ಮೈಕ್ರೋಸಾಫ್ಟ್ ಸಂಸ್ಥೆಯು ಮೂರನೇ ಹಂತದ ಉದ್ಯೋಗ ಕಡಿತವನ್ನು ಆರಂಭ ಮಾಡಿದೆ. ಈ ವರ್ಷದಲ್ಲಿ ಮೈಕ್ರೋಸಾಫ್ಟ್‌ನಲ್ಲಿ 10,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗುತ್ತಿದೆ. ಈ ಉದ್ಯೋಗ ಕಡಿತ ಸುತ್ತಿನಲ್ಲಿ ಪ್ರಮುಖವಾಗಿ ಪೂರೈಕೆ ವಲಯ, ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಜಾಬ್ಸ್ (ಐಒಟಿ) ಸಿಬ್ಬಂದಿಗಳನ್ನು ಒಳಗೊಂಡಿರುತ್ತಾರೆ.
ಮೈಕ್ರೋಸಾಫ್ಟ್‌ನ ವಕ್ತಾರರ ಪ್ರಕಾರ ಹಲವಾರು ಹಂತಗಳ ಮೇಲೆ, ಇಲಾಖೆಗಳ ಮೇಲೆ, ತಂಡಗಳ ಮೇಲೆ, ಜಿಯೋಗ್ರಾಫಿಕಲ್ ಏರಿಯಾಗಳ ಮೇಲೆ ಈ ಉದ್ಯೋಗ ಕಡಿತವು ಪ್ರಭಾವ ಉಂಟು ಮಾಡಲಿದೆ. ಇನ್ನು ವಜಾಗೊಂಡ ಈ ಸಿಬ್ಬಂದಿಗಳಲ್ಲಿ ಒಬ್ಬರಾದ ಮಾಜಿ ಮೈಕ್ರೋಸಾಫ್ಟ್ ಹಿರಿಯ ಪ್ರೋಡೆಕ್ಟ್ ಮ್ಯಾನೆಜರ್ ವಂದನ್ ಕೌಶಿಕ್ ಲಿಂಕ್ಡ್‌ಇನ್‌ನಲ್ಲಿ ಬೇರೆ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ಲಿಂಕ್‌ಡಿನ್‌ನಲ್ಲಿ ಪೋಸ್ಟ್ ಮಾಡಿದ ಕೌಶಿಕ್
ಈ ಬಗ್ಗೆ ಕೌಶಿಕ್ ಲಿಂಕ್‌ಡಿನ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ತನ್ನ ಸಂಪೂರ್ಣ ತಂಡವು ಉದ್ಯೋಗ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ. "8 ವರ್ಷಗಳ ಬಳಿಕ, ಮೈಕ್ರೋಸಾಫ್ಟ್‌ನಲ್ಲಿ ನನ್ನ ಉದ್ಯೋಗ ಅವಧಿಯನ್ನು ಕೊನೆ ಮಾಡಲಾಗಿದೆ. ನನಗೆ ಹಲವಾರು ಅವಕಾಶಗಳು ಲಭ್ಯವಾಗಿದೆ. ಅಂತಾರಾಷ್ಟ್ರೀಯ ಗ್ರಾಹಕರಿಗೂ ಸಹಾಯ ಮಾಡುವ ಅವಕಾಶ ಲಭ್ಯವಾಗಿದೆ," ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ತಾನು ಎಷ್ಟು ಸಂತಸವನ್ನು ಕಂಡಿದ್ದೇನೆ ಎಂಬುವುದನ್ನು ಕೂಡಾ ವಿವರಿಸಿದ್ದಾರೆ. ಹಾಗೆಯೇ ತಾನು ಹೊಸ ಉದ್ಯೋಗದ ಹುಡುಕಾಟದಲ್ಲಿರುವುದಾಗಿ ಹೇಳಿದೆ. "ನಾನು ನನ್ನ ಕೌಶಲ್ಯಗಳನ್ನು ಸುಧಾರಿಸಲು ನಿರ್ಧಾರ ಮಾಡುತ್ತಿದ್ದೇನೆ. ಯಾವುದೇ ಟೆಕ್ನಿಕಲ್ ಪ್ರೊಡೆಕ್ಟ್ ಓನರ್ ಹುದ್ದೆ ಲಭ್ಯವಿದ್ದರೆ, ದಯವಿಟ್ಟು ನನಗೆ ತಿಳಿಸಿ. ನನ್ನ ಪ್ರಯಾಣದಲ್ಲಿ ಈ ಹೊಸ ತಿರುವು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನೋಡಲು ನಾನು ಉತ್ಸುಕನಾಗಿದ್ದೇನೆ," ಎಂದು ಕೌಶಿಕ್ ಬರೆದಿದ್ದಾರೆ.
ಹಣದುಬ್ಬರ ಹಾಗೂ ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕದ ನಡುವೆ ಹಲವಾರು ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ಸಂಸ್ಥೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಸುದ್ದಿಯಾಗುತ್ತಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಜನವರಿ 18ರಂದು ಸಂಸ್ಥೆಯಲ್ಲಿ ಶೇಕಡ 5ರಷ್ಟು ಮಂದಿಯನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ವರದಿ ಹೇಳಿದೆ.


Click it and Unblock the Notifications