತಿ ದುಬಾರಿ ಎಂದೇನಲ್ಲ ಎಂದರ್ಥ.
"2019 ರಲ್ಲಿ, ಸೂಪರ್ ಐಷಾರಾಮಿ ವಿಭಾಗದಲ್ಲಿ ಮಾರಾಟವು 260 ರಷ್ಟಿತ್ತು, ಇದು 2018 ರಲ್ಲಿ 315 ಕ್ಕಿಂತ ಕಡಿಮೆಯಾಗಿದೆ. ಇದಕ್ಕೆ ಕಾರಣ ದೇಶದಲ್ಲಿ ಆಟೋಮೊಬೈಲ್ ವಲಯದ ಮಂದಗತಿಯಾಗಿದೆ" ಎಂದು ಅಗರ್ವಾಲ್ ಹೇಳಿದ್ದಾರೆ. ಆದರೆ 2020 ರಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಸಹ ಅಂದಾಜಿಸಿದ್ದಾರೆ.


Click it and Unblock the Notifications