ಕಳೆದ ವರ್ಷ ಆರಂಭವಾದ ಉದ್ಯೋಗ ಕಡಿತ ಸೀಸನ್ ಈ ವರ್ಷವೂ ಕೂಡಾ ಮುಂದುವರಿದಿದೆ. ಉದ್ಯೋಗ ಕಡಿತ ಮಾಡುತ್ತಿರುವ ಸಂಸ್ಥೆಗಳ ಪಟ್ಟಿಗೆ ಇನ್ನೊಂದು ಸಂಸ್ಥೆ ಸೇರ್ಪಡೆಯಾಗಿದೆ. ಜರ್ಮನ್‌ನ ರಾಸಾಯನಿಕ ಸಂಸ್ಥೆಯಾದ ಬಿಎಎಸ್‌ಎಫ್ ಸುಮಾರು 2600 ಮಂದಿಯನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಮಾಡಿದೆ. ಸಂಸ್ಥೆಯು ರಾಸಾಯನಿಕವನ್ನು ತಯಾರಿ ಮಾಡುವ ಸಂಸ್ಥೆಯಾಗಿದೆ. ಜಾಗತಿಕವಾಗಿ ಶೇಕಡ 2ರಷ್ಟು ಉದ್ಯೋಗ ಕಡಿತ ಮಾಡುವುದನ್ನು ಘೋಷಣೆ ಮಾಡಿದೆ.
ಈ ಹಿಂದೆಯೂ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಬಹುತೇಕ ಎಲ್ಲ ಸಂಸ್ಥೆಗಳು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಅದರಂತೆಯೇ ರಾಸಾಯನಿಕ ತಯಾರಿ ಸಂಸ್ಥೆಯು ಉದ್ಯೋಗ ಕಡಿತ ಮಾಡಿದೆ. ಸಂಸ್ಥೆ ಕೆಲವು ಫಾಕ್ಟರಿ, ರಸಗೊಬ್ಬರ ಸಂಸ್ಥೆ ಮೊದಲಾದವುಗಳನ್ನು ಮುಚ್ಚುವ ನಿರ್ಧಾರ ಮಾಡಿದೆ. ಜರ್ಮನಿಯ Ludswighafen ಪ್ಲ್ಯಾಂಟ್‌ನಲ್ಲಿಯೇ 700 ಮಂದಿಯನ್ನು ವಜಾಗೊಳಿಸಲಾಗುತ್ತದೆ. ಇದು ಸಂಸ್ಥೆಯ ಅತೀ ಮುಖ್ಯ ಪ್ಲ್ಯಾಂಟ್ ಆಗಿದೆ.

ಷೇರಿನ ಬೈಬ್ಯಾಕ್ ಪ್ರೋಗ್ರಾಮ್ ಅನ್ನು ಕೂಡಾ ಸಂಸ್ಥೆ ನಿಲ್ಲಿಸಿದೆ. "ಯುರೋಪ್‌ನ ಸ್ಪರ್ಧಾತ್ಮಕತೆಯು ಮಿತಿಮೀರಿದ ನಿಯಂತ್ರಣ, ನಿಧಾನ ಮತ್ತು ಅಧಿಕಾರಶಾಹಿ ಅನುಮತಿ ಪ್ರಕ್ರಿಯೆಗಳಿಂದ ಹೆಚ್ಚು ಬಳಲುತ್ತಿದೆ. ನಿರ್ದಿಷ್ಟವಾಗಿ, ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಸಂಸ್ಥೆಯು ಸಾಕಷ್ಟು ಬಿಕ್ಕಟ್ಟಿನಲ್ಲಿ ಇದೆ," ಎಂದು ಬಿಎಎಸ್‌ಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಟಿನ್ ಬ್ರೂಡರ್‌ಮುಲ್ಲರ್ ತಿಳಿಸಿದ್ದಾರೆ. ಇನ್ನು, "ಅಧಿಕವಾಗಿ ಇಂಧನ ಬೆಲೆಯು ಈಗ ಯುರೋಪ್‌ನಲ್ಲಿ ಹೊರೆಯಾಗಿದೆ," ಎಂದು ಕೂಡಾ ಹೇಳಿದೆ.
ಹಲವಾರು ಬಿಕ್ಕಟ್ಟಿನಲ್ಲಿರುವ ಸಂಸ್ಥೆ
ವರದಿಯ ಪ್ರಕಾರ, ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ ಜಾಗತಿಕವಾಗಿ ಹಲವಾರು ದೇಶಗಳಲ್ಲಿ ಬಿಕ್ಕಟ್ಟು ಉಂಟಾಗಿದೆ. ಅದರಂತೆಯೇ ಜರ್ಮನ್‌ನ ಬಿಎಎಸ್‌ಎಫ್ ಸಂಸ್ಥೆಯು ಹಲವಾರು ಸಂಕಷ್ಟವನ್ನು ಕಂಡಿದೆ. ಬಿಎಎಸ್‌ಎಫ್ ತನ್ನ ವಿಂಟರ್‌ಶಾಲ್ ಡೀ ಅಂಗಸಂಸ್ಥೆಯ ಮೂಲಕ ಎರಡೂ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್‌ಗಳ ನಿರ್ಮಾಣಕ್ಕೆ ಹಣ ಸಹಾಯ ಮಾಡಿತ್ತು. ಜನವರಿಯಲ್ಲಿ ಒಪ್ಪಂಡ ಕಡಿತಗೊಳಿಸಿದ್ದು ಬಿಎಎಸ್‌ಎಫ್‌ನ €7.3 ಬಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿದೆ.
ಯಾವ ಸಂಸ್ಥೆಯಲ್ಲಿ ಎಷ್ಟು ಉದ್ಯೋಗ ಕಡಿತ?
ಮೈಕ್ರೋಸಾಫ್ಟ್: ಶೇಕಡ 5ರಷ್ಟು ಅಥವಾ 10,000 ಉದ್ಯೋಗ ಕಡಿತ
ಅಮೆಜಾನ್: ಶೇಕಡ 3ರಷ್ಟು ಅಥವಾ 8,000 ಉದ್ಯೋಗ ಕಡಿತ
ಸೇಲ್ಸ್‌ಫೋರ್ಸ್: ಶೇಕಡ 10ರಷ್ಟು ಅಥವಾ 8,000 ಉದ್ಯೋಗ ಕಡಿತ
ಡೆಲ್: ಶೇಕಡ 5ರಷ್ಟು ಅಥವಾ 6,650 ಉದ್ಯೋಗ ಕಡಿತ
ಐಬಿಎಂ: ಶೇಕಡ 2ರಷ್ಟು ಅಥವಾ 3,900 ಉದ್ಯೋಗ ಕಡಿತ
ಎಸ್‌ಎಪಿ: ಶೇಕಡ 3ರಷ್ಟು ಅಥವಾ 3,000 ಉದ್ಯೋಗ ಕಡಿತ
ಜೂಮ್: ಶೇಕಡ 15ರಷ್ಟು ಅಥವಾ 1,300 ಉದ್ಯೋಗ ಕಡಿತ
ಕಾಯಿನ್‌ಬೇಸ್: ಶೇಕಡ 20ರಷ್ಟು ಅಥವಾ 950 ಉದ್ಯೋಗ ಕಡಿತ
ಯಾಹೂ: ಶೇಕಡ 20ರಷ್ಟು ಅಥವಾ 1,600 ಉದ್ಯೋಗ ಕಡಿತ
ಗಿಟ್‌ಹಬ್: ಶೇಕಡ 10ರಷ್ಟು ಅಥವಾ 300 ಉದ್ಯೋಗ ಕಡಿತ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications